For Quick Alerts
ALLOW NOTIFICATIONS  
For Daily Alerts

ಅನಿರೀಕ್ಷಿತ ಗರ್ಭಧಾರಣೆಯನ್ನು ನಿರ್ವಹಿಸುವುದು ಹೇಗೆ?

By Divya Pandith
|

ಮಹಿಳೆಯರಿಗೆ ಗರ್ಭಿಣಿಯಾಗುವುದು ಎಂದರೆ ಅದೊಂದು ಸುಂದರವಾದ ಭಾವನೆ. ಈ ಸುಂದರವಾದ ಭಾವನೆಯು ನಿರೀಕ್ಷೆಗೆ ಅನುಗುಣವಾಗಿ ಇದ್ದರೆ ಅದರ ಖುಷಿಯು ಇಮ್ಮಡಿಯಾಗಿರುತ್ತವೆ. ಅದೇ ಅನಿರೀಕ್ಷಿತವಾಗಿ ಒದಗಿ ಬರುವ ಕೆಲವು ವಿಚಾರಗಳು ಸಂತೋಷಕ್ಕಿಂತ ಹೆಚ್ಚು ಆತಂಕವನ್ನು ಸೃಷ್ಟಿಸುತ್ತದೆ. ಗರ್ಭಧಾರಣೆಯು ಕೆಲವು ಮಹಿಳೆಯರಿಗೆ ಅನಿರೀಕ್ಷಿತವಾಗಿ ಉಂಟಾಗುವ ಸಾಧ್ಯತೆಗಳಿರುತ್ತವೆ. ಅಂತಹ ಸಮಯದಲ್ಲಿ ಮಹಿಳೆ ಆತಂಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಅನಿರೀಕ್ಷಿತವಾಗಿ ಉಂಟಾದ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಿಗೆ ಕೆಲವು ತಿಳುವಳಿಕೆ ಹಾಗೂ ಸಾಂತ್ವನದ ಅಗತ್ಯವಿರುತ್ತದೆ. ಅಂತಹ ಸಾಂತ್ವನಗಳನ್ನು ಹೇಗೆ ತಂದುಕೊಳ್ಳಬೇಕು? ಮಾನಸಿಕವಾಗಿ ಯಾವ ಬಗೆಯ ಧೈರ್ಯ ಹೊಂದಬೇಕು? ನಿತ್ಯದ ಕೆಲಸದಲ್ಲಿ ಹಾಗೂ ವೃತ್ತಿಜೀವನಕ್ಕೆ ಹೇಗೆ ಸಂಯೋಜಿತವಾಗಬೇಕು ಎನ್ನುವದರ ಬಗ್ಗೆ ಬೋಲ್ಡ್ ಸ್ಕೈ ಕೆಲವು ಸಲಹೆಗಳನ್ನು ಸೂಕ್ತ ರೀತಿಯಲ್ಲಿ ಈ ಮುಂದೆ ವಿವರಿಸಿದೆ...

deal-with-unplanned-pregnancy

ಭಾವನಾತ್ಮಕವಾಗಿ ಆರೋಗ್ಯವಾಗಿರಿ
ಅನಿರೀಕ್ಷಿತವಾಗಿ ತಾಯಿಯಾದಾಗ ವಿವಿಧ ಬಗೆಯ ಭಾವನೆಗಳು ಕಾಡುವುದು ಸಹಜ. ಹಾಗಂತ ಅದನ್ನು ಬೇರೆಯಾರೂ ನಿಭಾಯಿಸಲು ಸಾಧ್ಯವಿಲ್ಲ. ನೀವೇ ಅವುಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಬೇಕು. ನೀವು ಕುಟುಂಬದವರೊಂದಿಗೆ ಹಾಗೂ ಸ್ನೇಹಿತರ ಬಳಗದಲ್ಲಿ ಸೌಹಾರ್ದಯುತವಾದ ಸಂಬಂಧ ಹೊಂದುವುದು ಸೂಕ್ತ. ಇದು ನಿಮ್ಮ ಸ್ಥಿತಿಯ ಮಾನಸಿಕ ಒತ್ತಡವನ್ನು ಸುಧಾರಿಸುತ್ತದೆ.

ನಿಮ್ಮ ವೇಳಾ ಪಟ್ಟಿಯನ್ನು ಬದಲಿಸಿ
ಗರ್ಭಿಣಿಯಾಗಿರುವುದರಿಂದ ನಿಮ್ಮ ನಿತ್ಯದ ಕೆಲಸ ಕಾರ್ಯಗಳಲ್ಲಿ ಕೊಂಚ ಬದಲಾವಣೆ ಉಂಟಾಗುವುದು.ಹಾಗಾಗಿ ಅದಕ್ಕನುಗುಣವಾಗಿ ಸೂಕ್ತ ರೀತಿಯ ವೇಳಾಪಟ್ಟಿಯನ್ನು ನಿರ್ಮಿಸಿ. ಹಾಗೆಯೇ ಸ್ವಲ್ಪ ಆರೈಕೆಯ ವಿಧಾನಕ್ಕಾಗಿ ಸಮಯವನ್ನು ಮೀಸಲಿಡಿ.

