For Quick Alerts
ALLOW NOTIFICATIONS  
For Daily Alerts

ಗರ್ಭದಲ್ಲಿರುವ ಮಗುವಿನ ಚಲನ-ವಲನ ತಿಳಿಯುವುದು ಯಾವಾಗ?

By Divya Pandith
|

ಗರ್ಭಧಾರಣೆ ಸ್ತ್ರೀಯರಿಗೊಂದು ಪ್ರಕೃತಿಯ ವರದಾನ. ತಾಯಿಯಾಗುವುದು ಜೀವನದ ಸಾರ್ಥಕತೆಯನ್ನು ಸಾಧಿಸಿದಂತೆ. ತನ್ನಂತೆ ಹೋಲುವ ಇನ್ನೊಂದು ಜೀವವನ್ನು ಪ್ರಪಂಚಕ್ಕೆ ಪರಿಚಯಿಸುವ ಶಕ್ತಿ ಮಹಿಳೆಯದ್ದು. ಈ ಒಂದು ಅಪೂರ್ವ ಶಕ್ತಿಯನ್ನು ಹೊಂದಿರುವ ಮಹಿಳೆ ತನ್ನ ಮಡಿಲಲ್ಲಿ 9 ತಿಂಗಳುಗಳ ಕಾಲ ಮಗುವನ್ನು ಹೊತ್ತಿರುತ್ತದೆ. ಈ ವಿಶೇಷ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ದೇಹದಲ್ಲಿ ಅಪೂರ್ವವಾದ ಬದಲಾವಣೆಗಳು ಸಂಭವಿಸುತ್ತವೆ. ದಿನದಿಂದ ದಿನಕ್ಕೆ ಮಗುವಿನ ದೇಹದ ಬೆಳವಣಿಗೆ ಉಂಟಾಗುವುದು.

ತಾಯಿಯ ಶರೀರದಲ್ಲೂ ಮಗುವಿನ ಪೋಷಣೆಗೆ ಬೇಕಾದ ಬದಲಾವಣೆಯು ಉಂಟಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅನೇಕ ಬದಲಾವಣೆಯನ್ನು ಕಾಣುವುದು ಸಹಜ. ಮಗುವಿನ ಬೆಳವಣಿಗೆ ಉಂಟಾದಂತೆ ಅದರ ತುಂಟಾಟಗಳು ಅಥವಾ ಚಲನವಲನಗಳು ತಾಯಿಯ ಅರಿವಿಗೆ ಬರುತ್ತದೆ. ಈ ಚಲನವಲನಗಳು ಸಾಮಾನ್ಯವಾಗಿ ಮಗುವಿನ ಬೆಳವಣಿಗೆಯನ್ನು ಆಧರಿಸಿರುತ್ತದೆ. ಈ ಸಂವೇದನೆಗಳಿಂದಲೇ ತಾಯಿ ತನ್ನ ಮಗುವಿನ ಬೆಳವಣಿಗೆ ಹಾಗೂ ಯೋಗಕ್ಷೇಮವನ್ನು ಅರಿಯಬಹುದು.

pregnancy

ತಾಯಿಯ ಹೊಟ್ಟೆಯಲ್ಲಿ ಅಂದರೆ ಪುಟ್ಟ ಜಾಗದಲ್ಲಿ ಬೆಳವಣಿಗೆಯನ್ನು ಕಾಣುತ್ತದೆಯಾದರೂ ತನ್ನ ಬೆಳವಣಿಗೆಗೆ ಬೇಕಾದ ಎಲ್ಲಾ ಅಂಶಗಳನ್ನು ತಾಯಿಯ ದೇಹದಿಂದ ಪಡೆದುಕೊಳ್ಳುತ್ತದೆ. ಜೊತೆಗೆ ತನ್ನ ಬೆಳವಣಿಗೆಯಾಗುತ್ತಿದ್ದಂತೆ ಪ್ರದೇಶವನ್ನೂ ಸಹ ಹೆಚ್ಚೆಚ್ಚು ಪಡೆದುಕೊಳ್ಳುತ್ತಾ ಸಾಗುವುದು. ಮಗು ಬೆಳವಣಿಗೆ ಹೊಂದುತ್ತಿದ್ದಂತೆ ಕೈ-ಕಾಲುಗಳ ಬೆಳವಣಿಗೆಯೂ ಹೆಚ್ಚುತ್ತಾ ಹೋಗುತ್ತದೆ. ಆಗ ಮಗುವಿನ ಕೈಕಾಲುಗಳ ಚಲನೆ ಹೆಚ್ಚಿದಂತೆ, ತಾಯಿಗೆ ಮಗುವಿನ ಚಲನೆಯ ಸಂದೇಶ ರವಾನೆಯಾಗುವುದು.

