For Quick Alerts
ALLOW NOTIFICATIONS  
For Daily Alerts

ಏನಿದು 'ಸ್ಥಗಿತ ಹೆರಿಗೆ ನೋವು'? ಗರ್ಭಿಣಿಯರು ತಿಳಿಯಲೇಬೇಕಾದ ಸಂಗತಿಗಳು

By Sushma Charhra
|

ನೀವು ಗರ್ಭಿಣಿಯಾಗಿದ್ದರೆ,ನಿಮ್ಮ ಆಸೆ ಮತ್ತು ಬೇಡಿಕೆ ಏನಾಗಿರುತ್ತದೆ ಎಂದರೆ ನೋವಿಲ್ಲದ, ಸಹಜ ಹೆರಿಗೆಯಾಗಿ, ಅಂತಿಮವಾಗಿ ಮುದ್ದು ಕಂದಮ್ಮ ಆರೋಗ್ಯಯುತವಾಗಿ ನಿಮ್ಮ ತೋಳಿಗೆ ಸೇರಬೇಕು ಎಂಬುದೇ ಆಗಿರುತ್ತದೆ.ಆದರೆ ಬಹಳಷ್ಟು ವಿಚಾರಗಳು ತಪ್ಪಾಗಿ ಬಿಡಬಹುದು ಮತ್ತು ಅದು ಸಹಜ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿ, ಸಹಜ ಹುಟ್ಟು ಅಥವಾ ಸಹಜ ನೆರಿಗೆ ನೋವಿಗೆ ಕಾರಣವಾಗಿಲ್ಲದೇ ಇರಬಹುದು.

ಪ್ರತಿಯೊಬ್ಬ ಮಹಿಳೆಯರಲ್ಲೂ ಹೆರಿಗೆ ನೋವಿನ ಅನುಭವ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಆದರೆ ಕೆಲವು ವಿಚಾರಗಳಿವೆ ನೀವು ಹೆರಿಗೆ ನೋವನ್ನು ಗುರುತಿಸಿಕೊಳ್ಳಲು ಅವು ನೆರವು ನೀಡುತ್ತದೆ. ಅದರಲ್ಲಿ ಹಲವು ಹಂತಗಳಿವೆ ಮತ್ತು ಅವುಗಳನ್ನು ಸರಿಯಾದ ಸಮಯದಲ್ಲಿ ನೋಡಿಕೊಂಡರೆ ನಿಮ್ಮ ಆರೋಗ್ಯಕ್ಕೇ ಹಿತವಾದದ್ದಾಗಿರರುತ್ತದೆ.

labor in kannada

ಮಗುವನ್ನು ಹೆರುವುದು ಅಂದರೆ ಅದರಲ್ಲಿ ಪುಸ್ತಕದಲ್ಲಿರುವಂತೆ ಎಲ್ಲಾ ವಿಚಾರಗಳು ನಡೆಯಬೇಕಾಗಿಲ್ಲ, ನಡೆಯುವುದೂ ಇಲ್ಲ. ಮಹಿಳೆಯು ಹೆರಿಗೆ ನೋವು ಅನುಭವಿಸಲು ಪ್ರಾರಂಭಿಸಿದಾಗ ಆಕೆಯ ನೋವನ್ನು ಕಡಿಮೆ ಮಾಡುವುದು ಅಥವಾ ಸ್ವಲ್ಪ ಮಟ್ಟಿಗೆ ನಿಲ್ಲಿಸುವುದನ್ನು "stalled labor" ಅಥವಾ "ಸ್ಥಗಿತ ಹೆರಿಗೆ ನೋವು" ಎಂದು ಕರೆಯುತ್ತಾರೆ.

