For Quick Alerts
ALLOW NOTIFICATIONS  
For Daily Alerts

ಮಕ್ಕಳಾಗದವರು ಇಂತಹ ಆಹಾರಗಳನ್ನು ಸೇವಿಸಿದರೆ- ಸಂತಾನಭಾಗ್ಯ ಪಡೆಯುತ್ತಾರೆ

|

ನೀವು ಮತ್ತು ನಿಮ್ಮ ಸಂಗಾತಿಯು ಮಗುವಿನ ಬಗ್ಗೆ ಆಲೋಚನೆ ಮಾಡಿರಬಹುದು. ಆದರೆ ಗರ್ಭ ಧರಿಸಲು ಮಾತ್ರ ಸಾಧ್ಯವಾಗುತ್ತಿಲ್ಲ. ಮುಂದಿನ ಕೆಲವು ತಿಂಗಳಲ್ಲಿ ಅಥವಾ ವರ್ಷದೊಳಗಡೆ ನಿಮಗೆ ಗರ್ಭಧರಿಸಬೇಕೆಂದು ಇದ್ದರೆ ಆಗ ನೀವು ಕೆಲವೊಂದು ಆರೋಗ್ಯಕರವಾಗಿರುವಂತಹ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ತುಂಬಾ ಒಳ್ಳೆಯದು.

ನಿಮ್ಮ ಫಲವತ್ತತೆ ಹೆಚ್ಚು ಮಾಡಿ ಮಗುವನ್ನು ಪಡೆಯಲು ನೆರವಾಗುವಂತಹ ಕೆಲವು ಆಹಾರಗಳನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಬೇಕು...ಬನ್ನಿ ಅಂತಹ ಆಹಾರಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಿದ್ದೇವೆ ಮುಂದೆ ಓದಿ.. ಮುಂದಿನ ಕೆಲವು ತಿಂಗಳಲ್ಲಿ ನೀವು ಗರ್ಭಧರಿಸಬೇಕು ಎಂದಿದ್ದರೆ ಈ ಆಹಾರಗಳನ್ನು ಸೇವನೆ ಮಾಡಬೇಕು.

ಬೀನ್ಸ್

ಬೀನ್ಸ್

ಬೀನ್ಸ್ ತುಂಬಾ ಒಳ್ಳೆಯ ತರಕಾರಿ. ಇದು ಫಲವತ್ತತೆ ಕೂಡ ಹೆಚ್ಚು ಮಾಡುವುದು. ಹವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮಾಡಿರುವ ಅಧ್ಯಯನಗಳ ಪ್ರಕಾರ ಗರ್ಭಧರಿಸಲು ಬಯಸಿದ್ದ ಸುಮಾರು 19 ಸಾವಿರ ಮಹಿಳಾ ನರ್ಸ್ ಗಳನ್ನು ಗಮನಿಸಲಾಯಿತು ಮತ್ತು ಶೇ.39ರಷ್ಟು ಮಹಿಳೆಯರಲ್ಲಿ ಪ್ರಾಣಿಗಳ ಪ್ರೋಟೀನ್ ಸೇವನೆಯಿಂದಾಗಿ ಬಂಜೆತನವು ಸಾಮಾನ್ಯವಾಗಿತ್ತು. ಆದರೆ ಸಸ್ಯಜನ್ಯ ಪ್ರೋಟೀನ್ ಸೇವನೆ ಮಾಡಿದ ಮಹಿಳೆಯರು ಬೇಗನೆ ಗರ್ಭಧರಿಸುತ್ತಿದ್ದರು. ಇದರಿಂದ ನೀವು ಬೀನ್ಸ್ ನ್ನು ಸಲಾಡ್ ಅಥವಾ ಚಿಲ್ಲಿ ಮಾಡಿಕೊಂಡು ತಿನ್ನಬಹುದು. ನಿಮಗೆ ಬೀನ್ಸ್ ಇಷ್ಟವಿಲ್ಲವೇ? ಹಾಗಾದರೆ ನೀವು ತೊಫು, ಬೀಜಗಳು ಮತ್ತಿತರ ಸಸ್ಯಜನ್ಯ ಪ್ರೋಟೀನ್ ಸೇವನೆ ಮಾಡಿ.

