For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಂಡು ಬರುವ ಹಾರ್ಮೋನುಗಳ ಬದಲಾವಣೆಗಳು

By Sushma Charhra
|

ಗರ್ಭಿಣಿಯಾದಾಗ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳಾಗುತ್ತದೆ ಮತ್ತು ಅದು ಮಗುವಿನ ಬೆಳವಣಿಗೆಗೆ ಸಹಕರಿಸುತ್ತಿರುತ್ತದೆ. ಎಲ್ಲಾ ಮಹಿಳೆಯರು ಕೆಲವು ರೀತಿಯ ಪ್ರಮುಖ ಹಾರ್ಮೋನುಗಳ ಬದಲಾವಣೆಯನ್ನು ಈ ಸಂದರ್ಭದಲ್ಲಿ ಎದುರಿಸುತ್ತಾರೆ. ಮಹಿಳೆಯರಾಗಿ, ನೀವು ಇನ್ನೊಂದು ನಿಮ್ಮದೇ ರೀತಿಯ ಜೀವಿಯನ್ನು ಸೃಷ್ಟಿಸುವ ಕೆಲಸವಿದೆಯಲ್ಲ ಅದೊಂದು ದೇವರು ಕೊಟ್ಟ ವರವಿದ್ದಂತೆ ಮತ್ತು ಬಹಳ ಕಠಿಣವಾದ, ಜೀವನಕ್ಕೆ ಒಂದು ಅರ್ಥ ನೀಡುವ ಮತ್ತು ಮೌಲ್ಯ ನೀಡುವ ಕಾರ್ಯವೂ ಹೌದು. ನಿಮಗೆ ನಿಮ್ಮ ದೇಹದಲ್ಲಾಗುವ ಬದಲಾವಣೆಗಳನ್ನು ದೇಹವು ತಿಳಿಸದೆಯೇ ತನ್ನಷ್ಟಕ್ಕೇ ತಾನೆ ಬದಲಾಗುವಿಕೆಯನ್ನು ಈ ದಿನಗಳಲ್ಲಿ ನೀವು ಗಮನಿಸಬಹುದಾಗಿದೆ.

ಮೊದಲ ತ್ರೈಮಾಸಿಕದ ಸಂದರ್ಭದಲ್ಲಿ, ಮಹಿಳೆಯು ತನ್ನ ದೃಷ್ಟಿ,ವಾಸನೆ ಮತ್ತು ಆಸ್ವಾದಗಳಲ್ಲಿ ಬಹಳ ವ್ಯತ್ಯಾಸವನ್ನು ಗಮನಿಸಿಕೊಳ್ಳಬಹುದು. ಕಿಡ್ನಿ ಮತ್ತು ಹೃದಯದ ಕಾರ್ಯಗಳಲ್ಲಿ ಬದಲಾವಣೆ, ತೂಕ ಹೆಚ್ಚಳವಾಗುವಿಕೆ, ಶಾರೀರಿಕ ಬದಲಾವಣೆಗಳು, ಸ್ತನಗಳಲ್ಲಿ ಮತ್ತು ಮೂತ್ರಕೋಶಗಳ ಜಾಗಗಳಲ್ಲಿ ಆಗುವ ಕೆಲವು ಸಾಮಾನ್ಯ ಬದಲಾವಣೆಗಳು ಆಕೆ ತನ್ನ ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಗಮನಿಸಿಕೊಳ್ಳಬಹುದಾಗಿದೆ. ಇದು ಪ್ರಮುಖವಾಗಿ ನಿಮ್ಮ ಜರಾಯುವಿನಲ್ಲಿ ಹಾರ್ಮೋನುಗಳ ಸ್ರವಿಸುವಿಕೆಯಿಂದ ನಡೆಯುತ್ತದೆ. ಈ ಹಾರ್ಮೋನುಗಳೆಂದರೆ ಪ್ರೊಜೆಸ್ಟ್ರಾನ್, ಈಸ್ಟ್ರೋಜನ್, ಹೆಚ್ ಸಿಜಿ, ಪ್ರೊಲ್ಯಾಕ್ಟಿನ್, ಕಾರ್ಟಿಸೋಲ್, ಹೆಚ್ ಪಿಎಲ್ ಇತ್ಯಾದಿಗಳು.