ಹೀಗೆ ಆಗುವುದು ಕಿರಿಕಿರಿಯನ್ನು ಉಂಟು ಮಾಡುತ್ತದೆ ಮತ್ತು ಒತ್ತಡಕ್ಕೆ ತಳ್ಳುತ್ತದೆ, ಅದೃಷ್ಟವಶಾತ್ ಈ ಪ್ರಕ್ರಿಯೆಯು ತಾಯಿಗೆ ಅಥವಾ ಮಗುವಿಗೆ ಯಾವುದೇ ಸಮಸ್ಯೆಯನ್ನು ತಂದೊಡ್ಡುವುದಿಲ್ಲ ಯಾಕೆಂದರೆ ತಾಯಿಯನ್ನು ಇದು ಭಯದ ವಾತಾವರಣಕ್ಕೆ ತಳ್ಳುತ್ತದೆ. ಈ ಬಗ್ಗೆ ಅಂದರೆ "ಸ್ಟಾಲ್ಡ್ ಲೇಬರ್" ಬಗ್ಗೆ ನೀವು ಮಾಹಬಹುದಾದ ಅದ್ಭುತ ವಿಚಾರವೆಂದರೆ, ಅದರ ಬಗ್ಗೆ ಅಧ್ಯಯನ ನಡೆಸುವುದು. ಈ ರೀತಿಯಲ್ಲಿ, ಒಂದು ವೇಳೆ ನೀವು "ಸ್ಟಾಲ್ಡ್ ಲೇಬರ್" ನ್ನು ನಿಮ್ಮ ಗರ್ಭಾವಸ್ಥೆಯಲ್ಲಿ ಅನುಭವಿಸಿದರೆ, ಆಗ ತಾಳ್ಮೆಯಿಂದ ಇದ್ದು, ಮತ್ತೆ ಪುನಃ ನಿಮ್ಮ ಹೆರಿಗೆ ನೋವು ಚಾಲ್ತಿಗೆ ಬರಲು ಏನು ಮಾಡಬೇಕು ಎಂಬುದನ್ನು ತಿಳಿಯಲು ಇದು ನೆರವಿಗೆ ಬರುತ್ತದೆ. ಹಾಗಾದರೆ "ಸ್ಟಾಲ್ಡ್ ಲೇಬರ್" ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಓದಿ, ಯಾವೆಲ್ಲ ಕಾರಣಗಳಿಂದಾಗಿ "ಸ್ಟಾಲ್ಡ್ ಲೇಬರ್" ಬರುತ್ತದೆ ಮತ್ತು ಅದು ಕಾಣಿಸಿಕೊಂಡಾಗ ನೀವು ಏನು ಮಾಡಬೇಕು ಎಂಬುದನ್ನು ಅರಿತುಕೊಳ್ಳಿ...ಹಾಗಾದ್ರೆ ಸ್ಟಾಲ್ಡ್ ಲೇಬರ್ ಕಾಣಿಸಿಕೊಳ್ಳುವುದಕ್ಕೆ ಕಾರಣಗಳು ಏನು?

* ಪ್ರೇರಿತ ಹೆರಿಗೆ ನೋವು ಅಥವಾ ಕೃತಕ ಹೆರಿಗೆ ನೋವು
* ಎಪಿಡ್ಯೂರಲ್ ಆಡಳಿತ
* ಭಾವನಾತ್ಮಕ ಡಿಸ್ಟೋಸಿಯಾ
* ಮಗುವಿನ ಸ್ಥಾನ
* ಪಿಟೋಸಿನ್ ಬಳಕೆಯನ್ನು ಚರ್ಚಿಸಿ
* ಆರಾಮಿಸುವಿದು
* ನಿಮ್ಮ ಸ್ಥಾನವನ್ನು ಬದಲಿಸಿ
* ನಡೆದಾಡುವುದು
* ನಿಪ್ಪಲ್ ಉದ್ದೀಪನ
* ಸ್ನಾನ ಮಾಡುವುದು
* ದೃಶ್ಯದ ಬದಲಾವಣೆ