ದಿನಾ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯಿರಿ

ದಿನಾ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯಿರಿ

ಪ್ರತಿಯೊಂದು ಹಣ್ಣಿನಿಂದ ಸಹ ನಿಮ್ಮ ಆರೋಗ್ಯಕ್ಕೆ ಖಚಿತವಾದ ಪ್ರಯೋಜನಗಳಿವೆ. ಬಾಳೆ ಹಣ್ಣು ಮಲಬದ್ಧತೆ ಗುಣಪಡಿಸಲು ಉತ್ತಮವಾದರೆ, ಸೇಬು ಹಣ್ಣು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಅದ್ಭುತ ರೀತಿಯಲ್ಲಿ ವರ್ಧಿಸಲು ಒಂದು ಅತ್ಯುತ್ತಮವಾಗಿದೆ. ದಾಳಿಂಬೆ ಹಣ್ಣು ಕೂಡ ಅಂತಹ ಅಂತ್ಯವಿಲ್ಲದ ಪ್ರಯೋಜನಗಳ ಪಟ್ಟಿ ಹೊಂದಿದೆ. ಹಣ್ಣುಗಳನ್ನು ಸೇವಿಸಿದರೆ ನಿಮ್ಮ ವಿವಿಧ ಅರೋಗ್ಯದ ಸಮಸ್ಯೆಗಳನ್ನು ಪರಿಹರಿಸಬಹುದೆಂದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಆಶ್ಚರ್ಯವೆಂದರೆ, ಪ್ರತಿದಿನ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ, ಮಹಿಳೆಯರು ಬೇಗನೆ ಗರ್ಭಧರಿಸುವ ಸಾಧ್ಯತೆ ಜಾಸ್ತಿ ಆಗುತ್ತದೆಯಂತೆ.. ಇನ್ನು ದಾಳಿಂಬೆ ಜ್ಯೂಸ್ ಸಂತಾನೋತ್ಪತ್ತಿಯ ಭಾಗಗಳಿಗೆ ರಕ್ತದ ಪರಿಚಲನೆಯನ್ನು ಉತ್ತೇಜಿಸಲು ದಾಳಿಂಬೆ ನೆರವಾಗುತ್ತದೆ. ಇದು ಗರ್ಭಪಾತದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ಭ್ರೂಣದ ಬೆಳವಣಿಗೆಗೂ ಇದು ಸಹಕಾರಿ. ಒಂದು ಲೋಟ ದಾಳಿಂಬೆ ಜ್ಯೂಸ್ ಅನ್ನು ಪ್ರತೀ ದಿನ ಸೇವಿಸಿ.

ವಿಟಮಿನ್ ಬಿ 12

ವಿಟಮಿನ್ ಬಿ 12

ಆಹಾರಗಳು ಇದು ಅಂಡೋತ್ಪತ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಂಡೋತ್ಪತ್ತಿ ಕಡಿಮೆಯಾಗಿರುವ ಮಹಿಳೆಯರಲ್ಲಿ ಈ ವಿಟಮಿನ್ ಕಾರ್ಯನಿರ್ವಹಿಸುತ್ತದೆ. ವಿಟಮಿನ್ ಬಿ 12 ಹೊಂದಿರುವ ಆಹಾರ ಪದಾರ್ಥಗಳು ಗರ್ಭಾಶಯದ ಒಳಪದರವನ್ನು ಸುಧಾರಿಸುತ್ತದೆ ಹೀಗಾಗಿ ಫಲವತ್ತಾದ ಮೊಟ್ಟೆಗಳ ಅಳವಡಿಕೆಗೆ ಅನುಕೂಲಕರ ವಾತಾವರಣ ದೊರೆಯುತ್ತದೆ. ವಿಟಮಿನ್ ಬಿ 12 ಹೊಂದಿರುವ ಆಹಾರಗಳೆಂದರೆ ಮಾಂಸ, ಮೀನು, ಕೋಳಿ, ಮೊಟ್ಟೆ, ಅಂಗಗಳ ಮಾಂಸ, ಹಾಲಿನ ಉತ್ಪನ್ನಗಳು ಇತ್ಯಾದಿ.

