For Quick Alerts
ALLOW NOTIFICATIONS  
For Daily Alerts

ಗರ್ಭಾಶಯದಲ್ಲಿ ಮಗುವು ಮೂತ್ರ ವಿಸರ್ಜಿಸುವುದೇ?

|

ಮಹಿಳೆಯ ಜೀವನದಲ್ಲಿ ಗರ್ಭಧಾರಣೆಯ ಸಮಯ ಒಂದು ಅದ್ಭುತವಾದ ಹಂತವಾಗಿದೆ. ನಮ್ಮೊಳಗೆ ಬೆಳೆಯುತ್ತಿರುವ ಒಂದು ಜೀವದ ಕಡೆಗೆ ತನ್ನಂತಾನೆ ರಕ್ಷಣಾತ್ಮಕ ಭಾವನೆ ಬೆಳೆಯುವಂತೆ ಮಾಡುತ್ತದೆ. ವೈದ್ಯರು ನಿಮ್ಮ ಗರ್ಭಾವಸ್ಥೆಯನ್ನು ದೃಢೀಕರಿಸಿದ್ದರೆ, ನೀವು ಈಗಾಗಲೇ ಚಂದ್ರನ ಮೇಲೆ ಇರುವಷ್ಟು ಉತ್ಸುಕರಾಗಿರಬಹುದು ಮತ್ತು ನಿಮ್ಮ ಮೊದಲ ಅಲ್ಟ್ರಾಸೌಂಡ್ ಗಾಗಿ ಕಾಯುತ್ತಿರಬಹುದು. ಸಾಮಾನ್ಯವಾಗಿ, ಅಲ್ಟ್ರಾಸೌಂಡ್ ನಡೆಸುವ ಮೊದಲು ವೈದ್ಯರು ನಿಮ್ಮ ಗರ್ಭಧಾರಣೆಯನ್ನು ದೃಢೀಕರಿಸಲು ಕನಿಷ್ಟ 18 ರಿಂದ 20 ವಾರಗಳವರೆಗೆ ಕಾಯುತ್ತಾರೆ. ಗರ್ಭಾಶಯದಲ್ಲಿ ಸ್ಪಷ್ಟವಾಗಿ ಭ್ರೂಣವು ಕಂಡುಬಂದ ನಂತರ, ನಿಮ್ಮ ಗರ್ಭಾವಸ್ಥೆಯನ್ನು ಸುರಕ್ಷಿತವಾಗಿ ದೃಢಪಡಿಸಬಹುದು.

ನಿಮ್ಮ ಗರ್ಭಾವಸ್ಥೆಯ ಉದ್ದಕ್ಕೂ, ಗರ್ಭದಲ್ಲಿನ ಮಗುವಿನ ಬೆಳವಣಿಗೆಯ ಮೇಲ್ವಿಚಾರಣೆ ಮಾಡಲು ನಿಮ್ಮ ಸ್ತ್ರೀರೋಗತಜ್ಞರು ನಿಯಮಿತ ಅಲ್ಟ್ರಾಸೌಂಡ್ಗಳನ್ನು ನಿರ್ವಹಿಸುತ್ತಾರೆ. ಗರ್ಭಾಶಯದಲ್ಲಿ ನಿಮ್ಮ ಮಗುವಿನ ಬೆಳವಣಿಗೆಯನ್ನು ನೋಡುವುದು ರೋಮಾಂಚಕವಾದುದಲ್ಲವೇ? ಗರ್ಭಾಶಯದೊಳಗೆ ಇದ್ದಾಗ, ಭ್ರೂಣವು ಸುರಕ್ಷಿತ ಮತ್ತು ತನ್ನ ತಾಯಿಗೆ ಹತ್ತಿರದಲ್ಲಿರುತ್ತದೆ.

