For Quick Alerts
ALLOW NOTIFICATIONS  
For Daily Alerts

ಎದೆಹಾಲು ಉಣಿಸುವಾಗ ಆಹಾರದಲ್ಲಿ ಸೂಕ್ತ ಪೋಷಕಾಂಶಗಳು ಅಗತ್ಯ

|

ಎದೆ ಹಾಲು ನವಜಾತ ಶಿಶುವಿಗೆ ಜೀವಧಾರೆ. ಮಗುವಿನ ಸಂಪೂರ್ಣ ಆರೋಗ್ಯವು ತಾಯಿಯ ಎದೆ ಹಾಲಿನ ಮೇಲೆಯೇ ನಿಂತಿರುತ್ತದೆ ಎಂದರೆ ಯಾವುದೇ ತಪ್ಪಾಗಲಾರದು. ಹಾಗಾಗಿ ಎದೆಹಾಲು ಉಣಿಸುತ್ತಿರುವ ತಾಯಂದಿರು ಆರೋಗ್ಯಕರ ಜೀವನ ಶೈಲಿಯನ್ನು ಕಾಯ್ದುಕೊಳ್ಳಬೇಕಾಗುವುದು. ಎದೆಹಾಲಿನಲ್ಲಿ ಇರುವ ಪೋಷಕಾಂಶಗಳಿಂದಲೇ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ.

ತಾಯಿಯ ಗರ್ಭದಿಂದ ಹೊರಬಂದ ಮಗುವಿನ ಮೊದಲ ಆಧ್ಯತೆ ತಾಯಿಯ ಎದೆಹಾಲು. ಹಾಗಾಗಿ ಮಗು ಹಸಿದಾಗೆಲ್ಲಾ ಹಾಲುಣಿಸುವಷ್ಟು ಎದೆಹಾಲು ತಾಯಿಗೆ ಇರಬೇಕಾಗುವುದು. ಮಗು ಆರು ತಿಂಗಳಗಳ ಕಾಲ ತಾಯಿಯ ಎದೆಹಾಲನ್ನು ಹೊರತು ಪಡಿಸಿ ಬೇರೆ ಆಹಾರ ಹೊಂದುವಷ್ಟು ದೇಹದ ಬೆಳವಣಿಗೆ ಹೊಂದಿರುವುದಿಲ್ಲ. ಹಾಗೊಮ್ಮೆ ತಾಯಿಯ ಎದೆಹಾಲನ್ನು ಹೊರತು ಪಡಿಸಿ ಬೇರೆ ಆಹಾರ ಅಥವಾ ಹಾಲನ್ನು ಉಣಿಸಿದರೆ ಮಗುವಿನ ಆರೋಗ್ಯ ಹಾಳಾಗುವುದು.

ಮಗುವಿಗೆ ಎದೆ ಹಾಲು ಉಣಿಸುವಾಗ ಈ ತಪ್ಪನ್ನು ಅಪ್ಪಿತಪ್ಪಿಯೂ ಮಾಡದಿರಿ...

Diet And Nutrition Requirements When Breastfeeding

ಆರೋಗ್ಯವಂತ ಮಗುವಾಗಿರಬೇಕಾದರೆ ಪೋಷಕಾಂಶ ಭರಿತವಾದ ಹಾಲನ್ನು ಮಗು ಸೇವಿಸಬೇಕು. ಅದಕ್ಕಾಗಿ ಕೆಲವು ಆಯ್ದ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುವುದು. ಮಗುವಿನ ಆರೈಕೆಯ ದೃಷ್ಟಿಯಿಂದ ಪೋಷಕಾಂಶ ಎದೆಹಾಲನ್ನು ಹೊಂದುವುದು ಹೇಗೆ? ಅದರ ಮಹತ್ವ ಏನು ಎನ್ನುವುದರ ಕುರಿತು ಇನ್ನಷ್ಟು ಮಾಹಿತಿಯನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ.

ಮಗುವಿಗೆ ಎದೆಹಾಲು ಹೇಗೆ ಪೋಷಣೆ ನೀಡುವುದು?

