For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಲ್ಲಿ ಜ್ವರ ಕಾಣಿಸಿಕೊಂಡಾಗ ಏನು ಮಾಡಬೇಕು?

By Pooja Bhat
|

ಹೆಣ್ಣಿಗೆ ತಾಯ್ತನವೆಂಬುದು ನಿಸರ್ಗದಿಂದ ದೊರೆತ ಅತ್ಯಮೂಲ್ಯ ಶಕ್ತಿಗಳಲ್ಲಿ ಒಂದು. ನಮ್ಮ ವಿಜ್ಞಾನ ಎಷ್ಟೇ ಮುಂದುವರಿದರೂ ಕೂಡ ತಾಯಿಯ ಗರ್ಭವಿಲ್ಲದೆ ಮನುಷ್ಯನ ಜನನ ಅಸಾಧ್ಯವಾದುದು. ಯಾವ ವಸ್ತುವನ್ನಾದರೂ ಕೃತಕವಾಗಿ ಸೃಷ್ಟಿಸುವ ಈ ಆಧುನಿಕ ಕಾಲದಲ್ಲಿ ಸೃಷ್ಟಿಸಲು ಅಸಾಧ್ಯವೆನ್ನುವುದು ಒಂದು ನಿಸರ್ಗ ಮತ್ತು ಇನ್ನೊಂದು ತಾಯಿಯನ್ನು. ಭಾವನಾತ್ಮಕವಾಗಿ ತಾಯಿಯಾಗುವ ಕ್ಷಣ ಅತ್ಯಂತ ಸಂತಸದ ಕ್ಷಣವಾದರೂ ತಾಯಿಯಾಗುವ ಪ್ರಕ್ರಿಯೆಯುದ್ದಕ್ಕೂ ಹೆಣ್ಣು ಅನುಭವಿಸುವ ಸಮಸ್ಯೆಗಳು, ತೊಂದರೆಗಳು ಅವಳೇ ಬಲ್ಲಳು. ತಾಯಾಗುವುದೆಂದರೆ ಹೆಣ್ಣಿಗೆ ಮರುಜನ್ಮಬಂದಂತೆ ಎನ್ನುವ ಮಾತಿದೆ.

ಮತ್ತೊಂದು ಜೀವವನ್ನು ತನ್ನೊಳಗೆ ಮೂಡಿಸುವ, ಪೋಷಿಸುವ, ಬೆಳೆಸುವ ಕಾರ್ಯ ಸುಲಭದ ಕೆಲಸವಲ್ಲ. ಈ ಪ್ರಕ್ರಿಯೆಯಲ್ಲಿ ಹೆಣ್ಣು ಅನುಭವಿಸುವ ಬೆಳಗಿನ ಬೇನೆಗಳು(ಮಾರ್ನಿಂಗ್ ಸಿಕ್ನೆಸ್),ಆಯಾಸಗಳು, ವಾಕರಿಕೆ, ವಾಂತಿ ಮತ್ತು ನೋವುಗಳು ಗರ್ಭಾವಸ್ಥೆಯಲ್ಲಿರುವ ಹೆಣ್ಣಿಗೆ ಸರ್ವೇ ಸಾಮನ್ಯವಾಗಿ ಬರುವಂತದ್ದು. ಮಗುವೊಂದು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಸಮಯ ಎಷ್ಟು ಜಾಗೃತೆ ವಹಿಸಿದರೂ ಸಾಲದು.

ಅಜಾಗರೂಕರಾಗಿ ನಡೆದುಕೊಂಡಲ್ಲಿ ಗರ್ಭಿಣಿಯರಿಗೂ ಮಗುವಗೂ ಅಪಾಯ ಸಂಭವಿಸುವ ಅವಕಾಶಗಳೇ ಹೆಚ್ಚು. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಅಚಾನಕ್ಕಾಗಿ ಅಥವಾ ವಿವಿಧ ಕಾರಣಗಳಿಂದ ಬರುವ ಜ್ವರವನ್ನು ಹೇಗೆ ನಿಭಾಯಿಸಬೇಕಾಗಬಹುದು? ಇದು ನಮ್ಮ ಊಹೆಗೂ ನಿಲುಕದಂತಹ ಸಂಗತಿ ಮತ್ತು ಚಿಂತಗೀಡು ಮಾಡುವ ಗಂಭೀರ ಸಮಸ್ಯೆಯಾಗಿದೆ. ಸಾಮಾನ್ಯ ಜನರಿಗೆ ಬರುವ ಜ್ವರವೂ ಕೂಡ ಕಡಿಮೆಯಾಗಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತದೆ.