what does baby do in womb

ಗರ್ಭವು ಭ್ರೂಣಕ್ಕೆ ನೈಸರ್ಗಿಕವಾಗಿ ಮತ್ತು ಸಾಮಾನ್ಯವಾಗಿ ಬೆಳೆಯಲು ಉತ್ತಮವಾದ ಪರಿಸರ ಮತ್ತು ಪೋಷಣೆಯ ಪರಿಪೂರ್ಣತೆಯನ್ನು ಒದಗಿಸುತ್ತದೆ. ಚಿಕ್ಕ ಮತ್ತು ಇಕ್ಕಟ್ಟಾದ ಸ್ಥಳದಲ್ಲಿ ನಿಮ್ಮ ಮಗು ಆರಾಮದಾಯಕವಾಗಿದ್ದರೂ ಸಹ, ಕೆಲವೊಂದು ವಿಷಯಗಳ ಬಗ್ಗೆ ನಿಮಗೆ ಆಶ್ಚರ್ಯವಾಗಬಹುದು? ಆಮ್ನಿಯೋಟಿಕ್ ದ್ರವದ ಸುತ್ತಲೂ ಅದು ಉಸಿರಾಡುತ್ತದೆಯೇ? ಅದರ ಆಮ್ಲಜನಕ, ಆಹಾರ ಮತ್ತು ಎಲ್ಲವನ್ನು ಹೇಗೆ ಹೊರಹಾಕುತ್ತದೆ? ಅಥವಾ, ಅದು ಎಲ್ಲವನ್ನೂ ಹೊರಹಾಕುತ್ತದೆಯೇ? ಶೀಘ್ರದಲ್ಲೇ ತಾಯಿಯಾಗಲಿರುವವರಿಗೆ, ಈ ಕಳವಳಗಳು ತುಂಬಾ ಸಾಮಾನ್ಯವಾಗಿದೆ. ನಿಮ್ಮ ಎಲ್ಲ ಸಂದಿಗ್ಧತೆಗಳನ್ನು ಪರಿಹರಿಸಲು, ಗರ್ಭಧಾರಣೆಯ ಸಮಯದ ಬಗ್ಗೆ ಕೆಲವು ವಿಷಯಗಳನ್ನು ನೀವು ಮೊದಲು ತಿಳಿದಿರಬೇಕು.

1.ಪ್ರಾಜೆನ್ಸಿತ್ರೈಮಾಸಿಕದಲ್ಲಿ(ಟ್ರೈಮೆಸ್ಟರ್)

ಒಬ್ಬ ಮಹಿಳೆಯ ಗರ್ಭಧಾರಣೆಯ ಒಂಭತ್ತು ತಿಂಗಳನ್ನು ತ್ರೈಮಾಸಿಕವಾಗಿ ವಿಂಗಡಿಸಲಾಗಿದೆ. ಮೊದಲ ಮೂರು ತಿಂಗಳು ಮೊದಲ ತ್ರೈಮಾಸಿಕ, ನಾಲ್ಕನೇ, ಐದನೇ ಮತ್ತು ಆರನೆಯ ತಿಂಗಳು ಎರಡನೇ ತ್ರೈಮಾಸಿಕ; ಮೂರನೇ / ಅಂತಿಮ ತ್ರೈಮಾಸಿಕವು, ಏಳನೇ, ಎಂಟನೇ ಮತ್ತು ಒಂಭತ್ತನೇ ತಿಂಗಳುಗಳುಗಳನ್ನು ಒಳಗೊಂಡಿದೆ. ಒಬ್ಬ ಮಹಿಳೆ ಪ್ರತಿಯೊಂದು ತ್ರೈಮಾಸಿಕದಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಹೊಂದಿರುತ್ತಾರೆ. ಮುಂಚಿತವಾಗಿ ಅವುಗಳ ಬಗ್ಗೆ ತಿಳಿದುಕೊಳ್ಳುವುದು ಬದಲಾವಣೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ. ಈ ಹಂತಗಳು ಬೆಳೆಯುತ್ತಿರುವ ಮಗುವಿಗೆ ಸಹ ಬಹಳ ಮುಖ್ಯವಾಗಿದೆ ಮತ್ತು ಈ ತ್ರೈಮಾಸಿಕ ವೈದ್ಯರಿಗೆ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಪರಿಶೀಲಿಸಲು ಉತ್ತಮ ಸಮಯವಾಗಿದೆ.

