For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ವೇಳೆ ನೋಯುವ ಸ್ತನಗಳಿಗೆ ಪರಿಹಾರ

By Hemanth
|

ಗರ್ಭಧಾರಣೆ ವೇಳೆ ಮಹಿಳೆಯು ಸಾಮಾನ್ಯವಾಗಿ ಎದುರಿಸುವಂತಹ ಸಮಸ್ಯೆಯೆಂದರೆ ಸೂಕ್ಷ್ಮ ಮತ್ತು ಊದಿಕೊಂಡು ನೋವು ನೀಡುವ ಸ್ತನಗಳು. ಗರ್ಭಿಣಿ ಮಹಿಳೆಯ ದೇಹದಲ್ಲಿ ಹಲವಾರು ರೀತಿಯಿಂದ ಹಾರ್ಮೋನುಗಳು ಬದಲಾಗುತ್ತಲೇ ಇರುವ ಕಾರಣದಿಂದಾಗಿ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡುವುದು ತುಂಬಾ ಕಷ್ಟ. ಇದರಲ್ಲಿ ನೋವಿನ ಸ್ತನಗಳು ಕೂಡ ಒಂದಾಗಿದೆ.

ಗರ್ಭಧಾರಣೆಯ ಪ್ರಮುಖ ಹಾಗೂ ಮೊದಲ ಲಕ್ಷಣಗಳಲ್ಲಿ ಸ್ತನಗಳು ಊದಿಕೊಂಡು ನೋಯುವುದು ಕೂಡ ಒಂದು. ಮಗುವಿನ ಜನ್ಮ ನೀಡಿದ ಬಳಿಕ ಹಾಲುಣಿಸುವಂತೆ ಆಗಲು ಹಾರ್ಮೋನುಗಳು ಸ್ತನಗಳನ್ನು ತಯಾರುಗೊಳಿಸುವ ಕಾರಣದಿಂದಾಗಿ ಅವುಗಳು ಊದುವುದು ಮತ್ತು ನೋವುಂಟು ಮಾಡುವುದು.

Pregnancy

ಸ್ತನಗಳು ಸೂಕ್ಷ್ಮವಾಗಲು ಕಾರಣವೇನು?

ಪ್ರತಿಯೊಬ್ಬ ಮಹಿಳೆಯಲ್ಲೂ ಇದು ಕಂಡುಬರದೇ ಇದ್ದರೂ ಸ್ತನಗಳು ನೋಯುವುದು ಗರ್ಭಧಾರಣೆಯ ಮೊದಲ ಲಕ್ಷಣಗಳು. ಮೊದಲ ತ್ರೈಮಾಸಿಕ ಮತ್ತು ಪ್ರಸವಕ್ಕೆ ಮೊದಲು ಇದು ಊದಿಕೊಳ್ಳುವುದು. ಹೆಚ್ಚಿನ ಗರ್ಭಿಣಿ ಮಹಿಳೆಯಲ್ಲಿ ಸ್ತನಗಳ ಊತವು ಕಂಡುಬರುವ ಕಾರಣದಿಂದ ಕೆಲವರಲ್ಲಿ ನೋವು ನಿರೀಕ್ಷೆಗಿಂತಲೂ ಅತಿಯಾಗಿರುವುದು.

ಇದಕ್ಕೆ ಸ್ವಲ್ಪ ತಾಗಿದರೂ ಕೂಡ ನೋವನ್ನು ತಡೆದುಕೊಳ್ಳುವುದು ಅಸಾಧ್ಯವಾಗಿರುವುದು, ನಿಮಗೆ ಒಂದು ಬದಿಗೆ ಮಲಗಲು ಸಾಧ್ಯವಾಗಲ್ಲ ಮತ್ತು ಬಟ್ಟೆ ಧರಿಸುವಾಗಲು ಇದು ನಿಮಗೆ ತುಂಬಾ ನೋವು ಕೊಡಬಹುದು. ಋತುಚಕ್ರದ ವೇಳೆ ಕೂಡ ಸ್ತನಗಳು ನೋವುಂಟು ಮಾಡುವುದು. ಆದರೆ ಇದು ತೀವ್ರವಾಗಿರುವುದಿಲ್ಲ.