ತಾಯಿಯ ಎದೆಹಾಲಿನಿಂದ ಮಗುವನ್ನು ವೈರಸ್ ಹಾಗೂ ಬ್ಯಾಕ್ಟೀರಿಯಾಗಳಿಂದ ರಕ್ಷಿಸಬಹುದು. ಯಾವುದೇ ರೀತಿಯ ಸೋಂಕು ಅಥವಾ ಅಲರ್ಜಿಗಳು, ಉಸಿರಾಟದ ಸಮಸ್ಯೆ, ಅತಿಸಾರ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಮಕ್ಕಳನ್ನು ಕಾಡುತ್ತವೆ. ಯಾವ ಮಗು ಪೋಷಕಾಂಶ ಭರಿತ ತಾಯಿಯ ಎದೆಹಾಲನ್ನು ಸೇವಿಸುತ್ತದೆಯೋ ಅಂತಹ ಮಗು ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುತ್ತದೆ ಎಂದು ಹೇಳಲಾಗುವುದು.

ಎದೆಹಾಲು ಉಣಿಸುವುದರಿಂದ ತಾಯಿಗೆ ಉಂಟಾಗುವ ಪ್ರಯೋಜನಗಳು:

ಮಗುವಿಗೆ ಹಾಲುಣಿಸುವುದರಿಂದ ತಾಯಿ ಗರ್ಭಾವಸ್ಥೆಯಲ್ಲಿ ಪಡೆದುಕೊಂಡ ತೂಕವನ್ನು ಕಳೆದುಕೊಳ್ಳಬಹುದು. ಸ್ತನ ಮತ್ತು ಅಂಡಾಶಯಕ್ಕೆ ಸಂಬಂಧಿಸಿದ ಕ್ಯಾನ್ಸರ್ ಅಪಾಯವನ್ನು ತಡೆಯುವುದು. ಅನಿಯಮಿತವಾದ ರಕ್ತಸ್ರಾವವನ್ನು ತಡೆಯುವುದು ಹಾಗೂ ಗರ್ಭಾಶಯದ ಗಾತ್ರವನ್ನು ಪುನಃ ಮೊದಲಿನ ಸ್ಥಿತಿಗೆ ಬರುವಂತೆ ಮಾಡುವುದು.

ಎದೆಹಾಲು ಉಣಿಸುವಾಗ ಸೇವಿಸಬಹುದಾದ ಆಹಾರಗಳು:

ಎದೆಹಾಲು ಉಣಿಸುವ ತಾಯಂದಿರು ತಮ್ಮ ಆರೋಗ್ಯ ಹಾಗೂ ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ಸೇವಿಸಬೇಕಾಗುವುದು. ಹಾಗಾಗಿ ಆಹಾರದಲ್ಲಿ ಅಡ್ಡಪರಿಣಾಮ ಬೀರುವಂತಹ ಆಹಾರ ಪದಾರ್ಥಗಳು, ಗ್ಯಾಸ್ ಉಂಟುಮಾಡುವಂತಹ ಆಹಾರಪದಾರ್ಥಗಳು ಮತ್ತು ನಂಜಿನ ಪದಾರ್ಥಗಳನ್ನು ಸೇವಿಸಬಾರದು. ಆರೋಗ್ಯಕರವಾದ ಕಾರ್ಬೋಹೈಡ್ರೇಟ್ ಭರಿತ ಆಹಾರಗಳು, ಹಣ್ಣು ಮತ್ತು ಹಸಿ ತರಕಾರಿಗಳನ್ನು ಸೇವಿಸಬೇಕು. ಪ್ರೋಟೀನ್ ಭರಿತ ಹಾಲು ಹಾಗೂ ಆರೋಗ್ಯಕರ ಕೊಬ್ಬನ್ನು ನೀಡುವ ಆಲಿವ್ ಎಣ್ಣೆಯಿಂದ ತಯಾರಿಸುವ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ.

ಆಹಾರದಲ್ಲಿ ನೀವು ಸೇರಿಸಿಕೊಳ್ಳಬಹುದಾದ ಆಹಾರಗಳು:

* ದಿನ ಪೂರ್ತಿ ಸಾಕಷ್ಟು ನೀರನ್ನು ಸೇವಿಸಬೇಕು. ಇದು ಟಾಕ್ಸಿನ್‍ಗಳು ಚದುರುವಂತೆ ಮಾಡುವುದು.
* ಆಹಾರದಲ್ಲಿ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ತಾಜಾ ಹಣ್ಣುಗಳು, ತರಕಾರಿಗಳು, ಮೊಟ್ಟೆ, ಧಾನ್ಯಗಳನ್ನು ಸೇರಿಸಿಕೊಳ್ಳಬೇಕು.
* ಉತ್ತಮ ಕೊಬ್ಬುಗಳನ್ನು ನೀಡುವ ಆಹಾರ ಪದಾರ್ಥಗಳು, ಆಲಿವ್ ಎಣ್ಣೆ, ಬೀಜಗಳು, ಸಾಲ್ಮನ್, ಕ್ಯಾನೋಲ ಸೇರಿದಂತೆ ವಿಟಮಿನ್ ಇ ಭರಿತ ಆಹಾರವನ್ನು ಸೇವಿಸಬೇಕು.
* ಮೀನನ್ನು ಸೇವಿಸಬಹುದು. ಇದು ಉತ್ತಮ ಪ್ರಮಾಣದ ಒಮೆಗಾ 3, ಡಿಎಚ್‍ಎ, ಇಪಿಎ ನೀಡುತ್ತದೆ. ಹಾಗಾಗಿ ಟ್ಯೂನ್ ಮಾಡಿರುವಂತಹ ಮೀನುಗಳನ್ನು ಸೇವಿಸಿ. ಆಗ ಪಾದರಸದ ಅಂಶಗಳನ್ನು ಒಳಗೊಂಡಿರುವ ಸಮುದ್ರ ಆಹಾರಗಳನ್ನು ತಪ್ಪಿಸಬಹುದು.
* ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಭರಿತ ಆಹಾರವನ್ನು ಕಡ್ಡಾಯವಾಗಿ ಸೇವಿಸುವುದನ್ನು ಮರೆಯದಿರಿ.

ಆರೋಗ್ಯಕರ ಎದೆಹಾಲು ಉಣಿಸುವ ಅಭ್ಯಾಸ:

ನೀವು ನಿತ್ಯವೂ ಕೆಲವು ನಿಗದಿತ ಸಮಯದಲ್ಲಿ ಹಸಿವಿನ ಅನುಭವವನ್ನು ಹೊಂದಬಹುದು. ಅಂತಹ ಸಮಯದಲ್ಲಿ ಅನಗತ್ಯ ತಿಂಡಿಗಳನ್ನು ಸೇವಿಸುವ ಬದಲು ಹಣ್ಣುಗಳು, ಬೀಜಗಳು ಸೇರಿದಂತೆ ಇನ್ನಿತರ ಕ್ಯಾಲೋರಿ ಹೆಚ್ಚಿಸುವ ಉತ್ತಮ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ಆಗ ಉತ್ತಮ ಜೀರ್ಣಕ್ರಿಯೆ ಹಾಗೂ ಆರೋಗ್ಯಕರ ಎದೆಹಾಲನ್ನು ಹೊಂದುವಿರಿ.

ಆಹಾರದಲ್ಲಿ ವಿವಿಧತೆ ಇರಲಿ:

ತಾಯಿ ತಾನು ಸೇವಿಸುವ ಆಹಾರದಲ್ಲಿ ವಿವಿಧತೆಯನ್ನು ಹೊಂದಿದಂತೆ ಹಾಲಿನಲ್ಲಿ ಪೋಷಕಾಂಶಗಳ ಗುಣವು ಹೆಚ್ಚುವುದು. ಜೊತೆಗೆ ಹಾಲಿನಲ್ಲಿ ಉಂಟಾಗುವ ರುಚಿಯ ಬದಲಾವಣೆ ಹಾಗೂ ಸುವಾಸನೆಗಳು ಮಗುವಿಗೆ ಅಭ್ಯಾಸ ಆಗುವುದು.

ಅಲರ್ಜಿಗಳ ಕಡೆಗೆ ಗಮನವಿರಲಿ:

ಕೆಲವು ಆಹಾರ ಪದಾರ್ಥಗಳು ಮಗುವಿಗೆ ಅಲರ್ಜಿ ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಆಹಾರ ಸೇವಿಸುವಾಗ ಮಗುವಿನ ಅಲರ್ಜಿಯ ಬಗ್ಗೆ ಗಮನದಲ್ಲಿ ಇಟ್ಟುಕೊಂಡು ಸೇವಿಸಿ.

ಮದ್ಯದಿಂದ ದೂರವಿರಿ:

ಕೆಲವು ಮಹಿಳೆಯರಿಗೆ ಮದ್ಯವನ್ನು ಸ್ವೀಕರಿಸುವ ಅಭ್ಯಾಸ ಇರುತ್ತದೆ. ಇಂತಹವರು ಎದೆಹಾಲು ಉಣಿಸುವ ಸಂದರ್ಭದಲ್ಲಿ ಸಂಪೂರ್ಣವಾಗಿ ಮದ್ಯಪಾನದಿಂದ ದೂರ ಇರಬೇಕು. ಇದು ಮಗುವಿನ ಬೆಳವಣಿಗೆಯ ಮೇಲೆ ಕೆಟ್ಟಪರಿಣಾಮ ಬೀರುವುದು.