2. ಭ್ರೂಣ ಅಂಗ ವ್ಯವಸ್ಥೆಯ ಅಭಿವೃದ್ಧಿ

ನಿಮ್ಮ ಮಗುವಿನ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು ಮುಂತಾದ ಅಂಗಗಳ ಅಭಿವೃದ್ಧಿ ಸರಿಯಾಗಿದೆಯೇ ಎಂದು ನಿಮ್ಮ ಸ್ತ್ರೀರೋಗತಜ್ಞರನ್ನು ನೀವು ಪ್ರಶ್ನಿಸುವಿರಾ? ಸರಿ, ನೀವು ನಮ್ಮ ಲೇಖನದಲ್ಲಿ, ನಿಮ್ಮ ಗರ್ಭಾವಸ್ಥೆಯ ತ್ರೈಮಾಸಿಕದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಿಮ್ಮ ಭ್ರೂಣ ಮತ್ತು ವಿವಿಧ ಅಂಗಗಳು ಮತ್ತು ಅಂಗಾಂಗ ವ್ಯವಸ್ಥೆಯಲ್ಲಿನ ಬದಲಾವಣೆ ಮತ್ತು ಎಲ್ಲವನ್ನೂ ಓದಬಹುದು.

3.ಮೊದಲ ತ್ರೈಮಾಸಿಕದಲ್ಲಿ

ತಾಯಿಯಾಗಲಿರುವವರ ದೇಹದಲ್ಲಿ, ವಿಶೇಷವಾಗಿ ಹಾರ್ಮೋನ್ ಗಳಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ನಿಮ್ಮ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ನೀವು ಗರ್ಭಿಣಿಯಾಗಿ ಕಾಣಿಸದಿದ್ದರೂ, ಭ್ರೂಣದ ಬೆಳವಣಿಗೆಗೆ ಕಾರಣವಾಗುವಂತೆ ನಿಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಿವೆ. ಹಾರ್ಮೋನುಗಳು ಅತಿ ವೇಗವಾಗಿರುತ್ತವೆ, ಬೆಳಗಿನ ವಾಂತಿ, ಆಯಾಸ, ತಲೆನೋವು ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ. ಬೆಳೆಯುತ್ತಿರುವ ಭ್ರೂಣಕ್ಕೆ ಹೆಚ್ಚುವರಿ ರಕ್ತವನ್ನು ಒದಗಿಸಲು ನಿಮ್ಮ ಹೃದಯವು ಶ್ರಮವಹಿಸುತ್ತದೆ ಮತ್ತು ಹೆಚ್ಚುವರಿ ಆಮ್ಲಜನಕವನ್ನು ಒದಗಿಸಲು. ನಿಮ್ಮ ಶ್ವಾಸಕೋಶಗಳು ಶ್ರಮವಹಿಸುತ್ತದೆ. ಮೊದಲ ಮೂರು ತ್ರೈಮಾಸಿಕದಲ್ಲಿ ನಿಮ್ಮ ಪ್ರಸವಪೂರ್ವ ಜೀವಸತ್ವಗಳು ಮತ್ತು ಫೋಲಿಕ್ ಆಮ್ಲವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಕಾರಣ, ಇದು ನಿಮ್ಮ ಮಗುವಿನ ಅಂಗಾಂಗ ವ್ಯವಸ್ಥೆಗಳಲ್ಲಿ ಹೆಚ್ಚಿನವುಗಳನ್ನು ಅಭಿವೃದ್ಧಿಪಡಿಸುತ್ತವೆ. ಮಗುವಿನ ಬೆಳವಣಿಗೆಗೆ ಸರಿಯಾದ ಪೋಷಕಗಳನ್ನು ಬೆಂಬಲಿಸಲು ನೀವು ಆರೋಗ್ಯಕರ ಆಹಾರ ಕ್ರಮವನ್ನು ನಿರ್ವಹಿಸಬೇಕು ಮತ್ತು ಎಲ್ಲಾ ಕೆಟ್ಟ ಹವ್ಯಾಸಗಳನ್ನು ತೊರೆಯಬೇಕಾದ ಸಮಯ ಇದಾಗಿದೆ.