• ಪ್ರೇರಿತ ಹೆರಿಗೆ ನೋವು ಅಥವಾ ಕೃತಕ ಹೆರಿಗೆ ನೋವು

ಒಂದು ವೇಳೆ ನೀವು ಪ್ರೇರಿತ ಹೆರಿಗೆ ನೋವು ಅನುಭವಕ್ಕೆ ಒಳಪಟ್ಟರೆ, ಆಗ ನಿಮಗೆ ಸ್ಟಾಲ್ಡ್ ಲೇಬರ್ ಕಾಣಿಸಿಕೊಳ್ಳುವ ಅಪಾಯ ಅಧಿಕವಾಗಿರುತ್ತದೆ.. ಆದರೆ, ಪ್ರೇರಿತ ಕ್ರಿಯೆಯ ಪ್ರಮುಖ ಅಪಾಯವೇನೆಂದರೆ, ಇದು ಯಶಸ್ಸು ಕಾಣದೇ ಇರುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ನೀವು ಸಿಸೇರಿಯನ್ ಪ್ರಕ್ರಿಯೆಯ ಮೂಲಕ ಮಗುವಿನ ಜನನಕ್ಕೆ ಮುನ್ನುಡಿ ಇಡಬೇಕಾಗುತ್ತದೆ.

ನಿಮ್ಮ ದೇಹವು ಹುಟ್ಟಿನ ಪ್ರಕ್ರಿಯೆಗೆ ಇನ್ನು ತಯಾರಾಗಿಲ್ಲದೇ ಇದ್ದಾಗ ನೀವು ಪ್ರೇರಿತಗೊಂಡರೆ ಅಥವಾ ನೀವು ಕೃತಕವಾಗಿ ಹೆರಿಗೆ ನೋವಿಗೆ ಒಳಪಟ್ಟರೆ, ನಿಮ್ಮ ಹೆರಿಗೆಯು ನೀವಂದುಕೊಂಡಷ್ಟು ಸುಖಕರವಾಗಿಲ್ಲದೇ ಇರಬಹುದು. ನಿಮ್ಮ ವೈದ್ಯರು ನಿಮಗೆ ಪ್ರೇರಿತ ಹೆರಿಗೆ ನೋವಿಗೆ ಸಲಹೆ ನೀಡಿದ್ದರೆ, ಆಗ ಅದರ ಅಪಾಯಗಳ ಬಗ್ಗೆ ಒಮ್ಮೆ ಅವರೊಂದಿಗೆ ಚರ್ಚೆ ನಡೆಸಿ. ನಿಮ್ಮ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಅದರ ಅಗತ್ಯತೆ ಅಧಿಕವಾಗಿದ್ದರೆ ಮಾತ್ರ ನೀವು ಕೃತಕ ಹೆರಿಗೆ ನೋವಿಗೆ ಒಳಪಡುವುದರಲ್ಲಿ ಅರ್ಥವಿದೆ.

• ಎಪಿಡ್ಯೂರಲ್ ಆಡಳಿತ

ಸೊಂಟದಿಂದ ಕೆಳಭಾಗದಲ್ಲಿ ಯಾವುದೇ ಸ್ಪರ್ಶಜ್ಞಾನವೂ ಇಲ್ಲದೇ ಇರುವಾಗ, ನಿಮಗೆ ಯಾವುದೇ ನೋವಿನ ಅಥವಾ ಸಂಕೋಚನಗಳ ಅನುಭವ ಬರುವುದು ಬಹಳ ಕಷ್ಟವಾಗುತ್ತದೆ. ಇದರಿಂದಾಗಿ ನಿಮ್ಮ ತಳ್ಳುವಿಕೆಯು ಪರಿಣಾಮಕಾರಿಯಾಗುವುದಿಲ್ಲ. ಎಪಿಡ್ಯೂಡರ್ ಪರಿಣಾಮದಿಂದಾಗಿ ನಿಮ್ಮ ಗರ್ಭಾಶಯದ ಮಾಂಸಖಂಡಗಳು ಸಡಿಲಗೊಳ್ಳುತ್ತದೆ ಮತ್ತು ಮತ್ತು ಪೆಲ್ವೀಸ್ ಗಳು ಶಾಂತವಾಗಿರುತ್ತದೆ. ಒಂದು ವೇಳೆ ಇದು ನಡೆದರೆ, ಪುನಃ ಹೆರಿಗೆ ನೋವನ್ನು ಕಾಣಿಸುವಂತೆ ಮಾಡಲು ನಿಮಗೆ ಹೆಚ್ಚು ಪಿಟೋಸಿನ್ ಗಳ ಅಗತ್ಯ ಬರುತ್ತದೆ.