ಅಂತಹದ್ದರಲ್ಲಿ ಮಗುವನ್ನು ತನ್ನೊಂದಿಗೆ ಹೊತ್ತಿರುವ ಗರ್ಭಿಣಿಯರಲ್ಲಿ ಕಂಡುಬರುವ ಸಣ್ಣ ಸಣ್ಣ ಸಮಸ್ಯೆಗಳೂ ಮಗು ಮತ್ತು ತಾಯಿಯ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುವ ಸಾಧ್ಯತೆಗಳಿರುತ್ತವೆ. ಹಲವಾರು ಕಾರಣಗಳಿಂದ ಜ್ವರ ಬರುವುದನ್ನು ಕಾಣುತ್ತೇವೆ. ಕೆಲವೊಮ್ಮೆ ಜ್ವರದ ತೀವ್ರತೆ ಕಡಿಮೆಯಿರುವಲ್ಲಿ ಸ್ವಲ್ಪ ವಿಶ್ರಾಂತಿ ಮತ್ತು ಸುಲಭ ಮನೆಮದ್ದುಗಳೇ ಜ್ವರವನ್ನು ಹೋಗಲಾಡಿಸಬಹುದು. ಆದರೆ ಇನ್ನು ಕೆಲವೊಮ್ಮೆ ತೀವ್ರ ತೆರನಾದ ಜ್ವರಗಳಿಗೆ ತಕ್ಷಣದ ಚಿಕಿತ್ಸೆಯ ಅವಶ್ಯಕತೆ ಮತ್ತು ಅನಿವಾರ್ಯತೆಯಿರುತ್ತದೆ. ಗರ್ಭಿಣಿಯರಲ್ಲಿ ಬರುವ ಜ್ವರಗಳು ತಾಯಿ ಮತ್ತು ಮಗು ಇಬ್ಬರ ಆರೋಗ್ಯದ ಮೇಲೆಯೂ ಪರಿಣಾಮವನ್ನು ಬೀರಿ ತೀವ್ರತೆರನಾದ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳದಿದ್ದಲ್ಲಿ ಮಗುವಿನಲ್ಲಿ ಸ್ವಲೀನತೆ (ಆಟಿಸಮ್) ಯನ್ನುಂಟುಮಾಡುತ್ತದೆ. ಈ ಲೇಖನದಲ್ಲಿ ಗರ್ಭಿಣಿಯರಲ್ಲಿ ಕಂಡುಬರುವ ಜ್ವರದ ಲಕ್ಷಣಗಳು, ಕಾರಣಗಳು, ಪರಿಹಾರೋಪಾಯಗಳು ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ತಿಳಿದುಕೊಳ್ಳೋಣ.

ಜ್ವರ ಎಂದರೇನು?

ಸಾಮಾನ್ಯ ಸಂದರ್ಭಗಳಲ್ಲಿ ಮನುಷ್ಯನ ದೇಹದ ಉಷ್ಣತೆ ೩೬ ರಿಂದ ೩೭ ಡಿಗ್ರಿ ಸೆಂಟಿಗ್ರೇಡ್ ಇರುತ್ತದೆ. ಯಾವುದೇ ಸಂದರ್ಭದಲ್ಲಿ ಉಷ್ಣತೆ ೩೮.೩ ಡಿಗ್ರಿ ಸೆಂಟಿಗ್ರೇಡಿಗಿಂತ ಹೆಚ್ಚಿದರೆ ಅದನ್ನು ಜ್ವರವೆಂದು ಪರಿಗಣಿಸಲಾಗುತ್ತದೆ. ಜ್ವರದ ಲಕ್ಷಣಗಳೆಂದರೆ ತಲೆನೋವು, ನಡುಕ ಉಂಟಾಗುವುದು, ಅತಿಯಾಗಿ ಬೆವರುವುದು, ಮೈ-ಕೈ ನೋವು, ಆಯಾಸವಾಗುವುದು ಮತ್ತು ನಿರ್ಜಲೀಕರಣ.

ಜ್ವರದ ಬೆಳವಣಿಗೆಯ ಸಾಮಾನ್ಯ ಕಾರಣಗಳು ಯಾವುವು?

ಗರ್ಭಿಣಿಯರಲ್ಲಿ ತಾಯಿಯ ಆಹಾರದಲ್ಲಿರುವ ಪೋಷಕಾಂಶಗಳು ಎರಡು ಜೀವಗಳಿಗೆ ಅಂದರೆ ತಾಯಿ ಮತ್ತು ಮಗುವಿನೊಂದಿಗೆ ಹಂಚಲ್ಪಡುತ್ತದೆ. ಇದರಿಂದ ಸಹಜವಾಗಿಯೇ ಪೋಷಕಾಂಶದ ಕೊರತೆಯುಂಟಾಗಿ ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ದುರ್ಬಲತೆ ಉಂಟಾಗುತ್ತದೆ. ಇಂತಹ ದುರ್ಬಲತೆ ಗರ್ಭಿಣಿಯರ ರೋಗನಿರೋಧಕ ಶಕ್ತಿಯನ್ನು ತಗ್ಗಿಸುತ್ತವೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಗರ್ಭಿಣಿ ಮಹಿಳೆಯರು ಸುಲಭವಾಗಿ ಜ್ವರಕ್ಕೆ ತುತ್ತಾಗುವುದನ್ನು ಕಾಣುತ್ತಿರುತ್ತೇವೆ.

ಜ್ವರ ಎಂದರೇನು?

ಜ್ವರ ಎಂದರೇನು?