4. ಎರಡನೇ ತ್ರೈಮಾಸಿಕದಲ್ಲಿ

ಈ ಹಂತವು ಬಹುತೇಕ ಮಹಿಳೆಯರಿಗೆ ತುಲನಾತ್ಮಕವಾಗಿ ಸುಲಭವಾಗಿದೆ ಏಕೆಂದರೆ ಅವರ ದೇಹಗಳು ಈಗ ನಿಧಾನವಾಗಿ ಬೆಳೆಯುತ್ತಿರುವ ಮಗುವನ್ನು ನಿಭಾಯಿಸುತ್ತವೆ. ನಿಮ್ಮ ಕಿಬ್ಬೊಟ್ಟೆಯು ಬೆಳೆಯುತ್ತಿರುವ ಮಗುವಿಗೆ ವಿಸ್ತರಿಸುವುದರಿಂದ ನೀವು ಕೊನೆಗೂ ಗರ್ಭಿಣಿಯಂತೆ ಕಾಣಬಹುದು ಮತ್ತು ನಿಮಗೆ, ಬಿಗಿಯಾಗಿ ಬಟ್ಟೆ ಧರಿಸಲು ಸಾಧ್ಯವಾಗುವುದಿಲ್ಲ. ನೀವು ಈಗ ಅತೀ ವೇಗವಾಗಿ ತೂಕವನ್ನು ಪಡೆದುಕೊಳ್ಳುತ್ತೀರಿ ಮತ್ತು ನಿಮ್ಮ ಹಸಿವು ಹೆಚ್ಚಾಗಬಹುದು. ಕಾಲಿನ ಸೆಳೆತ ಮತ್ತು ಎದೆಯುರಿ ಸಮಸ್ಯೆಗಳಿರಬಹುದು.

ಆಹಾರದ ಕೆಲವು ಸುವಾಸನೆಗಳಿಗೆ ಸಹ ನೀವು ಒಲವು ನೀಡಬಹುದು. ಇದು ಹೆಚ್ಚಿನ ಮಹಿಳೆಯರು ಮಲಬದ್ಧತೆ ಮತ್ತು ಆಗಾಗ್ಗೆ ಮೂತ್ರವಿಸರ್ಜನೆಯ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸುವ ಸಮಯವಾಗಿದೆ, ಗರ್ಭವು, ಕೋಲನ್ ಮತ್ತು ಕಿಡ್ನಿಯತ್ತ ತಳ್ಳುವುದು ಇದಕ್ಕೆ ಕಾರಣವಾಗಿದೆ.

ನಿಮ್ಮ ಎರಡನೆಯ ತ್ರೈಮಾಸಿಕದಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನ್ಗಳು ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು ಮತ್ತು ಮಿದುಳಿನಂತಹ ಕೆಲವು ಪ್ರಮುಖವಾದ ಅಂಗಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳ್ಳುತ್ತದೆ. ಮಗುವಿನ ನರವ್ಯೂಹವನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಸ್ಪಷ್ಟವಾಗಿ ಬೆನ್ನೆಲುಬನ್ನು ಸಹ ನೀವು ನೋಡಬಹುದು. ಇದು ಬೆರಳು ಮತ್ತು ಕಾಲ್ಬೆರಳುಗಳನ್ನು ಸಹ ವ್ಯಾಖ್ಯಾನಿಸಲಿದೆ.

ಇತರ ವಿವರಣೆಗಳೆಂದರೆ, ಕಣ್ಣುರೆಪ್ಪೆಗಳು ಮತ್ತು ಹುಬ್ಬುಗಳು ಮುಂತಾದ ಮುಖದ ವಿವರಗಳನ್ನು ಎರಡನೇ ತ್ರೈಮಾಸಿಕದಲ್ಲಿ ರಚಿಸಲ್ಪಡುವ ಇತರ ಅಂಗಗಳು. ಮಗುವಿನ ಸಂತಾನೋತ್ಪತ್ತಿ ಅಂಗಗಳು ಸಂಪೂರ್ಣವಾಗಿ ರೂಪುಗೊಳ್ಳುತ್ತವೆ. ಎರಡನೇ ತ್ರೈಮಾಸಿಕದ ಕೊನೆಯಲ್ಲಿ, ಮಗುವು ನಿಮ್ಮ ಧ್ವನಿಯನ್ನು ಅಥವಾ ಕೇಳಿದ ಯಾವುದೇ ಗದ್ದಲದ ಶಬ್ದಗಳಿಗೆ ಪ್ರತಿಕ್ರಿಯಿಸುತ್ತದೆ. ಸಂಪೂರ್ಣ ಅಭಿವೃದ್ಧಿ ಹೊಂದಿದ ನರಮಂಡಲವು ಮಗುವನ್ನು ಆಕಳಿಕೆ, ವಿಸ್ತಾರ ಮತ್ತು ಕಿಕ್ ಮಾಡಲು ಸಹ ಶಕ್ತಗೊಳಿಸುತ್ತದೆ.