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆ ಹಾಕಿದರೆ ಅಡುಗೆಯ ರುಚಿ ಹೆಚ್ಚುವುದು, ಆದರೆ ಆಲೂಗಡ್ಡೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಟುವಾದ ಅಪವಾದವನ್ನು ಆಲೂಗಡ್ಡೆ ಮೇಲೆ ಹೊರೆಸಲಾಗಿದೆ..ಯಾವುದೇ ನಿರ್ದಿಷ್ಟವಾದ ಆಕಾರವಿಲ್ಲದ ಈ ತರಕಾರಿಗೆ ಸೊಲಾನಮ್ ಟ್ಯೂಬರೋಸಂ ಎಂಬ ವೈಜ್ಞಾನಿಕ ಹೆಸರಿದೆ. ಆಲೂಗಡ್ಡೆ ಪ್ರಿಯರು ಮಾತ್ರವಲ್ಲ, ಆಲೂಗಡ್ಡೆ ಬರೀ ಅನಾರೋಗ್ಯ ಮಾತ್ರ ಉಂಟು ಮಾಡುತ್ತದೆ, ಇದರಲ್ಲಿ ಕಾರ್ಬೋಹೈಡ್ರೇಡ್ ಹಾಗೂ ಕ್ಯಾಲೋರಿ ಬಿಟ್ಟರೆ ಬೇರೇನು ಇಲ್ಲ ಎಂದು ಆಲೂಗಡ್ಡೆಯನ್ನು ದ್ವೇಷಿಸುವವರು ಕೂಡ ಇದರಲ್ಲಿರುವ ಅನೇಕ ವಿಶೇಷ ಗುಣಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಗರ್ಭವತಿಯಾಗಬಯಸುವ ಪ್ರತಿಯೊಬ್ಬ ಮಹಿಳೆಯೂ ಬೇಯಿಸಿದ ಆಲೂಗಡ್ಡೆಯನ್ನು ತಮ್ಮ ಆಹಾರದಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಬಿ ಮತ್ತು ಇ ಜೀವಕೋಶಗಳ ಉತ್ಪತ್ತಿಗೆ ಸಹಕರಿಸುತ್ತವೆ. ಅಂಡಾಶಯದಲ್ಲಿ ಆರೋಗ್ಯವಂತ ಅಂಡ ಉತ್ಪತ್ತಿಯಾಗಲು ಈ ಎರಡು ವಿಟಮಿನ್ ಗಳು ಅತ್ಯಗತ್ಯವಾಗಿವೆ.

ಎಲೆಕೋಸು

ಎಲೆಕೋಸು

ಎಲೆಕೋಸು ಎಂಬುದು ಬ್ರಸ್ಸಿಕ ಕುಟುಂಬದ ಒಂದು ತರಕಾರಿ. ಈ ಕುಟುಂಬದಲ್ಲಿ ಬ್ರೊಕೊಲಿ, ಹೂಕೋಸು ಮತ್ತು ಬ್ರುಸ್ಸೆಲ್ ಮೊಳಕೆಗಳು ಸೇರಿವೆ. ಹೆಸರಿಗೆ ತಕ್ಕಂತೆ ಎಲೆಗಳ ಪದರಗಳಿಂದಲೆ ಆವೃತವಾಗಿರುವ ಈ ಎಲೆಕೋಸು ಮೂಲತಃ ಪೂರ್ವ ಮೆಡಿಟರೇನಿಯನ್ ಮತ್ತು ಏಶಿಯಾ ಮೈನರ್ ಪ್ರಾಂತ್ಯದ ತರಕಾರಿಯಾಗಿದೆ. ಈ ಆರೋಗ್ಯಕಾರಿ ತರಕಾರಿಯು ವರ್ಷದ ಎಲ್ಲಾಭಾಗದಲ್ಲೂ ದೊರೆಯುತ್ತದೆ. ಹೂಕೋಸಿನಲ್ಲಿ ಹಲವಾರು ವಿಧ ಅದರಲ್ಲಿ ಕೆಂಪು ಮತ್ತು ಹಸಿರು ಬಣ್ಣದ ಹೂಕೋಸುಗಳಲ್ಲಿ ಯಾವುದಾದರೊಂದನ್ನು ಆರಿಸಿಕೊಳ್ಳಿ. ಇವುಗಳನ್ನು ಆಹಾರದಲ್ಲಿ ಆಗಲಿ ಅಥವಾ ಹಾಗೆಯೇ ಕಚ್ಛಾ ತರಕಾರಿಯಾಗಿ ಸಹ ಸೇವಿಸಬಹುದು. ಸಾಮಾನ್ಯವಾಗಿ ಎಲೆಕೋಸು ಎಂದರೆ ನಮಗೆಲ್ಲಾ ಒಂದು ರೀತಿಯ ಅಸಡ್ಡೆ. ಆದರೆ ಗರ್ಭಧರಿಸಲು ಬಯಸುವ ಮಹಿಳೆಯ ಮಟ್ಟಿಗೆ ಮಾತ್ರ ಎಲೆಕೋಸು ಅತ್ಯಂತ ಉಪಯುಕ್ತ ತರಕಾರಿಯಾಗಿದೆ. ಇದರಲ್ಲಿರುವ di-indole methane ಎಂಬ ಪೋಷಕಾಂಶ ಮಹಿಳೆಯರ ದೇಹದಲ್ಲಿ ಸ್ರವಿತವಾಗುವ ಈಸ್ಟ್ರೋಜೆನ್ ಎಂಬ ಹಾರ್ಮೋನು ಸೂಕ್ತಪ್ರಮಾಣದಲ್ಲಿ ಹಾಗೂ ಕ್ಲುಪ್ತಕಾಲದಲ್ಲಿ ಸ್ರವಿಸಿ fibroids ಮತ್ತು endometriosis ಎಂಬ ಕಾರ್ಯಗಳು ಜರುಗಲು ನೆರವಾಗುತ್ತದೆ. ಎಲೆಕೋಸನ್ನು ಆಯ್ದುಕೊಳ್ಳುವಾಗ ಮೇಲಿನ ತುದಿಯನ್ನು ಬೆರಳಿನಿಂದ ಒತ್ತಿದರೆ ಗಟ್ಟಿಯಾಗಿ ಕಲ್ಲಿನಂತಿರುವ ಕೋಸನ್ನು ಆರಿಸಿಕೊಳ್ಳಬೇಕು. ಮೆದುವಾಗಿ ಒತ್ತಿದರೆ ಸ್ಪಂಜಿನಂತಿರುವ ಕೋಸು ಪೋಷಕಾಂಶಗಳ ಮಟ್ಟಿಗೆ ಉಪಯುಕ್ತವಲ್ಲ.