ಹವಾಮಾನದ ವೈಪರೀತ್ಯ ಅಥವಾ ವಾತಾವರಣದಲ್ಲಿನ ಉಂಟಾಗುವ ವ್ಯತ್ಯಾಸದ ಪರಿಣಾಮವಾಗಿ, ಇಲ್ಲವೇ ಬದಲಾದ ಆಹಾರ ಕ್ರಮದಿಂದಾಗಿ ಬರುವ ಶೀತದ ಕಾರಣದಿಂದಲೂ ಕೂಡ ಜ್ವರ ಬರುವ ಸಾಧ್ಯತೆಗಳಿರುತ್ತವೆ. ಶೀತದಿಂದ ಬರುವ ಜ್ವರದ ಲಕ್ಷಣಗಳು ಫ್ಲೂ ಜ್ವರದ ಲಕ್ಷಣಗಳನ್ನು ಹೋಲುವುದರಿಂದ ಯಾವ ಜ್ವರ ಎಂಬ ತೀರ್ಮಾನಕ್ಕೆ ಬರುವಲ್ಲಿ ದ್ವಂದ್ವ ಉಂಟಾಗುತ್ತದೆ. ಮೂಗು ಸೋರುವಿಕೆ, ಕೆಮ್ಮು, ಗಂಟಲು ಕಟ್ಟುವಿಕೆ ಮತ್ತು ಉಸಿರಾಟದ ತೊಂದರೆಗಳಂತಹ ಲಕ್ಷಣಗಳು ಕಂಡುಬರುತ್ತವೆ. ಶೀತವು ಸಾಮಾನ್ಯವಾಗಿ ೩ ದಿನಗಳಿಂದ ೨ ವಾರಗಳವರೆಗೂ ಇದ್ದು ಗುಣವಾಗಬಹುದು. ಈ ಅವಧಿಗಿಂತ ದೀರ್ಘವಾದ ಶೀತದ ಮುಂದುವರಿಕೆಯಿದ್ದಾಗ ಅಗತ್ಯವಾಗಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆಯನ್ನು ಪಡೆಯುವುದು ಅವಶ್ಯಕವಾದುದು.

ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

ಅಡುಗೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪದೇಪದೇ ಕೈಗಳನ್ನು ತೊಳೆಯುವ ಅಭ್ಯಾಸ ಇರುತ್ತದೆ. ಹೀಗೆ ವಿಪರೀತವಾಗಿ ನೀರನ್ನು ಬಳಸುವುದರಿಂದ ಶೀತ ಬರುವ ಸಾಧ್ಯತೆ ಹೆಚ್ಚಿರುವುದರಿಂದ ಗರ್ಭಿಣಿ ಸ್ರೀ ಿಯರು ಪದೇಪದೇ ನೀರನ್ನು ಬಳಸುವುದನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಅಶುದ್ಧವಾತಾವರಣವೂ ಶೀತ-ಜ್ವರಗಳಿಗೆ ಮೂಲ ವಾದುದರಿಂದಾಗಿ ಗರ್ಭಿಣಿಯರು ವಾಸವಿರುವ ಮನೆ ಮತ್ತು ಸುತ್ತಮುತ್ತಲಿನ ಪರಿಸರವು ಯಾವಾಗಲೂ ಶುಚಿಯಾಗಿಯೂ ಶುದ್ಧವಾಗಿಯೂ ಇರತಕ್ಕದ್ದು. ಶೀತ-ಜ್ವರಗಳಿರುವ ಸ್ನೇಹಿತರನ್ನು ಅಥವ ನೆರೆಹೊರೆಯವರನ್ನು ಭೇಟಿಯಾಗುವುದನ್ನು ಆದಷ್ಟು ಕಡಿಮೆಗೊಳಿಸುವುದು ಒಳಿತು. ಇವು ಸಾಂಕ್ರಾಮಿಕವಾದುದರಿಂದ ಆದಷ್ಟು ಅಂತವರಿಂದ ದೂರವುಳಿಯುವುದು ಅವಶ್ಯಕವಾದುದು.

ಫ್ಲ್ಯೂ

ಫ್ಲ್ಯೂ

ಫ್ಲ್ಯೂ ಸಾಮಾನ್ಯ ಶೀತದ ಲಕ್ಷಣಗಳನ್ನೇ ಹೋಲುವುದರಿಂದ ಎರಡೂ ಸಾಮ್ಯತೆಗಳನ್ನು ಹೊಂದಿದೆ. ಆದರೆ ಸಾಧಾರಣ ಶೀತಕ್ಕಿಂತ ಫ್ಲ್ಯೂ ಶಕ್ತಿಗೆ ಸಂಬಂಧಿಸಿದಂತೆ ಅರೋಗ್ಯದ ಮೇಲೆ ಹೆಚ್ಚಿನ ಘಾಸಿಯನ್ನು ಉಂಟುಮಾಡುತ್ತದೆ. ಸಾಮಾನ್ಯ ಶೀತದ ಲಕ್ಷಣಗಳಾದ ಕೆಮ್ಮು, ಜ್ವರ, ಮೂಗು ಸೋರುವಿಕೆಯೊಂದಿಗೆ ಮೈ ಕೈ ನೋವುಗಳು, ವಾಕರಿಕೆ ಮತ್ತು ವಾಂತಿಯಂತಹ ಲಕ್ಷಣಗಳೂ ಕಂಡುಬರುತ್ತವೆ. ಪ್ಲ್ಯೂ ಆಗಿದ್ದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿಮಾಡುವುದೊಳಿತು.

ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

ಫ್ಲೂವನ್ನು ತಡೆಗಟ್ಟುವ ಎಲ್ಲ ಕ್ರಮಗಳನ್ನೂ ಕೂಡ ಗರ್ಭಿಣಿಯರು ಪಾಲಿಸಲೇ ಬೇಕಾಗುತ್ತದೆ. ಫ್ಲ್ಯೂ ಬಂದು ಗುಣಮುಖರಾದವರ ಭೇಟಿಯನ್ನು ಅದಷ್ಟು ಕಡಿಮೆಗೊಳಿಸಿಕೊಳ್ಳಬೇಕು. ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಬೇಕು. ಶುದ್ಧವಾದ ನೀರನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ನಿರ್ಜಲೀಕರಣವನ್ನು ದೂರವಿರಿಸುವುದರ ಮೂಲಕ ಫ್ಲ್ಯೂವನ್ನು ಬಾರದಂತೆ ಆದಷ್ಟು ತಡೆಗಟ್ಟಬಹುದು.

ಮೂತ್ರನಾಳದ ಸೋಂಕು ( ಯುರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್)

ಮೂತ್ರನಾಳದ ಸೋಂಕು ( ಯುರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್)

ಯುಟಿಐ ಅಥವ ಮೂತ್ರನಾಳದ ಸೋಂಕು ಎಂಬುದು ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆಯಾಗಿದೆ. ಇದನ್ನು ನಿವಾರಿಸಲು ಸುಲಭ ಮಾರ್ಗಗಳೂ ಕೂಡ ಇವೆ. ಈ ಸಮಸ್ಯೆಯಿಂದಲೂ ಗರ್ಭಿಣಿಯರಲ್ಲಿ ಜ್ವರ, ಮೂತ್ರ ವಿಸರ್ಜನೆಮಾಡವಾಗ ಮೂತ್ರನಾಳದಲ್ಲಿ ಉರಿ, ರಕ್ತಸಿಕ್ತ ಮೂತ್ರ, ಉರಿಯಿಂದ ಕೂಡಿದ ಮೂತ್ರ ಈ ಎಲ್ಲಾ ಲಕ್ಷಣಗಳೂ ಕಂಡುಬರುತ್ತವೆ. ಇವು ಮುಖ್ಯವಾಗಿ ಯೋನಿ ಅಥವಾ ಗುದನಾಳದ ಮೂಲಕ ಮೂತ್ರವಿಸರ್ಜನಾ ನಾಳಕ್ಕೆ ಬ್ಯಾಕ್ಟೇರಿಯಾಗಳು ಹರಡಿಕೊಳ್ಳುವುದರಿಂದಾಗಿಯೇ ಬರುವಂತವು. ಯುಟಿಐ ಸಮಸ್ಯೆ ಕಂಡು ಬಂದಾಗ ಕೂಡಲೇ ವೈದ್ಯರನ್ನು ಕಾಣಬೇಕು. ಯಾಕೆಂದರೆ ಈ ಸೋಂಕು ಕಿಡ್ನಿಗೂ ಹರಡಿ ಮಗುವಿನ ಸಂಪೂರ್ಣ ಬೆಳವಣಿಗೆಗೆ ಮತ್ತು ಜನನ ಸಂದರ್ಭದಲ್ಲಿಯೂ ತೊಂದರೆಯನ್ನುಂಟು ಮಾಡುತ್ತದೆ.

ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

ಇಂತಹ ಸಮಸ್ಯೆಗಳಿದ್ದಾಗ ತುಂಬಾ ನೀರನ್ನು ಕುಡಿಯಬೇಕು. ಹೆಚ್ಚು ನೀರು ಕುಡಿಯುವುದರಿಂದ ಅದು ಮೂತ್ರಕೋಶವನ್ನು ಸ್ವಚ್ಛವಾಗಿರಿಸಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ.

ಜಠರಗರುಳಿನ ಸೋಂಕು

ಜಠರಗರುಳಿನ ಸೋಂಕು

ಜಠರಗರುಳಿನ ಪ್ರದೇಶದಲ್ಲಿರುವಂತ ವೈರಾಣುಗಳು ಸೋಂಕುಗಳನ್ನು ಹರಡುವ ಸಾಧ್ಯತೆ ಇದೆ. ಹೀಗೆ ಸೋಂಕು ತಗಲಿದಾಗ ಗರ್ಭಿಣಿಯರಲ್ಲಿ ವಾಂತಿ, ಜ್ವರ, ನಿರ್ಜಲೀಕರಣ ಮತ್ತು ಡೈಯೇರಿಯಾದಂತಹ ಲಕ್ಷಣಗಳು ಕಂಡುಬರುತ್ತವೆ. ಈ ಸೋಂಕು ತುಂಬಾ ಅಪಾಯಕಾರಿಯಾಗಿದ್ದು ಅವಧಿಗೆ ಮುನ್ನವೇ ಹೆರಿಗೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