ಜನನದ ಬಳಿಕ ಮಗುವಿಗೆ ಹಾಲುಣಿಸಲು ಸ್ತನಗಳನ್ನು ದೇಹವು ತಯಾರು ಮಾಡುತ್ತಿರುವ ಕಾರಣದಿಂದಾಗಿ ಅವುಗಳು ಊದಿಕೊಂಡು ನೋವು ನೀಡುವುದು. ಸ್ತನದೊಳಗಿನ ಕೊಬ್ಬಿನ ಪದರಗಳು ದಪ್ಪವಾಗುವುದು ಮತ್ತು ಹಾಲಿನ ಗ್ರಂಥಿಗಳು ದ್ವಿಗುಣವಾಗುವುದು. ರಕ್ತ ಸಂಚಾರವು ಹೆಚ್ಚಾಗುವುದು. ಸ್ತನ ತೊಟ್ಟುಗಳು ಕೂಡ ಬಣ್ಣ ಬದಲಾಯಿಸುವುದು.

ಸ್ತನಗಳ ತೊಟ್ಟುಗಳು ಮತ್ತಷ್ಟು ಕಪ್ಪಾಗಿ ಅದರ ಗಾತ್ರ ಮತ್ತು ಆಕಾರವು ಬದಲಾಗುವುದು. ತೊಟ್ಟಿನ ಸುತ್ತಲಿನ ವೃತ್ತವು ಕಪ್ಪು ಬಣ್ಣಕ್ಕೆ ತಿರುಗುವುದು. ಈ ಎಲ್ಲಾ ಬದಲಾವಣೆಗಳಿಂದಾಗಿ ಸ್ತನವು ತುಂಬಾ ನೋವುಂಟು ಮಾಡಿ ಸೂಕ್ಷ್ಮವಾಗುವುದು. ಸ್ವಲ್ಪ ಮುಟ್ಟಿದರೂ ಅದು ನೋವುಂಟು ಮಾಡುವುದು. ಗರ್ಭಧಾರಣೆಯಲ್ಲಿ ಸಮಯ ಸಾಗಿದಂತೆ ಸ್ತನಗಳ ನೋವು ಕಡಿಮೆಯಾಗುವುದು.

ಸ್ತನಗಳ ನೋವು ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳು

ಗರ್ಭಧಾರಣೆಯ ಎರಡನೇ ತ್ರೈಮಾಸಿಕದಲ್ಲಿ ಸ್ತನಗಳ ನೋವು ಕಡಿಮೆಯಾಗುತ್ತಾ ಹೋಗುವುದು. ಕೆಲವೊಂದು ನೈಸರ್ಗಿಕ ನೋವು ನಿವಾರಕಗಳನ್ನು ನೀವು ಬಲಸಿಕೊಂಡು ನೋವನ್ನು ಕಡಿಮೆ ಮಾಡಬಹುದು.

• ಗರ್ಭಧಾರಣೆಯ ಮೊದಲ ಕೆಲವು ವಾರಗಳಲ್ಲಿ ನೀವು ಕ್ರೀಡಾ ಬ್ರಾ ಧರಿಸಿಕೊಳ್ಳಬೇಕು. ಸ್ತನಗಳಿಗೆ ಬೆಂಬಲ ನೀಡುವುದರಿಂದ ಅದರಿಂದ ಆಗುವಂತಹ ಕಿರಿಕಿರಿ ಕಡಿಮೆ ಮಾಡಬಹುದು. ಸರಿಯಾಗಿ ಹೊಂದಿಕೊಳ್ಳುವ ಬ್ರಾ ಧರಿಸಿ. ಗಾತ್ರ ಪಟ್ಟಿಯನ್ನು ಬಿಟ್ಟು ನೀವು ಹೊಂದಿಕೊಳ್ಳುವಂತಹ ಬ್ರಾ ಹಾಕಿಕೊಳ್ಳಿ.
ಸರಿಯಾಗಿ ಹೊಂದಿಕೊಳ್ಳುವ ಬ್ರಾವು ನೋವನ್ನು ಕಡಿಮೆ ಮಾಡುವುದು ಮತ್ತು ಸ್ತನಗಳಿಗೂ ಆರಾಮ ಸಿಗುವುದು. ಗರ್ಭಧಾರಣೆಯ ವೇಳೆ ಸ್ತನಗಳ ಗಾತ್ರವು ಪದೇ ಪದೇ ಬದಲಾಗುತ್ತಾ ಇದ್ದರೆ ಆಗ ನೀವು ಬ್ರಾವನ್ನು ಕೂಡ ಬದಲಾಯಿಸುತ್ತಾ ಇರಬೇಕು.

• ವ್ಯಾಯಾಮದ ವೇಳೆ ಕೂಡ ಫಿಟ್ ಆಗಿರುವಂತಹ ಬ್ರಾ ಧರಿಸಿಬೇಕು. ವ್ಯಾಯಾಮದ ವೇಳೆ ಹೆಚ್ಚುವರಿ ತೂಕವು ಸ್ತನಗಳ ಮೇಲೆ ಬೀಳುವುದು. ಒಳ್ಳೆಯ ಬ್ರಾ ಇದನ್ನು ನಿವಾರಣೆ ಮಾಡುವುದು.