ಕೆಫಿನ್ ಸೇವನೆಯನ್ನು ಮಿತಿಗೊಳಿಸಿ:

ನೀವು ಕೆಫಿನ್ ಸೇವನೆಯನ್ನು ತಪ್ಪಿಸಬೇಕು. ಇಲ್ಲವೇ ಒಂದು ದಿನಕ್ಕೆ ಕೇವಲ 1 ಅಥವಾ 2 ಕಪ್‍ಗಳಿಗೆ ಮಿತಿಗೊಳಿಸಿ. ಕೆಫಿನ್ ಮಗುವಿನ ನಿದ್ರಾವಸ್ಥೆಯ ಮೇಲೆ ಪ್ರಭಾವ ಬೀರುವುದು. ಎದೆಹಾಲು ಉತ್ಪಾದನೆಯಲ್ಲೂ ತೊಂದರೆ ಉಂಟಾಗಬಹುದು. ಎದೆಹಾಲಿನ ಉತ್ಪಾದನೆ ತಗ್ಗಿದ್ದರೆ ಒತ್ತಡಕ್ಕೆ ಒಳಗಾಗುವ ಬದಲು ವೈದ್ಯರ ಸಲಹೆ ಪಡೆದುಕೊಳ್ಳುವುದು ಸೂಕ್ತ.

ಎದೆಹಾಲು ಉಣಿಸುವ ಪುನರಾವರ್ತಿತ ಕ್ರಿಯೆ

ಪ್ರತಿ 24 ಗಂಟೆಯಲ್ಲಿ ಮಗುವಿಗೆ 10-12 ಬಾರಿ ಹಾಲನ್ನು ಉಣಿಸಬೇಕು. ಮಗು ತನ್ನ ಬೆರಳನ್ನು ಬಾಯಿಗೆ ಹಾಕಿ ಕೊಳ್ಳುವುದು ಅಥವಾ ಇತರ ವಸ್ತುಗಳನ್ನು ಬಾಯಿಗೆ ಇಟ್ಟಿಕೊಳ್ಳುವ ಕ್ರಿಯೆಯನ್ನು ಗಮನಿಸಿ ಹಸಿವಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಕೆಲ ಮಕ್ಕಳು ಹಸಿವು ಉಂಟಾದಾಗ ಹೆಚ್ಚು ಅಳುವುದನ್ನು ಗಮನಿಸಬಹುದು.

ಎದೆಹಾಲು ಉಣಿಸುವ ಪ್ರಕ್ರಿಯೆ

ಮಗುವಿಗೆ ಹಾಲುಣಿಸುವ ಸೂಕ್ತ ಪ್ರಕ್ರಿಯೆ ತಿಳಿಯದೆ ಇದ್ದರೆ ಚಿಂತಿಸದಿರಿ. ಕೆಲವು ತಾಯಂದಿರಿಗೆ ಸ್ವಲ್ಪ ಸಮಯ ಬೇಕಾಗುವುದು. ಸೂಕ್ತ ಮಾಹಿತಿ ಹಾಗೂ ಅನುಕರಣೆಯ ಮೂಲಕ ಹಾಲುಣಿಸಬಹುದು.

ಎಣ್ಣೆಯಲ್ಲಿರುವ ಕ್ಯಾನೋಲ

ಎದೆಹಾಲು ಉಣಿಸುವ ತಾಯಂದಿರು ಕ್ಯಾನೋಲ ಹೊಂದಿರುವ ಎಣ್ಣೆಯ ಪದಾರ್ಥವನ್ನು ಸೇವಿಸಬಹುದು. ಎಣ್ಣೆಯಲ್ಲಿರುವ ಕ್ಯಾನೋಲ ಎದೆಹಾಲಿನಲ್ಲಿ ಉತ್ತಮ ಕೊಬ್ಬನ್ನು ಉತ್ತೇಜಿಸಲು ಸಹಾಯ ಮಾಡುವುದು. ಯುಕೆ ಮೂಲದ ಸಂಶೋಧನೆಯ ಪ್ರಕಾರ ಕ್ಯಾನೋಲ ಮಗುವಿನ ರಕ್ತದಲ್ಲಿ ಇರುವ ಸಕ್ಕರೆ ಮಟ್ಟವನ್ನು ಸ್ಥಿರವಾಗಿ ಇರಿಸಲು ಸಹಾಯ ಮಾಡುತ್ತದೆ. ಶಾಖವನ್ನು ಉತ್ಪಾದಿಸುವುದರಿಂದ ಮಗುವನ್ನು ಬೆಚ್ಚಗಿರಿಸುತ್ತದೆ.