hormonal changes during pregnancy

ಒಂದು ವೇಳೆ ನೀವು ಕೆಲಸಕ್ಕೆ ಹೋಗುತ್ತಿರುವ ಮಹಿಳೆಯಾಗಿದ್ದಲ್ಲಿ ಈ ಹಠಾತ್ ಬದಲಾವಣೆಗಳು ನಿಮ್ಮ ದೇಹಕ್ಕೆ ಬಹಳ ಕಠಿಣವಾಗಬಹುದು. ದಿನನಿತ್ಯದ ನಿಮ್ಮ ಚಟುವಟಿಕೆಗಳು ಈ ಬದಲಾವಣೆಯ ಕಾರಣದಿಂದಾಗಿ ದಿಢೀರಣೆ ಮೊದಲಿಗಿಂತ ಹೆಚ್ಚು ಗಂಭೀರಗೊಳ್ಳುವ ಸಾಧ್ಯತೆಗಳಿರುತ್ತದೆ. ಆದರೆ, ನೀವು ಗರ್ಭವತಿಯಾದರೆ, ನಿಮ್ಮಲ್ಲಿ ಆಗುವ ಬೇರೆ ಬೇರೆ ರೀತಿಯ ಹಾರ್ಮೋನುಗಳ ಬದಲಾವಣೆಯ ಬಗ್ಗೆ ಹೆಚ್ಚು ಮಾಹಿತಿಗಳನ್ನು ತಿಳಿದುಕೊಂಡಿರುವ ಬಗ್ಗೆ ಸಲಹೆಗಳನ್ನು ನೀಡಲಾಗುತ್ತದೆ.

ನಿಮಗೆ ಈ ಬದಲಾವಣೆಯ ಬಗ್ಗೆ ಸಂಪೂರ್ಣ ವಿವರ ತಿಳಿದಿದ್ದರೆ, ಆದಷ್ಟು ಬಲಿಷ್ಟವಾಗಿರಲು ನೆರವಾಗುತ್ತದೆ ಮತ್ತು ನೀವು ಯಾವುದೇ ಕಠಿಣ ಸಂದರ್ಬವನ್ನು ಎದುರಿಸಲು ಸನ್ನದ್ಧರಾಗಿರಲು ಸಹಕಾರಿಯಾಗಿರುತ್ತದೆ. ಈ ಲೇಖನವೂ ಕೂಡ ಇದೇ ಮಾಹಿತಿಗಳನ್ನು ಒಳಗೊಂಡಿದೆ. ಗರ್ಭಿಣಿಯರಲ್ಲಿ ಯಾವೆಲ್ಲ ರೀತಿಯ ಹಾರ್ಮೋನುಗಳ ಬದಲಾವಣೆ ಆಗುತ್ತದೆ. ನಿಮ್ಮ ದೇಹದ ಒಳಗೆ ನಡೆಯುವ ಈ ಹಾರ್ಮೋನುಗಳ ಚಟುವಟಿಕೆಯನ್ನು ತಿಳಿದುಕೊಂಡಿದ್ದರೆ ಬಹಳ ಒಳ್ಳೆಯದು.

•ಹೆಚ್ ಪಿ ಎಲ್ (ಅಥವಾ Human Placental Lactogen)

ಇದು ಜರಾಯುಗಳಿಂದ ಮಾಡಲ್ಪಟ್ಟಿರುವ ಒಂದು ರೀತಿಯ ಹಾರ್ಮೋನುಗಳಾಗಿರುತ್ತವೆ .ಈ ಹೆಚ್ ಪಿಎಲ್ ಹಾರ್ಮೋನುಗಳು ಪೋಷಕಾಂಶಗಳನ್ನು ಭ್ರೂಣಕ್ಕೆ ನೀಡುತ್ತದೆ ಮತ್ತು ನಿಮ್ಮ ಸ್ತನಗಳಲ್ಲಿ ಹಾಲಿನ ಉತ್ಪಾದನೆಗೆ ಅನುವು ಮಾಡಿಕೊಡಲು ಸಾಕಷ್ಟು ಬದಲಾವಣೆಗಳನ್ನು ಮಾಡುತ್ತದೆ.