ವೈದ್ಯಕೀಯ ಸಲಹೆಯನ್ನು ಪಡೆಯಿರಿ
ನಿಮ್ಮ ಮಗುವಿನ ಆರೋಗ್ಯದ ಬೆಳವಣಿಗೆಯ ಕುರಿತು ವೈದ್ಯರಲ್ಲಿ ಚರ್ಚಿಸಿ. ಗರ್ಭಪಾತದ ಇತಿಹಾಸ ಹೊಂದಿದ್ದರೆ ಅಥವಾ ಇನ್ಯಾವುದೇ ಆರೋಗ್ಯ ಸಮಸ್ಯೆ ಹೊಂದಿದ್ದರೂ ಸಹ ವೈದ್ಯರಲ್ಲಿ ಸೂಕ್ತ ಸಲಹೆ ಪಡೆದುಕೊಳ್ಳುವುದು ಒಳಿತು.

ಗರ್ಭಧಾರಣೆಯ ಪೋಷಣೆ
ನಿಮ್ಮ ಆತ್ಮೀಯ ವ್ಯಕ್ತಿಗಳೊಂದಿಗೆ ನಿಮ್ಮ ಆಶ್ಚರ್ಯವನ್ನು ಹಂಚಿಕೊಳ್ಳಲು ಕೆಲವು ಸೃಜನಾತ್ಮಕ ಕಲ್ಪನೆಗಳನ್ನು ಕಂಡುಹಿಡಿಯಲು ಪ್ರಯತ್ನಿಸಿ. ತುಂಬಾ ಗಂಭೀರವಾಗಿ ತೆಗೆದುಕೊಳ್ಳುವ ಬದಲು ನಿಮ್ಮ ಸ್ಥಿತಿಯ ಕುರಿತು ಆನಂದಿಸಿ.

ಆರ್ಥಿಕವಾಗಿ ಸ್ಥಿರವಾಗಿರಿ
ನಿಮ್ಮ ಕಳವಳಗಳು ಕೇವಲ ಹಣಕಾಸಿನ ವಿಷಯವಾಗಿದ್ದರೆ, ಖರ್ಚು ಕಡಿಮೆ ಮಾಡಲು ಮತ್ತು ಉಳಿತಾಯದ ಆಯ್ಕೆಯನ್ನು ಕಂಡುಕೊಳ್ಳಿ. ಕ್ರೆಡಿಟ್ ಕಾರ್ಡ್‍ಗಳು ವಿಮೆ ಅಥವಾ ಇನ್ನಿತರ ಉಳಿತಾಯ ಯೋಜನೆಯನ್ನು ಅನುಸರಿಸಿ.

ಸಂಗಾತಿಯೊಂದಿಗೆ ಚರ್ಚಿಸಿ
ನಿಮ್ಮ ಕಾಳಜಿ ಮತ್ತು ಮಗುವಿನ ವಿಷಯದ ಕುರಿತು ಸಂಗಾತಿಯೊಂದಿಗೆ ಚರ್ಚಿಸಿ. ನಿಮ್ಮ ಎಲ್ಲಾ ಭಾವನೆಯನ್ನು ನಿಮ್ಮ ಸಂಗಾತಿಗೆ ತಿಳಿಸಿ ಹಾಗೂ ಸೂಕ್ತ ಭಾವನೆಯನ್ನು ಹೊಂದಿ.

ನಿಮ್ಮ ಕೆಲಸದ ವಿಚಾರ
ನಿಮ್ಮ ಗರ್ಭಧಾರಣೆಯ ವಿಳಂಬವು ನಿಮ್ಮ ಕೆಲಸದ ಕಾರಣವಾಗಿದ್ದರೆ, ಗರ್ಭಧಾರಣೆಯ ಜೊತೆ ಕೆಲಸದ ನಿರ್ವಹಣೆ ಹೇಗೆ ಎನ್ನುವುದನ್ನು ಸೂಕ್ತ ಸಲಹೆ ಹಾಗೂ ನಿರ್ಧಾರದ ಮೂಲಕ ಕಾರ್ಯನಿರ್ವಹಿಸಿ. ಆಗ ಅದು ನಿಮಗೆ ಹೆಚ್ಚು ಮಾನಸಿಕ ಒತ್ತಡವನ್ನು ಉಂಟುಮಾಡದು.

English summary

deal-with-unplanned-pregnancy

Try to deal with issues and gain a sense of control over this experience. It may not have been planned, but everything you do from..this point onwards can be well-planned. Dealing with an unplanned pregnancy is not that difficult, if you are smart enough to plan for becoming a new mother. You may consider these tips for making your unexpected pregnancy, an exciting experience.
X
Desktop Bottom Promotion