For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಾಡುವ ಇಂತಹ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದಿರಿ

By Divya Pandit
|

ಮಹಿಳೆಯರಿಗೆ ಗರ್ಭಾವಸ್ಥೆ ಅತ್ಯಂತ ಮಹತ್ತರವಾದ ಘಟ್ಟ. ಈ ಸ್ಥಿತಿಯಲ್ಲಿ ಇರುವಾಗ ಅತಿಹೆಚ್ಚು ಕಾಳಜಿಯಿಂದ ಇರಬೇಕಾಗುತ್ತದೆ. ಇಲ್ಲವಾದರೆ ಅಪಾಯ ಸಂಭವಿಸುವುದು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯ ಹೊಂದಿದ್ದರೆ ಮಗುವಿನ ಸೂಕ್ತ ಬೆಳವಣಿಗೆ ಉಂಟಾಗುವುದು. ಜೊತೆಗೆ ಸುಸೂತ್ರವಾದ ಹೆರಿಗೆಯು ಸಂಭವಿಸುವುದು.

ಹಾಗೊಮ್ಮೆ ಗರ್ಭಿಣಿಯಾಗಿರುವಾಗ ಕಾಡುವ ಅನೇಕ ಆರೋಗ್ಯ ಸಮಸ್ಯೆಗಳಿಂದ ಗೊಂದಲ, ಕಿರಿಕಿರಿ ಹಾಗೂ ಮಹತ್ತರವಾದ ತೊಡಕುಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಆರೋಗ್ಯದಲ್ಲಿ ಬದಲಾವಣೆ ಉಂಟಾಗುವುದು ಸಹಜ. ಆದರೆ ಕೆಲವು ಆಯ್ದ ಮಹತ್ತರವಾದ ಆರೋಗ್ಯ ಸಮಸ್ಯೆಯಿಂದ ತಾಯಿ ಮತ್ತು ಮಗು ಜೀವನ ಮರಣದೊಂದಿಗೆ ಹೋರಾಡುವ ಸಂದಿಗ್ಧ ಪರಿಸ್ಥಿತಿಯೂ ಉಂಟಾಗುವ ಸಾಧ್ಯತೆಗಳಿವೆ.

ಹಾಗಾಗಿ ಗರ್ಭಾವಸ್ಥೆಯಲ್ಲಿರುವಾಗ ಪ್ರತಿಯೊಬ್ಬರು ಸೂಕ್ತ ಕಾಳಜಿ ಹಾಗೂ ಆರೈಕೆಗೆ ಮೊರೆಹೋಗಬೇಕು. ಗರ್ಭಾವಸ್ಥೆಯಲ್ಲಿ ಸಾಮಾನ್ಯ ಎನಿಸಿದರೂ ಅತ್ಯಂತ ಅಪಾಯಕಾರಿ ಸ್ಥಿತಿಯನ್ನು ತಂದಿಡುವ ಸಮಸ್ಯೆಗಳು ಹಾಗೂ ಅದರ ಕುರಿತು ಎಚ್ಚರಿಕೆ ವಿಚಾರದ ಬಗ್ಗೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ..

ಸ್ಥೂಲಕಾಯ

ಸ್ಥೂಲಕಾಯ

30 ವರ್ಷದ ನಂತರ ಗರ್ಭಾವಸ್ಥೆಯನ್ನು ಹೊಂದಿರುವ ಮಹಿಳೆಯರಿಗೆ ಸ್ಥೂಲಕಾಯ ಅತ್ಯಂತ ಕಷ್ಟವನ್ನು ನೀಡುವುದು ಎನ್ನಬಹುದು. ಎತ್ತರ ಹಾಗೂ ತೂಕವು ಸೂಕ್ತ ಪ್ರಮಾಣದಲ್ಲಿ ಇರಬೇಕಾಗುತ್ತದೆ. ಸ್ಥೂಲಕಾಯ ಹೊಂದಿರುವ ಗರ್ಭಿಣಿಯರಲ್ಲಿ ಭ್ರೂಣವು ಅಸಹಜ ಬೆಳವಣಿಗೆಯನ್ನು ಕಾಣುವುದು. ಅಲ್ಲದೆ ಗರ್ಭಿಣಿಯರಿಗೆ ಅಧಿಕ ರಕ್ತದ ಒತ್ತಡ, ಮಧುಮೇಹ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಯು ಕಾಡುವ ಸಾಧ್ಯತೆಗಳಿರುತ್ತವೆ.