•ಪ್ರೊಜೆಸ್ಟ್ರಾನ್

ಗರ್ಭಿಣಿಯರಲ್ಲಿ,ಈ ಪ್ರೊಜೆಸ್ಟ್ರಾನ್ ಹಾರ್ಮೋನು ನಿಮ್ಮ ಜರಾಯು ಮತ್ತು ಅಂಡಾಶಯಗಳಿಂದ ಸ್ರವಿಸುತ್ತದೆ. ಪ್ರೊಜೆಸ್ಟ್ರಾನ್ ಹಾರ್ಮೋನಿನ ಕೆಲಸವೇನೆಂದರೆ, ಗರ್ಭಾಶಯದ ಒಳಗೆ ಪದರವನ್ನು ದಪ್ಪ ಮಾಡುವುದು ಮತ್ತು ಫಲವತ್ತಾದ ಮೊಟ್ಟೆಯ ಹುಟ್ಟಿಗೆ ಕಾರಣವಾಗುವುದು. ಈ ಪ್ರೊಜೆಸ್ಟ್ರಾನ್ ಹಾರ್ಮೋನುಗಳು ಕೊಲೆಸ್ಟರಾಲ್ ಗಳಿಂದ ಉತ್ಪಾದನೆಗೊಳ್ಳುತ್ತದೆ. ಪ್ರಾರಂಭಿಕವಾಗಿ, ಇದು ಗರ್ಭಾಶಯದ ಒಳಗೆ ಪರಿವರ್ತನೆಯಾಗುತ್ತದೆ ಮತ್ತು ನಂತರದ ದಿನಗಳಲ್ಲಿ ಪ್ರೊಜೆಸ್ಟ್ರಾನ್ ಆಗಿ ಬದಲಾವಣೆ ಹೊಂದುತ್ತದೆ.

•ಈಸ್ಟ್ರೋಜನ್

ಈಸ್ಟ್ರೋಜನ್ ಹಾರ್ಮೋನುಗಳು ಹಲವು ಕೆಲಸಗಳನ್ನು ಮಾಡುತ್ತದೆ. ನಿಮ್ಮ ಸ್ತನಗಳ ಟಿಶ್ಯೂಗಳನ್ನು ಬೆಳೆಸುತ್ತದೆ, ಗರ್ಭಾಶಯದ ಒಳಪದರವನ್ನು ಬೆಂಬಲಿಸುತ್ತದೆ, ಗರ್ಭಕೋಶದ ಒಳಗೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ, ದೇಹದ ಕೆಲವು ಅಂಗಗಳನ್ನು ಆದಷ್ಟು ಶಾಂತವಾಗಿರಿಸುತ್ತದೆ ಇತ್ಯಾದಿ ಕೆಲಸಗಳನ್ನು ಈಸ್ಟ್ರೋಜನ್ ಹಾರ್ಮೋನುಗಳು ಮಾಡುತ್ತದೆ. ಈಸ್ಟ್ರೋಜನ್ ಗಳು ಜರಾಯು ಮತ್ತು ಅಂಡಾಶಯಗಳಿಂದ ರಚಿಸಲ್ಪಡುತ್ತದೆ. ಕೊಲೆಸ್ಟರಾಲ್ ಅಂಶವು ನಿಮ್ಮ ಜರಾಯುವಿನ ಒಳಗೆ ಸ್ರವಿಸುತ್ತದೆ ಮತ್ತು ಅದು ಪ್ರೊಜೆಸ್ಟ್ರಾನ್ ಆಗಿ ಬದಲಾಗುತ್ತದೆ ಮತ್ತು ಆದಾದ ನಂತರ ಇದು ನಿಮ್ಮ ಭ್ರೂಣದ ಯಕೃತ್ತು ಮತ್ತು ಮೂತ್ರಜನಕಾಂಗದ ಗ್ರಂಥಿಯಲ್ಲಿ DHEA ಆಗಿ ಬದಲಾಗುತ್ತದೆ. DHEA ಪುನಃ ವಾಪಾಸ್ ಬರುತ್ತದೆ ಮತ್ತು ಚಲಾವಣೆಗೊಂಡು, ಆರೋಮ್ಯಾಟೇಸ್ (ಒಂದು ರೀತಿಯ ಎನ್ಝೈಮ್ ಗಳು ) ಗಳ ಸಹಾಯದಿಂದ ಈಸ್ಟ್ರೋಜನ್ ಆಗಿ ಬದಲಾಗುತ್ತದೆ.