• ಭಾವನಾತ್ಮಕ ಡಿಸ್ಟೋಸಿಯಾ

ಭಾವನಾತ್ಮಕ ಡಿಸ್ಟೋಸಿಯಾ ಎಂದರೆ, ಭಾವನಾತ್ಮಕ ಒತ್ತಡ ಅಥವಾ ಸೈಕೋಲಾಜಿಕಲ್ ಪರಿಣಾಮಗಳು ಕೂಡ ನಿಮ್ಮ ಹೆರಿಗೆ ನೋವಿನ ಮೇಲೆ ಪರಿಣಾಮ ಬೀರಿ ಅದನ್ನು ನಿಧಾನವಾಗುವಂತೆ ಮಾಡಬಹುದು ಮತ್ತು ಅದನ್ನು ನಿಲ್ಲಿಸಿಯೂ ಬಿಡಬಹುದು.ಇದು ಬಹುಷ್ಯಃ ಹೆರಿಗೆ ನೋವಿನ ಬಗ್ಗೆ ಇರುವ ಭಯ ಅಥವಾ, ಸುರಕ್ಷಿತವಲ್ಲ ಎಂಬ ಭಾವನೆ, ಅಗತ್ಯವಿರುವಷ್ಟು ಗೌಪ್ಯತೆ ಇಲ್ಲದೇ ಇರುವುದು ಮತ್ತು ಲೈಂಗಿಕ ದುರುಪಯೋಗದಿಂದಾಗಿ ಆಗಿರುವ ಆಘಾತ ಕೂಡ ಇದಕ್ಕೆ ಕಾರಣವಾಗಿರಬಹುದು.
ಒಂದು ವೇಳೆ ನಿಮಗೆ ಇದರಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದು ನಿಮ್ಮ ಜನನ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನೀವು ವೈದ್ಯರ ಬಳಿ ಈ ಬಗ್ಗೆ ಚರ್ಚೆ ಮಾಡುವುದು ಸೂಕ್ತವಾಗಿರುತ್ತದೆ ಎಂಬುದು ನೆನಪಿರಲಿ. ನೀವು ಯಾರ ಜೊತೆ ಇದ್ದರೆ ಸುರಕ್ಷಿತ ಎಂದು ಭಾವಿಸುತ್ತೀರೋ ಅವರು ನಿಮ್ಮ ಹೆರಿಗೆ ನೋವಿನ ಸಂದರ್ಬದಲ್ಲಿ ಜೊತೆಯಲ್ಲೇ ಇರುವಂತೆ ನೋಡಿಕೊಳ್ಳಿ. ಅದು ನಿಮ್ಮ ತಾಯಿ ಅಥವಾ ನಿಮ್ಮ ಗಂಡ ಯಾರೂ ಕೂಡ ಆಗಿರಬಹುದು.