5. ಮೂರನೇ ತ್ರೈಮಾಸಿಕದಲ್ಲಿ

ಶ್ವಾಸಕೋಶಗಳು ಮೂರನೇ ತ್ರೈಮಾಸಿಕದಲ್ಲಿ ಅಭಿವೃದ್ಧಿಪಡಿಸಲಾದ ಅಂತಿಮ ಅಂಗಗಳಾಗಿವೆ. ಆದರೆ ನಿಜವಾದ ಜಗತ್ತಿನಲ್ಲಿ ಬರುವ ತನಕ ಶಿಶು ಅವುಗಳನ್ನು ಬಳಸುವುದಿಲ್ಲ. ಮೂರನೆಯ ತ್ರೈಮಾಸಿಕದಲ್ಲಿ ಹೆಚ್ಚಿನವು ಮಗುವಿನ ಚಲನೆಯನ್ನು ಅನುಭವಿಸುತ್ತಿವೆ ಅಥವಾ ಗರ್ಭಾವಸ್ಥೆಯಲ್ಲಿ ತೇಲುತ್ತದೆ. ಈಗ ಬೆರಳುಗಳ ಕೊನೆಯಲ್ಲಿ ಉಗುರುಗಳು ಇರುತ್ತವೆ. ಅದರ ಕಣ್ಣುರೆಪ್ಪೆಗಳು ಸಂಪೂರ್ಣವಾಗಿ ಕ್ರಿಯಾತ್ಮಕವಾಗಿರುತ್ತವೆ ಮತ್ತು ಹೆಚ್ಚಿನ ಬೆಳಕಿಗೆ ಪ್ರತಿಕ್ರಿಯಿಸುತ್ತವೆ.

ಕೆಲವು ಅಲ್ಟ್ರಾಸೌಂಡ್ ಸ್ಕ್ಯಾನ್ಗಳು ಹೆಬ್ಬೆರಳು ಮತ್ತು ಅವಳಿಗಳನ್ನು ಸಹ ತೋರಿಸುತ್ತವೆ. ಎರಡನೆಯ ತ್ರೈಮಾಸಿಕದಲ್ಲಿ ಎಲ್ಲಾ ಅಂಗ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಸಿದ್ದರೂ, ಮೂರನೇ ತ್ರೈಮಾಸಿಕದಲ್ಲಿ ಸಾಮಾನ್ಯವಾಗಿ ಮಗುವು ಬೆಳೆಯುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ.

6. ಯಾವ ತ್ರೈಮಾಸಿಕದಲ್ಲಿ ಮಗು ಮೂತ್ರ ಮಾಡುತ್ತದೆ?

ಈಗ ಪ್ರತಿ ತ್ರೈಮಾಸಿಕದಲ್ಲಿ ನಿಮ್ಮ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ನಾವು ಸ್ಪಷ್ಟವಾದ ಪರಿಕಲ್ಪನೆಯನ್ನು ಹೊಂದಿದ್ದೇವೆ, ಇದು ತಾಯಿಯಾಗುತ್ತಿರುವ ಮಹಿಳೆಯರು ಕೇಳುವ ಪ್ರಶ್ನೆ, ನಮ್ಮ ಮಗುವಿನ ಮೂತ್ರ ವಿಸರ್ಜನೆ ಯಾವ ತ್ರೈಮಾಸಿಕದಲ್ಲಿರುತ್ತದೆ? ಅಥವಾ ಮಗುವು ಮೂತ್ರ ವಿಸರ್ಜಿಸುತ್ತದೆಯೇ?

ಮೂತ್ರಪಿಂಡಗಳು ಎರಡನೆಯ ತ್ರೈಮಾಸಿಕದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದಂತೆ, ಮೂತ್ರವನ್ನು ಸೃಷ್ಟಿಸಲು ಮಗುವಿನ ರಕ್ತದ ಹರಿವನ್ನು ಇದು ಪ್ರಕ್ರಿಯೆಗೊಳಿಸುತ್ತದೆ. ಈ ಮೂತ್ರವನ್ನು ಮಗುವಿನಿಂದ ವಾಸ್ತವವಾಗಿ ಗರ್ಭದಿಂದ ಹೊರಹಾಕಲಾಗುತ್ತದೆ. ವಾಸ್ತವವಾಗಿ, ಮೂತ್ರದಿಂದ, ಗರ್ಭದ ಒಳಕವಚದ ದ್ರವವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗಿದೆ.