•ಥೈರಾಯ್ಡ್

ಎರಡು ರೀತಿಯ ಥೈರಾಯ್ಡ್ ಹಾರ್ಮೋನುಗಳಿವೆ. ಇವೆರಡು ಕೂಡ ಗರ್ಭಿಣಿಯರಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮೊದಲನೆಯದ್ದು T4 ಹಾರ್ಮೋನು ಇದು ಯಾವಾಗಲೂ ನಿಷ್ಕ್ರಿಯವಾಗಿರುತ್ತದೆ.ಮತ್ತೊಂದು T3, ಇದು ಬಹಳ ಸಕ್ರಿಯವಾಗಿರುತ್ತದೆ ಮತ್ತು ಇದು T4 ಹಾರ್ಮೋನುಗಳಿಂದ ಪಡೆದವುಗಳಾಗಿರುತ್ತದೆ.. ಯಾವಾಗ ನಿಮ್ಮ ಈಸ್ಟ್ರೋಜನ್ ಮಟ್ಟವು ಅಧಿಕವಾಗಿರುತ್ತದೆಯೋ, ಆಗ T3 ಮತ್ತು T4 ಹಾರ್ಮೋನುಗಳಿಗೆ ಅವು ಪ್ರೋತ್ಸಾಹ ನೀಡುತ್ತವೆ ಮತ್ತು ನಿಮ್ಮ ಸ್ಟ್ರಿರಾಯ್ಡ್ ಹಾರ್ಮೋನುಗಳ ಚಯಾಪಚಯ ಮತ್ತು ನಿಯಂತ್ರಣಕ್ಕೆ ಇದು ಬೆಂಬಲ ನೀಡುತ್ತದೆ.

•ಕಾರ್ಟಿಸೋಲ್

ಇದನ್ನು ಒತ್ತಡದ ಹಾರ್ಮೋನು ಎಂದು ಕರೆಯಲಾಗುತ್ತದೆ. ಗರ್ಭಿಣಿಯರಲ್ಲಿ, ಅವರು 40 ನೇ ವಾರಕ್ಕೆ ಕಾಲಿಟ್ಟಾಗ, ಕಾರ್ಟಿಸೋಲ್ ಹಾರ್ಮೋನುಗಳ ಉತ್ಪಾದನೆಯು ಹೊಟ್ಟೆಯಲ್ಲಿನ ಮಗುವಿನ ಅಡ್ರಿನಲ್ ಗ್ರಂಥಿಯ ಮೂಲಕ ಮತ್ತಷ್ಟು ಅಧಿಕಗೊಳ್ಳುತ್ತದೆ. ಈ ಹೆಚ್ಚಳವಾಗುವಿಕೆಯು ನಿಮ್ಮ ಗರ್ಭಕೋಶವು ಮತ್ತಷ್ಟು ಕುಗ್ಗುವಿಕೆಗೆ ಒಳಗಾಗುವಂತೆ ಮಾಡುವ ಸಾಧ್ಯತೆ ಇರುತ್ತದೆ. ಇದು ನಿಮ್ಮ ರಕ್ತದ ಸಂಚಲನದಲ್ಲಿರುವು ಈಸ್ಟ್ರೋಜನ್ ಅನ್ನು ಹೆಚ್ಚಿಸುತ್ತದೆ ಮತ್ತು ಪ್ರೊಜೆಸ್ಟ್ರಾನ್ ಹಾರ್ಮೋನನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಸಂಕೋಚನವನ್ನು ಪ್ರೊತ್ಸಾಹಿಸುತ್ತದೆ.