• ಮಗುವಿನ ಸ್ಥಾನ

ಮಗುವಿನ ಜನನ ಪ್ರಕ್ರಿಯೆಯು ಮಗುವಿನ ಸ್ಥಾನವನ್ನು ಅವಲಂಬಿಸಿರುತ್ತದೆ. ಒಂದು ವೇಳೆ ಮಗುವಿನ ಸ್ಥಾನವು ಸರಿಯಾದ ಹೆರಿಗೆಗೆ ಅವಕಾಶವಾಗುವಂತೆ ಇಲ್ಲದೆ ಇದ್ದಲ್ಲಿ, ನಂತರ ಜನನ ಪ್ರಕ್ರಿಯೆಯು ಹೆಚ್ಚು ಅವಧಿಯನ್ನು ತೆಗೆದುಕೊಳ್ಳಬಹುದು. ಒಂದು ವೇಳೆ ಮಗುವಿನ ಸ್ಥಾನವು ಸರಿಯಾದ ಹೆರಿಗೆ ಅಥವಾ ಸಹಜ ಹೆರಿಗೆಗೆ ಅನುಕೂಲಕರವಾಗಿ ಇಲ್ಲದೇ ಇದ್ದಲ್ಲಿ, ನಿಮ್ಮ ಹೆರಿಗೆ ನೋವು ನಿಧಾನಗತಿಗೆ ತಿರುಗಬಹುದು ಅಥವಾ ಕ್ಷಣಕ್ಕೆ ನಿಂತು ಹೋಗಲೂ ಬಹುದು. ಆಗ ನಿಮಗೆ ವೈದ್ಯರು ನಿಮ್ಮ ಭಂಗಿಯನ್ನು ಬದಲಿಸಲು ಹೇಳಬಹುದು ಮತ್ತು ಆ ಮೂಲಕ ಮಗುವಿನ ಸ್ಥಾನವು ಸಹಜ ಸ್ಥಿತಿಗೆ ಬರುವಂತೆ ಮಾಡಲು ಅನುಕೂಲವಾಗುವಂತೆ ಮಾಹಿತಿ ನೀಡಬಹುದು..ಇದು ಮಗುವಿನ ಸ್ಥಾನವನ್ನು ಮ್ಯಾನುವಲಿ ಸಹಜ ಸ್ಥಿತಿಗೆ ತರಲು ಕೂಡ ಪ್ರಯತ್ನಿಸುವಂತೆ ಮಾಡಬಹುದು.ಯಾವಾಗ ಮಗುವಿನ ಸ್ಥಾನವು ಸಹಜ ಸ್ಥಾನಕ್ಕೆ ಬರುತ್ತದೆಯೋ ಆಗ ಹೆರಿಗೆಯೂ ಕೂಡ ಸಹಜವಾಗಿಯೇ ಆಗುತ್ತದೆ.

ಒಂದು ವೇಳೆ ನಿಮಗೆ ಹೀಗೆ ಹೆರಿಗೆ ನೋವು ಒಮ್ಮೆ ಬಂದು ನಂತರ ನಿಂತರೆ ಏನು ಮಾಡಬೇಕು?
ಇದು ಕೂಡ ಬಹಳ ಮಹತ್ವವಾದ ವಿಚಾರವಾಗಿರುತ್ತದೆ. ಎಲ್ಲಾ ಗರ್ಭಿಣಿ ಸ್ತ್ರೀಯರು ಇದನ್ನು ತಿಳಿದುಕೊಂಡಿದ್ದರೆ ಅನುಕೂಲವಾಗುತ್ತದೆ.

• ಪಿಟೋಸಿನ್ ಬಳಕೆಯನ್ನು ಚರ್ಚಿಸಿ

ಪಿಟೋಸಿನ್ ನ್ನು ಹೆರಿಗೆ ನೋವು ಕಾಣಿಸಿಕೊಳ್ಳುವುದಕ್ಕೆ ಅಥವಾ ಹೆರಿಗೆ ನೋವಿನ ವೇಗವನ್ನು ಹೆಚ್ಚಿಸುವುದಕ್ಕೆ ಅಥವಾ ಒಮ್ಮೆ ಕಾಣಿಸಿ ಮತ್ತೆ ನಿಂತ ಹೆರಿಗೆ ನೋವನ್ನು ಪುನರ್ ಆರಂಭಿಸುವುದಕ್ಕೆ ಬಳಸಲಾಗುತ್ತದೆ..ಒಂದು ವೇಳೆ ನಿಮ್ಮ ವೈದ್ಯರು ಪಿಟೋಸಿನ್ ನೀಡಲು ಇಚ್ಛಿಸುತ್ತಿದ್ದಾರಾದರೆ, ಅದರ ಲಾಭಗಳ ಬಗ್ಗೆ ಅವರೊಂದಿಗ ಚರ್ಚಿಸಿ.ಒಂದು ವೇಳೆ ನೀವು ಮತ್ತು ನಿಮ್ಮ ಮಗು ಇದರಿಂದಾಗಿ ಯಾವುದೇ ತೊಂದರೆ ಒಳಗಾಗುವುದಿಲ್ಲ ಮತ್ತು ಆರೋಗ್ಯಕರವಾಗಿ ಇರುತ್ತದೆ ಎಂದಾದರೆ ಅಥವಾ ಹೆರಿಗೆ ನೋವು ಇದರಿಂದಾಗಿ ಮತ್ತೆ ಆರಾಮದಾಯವಾಗಿ ಆರಂಭವಾಗತ್ತದೆ ಎಂದರೆ ಬಳಸಬಹುದು. ಆದಷ್ಟು ನೈಸರ್ಗಿಕವಾದ ವಿಧಾನಗಳ್ನು ಅನುಸರಿಸಿ ನಿಮ್ಮ ನಿಂತ ಹೆರಿಗೆ ನೋವನ್ನು ಪುನರಾರಂಭಿಸಿಕೊಳ್ಳಲು ಪ್ರಯತ್ನಿಸಿ., ಆದರೆ ಯಾವುದೂ ಕೆಲಸ ಮಾಡದೇ ಇದ್ದಲ್ಲಿ ನೀವು ಪಿಯೋಸಿನ್ ಅನ್ನು ಆಯ್ಕೆ ಮಾಡಿಕೊಳ್ಳಲೇಬೇಕು.