ಗರ್ಭಾವಸ್ಥೆಯ ಉದ್ದಕ್ಕೂ,ಮಗು ನಿರಂತರವಾಗಿ ಆಮ್ನಿಯೋಟಿಕ್ (ಗರ್ಭದ ಒಳಕವಚದ) ದ್ರವವನ್ನು ನುಂಗಿ, ಅದನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ಅದನ್ನು ಮತ್ತೆ ಹೊರಹಾಕುತ್ತದೆ. ಇದು ಅಸಹ್ಯ ಹೊಂದುವಂತೆ ಮಾಡಬಹುದು, ಆದರೆ, ಮಗುವಿನ ಆರೋಗ್ಯವನ್ನು ನಿರ್ಧರಿಸುವಲ್ಲಿ ಇದು ಒಂದು ಪ್ರಮುಖ ಅಂಶವಾಗಿದೆ. ಗರ್ಭಾಶಯದಲ್ಲಿ ಆಮ್ನಿಯೋಟಿಕ್ ದ್ರವದ ಪ್ರಮಾಣವು ಮಗುವಿನ ಜೀರ್ಣಕಾರಿ ವ್ಯವಸ್ಥೆ ಮತ್ತು ಮೂತ್ರಪಿಂಡಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ.

ಶಿಶುಗಳು ಗರ್ಭಾಶಯದಲ್ಲಿ ಶೌಚ ಮಾಡುತ್ತವೆಯೆ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಲು ಸಹ ನಿಮಗೆ ಆಸಕ್ತಿಯಿರಬಹುದು, (ನೀವು ಏನನ್ನು ಚಿಂತಿಸುವಿರಿ ಎಂದು ನಾವು ಊಹಿಸಿದ್ದೇವೆ) ಅವರ ಜೀರ್ಣಾಂಗ ವ್ಯವಸ್ಥೆಗಳು ಅಷ್ಟು ಕ್ರಿಯಾತ್ಮಕವಲ್ಲ. ಮಗುವು ತಮ್ಮ ಹೊಕ್ಕುಳ ಬಳ್ಳಿಯ ಮೂಲಕ ತಮ್ಮ ತಾಯಿಯಿಂದ ನೇರವಾಗಿ ಶಕ್ತಿ ಮತ್ತು ಪೋಷಕಾಂಶಗಳನ್ನು ಪಡೆಯುತ್ತದೆ. ಆಮ್ಲಜನಕದಂತೆ, ಇದು ಮಗುವಿನ ರಕ್ತ ನಾಳಗಳನ್ನು ತಲುಪಲು ನೇರವಾಗಿ ಜರಾಯುಗಳಲ್ಲಿ ಹರಡುತ್ತದೆ.

ಇದು ಗರ್ಭಿಣಿಯರು ತಮ್ಮ ಮಗುವಿನ ಬಗ್ಗೆ ಕಾಳಜಿ ವಹಿಸಬೇಕಾದ ಸಮಯ. ನೀವು ನಿಮ್ಮ ಕಾಳಜಿ ವಹಿಸುತ್ತಿರುವಾಗ, ಆರೋಗ್ಯಕರವಾಗಿ ತಿನ್ನಿರಿ ಮತ್ತು ನಿಮ್ಮ ವೈದ್ಯರ ಆದೇಶಗಳನ್ನು ಅನುಸರಿಸಿರಿ, ನೀವು ಯಾವುದರ ಬಗ್ಗೆಯೂ ಚಿಂತಿಸಬೇಕಾಗಿಲ್ಲ. ಪ್ರೆಗ್ನೆನ್ಸಿಯು ಪ್ರಕೃತಿಯ ಪವಾಡವಾಗಿದೆ, ಹಾಗಾಗಿ ಅದು ಎಲ್ಲವನ್ನೂ ನೋಡಿಕೊಳ್ಳಲಿ.

Read more about: baby pregnancy
English summary

does-a-baby-urinate-in-the-womb

The mother-to-be may have doubts if the baby in her womb is comfortable, how does it derive its oxygen and does it excrete? During the start of the second trimester the kidneys are fully developed during and it processes the blood flow of the baby to create urine. This urine is actually discharged by the baby in the womb itself.
Story first published: Tuesday, August 14, 2018, 17:07 [IST]
X
Desktop Bottom Promotion