•ಪ್ರೊಲ್ಯಾಕ್ಟಿನ್

ಈ ಹಾರ್ಮೋನು ನಿಮ್ಮ ಸ್ತನಗಳಲ್ಲಿ ಹಾಲಿನ ಉತ್ಪಾದನೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಈಟ್ರೊಜೆನ್ ಹಾರ್ಮೋನ್ ನಿಮ್ಮ ಪಿಟ್ಯುಟರಿ ಗ್ರಂಥಿಯಿಂದ ಪ್ರೊಲ್ಯಾಕ್ಟಿನ್ ಸ್ರವಿಸುವಿಕೆಯನ್ನು ಉತ್ತೇಜಿಸಲು ಪ್ರೋತ್ಸಾಹಿಸುತ್ತದೆ. ಆದರೆ, ಮಗುವಿನ ಜನನಕ್ಕಿಂತ ಮುಂಟೆ ನೀವು ಪ್ರೊಲ್ಯಾಕ್ಟಿನ್ ಸ್ರವಿಸುವಿಕೆಯನ್ನು ಗಮನಿಸಲು ಸಾಧ್ಯವಿಲ್ಲ ಯಾಕೆಂದರೆ, ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಹಾರ್ಮೋನುಗಳ ಉನ್ನತ ಮಟ್ಟಗಳು ನಿಮ್ಮ ಸ್ತನದ ಅಂಗಾಂಶಗಳ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರೋಲ್ಯಾಕ್ಟಿನ್ ಹಾರ್ಮೋನ್ ಅನ್ನು ನಿಧಾನಗೊಳಿಸುತ್ತವೆ.

ನೀವು ಮಗುವಿಗೆ ಜನನ ನೀಡಿದ ನಂತರ, ಪ್ರೊಜೆಸ್ಟ್ರಾನ್ ಮತ್ತು ಈಸ್ಟ್ರೋಜನ್ ಎರಡೂ ಹಾರ್ಮೋನುಗಳ ಮಟ್ಟವು ಕುಗ್ಗುತ್ತದೆ ಮತ್ತು ಅದೇ ಕಾರಣದಿಂದಾಗಿ ಪ್ರೊಲ್ಯಾಕ್ಟಿನ್ ಹಾಲಿನ ಸ್ರವಿಸುವಿಕೆಯನ್ನು ಆರಂಭಿಸುತ್ತದೆ.ಯಾವಾಗ ನಿಮ್ಮ ಮಗುವು ಎದೆಯನ್ನು ಚೀಪಲು ಆರಂಭಿಸುತ್ತದೆಯೋ ಆಗ ಹಾರ್ಮೋನುಗಳು ಅಧಿಕವಾಗಿ ಹಾಲಿನ ಸ್ರವಿಸುವಿಕೆಯೂ ಹೆಚ್ಚಾಗುತ್ತದೆ. ಒಂದು ವೇಳೆ ಅಗತ್ಯ ಪ್ರಮಾಣದಷ್ಟು ಪ್ರೊಲ್ಯಾಕ್ಟಿನ್ ಉತ್ಪಾದನೆ ನಡೆದರೆ ನಿಮ್ಮ ಮಗುವಿಗೆ ಉತ್ತಮ ರೀತಿಯಲ್ಲಿ ಎದೆಹಾಲು ಲಭ್ಯವಾಗುತ್ತದೆ, ಪ್ರೊಲ್ಯಾಕ್ಟಿನ್ ಹಾರ್ಮೋನು ಹುಟ್ಟಿನ ನಿಯಂತ್ರಣಕ್ಕೂ ಕೂಡ ನೆರವು ನೀಡುತ್ತದೆ ಕಾರಣವೇನೆಂದರೆ ಪ್ರೊಲ್ಯಾಕ್ಟಿನ್ ಅಂಡೋತ್ಪತ್ತಿಯನ್ನು ತಡೆಯುತ್ತದೆ.

•ಆಕ್ಸಿಟೋಸಿನ್

ನಿಮ್ಮಿಂದಲೇ ನಿಮ್ಮ ಗರ್ಭಧಾರಣೆಯಲ್ಲಿ ಉತ್ಪಾದೆಗೊಳ್ಳುವ ಮತ್ತೊಂದು ಹಾರ್ಮೋನು ಇದು. ಆಕ್ಸಿಟೋಸಿನ್ ಹಾರ್ಮೋನಿನ ಕೆಲಸವೇನೆಂದರೆ ನಿಮ್ಮ ಗರ್ಭಕಂಠವನ್ನು ವಿಸ್ತರಣೆ ಮಾಡುವುದು ಮತ್ತು ಮಗುವಿನ ಡೆಲಿವರಿಗೆ ಸುಲಭವಾಗುವಂತಹ ಕಠಿಣ ಗರ್ಭಾಶಯದ ಕುಗ್ಗುವಿಕೆಯನ್ನು ಹೆಚ್ಚು ಮಾಡುವುದು.ನಿಮ್ಮ ಡೆಲಿವರಿಯ ನಂತರ,ಈ ಹಾರ್ಮೋನು ಮತ್ತೆ ಕೆಲಸ ಮಾಡುತ್ತದೆ. ಮಗುವು ನಿಮ್ಮ ನಿಪ್ಪಲ್ ನ್ನು ಚೀಪಿದಾಗ, ಈ ಹಾರ್ಮೋನು ಉತ್ಪಾದನೆಕೊಂಡು ಹಾಲಿನ ಹರಿವನ್ನು ಹೆಚ್ಚಿಸುತ್ತದೆ.