• ಆರಾಮಿಸುವಿದು

ಒಂದು ವೇಳೆ ನೀವು ಭಯದಲ್ಲಿದ್ದರೆ ಅಥವಾ ಭಾವನಾತ್ಮಕ ಒತ್ತಡದಲ್ಲಿದ್ದರೆ ಅದೂ ಕೂಡ ನಿಮ್ಮ ಹೆರಿಗೆ ನೋವು ನಿಲ್ಲಲು ಕಾರಣವಾಗಬಹುದು ಮತ್ತು ಆಗ ನೀವು ಸ್ವಲ್ಪ ಆರಾಮ ತೆಗೆದುಕೊಳ್ಳುವುದರ ಅಗತ್ಯವಿರುತ್ತದೆ. . ಆರಾಮಾಗಿ ಮತ್ತು ನಿಮಗೆ ಆಗಾಧವಾಗಿ ಯಾವುದೇ ವಿಚಾರ ಒತ್ತಡ ತರುತ್ತಿದ್ದರೆ ಅದರಿಂದ ವಿಮುಖರಾಗಿ ವಿಶ್ರಮಿಸಿ.ಇದರ ಬದಲಾಗಿ ನೀವು ನಿಮ್ಮ ಮಗುವಿಗಾಗಿ ಏನನ್ನು ಮಾಡಬೇಕು ಮತ್ತು ಸದ್ಯ ಯಾವುದರ ಅಗತ್ಯವಿದೆ ಎಂಬುದನ್ನು ಮನಸ್ಸಿನಲ್ಲಿ ಲೆಕ್ಕ ಹಾಕಿ.ಒಮ್ಮೆನಿಮ್ಮ ದೇಹ ಮತ್ತು ಮನಸ್ಸು ರಿಲ್ಯಾಕ್ಸ್ ಆದರೆ, ನಿವಂದುಕೊಂಡ ಕೆಲಸವನ್ನು ಆರಾಮಾಗಿ ಮಾಡಬಹುದು ಮತ್ತು ನಿಮ್ಮ ಹೆರಿಗೆ ನೋವು ತನ್ನಿಂದ ತಾನೇ ಪುನರಾರಂಭವಾಗುತ್ತದೆ.

• ನಿಮ್ಮಸ್ಥಾನವನ್ನು ಬದಲಾಯಿಸಿ

ಹೆರಿಗೆ ನೋವಿನಲ್ಲಿದ್ದಾಗ ನಿಮ್ಮ ಸ್ಥಾನವನ್ನು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳುವುದರಿಂದಾಗಿ ನೋವು ಮತ್ತು ಆರಂಭವಾಗುವಂತೆ ಮಾಡಬಹುದು. ಇದು ಯಾಕೆಂದರೆ, ನಿಮ್ಮ ಮಗುವಿನ ತೂಕವು ಯೂಟ್ರಸ್ ನಲ್ಲಿ ಬೇರೆ ಸ್ಥಾನಕ್ಕೆ ತಿರುಗಿದಾಗ ಅದು ಹೆಚ್ಚು ಒತ್ತಡವನ್ನು ಸೃಷ್ಟಿ ಮಾಡುತ್ತೆ ಮತ್ತು ಹೆರಿಗೆ ನೋವು ಮತ್ತೆ ಆರಂಭವಾಗಲು ಸಹಾಯಕವಾಗುತ್ತೆ. ಎಪಿಡ್ಯೂರಲ್ ಆಡಳಿತದ ಕಾರಣದಿಂದಾಗಿ ನಿಮ್ಮ ಶ್ರಮವು ಅರ್ಥಾತ್ ಹೆರಿಗೆ ನೋವು ಸ್ಥಗಿತಗೊಂಡರೆ ಹೀಗೆ ಮಾಡುವುದರಿಂದ ಪುನರ್ ಆರಂಭವಾಗಲು ಸಹಾಯ ಮಾಡುತ್ತದೆ.