ಹೊರಗಿನ ತಿಂಡಿಗಳು ಮತ್ತು ಸ್ವಚ್ಛತೆ ಇಲ್ಲದ ಸ್ಥಳಗಳಲ್ಲಿನ ಆಹಾರವನ್ನು ಸೇವಿಸಲೇಬಾರದು. ಮನೆಯಲ್ಲಿಯೇ ಆರೋಗ್ಯಕರವಾದ ತಿನಿಸುಗಳನ್ನು ಮಾಡಿಕೊಂಡು ಸೇವಿಸುವುದರಿಂದ ಈ ಸಮಸ್ಯೆಯಿಂದ ದೂರವಿರಬಹುದಾಗಿದೆ. ಬೇಯಿಸದ ಅತಹ್ವಾ ಅರೆಬೆಂದ ಆಹಾರಗಳನ್ನು ಉಪಯೋಗಿಸದೆ, ಅವನ್ನು ಚೆನ್ನಾಗಿ ಬೇಯಿಸಿಯೇ ತಿನ್ನಬೇಕು. ಚೆನ್ನಾಗಿ ಬೇಯಿಸುವುದರಿಂದ ಅದರಲ್ಲಿನ ವೈರಾಣುಗಳು ಮತ್ತು ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಅದರಲ್ಲಿಯೂ ಮಾಂಸಾಹಾರಿಗಳಾಗಿದ್ದಲ್ಲಿ ಸಮರ್ಪಕವಾಗಿ ಬೇಯಿಸಿದ ನಂತರವೇ ಉಪಯೋಗಿಸಬೇಕು. ಯಾಕೆಂದರೆ ಮಾಂಸಾಹಾರಗಳಿಂದ ಈ ರೀತಿಯ ಸೋಂಕಿಗೆ ಅವಕಾಶಗಳು ಜಾಸ್ತಿ. ಈ ಬಗೆಯ ಸೋಂಕುಗಳಿದ್ದಾಗ ಸುಲಭವಾಗಿ ಜೀರ್ಣವಾಗುವಂತಹ ಮತ್ತು ಆರೋಗ್ಯಯುತ ಆಹಾರಗಳನ್ನು ಸೇವಿಸಬೇಕು. ಹೆಚ್ಚು ನೀರನ್ನು ಕುಡಿಯಬೇಕು. ದೇಹಕ್ಕೆ ಉಷ್ಣ ಆದಾಗ, ನಿರ್ಜಲೀಕರಣವಾದಾಗ ಮತ್ತು ರಕ್ತವಾಂತಿಯಾದಾಗ ಡಾಕ್ಟರನ್ನು ಕೂಡಲೇ ಕಂಡು ಸಮರ್ಪಕ ಚಿಕಿತ್ಸೆ ಪಡೆಯಿರಿ.

ಅಸಹ್ಯಕರ ವಾಸನೆಯನ್ನು ವಿಸರ್ಜಿಸುವುದು

ಅಸಹ್ಯಕರ ವಾಸನೆಯನ್ನು ವಿಸರ್ಜಿಸುವುದು

ಅಸಹ್ಯಕರ ವಾಸನೆಯ ವಿಸರ್ಜನೆಯು ಕೆಲವು ಗರ್ಭಿಣಿ ಸ್ತ್ರೀಯರಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಸ್ವಲ್ಪ ವಿಚಿತ್ರ ರೀತಿಯ ಸೋಂಕು. ಅಲ್ಲದೆ ಇದು ಅಪಾಯಕಾರೀ ಮತ್ತು ದೀರ್ಘಕಾಲಿಕ ಚಿಕಿತ್ಸೆಯನ್ನು ಬಯಸುವ ಸೋಂಕು. ಈ ಸ್ಥಿತಿಯನ್ನು ಕೋರಿಯೋ ಆಮ್ನಿಯೋನಿಟಿಸ್ ಎಂದು ಕರೆಯುತ್ತಾರೆ. ಗರ್ಭದಲ್ಲಿರುವ ಆಮ್ನಿಯೋಟಿಕ ದ್ರವದ ಮೇಲೆ ಬ್ಯಾಕ್ಟೀರಿಯಾಗಳು ಸೋಂಕನ್ನು ಹರಡುತ್ತವೆ. ಈ ಕಾರಣಾದಿಂದಾಗಿ ಗರ್ಭದಿಂದ ಒಂದು ಬಗೆಯ ಅಸಹ್ಯಕರವಾದ ವಾಸನೆ ಹೊರಬರುವ ಸಮಸ್ಯೆ ಕಂಡು ಬರುತ್ತದೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಎದೆಬಡಿತದ ಹೆಚ್ಚಳ, ಗರ್ಭಕೋಶದಲ್ಲಿ ನೋವು, ಯೋನಿಯ ಸೋರುವಿಕೆ, ಜ್ವರ, ಉರಿ ಮತ್ತು ಬೆವರುವುದು. ಗರ್ಭಾವಸ್ಥೆಯ ಪುರ್ವಾವಧಿಗಳಲ್ಲಿಯೇ ಈ ಸಮಸ್ಯೆ ಕಂಡುಬಂದರೆ ಅರ್ಲಿ ಸಿ-ಸೆಕ್ಷನ್ ಡೆಲಿವರಿಗೆ ಡಾಕ್ಟರ್ ಸೂಚಿಸುತ್ತಾರೆ. ಪ್ರಸವದ ನಂತರವೂ ಸಹ ದೀರ್ಘಕಾಲದ ವರೆಗೆ ಆಂಟಿಬಯೋಟಿಕ್ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ.

ಲಿಸ್ಟಿರೋಯೋಸೀಸ್

ಲಿಸ್ಟಿರೋಯೋಸೀಸ್

ಇದು ಫ್ಲೂ ರೂಪದ ಒಂದು ಜ್ವರವಾಗಿದೆ. ಇದು ಕಲುಷಿತವಾದ ಆಹಾರ ಸೇವನೆ ಮತ್ತು ಕಲುಷಿತ ನೀರಿನಿಂದ ಬರುವಂತದ್ದು. ಇದರ ಗುಣಲಕ್ಷಣಗಳೆಂದರೆ ಡೈಯೇರಿಯಾ, ಮೈ-ಕೈ ನೋವು, ಕುತ್ತಿಗೆ ನೋವು, ಜ್ವರ, ಸೆಳೆತ, ತಲೆನೋವು ಮತ್ತು ವಾಕರಿಕೆ. ಇದು ಕೂಡ ತುಂಬಾ ಅಪಾಯಕಾರಿಯಾದ ಸಮಸ್ಯೆಯಾಗಿದ್ದು ಅವಧಿಗೆ ಮುನ್ನವೇ ಪ್ರಸವ, ಗರ್ಭಪಾತ, ಗರ್ಭದಲ್ಲಿಯೇ ಮಗುವಿನ ಪ್ರಾಣಕ್ಕೆ ಕುತ್ತು ತರುವಂತದ್ದಾಗಿದೆ.

ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

ಸ್ವಚ್ಛವಿಲ್ಲದ ಮತ್ತು ಕಲುಷಿತ ವಾತಾವರಣದಲ್ಲಿರುವ ಆಹಾರಗಳನ್ನು ಸೇವಿಸಬಾರದು. ಬೇಯಿಸದ ಅಥವಾ ಅರೆಬೆಂದ ಆಹಾರಗಳನ್ನು ಯಾವುದೇ ಕಾರಣಕ್ಕೂ ಬಳಸದೇ ಇರುವುದು. ಬೆಂಕಿಯಲ್ಲಿ ಸುಟ್ಟು ಹಾಗೂ ಹೊಗೆಯಲ್ಲಿ ತಯಾರಿಸುವ ಸಮುದ್ರಾಹಾರಗಳು ಮತ್ತು ಮಾಂಸಗಳನ್ನು ಉಪಯೋಗಿಸಲೇ ಬಾರದು. ಪಾಶ್ಚರೀಕರಿಸಿರದ ಹಾಲುಗಳೂ ಈ ಅಪಾಯಕ್ಕೆ ಕಾರಣವಾಗುವುದರಿಂದ ಪಾಶ್ಚರೀಕರಿಸಿದ ಹಾಲನ್ನೇ ಸೇವಿಸುವುದು ಒಳ್ಳೆಯದು.

ಗರ್ಭದೊಳಗಿರುವ ಮಗುವಿನ ಮೇಲೆ ಜ್ವರದ ಪರಿಣಾಮ

ಗರ್ಭದೊಳಗಿರುವ ಮಗುವಿನ ಮೇಲೆ ಜ್ವರದ ಪರಿಣಾಮ

ಸಣ್ಣ ಪ್ರಮಾಣದ ಜ್ವರವಿದ್ದಾಗ ಮಗುವಿನ ಬೆಳವಣಿಗೆಗೆ ಯಾವುದೇ ಪರಿಣಾಮವನ್ನುಂಟುಮಾಡುವುದಿಲ್ಲ. ಆದರೆ ಹೆಚ್ಚಿನ ಜ್ವರವಿದ್ದು ದೇಹದ ಉಷ್ಣತೆ ಹೆಚ್ಚಿದಾಗ ಮಗುವಿನ ಬೆಳವಣಿಗೆಗೆ ಬೇಕಾದ ಪ್ರೋಟೀನುಗಳ ಅದು ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಎಲ್ಲಾ ಪೋಷಕಾಂಶಗಳು ಮಗುವಿಗೆ ತಾಯಿಯಿಂದಲೇ ತಲುಪುವ ಕಾರಣ ಗರ್ಭಿಣಿಯರಿಗೆ ಜ್ವರ ಬಂದಾಗ ಅದು ಮಗುವಿನ ಮೇಲೆ ನೇರವಾದ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ. ಗರ್ಭಾವಸ್ಥೆಯ ಮೊದಲ ಹಂತದಲ್ಲೇ ಈ ಬಗೆಯ ತೀವ್ರ ಜ್ವರಕ್ಕೊಳಗಾದಾಗ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಇದು ಮಗುವಿಗೆ ಹುಟ್ಟಿನಿಂದಲೇ ಬರುವ ಸೀಳುತುಟಿ ಮತ್ತು ಸೀಳುಬಿಟ್ಟ ಬಾಯಿಯ ಅಂಚುಗಳಿಗೆ ಕಾರಣವಾಗುತ್ತದೆ. ಅಂದರೆ ಇದು ಅಂಗ ನ್ಯೂನತೆಗೂ ಕಾರಣವಾಗುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಇದರಿಂದ ಜ್ವರವನ್ನು ಕಡಿಮೆಯಾಗುವುದರ ಜೊತೆಗೆ ಮಗುವಿಗೆ ಯಾವುದೇ ಅಪಾಯವಾಗದಂತೆ ತಡೆಯಬಹುದಾಗಿದೆ.

ಗರ್ಭಾವಸ್ಥೆಯ ನಾಲ್ಕರಿಂದ ಆರನೇ ತಿಂಗಳಲ್ಲಿ ಈ ಜ್ವರಗಳಿಂದ ಮಗುವಿಗೆ ತೀವ್ರವಾದ ತೊಂದರೆಯಾಗದು. ಮತ್ತು ಕೊನೆಯ ಮೂರು ತಿಂಗಳಿನಲ್ಲಿ ಅಂದರೆ ಆರರಿಂದ ಒಂಬತ್ತನೇ ತಿಂಗಳ ಅವಧಿಯಲ್ಲಿ ಈ ಜ್ವರ ಮಗುವಿನ ಅಂಗಾಂಗಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಆದರೆ ಇದು ಅವಧಿಪೂರ್ವ ಪ್ರಸವ ಹಾಗೂ ಇನ್ನಿತರ ಪ್ರಸವ ತೊಂದರೆಗೆ ಕಾರಣವಾಗುವ ಸಾಧ್ಯತೆಯಿದೆ.