ಗರ್ಭಾವಸ್ಥೆಯ ಮೊದಲು ಇರುವ ಆರೋಗ್ಯ ಸಮಸ್ಯೆ

ಗರ್ಭಾವಸ್ಥೆಯ ಮೊದಲು ಇರುವ ಆರೋಗ್ಯ ಸಮಸ್ಯೆ

ಗರ್ಭಾವಸ್ಥೆಗೆ ಪೂರ್ವದಲ್ಲಿ ತಾಯಿಗೆ ಇರುವ ಕೆಲವು ಆರೋಗ್ಯ ಸಮಸ್ಯೆಯು ಮಗುವಿಗೂ ವರ್ಗಾವಣೆಯಾಗುವ ಸಾಧ್ಯತೆಗಳಿರುತ್ತವೆ. ಎಚ್‍ಐವಿ ಸೋಂಕು ಹೊಂದಿರುವ ಮಹಿಳೆಯ ಗರ್ಭಾವಸ್ಥೆಯು ಅತ್ಯಂತ ಆತಂಕಕಾರಿಯಾಗಿರುತ್ತದೆ. ಇದನ್ನು ಹೊರತು ಪಡಿಸಿದರೆ ಅಧಿಕ ರಕ್ತದ ಒತ್ತಡ, ಥೈರಾಯ್ಡ್, ಮೂತ್ರಪಿಂಡದ ಸಮಸ್ಯೆ, ಹೃದಯದ ತೊಂದರೆ ಸೇರಿದಂತೆ ಇನ್ನಿತರ ಸಮಸ್ಯೆಯು ಅಧಿಕ ಸಮಸ್ಯೆಯನ್ನು ತಂದೊಡ್ಡುವುದು.

ಔಷಧ ಹಾಗೂ ಆಲ್ಕೋಹಾಲ್ ಬಳಕೆ

ಔಷಧ ಹಾಗೂ ಆಲ್ಕೋಹಾಲ್ ಬಳಕೆ

ಗರ್ಭಾವಸ್ಥೆಯಲ್ಲಿರುವ ಮಹಿಳೆಯು ತನ್ನ ಊಟ-ತಿಂಡಿಯ ವಿಚಾರದಲ್ಲಿ ಅಧಿಕ ಕಾಳಜಿಯನ್ನು ತೋರಬೇಕಾಗುತ್ತದೆ. ಈ ಸಮಯದಲ್ಲಿ ಅನುಚಿತವಾದ ಔಷಧ, ಧೂಮಪಾನ ಹಾಗೂ ಮದ್ಯಪಾನವನ್ನು ಮಾಡಬಾರದು. ಆಲ್ಕೋಹಾಲ್ ಹೊಂದಿರುವ ಆಹಾರ ಪದಾರ್ಥವನ್ನು ಸೇವಿಸುವುದರಿಂದ ಮಗುವಿನ ಬೆಳವಣಿಗೆಗೆ ಅಡ್ಡಿ ಉಂಟುಮಾಡುವುದು. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಕೆಲವು ಅಧ್ಯಯನದ ಪ್ರಕಾರ ಮದ್ಯಪಾನ ಮಾಡುವ ಗರ್ಭಿಣಿಯರಲ್ಲಿ ಶೇ.50ಕ್ಕಿಂತಲೂ ಹೆಚ್ಚಿನ ಭ್ರೂಣವು ಸಾವನ್ನಪಿದೆ ಎಂದು. ಅಲ್ಲದೆ ಹುಟ್ಟಿದ ಮಕ್ಕಳಲ್ಲಿ ಅಸಹಜತೆ ಉಂಟಾಗಿದೆ ಎಂದು ಹೇಳಲಾಗಿದೆ.