•ಹೆಚ್ ಸಿಜಿ

ನಿಮ್ಮ ಅಂಡಾಶಯದಿಂದ ಮೊಟ್ಟೆಯು ಮುರಿದಾಗ, ಅದರ ಹೊರ ಕೋಟು (ಸಹ ಕಾರ್ಪಸ್ ಲೂಟಿಯಂ ಎಂದು ಕೂಡ ಕರೆಯಲ್ಪಡುತ್ತದೆ) ಹಿಂದುಳಿದಿರುತ್ತದೆ.ಆಗ, ಹೆಚ್ ಸಿಜಿ ಯು ಕಾರ್ಪಸ್ ಲೂಟಿಯಂ ನ್ನು ಮುನ್ನಡೆಯಲು ಸಹಕಾರ ನೀಡುತ್ತದೆ, ಹಾಗಾಗಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಹಾರ್ಮೋನುಗಳ ಉತ್ಪಾದನೆ ಮಾಡಿ ಭ್ರೂಣದ ಬೆಳವಣಿಗೆಗೆ ಸಹಕಾರ ನೀಡುತ್ತದೆ. ಒಂದು ವೇಳೆ ಯಾವುದೇ ಕಾರಣದಿಂದಾಗಿ ಮೊಟ್ಟೆಯು ಫರ್ಟಿಲೈಸ್ ಆಗದೇ ಇದ್ದಲ್ಲಿ, ನಿಮ್ಮಲ್ಲಿ ಹೆಚ್ ಸಿಜಿ ಬಿಡುಗಡೆಗೊಂಡಿಲ್ಲ ಎಂದರ್ಥ ಮತ್ತು ಕಾರ್ಪಸ್ ಲೂಟಿಯಾಯು ನಿಧಾನವಾಗಿ ವಿಭಜನೆ ಆಗಿ ಬಿಡುತ್ತದೆ ಮತ್ತು ನಿಮಗೆ ಮುಟ್ಟು ಕಾಣಿಸಿಕೊಳ್ಳುತ್ತದೆ. ಅಂದರೆ ನೀವು ಗರ್ಭವತಿ ಆಗುವುದೇ ಇಲ್ಲ. ಈ ಹೆಚ್ ಸಿಜಿ ಹಾರ್ಮೋನುಗಳು ನಿಮ್ಮ ಸಂಪೂರ್ಣ ಗರ್ಭಧಾರಣೆಯ ಹಂತದಲ್ಲೂ ಇರುತ್ತದೆ. ಆದರೆ, ಇದು ಹೆಚ್ಚಿನ ಮಟ್ಟದಲ್ಲಿರುವುದು 9 ಮತ್ತು 10 ನೇ ವಾರದಲ್ಲಿ. ನಿಮ್ಮ ಜರಾಯು ಹಾರ್ಮೋನುಗಳ ಉತ್ಪಾದನೆಯನ್ನು ಪಡೆಯಲು ಸಮರ್ಥವಾಗಿರುವ ಹಂತ ಇದಾಗಿರುತ್ತದೆ.,

English summary

Hormonal changes that happen during pregnancy

During pregnancy, your body goes through several changes to facilitate the growth of your baby. Each and every woman goes through same hormonal changes during her pregnancy. Being a female, you have been bestowed with a tough, intuitive and an absolutely unbelievable body when you are on the way to produce another creature just like you. Your body knows what to do during pregnancy, without making you aware of the changes.
X
Desktop Bottom Promotion