ಈ ಕಾರಣದಿಂದಲೇ ಮಗುವಿನ ಬೆಳವಣಿಗೆಯನ್ನು ಪರಿಶೀಲಿಸುವ ಉದ್ದೇಶಕ್ಕೆ ಅಲ್ಟ್ರಾ ಸೌಂಡ್ ತಪಾಸಣೆಯ ಮೂಲಕ ಮಗುವಿನ ಯೋಗಕ್ಷೇಮವನ್ನು ಪರೀಕ್ಷಿಸಲಾಗುತ್ತದೆ. ಜೊತೆಗೆ ಶಿಶು ಯಾವ ಬಗೆಯ ಬೆಳವಣಿಗೆಯನ್ನು ಹೊಂದಿದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಐದನೇ ತಿಂಗಳಿಂದ ಆರಂಭವಾಗುವ ಮಗುವಿನ ಈ ಬಗೆಯ ಪರಿವರ್ತನೆಯು ಮಗುವಿನ ಉತ್ತಮ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.

ತಾಯಿಯ ಗರ್ಭದಲ್ಲಿರುವ ಮಗು ಯಾವ ಹಂತದ ಬೆಳವಣಿಗೆಯ ನಂತರ ತನ್ನ ಚಟುವಟಿಕೆಯನ್ನು ಆರಂಭಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ. ನಮ್ಮ ದೇಹದಲ್ಲಿ ಉಂಟಾಗುವ ಬದಲಾವಣೆ ಹಾಗೂ ಹೊಸ ಅನುಭವಗಳನ್ನು ಗರ್ಭಾವಸ್ಥೆಯ ಯಾವ ಹಂತದಲ್ಲಿ ಅರಿಯಬೇಕು ಎನ್ನುವುದನ್ನು ನೀವು ತಿಳಿದುಕೊಳ್ಳಲು ಕುತೂಹಲವನ್ನು ಹೊಂದಿದ್ದೀರಿ ಎಂದಾದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ.

ಗರ್ಭದೊಳಗಿರುವ ಮಗುವಿನ ಬೆಳವಣಿಗೆಯ ಬಗೆ ತಿಳಿಯುವುದು ಹೇಗೆ?
-ಸಾಮಾನ್ಯವಾಗಿ 8 ವಾರಗಳು ಆರಂಭವಾದ ನಂತರ ಭ್ರೂಣದ ಸ್ಪರ್ಶದ ಅನುಭವ ಆರಂಭವಾಗುತ್ತದೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.
- ಗರ್ಭಾವಸ್ಥೆಯ 8ನೇ ವಾರದಲ್ಲಿ ಭ್ರೂಣವು ಆಮ್ನಿಯೋಟಿಕ್ ದ್ರವದಿಂದ ತನ್ನ ತುಟಿ ಮತ್ತು ಕೆನ್ನೆಗಳ ಮೇಲೆ ಸ್ಪರ್ಶವನ್ನು ಅನುಭವಿಸುತ್ತದೆ.
- 11ನೇ ವಾರದ ಗರ್ಭಾವಸ್ಥೆಯ ಅವಧಿಯಲ್ಲಿ ಮಗುವಿನ ಕೈ ಕಾಲುಗಳು ಸಾಕಷ್ಟು ಬೆಳವಣಿಗೆಯನ್ನು ಹೊಂದುತ್ತವೆ. ಆಗ ಶಿಶುವು ಗರ್ಭದೊಳಗೆ ತನ್ನ ಚಲನ ವಲನವನ್ನು ಪ್ರಾರಂಭಿಸುತ್ತದೆ. ಇದು ಭ್ರೂಣಕ್ಕೆ ಒಂದು ವಿಶೇಷ ಕಲಿಕೆಯ ಅವಧಿ ಎಂದು ಹೇಳಲಾಗುವುದು.
- 12ನೇ ವಾರಗಳ ನಂತರ ತಾಯಿ ಮಗುವಿನ ಕಿಕ್/ಒದೆಯುವ ಸಂವೇದನೆಯನ್ನು ಅನುಭವಿಸುತ್ತಾಳೆ. ಈ ಸಂವೇದನೆಯು ಪಾಪ್ಕಾರ್ನ್ ಹೇಗೆ ಸಿಡಿಯುತ್ತದೆಯೋ ಆ ರೀತಿಯ ಅನುಭವ ಎಂದು ವರ್ಣಿಸಲಾಗುತ್ತದೆ.