• ನಡೆದಾಡುವುದು

ಒಂದು ವೇಳೆ ನಿಮಗೆ ಮೇಲೇಳಲು ಸಾಧ್ಯವಾಗುತ್ತಿದ್ದರೆ ಸ್ವಲ್ಪ ನಡೆದಾಡುವುದು ಒಳ್ಳೆಯದು.ಯಾವುದೇ ಬೇರೆ ನೈಸರ್ಗಿಕ ವಿಧಾನಗಳು ಇದುವರೆಗೂ ಸಹಾಯ ಮಾಡಿಲ್ಲವಾದರೆ, ಸ್ವಲ್ಪ ನಡೆದಾಡುವುದೊಂದೇ ಇರುವ ಬೆಸ್ಟ್ ಟ್ರಿಕ್ ಆಗಿದೆ. ಗುರುತ್ವಾಕರ್ಷಣ ಬಲ ಮತ್ತು ನಡೆದಾಡುವಿಕೆಯು ನಿಮ್ಮ ಪೆಲ್ವಿಕ್ ಮಾಂಸಗಳನ್ನು ಚಲಿಸಿ ನಿಮ್ಮ ಹೆರಿಗೆ ನೋವು ಪುನರ್ ಆರಂಭವಾಗಲು ಸಹಾಯ ವಾಗುತ್ತದೆ.

• ನಿಪ್ಪಲ್ ಉದ್ದೀಪನ

ನಿಪ್ಪಲ್ ನ್ನು ಉದ್ದೀಪನಗೊಳಿಸುವುದರಿಂದಾಗಿಯೂ ಕೂಡ ನಿಮ್ಮ ನಿಂತಿರುವ ಹೆರಿಗೆ ನೋವು ಮತ್ತೆ ಆರಂಭವಾಗಲು ಸಹಾಯಕವಾಗುತ್ತದೆ. ಇದು ಆಕ್ಸಿಟೋಸಿನ್ ಅನ್ನು ಬಿಡುಗಡೆಗೊಳಿಸುತ್ತದೆ ಮತ್ತು ಈ ಹಾರ್ಮೋನು ಬಲವಾದ ಮತ್ತು ಉದ್ದನೆಯ ಸಂಕೋಚನೆಗೆ ಕಾರಣವಾಗುತ್ತದೆ..ನಿಪ್ಪಲ್ ಉದ್ದೇಪನವನ್ನು ಮಾಡುವುದಕ್ಕಾಗಿ, ನಿಮ್ಮ ನಿಪ್ಪಲ್ ನ್ನು ನಿಧಾನವಾಗಿ ತೋರುಬೆರಳು ಮತ್ತು ಹೆಬ್ಬೆರಳನ್ನು ಬಳಸಿ ವೃತ್ತಾಕಾರದಲ್ಲಿ ತಿರುಗಿಸಿ.ಅಥವಾ ನಿಮ್ಮ ಅಂಗೈಯಿಂದ ನಿಪ್ಪಲ್ಲನ್ನು ಉಜ್ಜಿಕೊಳ್ಳಲೂಬಹುದು. ಈ ಬಗ್ಗೆ ವೈದ್ಯರ ಬಳಿ ಚರ್ಚಿಸಿ ಮತ್ತು ಎಷ್ಟು ಬಾರಿ ಹೀಗೆ ಮಾಡಬೇಕು ಎಂಬುದರ ಬಗ್ಗೆ ಅವರು ನಿಮಗೆ ಸಲಹೆ ಮತ್ ಸೂಚನೆಯನ್ನು ನೀಡುತ್ತಾರೆ.