• ಗರ್ಣಧಾರಣೆ ವೇಳೆ ಪದೇ ಪದೇ ಸ್ತನಗಳ ಗಾತ್ರ ಮತ್ತು ಆಕಾರವು ಬದಲಾಗುವ ಕಾರಣದಿಂದಾಗಿ ಸರಿಯಾಗಿ ಹೊಂದಿಕೊಳ್ಳದೆ ಇರುವ ಬ್ರಾ ಧರಿಸುವುದು ಸರಿಯಲ್ಲ.

• ಮಲಗುವ ವೇಳೆ ನೀವು ಹತ್ತಿಯಿಂದ ಮಾಡಿರುವಂತಹ ಗರ್ಭಧಾರಣೆ ಬ್ರಾ ಧರಿಸಿ.

• ನೀರು ನಿಲ್ಲುವುದರಿಂದಲೂ ಸ್ತನಗಳಲ್ಲಿ ಊತ ಕಂಡುಬರುವುದು. ನೀವು ದಿನವಿಡಿ ನೀರು ಕುಡಿಯುವುದರಿಂದ ದೇಹದಲ್ಲಿರುವ ಅತಿಯಾದ ನೀರನ್ನು ಹೋರಹಾಕಬಹುದು. ನೀರಿಗೆ ಲಿಂಬೆ, ಜೀರಿಗೆ ಮತ್ತು ಶುಂಠಿ ಹಾಕಿಕೊಂಡು ಕುಡಿದರೆ ಆಗ ನೋವು ಕಡಿಮೆ ಮಾಡಬಹುದು.

• ಸೋಡಿಯಂನ್ನು ಕಡಿಮೆ ಸೇವನೆ ಮಾಡುವುದರಿಂದ ಸ್ತನಗಳ ನೋವು ಕಡಿಮೆ ಮಾಡಬಹುದು. ಗರ್ಭಧಾರಣೆಯ ವೇಳೆ ಸೋಡಿಯಂ ಸೇವನೆ ಅಗತ್ಯ. ಆದರೆ ಹಿತಮಿತವಾಗಿ ಸೇವನೆ ಮಾಡಬೇಕು. ಇದರಿಂದ ಸ್ತನಗಳ ನೋವು ಕಡಿಮೆಯಾಗುವುದು.

• ಸೂಕ್ಷ್ಮ ಸ್ತನಗಳಿಗೆ ಪರಿಹಾರ ನೀಡಲು ಒಂದು ಚಮಚ ಅಗಸೆ ಬೀಜಗಳನ್ನು ಸೇವನೆ ಮಾಡಬೇಕು. ಅಗಸೆ ಬೀಜದಲ್ಲಿ ನಾರಿನಾಂಶವು ಇರುವ ಕಾರಣದಿಂದಾಗಿ ಗರ್ಭದಾರಣೆಯ ಇತರ ಕೆಲವೊಂದು ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು. ಅಗಸೆ ಬೀಜವನ್ನು ಒಂದು ಲೋಟ ನೀರು, ಹಣ್ಣಿನ ಜ್ಯೂಸ್ ಅಥವಾ ಮೊಸರಿನ ಜತೆಗೆ ಸೇವನೆ ಮಾಡಬಹುದು.

• ಪೋಷಕಾಂಶಗಳನ್ನು ಹೊಂದಿರುವಂತಹ ಆಹಾರ ಸೇವನೆ ಮಾಡಿದರೆ ಅದರಿಂದ ನೋವು ನಿವಾರಣೆ ಮಾಡಬಹುದು. ನಿಮ್ಮ ಆಹಾರದಲ್ಲಿ ಉನ್ನತ ಮಟ್ಟದ ಖನಿಜಾಂಶಗಳು ಮತ್ತು ವಿಟಮಿನ್ ಗಳು ಇರಲಿ. ಹಸಿರೆಲೆ ತರಕಾರಿಗಳು, ಬೀಜಗಳು, ಧಾನ್ಯಗಳನ್ನು ಪ್ರತಿನಿತ್ಯ ಸೇವನೆ ಮಾಡಿದರೆ ನೋವು ಕಡಿಮೆಯಾಗುವುದು.