ಜ್ವರದ ಪ್ರಮಾಣವನ್ನು ಮನೆಯಲ್ಲಿಯೇ ಕಡಿಮೆ ಮಾಡುವಂತಹ ಬಗೆಗಳಾವುವು?

ಜ್ವರದ ಪ್ರಮಾಣವನ್ನು ಮನೆಯಲ್ಲಿಯೇ ಕಡಿಮೆ ಮಾಡುವಂತಹ ಬಗೆಗಳಾವುವು?

ಜ್ವರ ಎಂದಾಕ್ಷಣ ಭಯ ಉಂಟಾಗುವುದು ಸಹಜವೇ. ತೀರಾ ಇತ್ತೀಚಿನ ದಿನಗಳಲ್ಲಂತೂ ಸಾಧಾರಾಣ ಶೀತವನ್ನೂ ಅಲಕ್ಷ ಮಾಡುವಂತಿಲ್ಲ. ಅದರಲ್ಲೂ ಗರ್ಭಿಣಿ ಮಹಿಳೆಯರು ತುಂಬಾ ಜಗರೂಕರಾಗಿರ ಬೇಕಾದ ಅವಶ್ಯಕತೆಯಿದೆ. ಆದರೆ ಶೀತ-ಜ್ವರಗಳಿಂದಾಗಿ ಪದೇಪದೇ ಆಸ್ಪತ್ರೆಗೆ ಹೋಗುವುದೂ ಉಚಿತವಲ್ಲ. ಯಾಕೆಂದರೆ ಆಸ್ಪತ್ರೆಯ ಪರಿಸರದಲ್ಲಿ ಎಲ್ಲಾ ಬಗೆಯ ಸಾಂಕ್ರಾಮಿಕ ರೋಗಗಳಿಗೆ ತುತ್ತಾದವರು ವೈದ್ಯರ ಬಳಿ ಬರುತ್ತಾರಾದ್ದರಿಂದ ಅವರಿಂದ ಗರ್ಭಿಣಿಯರಿಗೆ ಸೋಂಕು ಹರಡಬಾರದೆಂದೇನಿಲ್ಲ. ಹಾಗಾಗಿ ಆದಷ್ಟು ಮನೆಯಲ್ಲಿಯೇ ಇದ್ದುಕೊಂಡು ಜ್ವರವನ್ನು ನಿಯಂತ್ರಿಸುವುದು ಸೂಕ್ತ. ನಿಮ್ಮ ಜ್ವರದ ತೀವ್ರತೆಯು ಅಪಯಕಾರಿ ಮಟ್ಟದಲ್ಲಿಲ್ಲ ಎಂಬುದನ್ನು ವೈದ್ಯರು ಖಚಿತ ಪಡಿಸಿದ ನಂತರ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ನಿಮ್ಮ ಜ್ವರದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಆದಷ್ಟು ಹೊತ್ತು ತೆರೆದ ವಾತಾವರಣದಲ್ಲಿಯೇ ಇರಿ.

ಆದಷ್ಟು ಹೊತ್ತು ತೆರೆದ ವಾತಾವರಣದಲ್ಲಿಯೇ ಇರಿ.

ಉತ್ತಮವಾದ ಗಾಳಿ-ಬೆಳಕು ಆಡುವ ಸ್ಥಳದಲ್ಲಿರಿ ಮತ್ತು ಅತೀ ಉಷ್ಣ ಅಥವಾ ಅತೀ ಕಡಿಮೆ ಉಷ್ಣವಿರದ ಪ್ರದೇಶ ಅಂದರೆ ಸಮ ಉಷ್ಣವಿರುವಲ್ಲಿಯೇ ವಾಸಮಾಡಿ. ಕೋಣೆಯಲ್ಲಿ ಗಾಳಿ ಓಡಾಡುತ್ತಿರಲಿ. ಅದಕ್ಕೆ ಸಾಕಷ್ಟು ಫ್ಯಾನನ್ನು ಬಳಸಿ.

ಆರಾಮದಾಯಕವಾದ ಬಟ್ಟೆಗಳ ಬಳಕೆ

ಆರಾಮದಾಯಕವಾದ ಬಟ್ಟೆಗಳ ಬಳಕೆ

ಕಾಟನ್ ಬಟ್ಟೆಗಳು ಉಷ್ಣತೆಗನುಗುಣವಾಗಿ ವರ್ತಿಸುವುದರಿಂದ ಗರ್ಭಿಣಿಯರು ಇವನ್ನು ಬಳಸುವುದು ಸೂಕ್ತ. ಗಾಳಿಯಾಡುವಂತಹ ಬಟ್ಟೆಗಳನ್ನೇ ಬಳಸಿ. ಚಳಿಯಾದಂತಹ ಸಂದರ್ಭಗಳಲ್ಲಿ ಹಗುರವಾದ ಬೆಚ್ಚಗಿನ ಬಟ್ಟೆಗಳನ್ನ ಬಳಸಿ.