- 20ನೇ ವಾರದ ನಂತರ ಈ ಒದೆತ ಗಟ್ಟಿಯಾಗುತ್ತದೆ. ಇದನ್ನು ತಾಯಿಯಲ್ಲದೆ ಇತರ ವ್ಯಕ್ತಿಗಳು ಸಹ ಗಮನಿಸಬಹುದು. ಶಿಶುವಿನ ಬೆಳವಣಿಗೆ ಬಲವಾಗುತ್ತಾ ಹೋಗುವುದರಿಂದ ಮಗುವಿನ ಚಲನ ವಲನವೂ ಅಧಿಕವಾಗುತ್ತದೆ.
- 30ನೇ ವಾರದಲ್ಲಿ ಮಗುವಿನ ತಲೆ ಯಾವ ಭಾಗದಲ್ಲಿದೆ ಎನ್ನುವುದನ್ನು ತಾಯಿ ಗುರುತಿಸಬಹುದು. ಅಲ್ಲದೆ ಮಗುವಿನ ಬೆಳವಣಿಗೆಯಂತೆ ತಾಯಿಯ ಹೊಟ್ಟೆಯ ಆಕಾರವೂ ಬದಲಾವಣೆಯನ್ನು ಕಾಣುತ್ತದೆ.
- ಮಗುವಿನ ಚಲನವಲನವನ್ನು ಅರಿಯಲು ಸಾಧ್ಯವಾಗುತ್ತಿಲ್ಲ ಎಂದಾದರೆ ಮಗುವಿನ ಬೆಳವಣಿಗೆಯ ಸ್ಥಳ ಅಥವಾ ಬ್ರೂಣದಲ್ಲಿ ಸೂಕ್ತ ಸ್ಥಳಾವಕಾಶವನ್ನು ಪಡೆದುಕೊಂಡಿಲ್ಲ ಎನ್ನುವುದನ್ನು ಅರಿಯಬೇಕು.
- ಮಗುವಿನ ಚಲನ ವಲನ ತಾಯಿಯ ಮಾನಸಿಕ ಸ್ಥಿತಿಯನ್ನು ಆಧರಿಸಿರುತ್ತದೆ. ತಾಯಿ ಹೆಚ್ಚು ಖುಷಿಯಲ್ಲಿರುವಾಗ ಮಗುವಿನ ಚಲನೆಯೂ ಹೆಚ್ಚಿರುತ್ತದೆ. ಅದೇ ತಾಯಿ ಒತ್ತಡ ಅಥವಾ ಬೇಸರ ಮನಃಸ್ಥಿತಿಯಲ್ಲಿದ್ದರೆ ಮಗುವಿನ ಚಟುವಟಿಕೆಯೂ ಕಡಿಮೆಯಾಗುತ್ತದೆ.
- ಇಂತಹ ಸಂದರ್ಭದಲ್ಲಿ ತಾಯಿ ಹೆಚ್ಚು ಪೌಷ್ಟಿಕ ಆಹಾರ ಸೇವಿಸುವುದರಿಂದ ಭ್ರೂಣದ ಶಕ್ತಿಯು ದ್ವಿಗುಣವಾಗುತ್ತದೆ.
- ಈ ರೀತಿಯ ಶಿಶುವಿನ ಪ್ರಕ್ರಿಯೆಯು ಒಬ್ಬ ಮಹಿಳೆಗಿಂತ ಇನ್ನೊಬ್ಬ ಮಹಿಳೆಯಲ್ಲಿ ಭಿನ್ನತೆ ಇರಬಹುದು. ಹಾಗಾಗಿ ಪ್ರತಿ ತಿಂಗಳಿಗೊಮ್ಮೆ ಗರ್ಭಿಣಿಯರು ಸೂಕ್ತ ತಪಾಸಣೆಗೆ ಒಳಗಾಗಬೇಕು. ಇಡೀ ಗರ್ಭಾವಸ್ಥೆಯ ಅವಧಿಯಲ್ಲಿ ನಿಮ್ಮ ಸಂತೋಷವನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಭ್ರೂಣವು ತಾಯಿಯ ಮನಸ್ಥಿತಿಯನ್ನು ಆಗಾಗ್ಗೆ ಪ್ರತಿಬಿಂಬಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ನೀವು ಸಂತೋಷವಾಗಿದ್ದಾಗ, ನಿಮ್ಮ ದೇಹವು ಆಕ್ಸಿಟೋಸಿನ್ ಎಂಬ ಹಾರ್ಮೋನ್ನನ್ನು ಬಿಡುಗಡೆ ಮಾಡುತ್ತದೆ. ಅದು ಗರ್ಭಾಶಯದಲ್ಲಿ ನಿಮ್ಮ ಮಗುವಿನ ಚಲನೆಯನ್ನು ಹೆಚ್ಚಿಸುತ್ತದೆ. ನೆನಪಿನಲ್ಲಿಡಿ, ನೀವು ಸಂತೋಷದಿಂದ ಮತ್ತು ಒತ್ತಡದಿಂದ ಮುಕ್ತರಾಗಿರುವವರೆಗೂ ಇದು ಚೆನ್ನಾಗಿರುತ್ತದೆ. ತಾಯಿಯ ಸಂತೋಷದ ಮಾನಸಿಕ ಸ್ಥಿತಿ ಆರೋಗ್ಯಕರ ಮತ್ತು ಸಂತೋಷಕರವಾದ ಮಗುವಿನ ಬೆಳವಣಿಗೆಗೆ ಸಹಾಯವಾಗುತ್ತದೆ.
English summary

From When Can You Feel The Baby Movement

Being pregnant is the greatest joy in the world. It is that part of life where we women give birth to a cute little genetic copy of ourselves. The whole idea of nurturing a young life inside of ourselves makes us feel special. The whole pregnancy process is no less than a miracle. We wait patiently for the time when we finally get to see that face of our little miracle. Women go through a lot of changes during pregnancy, both mentally and physically. From the time we receive the news of our pregnancy, we are constantly worried about the well-being of the foetus.
X
Desktop Bottom Promotion