• ಸ್ತನದ ಸುತ್ತಲು ರಕ್ತ ಸಂಚಾರ ಹೆಚ್ಚು ಮಾಡುವ ಮೂಲಕ ಊತ ಕಡಿಮೆ ಮಾಡಬಹುದು. ಬಿಸಿ ಮತ್ತು ಒದ್ದೆಯಾಗಿರುವ ಟವೆಲ್ ನಿಂದ ಸ್ತನಗಳನ್ನು ಮುಚ್ಚಿಕೊಳ್ಳಬೇಕು. 10-15 ನಿಮಿಷ ಕಾಲ ಹೀಗೆ ಮಾಡಿ. ಇದರಿಂದ ನಿಮಗೆ ತುಂಬಾ ಶಮನ ಸಿಗುವುದು.

• ಬಿಸಿ ನೀರಿನ ಸ್ನಾನದಿಂದ ಕೂಡ ನೋವು ಕಡಿಮೆ ಮಾಡಬಹುದು. ಕೆಲವರು ಬಿಸಿನೀರಿನಲ್ಲಿ ಮುಳುಗುವರು. ಆದರೆ ಹೀಗೆ ಮಾಡಬಹುದೇ ಎಂದು ವೈದ್ಯರಲ್ಲಿ ಕೇಳಿನೋಡಿ.

ಹಾರ್ಮೋನು ಬದಲಾವಣೆಗಳು ತಾತ್ಕಾಲಿಕ ಮತ್ತು ಸ್ತನಗಳ ನೋವಿನಂತಹ ಸಮಸ್ಯೆಯನ್ನು ಪರಿಹರಿಸಲು ನೀವು ತಾಳ್ಮೆ ವಹಿಸಬೇಕು. ಇದು ಕೆಲವೇ ವಾರಗಳಲ್ಲಿ ಕಡಿಮೆಯಾಗುವುದು.

ಸಾಮಾನ್ಯವಾಗಿ ಸ್ತನದಲ್ಲಿ ನೋವು ಮತ್ತು ಊತ ಕಾಣಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ಉರಿಯೂತ. ಸ್ತನದಲ್ಲಿ ಉರಿಯೂತ ಉಂಟುಮಾಡುವಂತಹ ಹಾರ್ಮೋನುಗಳನ್ನು ಮೊದಲು ತೆಗೆಯಿರಿ. ಇದಕ್ಕಾಗಿ ಪ್ರಾಣಿಗಳ ಕೊಬ್ಬು ಸೇವನೆ ಕಡಿಮೆ ಮಾಡಿಕೊಳ್ಳಿ. ಆಹಾರ ಕ್ರಮದಲ್ಲಿ ಕಡಿಮೆ ಸಕ್ಕರೆ, ಗುಣಮಟ್ಟದ ಕೊಬ್ಬು ಮತ್ತು ವಿಟಮಿನ್ ಇ ಯನ್ನು ಬಳಸಿ.

ಸ್ತನದಲ್ಲಿ ಉಂಟಾಗುವ ಮೃದುತ್ವಕ್ಕೆ ದೇಹದಲ್ಲಿ ಐಯೋಡಿನ್ ಕಡಿಮೆಯಾಗುವುದು ಕಾರಣವಾಗುತ್ತದೆ. ಇದರಿಂದ ಐಯೋಡಿನ್ ನಿಮ್ಮ ದೇಹದಲ್ಲಿ ಸರಿಯಾಗಿರುವಂತೆ ನೋಡಿಕೊಳ್ಳಿ. ಪಾಚಿಗಳು ಮತ್ತು ಸಪ್ಲಿಮೆಂಟ್ ಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಚಾ, ಕಾಫಿ ಮತ್ತು ಆಲ್ಕೋಹಾಲ್ ಸ್ತನದ ಮೃದುತ್ವಕ್ಕೆ ಕಾರಣವಾಗುತ್ತದೆ. ಈ ಪಾನೀಯಗಳ ಬದಲಿಗೆ ನೀರು ಕುಡಿಯಿರಿ. ಗ್ರೀನ್ ಟೀ ಕೂಡ ಒಳ್ಳೆಯದು. ಇದು ಈಸ್ಟ್ರೋಜನ್ ಮಟ್ಟಕ್ಕೆ ಮಧ್ಯಪ್ರವೇಶ ಮಾಡಲ್ಲ ಮತ್ತು ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ.

English summary

How Do Deal With Sensitive Breasts During Pregnancy

ensitive and sore breasts are one of the common ailments during pregnancy. With the never-ending hormonal changes in your pregnant body, there is very little that you can do to completely eliminate the associated symptoms of pregnancy, one of them being that of breasts hurting. Extremely common in early pregnancy, sore breasts can be very painful. Breasts turn sore when hormonal changes are making them ready for breastfeeding once you deliver your baby. Sore breasts have been considered as one of the first signs of pregnancy.
X
Desktop Bottom Promotion