ಅವಳಿ ಭ್ರೂಣಗಳು

ಅವಳಿ ಭ್ರೂಣಗಳು

ಗರ್ಭಾವಸ್ಥೆಯಲ್ಲಿ ತಾಯಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬ್ರೂಣವು ಬೆಳೆಯುತ್ತಿದ್ದರೆ ತಾಯಿ ಅತ್ಯಂತ ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ. ಮಗುವಿನ ಬೆಳವಣಿಗೆ ಆದಂತೆ ಹೆಚ್ಚು ಅಪಾಯಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಗರ್ಭಧಾರಣೆಯ ಕೊನೆಯ ತಿಂಗಳ ಅವಧಿಯಲ್ಲಿ ತಾಯಿ ಅಧಿಕ ವಿಶ್ರಾಂತಿಯನ್ನು ಹೊಂದಬೇಕಾಗುವುದು.

ಐವಿಎಫ್ ಗರ್ಭಾವಸ್ಥೆ

ಐವಿಎಫ್ ಗರ್ಭಾವಸ್ಥೆ

ಐವಿಎಫ್ ಗರ್ಭಾವಸ್ಥೆಯಲ್ಲಿ ಭ್ರೂಣದ ಅಸಹಜತೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತದೆ. ಇಂತಹ ಗರ್ಭಧಾರಣೆಯಿಂದ ಹುಟ್ಟುವ ಮಕ್ಕಳು ಸಾಮಾನ್ಯವಾಗಿ ಜನ್ಮದಿಂದಲೇ ಹೃದಯದ ಆರೋಗ್ಯ ಸಮಸ್ಯೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಕೃತಕವಾದ ಗರ್ಭಧಾರಣೆಯಾಗಿರುವುದರಿಂದ ಅಧಿಕ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.

ಒತ್ತಡದ ಮಟ್ಟ

ಒತ್ತಡದ ಮಟ್ಟ

ಗರ್ಭಾವಸ್ಥೆಯಲ್ಲಿ ಒತ್ತಡದ ಮಟ್ಟವು ಪ್ರಮುಖ ಪಾತ್ರವನ್ನು ವಹಿಸುತ್ತವೆ. ವೃತ್ತಿ ಅಥವಾ ಕೌಟುಂಬಿಕ ವಿಚಾರಗಳಿಂದ ಒತ್ತಡಕ್ಕೆ ಒಳಗಾಗಬಹುದು. ತಾಯಿಗೆ ಮಾನಸಿಕವಾಗಿ ಉಂಟಾಗುವ ಒತ್ತಡವು ಮಗುವಿನ ಬೆಳವಣಿಗೆಯ ಮೇಲೆ ಅಧಿಕ ಪರಿಣಾಮ ಬೀರುವುದು. ಜೊತೆಗೆ ತಾಯಿಯ ಆರೋಗ್ಯದಲ್ಲೂ ಏರುಪೇರು ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ಗರ್ಭಾವಸ್ಥೆಯಲ್ಲಿರುವಾಗ ಅಧಿಕ ಆತ್ಮವಿಶ್ವಾಸ ಹಾಗೂ ನಿರ್ಮಲವಾದ ಮನಸ್ಸನ್ನು ಹೊಂದುವುದು ಅತ್ಯಗತ್ಯ.

English summary

Factors That Contribute To High-risk Pregnancy

Pregnancy is one of the most trying periods of a woman's life. From a physical perspective or that of an emotional one, it puts a lot of pressure on the woman to deal with the new changes. In the past, it was often seen that a greater majority of women were not able to bear with these challenges and this in turn resulted in high maternal mortality rate. Thanks to the advancements in medical science, there have been better treatments to most of the ailments surrounding pregnancy.
X
Desktop Bottom Promotion