ವಿಟಮಿನ್ ಇ ಇರುವಂತಹ ಆಹಾರಗಳನ್ನು ಹೆಚ್ಚು ಸೇವಿಸಿ

ವಿಟಮಿನ್ ಇ ಇರುವಂತಹ ಆಹಾರಗಳನ್ನು ಹೆಚ್ಚು ಸೇವಿಸಿ

ವಿಟಮಿನ್ ಇ ಇರುವಂತಹ ಆಹಾರಗಳಾದ ಸೂರ್ಯಕಾಂತಿ ಎಣ್ಣೆ, ಆಲಿವ್ ಎಣ್ಣೆ, ಗೋಧಿ ಜೀವಾಣು ತೈಲ, ಬೀಜಗಳು, ಬಸಳೆ, ಬ್ರಾಕೋಲಿ ಇತ್ಯಾದಿಗಳನ್ನು ಸೇವಿಸಿ. ಇದು ಪುರುಷರು ಹಾಗೂ ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಿಸುವುದು. ವಿಟಮಿನ್ ಇ ಅಂಡಾಶಯದ ಲೋಳೆಯ ಗುಣಮಟ್ಟ ವೃದ್ಧಿಸುವುದು. ಇದರಿಂದ ಗರ್ಭದಲ್ಲಿ ಫಲನೀಡುವಂತಹ ಅಂಡಾಣುಗಳನ್ನು ನಿರ್ಮಿಸುವುದು. ಮಹಿಳೆಯ ಸಂತಾನೋತ್ಪತ್ತಿ ಭಾಗದಲ್ಲಿ ವಿಟಮಿನ್ ಇ, ವೀರ್ಯದ ಅವಧಿ ಹೆಚ್ಚಿಸುವುದು.

ಮೊಟ್ಟೆಯ ಹಳದಿ, ಫ್ಯಾಟಿ ಮೀನುಗಳನ್ನು ಹೆಚ್ಚಾಗಿ ಸೇವಿಸಿ

ಮೊಟ್ಟೆಯ ಹಳದಿ, ಫ್ಯಾಟಿ ಮೀನುಗಳನ್ನು ಹೆಚ್ಚಾಗಿ ಸೇವಿಸಿ

ದೇಹದಲ್ಲಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟರಾನ್‌ ಮಟ್ಟವನ್ನು ಹೆಚ್ಚಿಸುವ ಮೂಲಕ ಗರ್ಭಿಣಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ವೀರ್ಯಾಣು ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ. ವಿಟಮಿನ್ ಡಿ ಹೊಂದಿರುವ ಆಹಾರಗಳೆಂದರೆ, ಚೀಸ್, ಮೊಟ್ಟೆಯ ಹಳದಿ, ಫ್ಯಾಟಿ ಮೀನುಗಳು ಅಂದರೆ ಟ್ಯೂನಾ, ಮೆಕ್ರೇಲ್ ಇತ್ಯಾದಿ.

Read more about: pregnant
English summary

Foods That Can Help You Get Pregnant

You and your partner have talked about having a baby, but it's not happening just yet. If you plan to get pregnant within the next few months—or even year—it's important to get your diet on the healthy track now to prepare your body for pregnancy later.
Story first published: Saturday, August 25, 2018, 12:35 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more