ಎಣ್ಣೆಯಲ್ಲಿ ಕ್ಯಾನೋಲ ಎಂದರೇನು?

ಇದು ಸಸ್ಯದಿಂದ ತಯಾರಿಸಲ್ಪಟ್ಟ ಎಣ್ಣೆ. ಇದರಲ್ಲಿ ಇರುಸಿಕ್ ಆಮ್ಲಗಳನ್ನು ಹೊಂದಿರುತ್ತದೆ. ಇದನ್ನು ಸೇವಿಸಬಹುದಾದ ಉತ್ತಮ ಆಹಾರ. ಇದರಿಂದ ದೇಹದಲ್ಲಿ ಯಾವುದೇ ಅಡ್ಡ ಪರಿಣಾಮಗಳು ಉಂಟಾಗದು.

ಶೋಧನೆಯ ಹಿನ್ನೆಲೆ

ಎದೆಹಾಲು ಉಣಿಸುವ ತಾಯಂದಿರಿಗೆ ಕ್ಯಾನೋಲ ಸೇವನೆಯಿಂದ ಉಂಟಾಗುವ ಪರಿಣಾಮದ ಬಗ್ಗೆ ಸಂಶೋಧನೆ ನಡೆಸಲಾಯಿತು. ಸಂಶೊಧನೆಯಲ್ಲಿ ಗರ್ಭಿಣಿ ಕುರಿಗಳಿಗೆ ಸಾಕಷ್ಟು ಕ್ಯಾನೋಲ ಎಣ್ಣೆ ಭರಿತ ಆಹಾರವನ್ನು ನೀಡಲಾಯಿತು. ನಂತರ ಅವುಗಳಲ್ಲಿ ಒಂದು ಕುರಿಯನ್ನು ಕತ್ತರಿಸಿ ಅದರಲ್ಲಿ ಇರುವ ಕೊಬ್ಬನ್ನು ಪರೀಕ್ಷಿಸಲಾಯಿತು. ಇದರಿಂದ ಕುರಿಯ ದೇಹದಲ್ಲಿ ಉತ್ತಮ ಪೋಕಾಂಶಗಳು ಹಾಗೂ ಗುಣಗಳು ಇದ್ದವು ಎಂದು ಸಾಭಿತಾಯಿತು. ಅಂತೆಯೇ ಮನುಷ್ಯರಿಗೂ ಇದು ಉತ್ತಮ ಪೋಷಣೆಯನ್ನು ನೀಡುವುದು ಎನ್ನುವುದು ದೃಢವಾಯಿತು.

ಎದೆಹಾಲು ಉಣಿಸುವ ತಾಯಂದಿರಿಗೆ ಉತ್ತಮ ಆಯ್ಕೆ

ಅಡುಗೆ ಎಣ್ಣೆಗೆ ಹೋಲಿಸಿದರೆ ಕ್ಯಾನೊಲಾ ಕಡಿಮೆ ಒಮೆಗಾ-6 ಮತ್ತು ಒಮೆಗಾ-3 ಕೊಬ್ಬಿನಾಮ್ಲವನ್ನು ಹೆಚ್ಚು ನೀಡುವದು. ಇದನ್ನು ಅತ್ಯುತ್ತಮ ಅಡುಗೆ ಎಣ್ಣೆಯ ಆಯ್ಕೆ ಎಂದು ಪರಿಗಣಿಸಬಹುದು. ಕ್ಯಾನೋಲದಲ್ಲಿರುವ ಕೊಬ್ಬಿನ ಆಸಿಡ್‍ಗಳು ಕೋಶಗಳ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ. ಇದು ಎದೆಹಾಲು ಉಣಿಸುವ ತಾಯಂದಿರಿಗೆ ಅತ್ಯುತ್ತಮವಾದ ಆಯ್ಕೆ ಎಂದು ಹೇಳಲಾಗುವುದು.

English summary

Diet And Nutrition Requirements When Breastfeeding

For nursing or breastfeeding mothers, maintaining a healthy lifestyle is mandatory. Although, breastfeeding may involve hard work, it tremendously benefits the mother and baby both. If you are a breastfeeding mother, this article would take you through the various aspects of feeding breast milk to your baby.
X
Desktop Bottom Promotion