• ಸ್ನಾನ ಮಾಡುವುದು

ನಿಮಗೆ ಆಶ್ಚರ್ಯವಾಗಬಹುದು, ಹೊಟ್ಟೆ ನೋವು ಕಾಣಿಸಿಕೊಂಡಾಗ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಕೂಡ ನಿಮ್ಮ ಹೆರಿಗೆಯ ದೃಷ್ಟಿಯಿಂದ ಹಿತವಾದುದ್ದಾಗಿದೆ. ಬಿಸಿ ನೀರಿನ ಸ್ನಾನ ನಿಮ್ಮ ದೇಹ ಮತ್ತು ಮನಸ್ಸನ್ನು ರಿಲ್ಯಾಕ್ಸ್ ಮಾಡಬಹುದು. ನೀರು ಕೂಡ ನಿಮ್ಮ ನಿಪ್ಪಲ್ ಗಳ ಸ್ಟಿಮುಲೇಷನ್ ಗೆ ನೆರವಾಗಲಿದೆ. ಆಕ್ಸಿಟೋಸಿನ್ ಮತ್ತು ಎಂಡೋರ್ ಫಿನ್ ಗಳು ಸ್ನಾನದ ಸಮಯದಲ್ಲಿ ಬಿಡುಗಡೆಗೊಳ್ಳುತ್ತದೆ ಮತ್ತು ಇದು ಒಮ್ಮೆ ಕಾಣಿಸಿಕೊಂಡು ನಿಂತ ಹೆರಿಗೆ ನೋವು ಆರಂಭವಾಗಲು ನೆರವಾಗುತ್ತದೆ.

• ದೃಶ್ಯದ ಬದಲಾವಣೆ

ಕೆಲವೊಮ್ಮೆ ಆಸ್ಪತ್ರೆಯ ದೃಶ್ಯಗಳು, ಅಲ್ಲಿರುವ ವಸ್ತುಗಳು ಮತ್ತು ಔಷಧಗಳ ವಾಸನೆಯು ಗರ್ಭಿಣಿ ಸ್ತ್ರೀಯರನ್ನು ಆತಂಕಕ್ಕೆ ದೂಡುತ್ತದೆ ಮತ್ತು ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಭಯಗೊಳ್ಳುವಂತೆ ಮಾಡುತ್ತದೆ..ಆ ಸಂದರ್ಬದಲ್ಲಿ ರೂಮಿನ ಬದಲಾವಣೆ ಅಥವಾ ಬೆಳಕುಗಳನ್ನು ಬಳಸುವುದರಿಂದ ಮಹಿಳೆಯರ ಭಯವನ್ನು ದೂಕ ಮಾಡಬಹುದು. ಯಾವಾಗಲೂ ಬಳಸುವ ಸುವಾಸನೆಯುಕ್ತ ಸುಗಂಧ ದ್ರವ್ಯಗಳು ಮತ್ತು ಕೆಲವು ಮ್ಯೂಸಿಕ್ ಗಳು ಅವರನ್ನು ರಿಲ್ಯಾಕ್ಸ್ ಮಾಡುತ್ತದೆ ಮತ್ತು ಹೆರಿಗೆ ನೋವು ಪುನಃ ಆರಂಭವಾಗಲು ಸಹಾಯವಾಗುತ್ತದೆ ಮತ್ತು ನೀವಂದುಕೊಂಡ ಮಟ್ಟಕ್ಕೆ ತಲುಪಲು ಕೂಡ ಸಾಧ್ಯವಾಗುತ್ತದೆ.

English summary

Everything You Need To Know About Stalled Labor

When you are pregnant, all you hope and wish for is a painless and normal delivery that ends with a healthy and happy baby in your arms. But there are a lot of things that can go wrong and can hinder the normal progression of the labor or the birthing process. Each and every woman experiences labor differently. But there are certain things that are listed as the determinants of a normal labor. There are various steps and each of these is supposed to progress at a certain pace.
Story first published: Wednesday, June 20, 2018, 12:28 [IST]
X
Desktop Bottom Promotion