ಸ್ಪೋಂಜ್ ಬಾತ್

ಸ್ಪೋಂಜ್ ಬಾತ್

ಜ್ವರವಿದ್ದ ಸಂದರ್ಭದಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ. ಆಗ ಸ್ಪೋಂಜ್ ಬಳಸಿ ಬೆಚ್ಚಗಿನ ನೀರಿನಲ್ಲಿ ದೇಹವನ್ನು ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ನಿಮ್ಮ ದೇಹದ ಉಷ್ಣತೆ ಸ್ವಲ್ಪ ಮಟ್ಟಿಗೆ ತಗ್ಗುತ್ತದೆ. ನೀವು ಬಳಸುವಂತಹ ನೀರು ಹೆಚ್ಚು ತಣ್ಣಗಿರಬಾರದು.

ನಿರ್ಜಲತ್ವದಿಂದ ದೂರವಿರಿ

ನಿರ್ಜಲತ್ವದಿಂದ ದೂರವಿರಿ

ಮನುಷ್ಯನಿಗೆ ಎಷ್ಟು ನೀರು ಸೇವಿಸಿದರೂ ಸಾಲದು. ಗರ್ಭಾವಸ್ಥೆಯಲ್ಲಂತೂ ಇನ್ನೂ ಹೆಚ್ಚಿನ ನೀರು ಬೇಕು. ಅದರಲ್ಲೂ ಜ್ವರವಿದ್ದಾಗ ಇನ್ನಷ್ಟು ಹೆಚ್ಚು ನೀರನ್ನು ಸೇವಿಸುವುದು ಸುರಕ್ಷಿತ. ಹೆಚ್ಚುಹೆಚ್ಚು ದ್ರವಪದಾರ್ಧಗಳನ್ನು ಸೇವಿಸಿರಿ. ಅಂದರೆ ಜ್ಯೂಸ್, ನೀರು, ಸೂಪ್ ಮೊದಲಾದವನ್ನು ಸೇವಿಸಿ. ಸೋಡಾ ಅಥವಾ ಕಾರ್ಬೋನೇಟೇಡ್ ನೀರನ್ನು ಕುಡಿಯುವುದು ಈ ಸಮಯದಲ್ಲಿ ಸೂಕ್ತವಲ್ಲ. ಲಿಂಬೂ ಜ್ಯೂಸ್ ಮತ್ತು ಇನ್ನಿತರ ಸಿಟ್ರಸ್ ಫ್ರೂಟ್ ಗಳಿಂದ ತಯಾರಿಸಿದಂತಹ ಜ್ಯೂಸುಗಳು ದೇಹದ ಉಷ್ಣತೆ ಕಡಿಮೆಗೊಳಿಸುವುದಷ್ಟೇ ಅಲ್ಲದೆ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.

ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ

ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ

ಗರ್ಭಿಣಿಯರು ಜ್ವರದಿಂದ ಬಳಲುತ್ತಿದ್ದರೆ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾದುದು ತುಂಬಾ ಆವಶ್ಯಕ. ಯಾಕೆಂದರೆ ಇದು ಕಳೆದುಕೊಂಡ ಶಕ್ತಿಯನ್ನು ಪಡೆಯಲು ಅಥವಾ ನಿಶ್ಯಕ್ತಿಯಿಂದ ಹೊರಬರಲು, ವಾಕರಿಕೆ ಹಾಗೂ ತಲೆಸುತ್ತಿವಿಕೆಯಿಂದ ಬೀಳುವುದನ್ನು ತಪ್ಪಿಸುತ್ತದೆ.

ಹಾಟ್ ಅಥವಾ ಕೋಲ್ಡ ಪ್ಯಾಕುಗಳನ್ನು ಬಳಸಿ

ಹಾಟ್ ಅಥವಾ ಕೋಲ್ಡ ಪ್ಯಾಕುಗಳನ್ನು ಬಳಸಿ

ಹಾಟ್ ಅಥವಾ ಕೋಲ್ಡ ಪ್ಯಾಕುಗಳನ್ನು ಪೇಟೆಯಿಂದ ತರಬಹುದು. ಅಥವಾ ಮನೆಯಲ್ಲಿಯೇ ಇವೆರಡನ್ನು ಸ್ವತಃ ತಯಾರಿಸಿ ಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಹಾಟ್ ಪ್ಯಾಕ್ ಅನ್ನು ಬಳಸುವ ಮೊದಲು ಅದರ ಉಷ್ಣತೆಯನ್ನು ಪರೀಕ್ಷಿಸಿಕೊಳ್ಳಿ. ಕೋಲ್ಡ್ ಪ್ಯಾಕ್ ಬಳಸುವ ಮೊದಲು ಅದಕ್ಕೆ ಬಟ್ಟೆಯನ್ನು ಸುತ್ತಿ ಹಣೆಗೆ ಇರಿಸಿಕೊಳ್ಳಿ. ನೇರವಾಗಿ ಬಳಸುವುದರಿಂದ ಸುಟ್ಟ ಅನುಭವವಾಗುತ್ತದೆ.

Read more about: pregnancy parenting
English summary

Dealing with fever when pregnant

Fever will seem like simple issue that can be solved with a few days of rest and some medications to a normal person. But when you are pregnant and have a baby developing inside of you, even the smallest illness can pose a grave danger. You can have fevers due to many reasons. Sometimes, the cause of the fever can be minor and may be treated with some rest and good old home remedies. So today, we shall discuss the reasons behind the development of fever during pregnancy. We will also talk about the ways that fevers can be treated during pregnancy.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more