For Quick Alerts
ALLOW NOTIFICATIONS  
For Daily Alerts

ಗರ್ಭದಲ್ಲಿರುವ ಮಗು ಗಂಡಾ – ಹೆಣ್ಣಾ ಹೇಗೆ ನಿರ್ಧಾರವಾಗುತ್ತೆ?

By Sushma Charhra
|

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಗು ಗರ್ಭದಲ್ಲಿರುವಾಗ ಆ ಮಗುವಿನ ಬಗ್ಗೆ ಪ್ರತಿಯೊಂದು ಸಣ್ಣ ಮಾಹಿತಿಯನ್ನೂ ಪಡೆದುಕೊಳ್ಳಬೇಕು ಎಂಬ ಕುತೂಹಲವಿರುತ್ತದೆ. ಮೊದಲ ಬಾರಿ ತಮ್ಮ ಮಗುವಿನ ಹೃದಯ ಬಡಿತ ಕೇಳಿಸಿಕೊಂಡಾಗ ಅದೆಷ್ಟೋ ಪೋಷಕರಲ್ಲಿ ಆನಂದಬಾಷ್ಪ ಖಂಡಿತ ಸುರಿಯುತ್ತೆ. ಭ್ರೂಣದ ಆರೋಗ್ಯದಿಂದ ಹಿಡಿದು, ಮಗುವಿನ ಒಟ್ಟಾರೆ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ.

ಹಿಂದೆಲ್ಲ ಇದಕ್ಕೆ ಅವಕಾಶವಿರಲಿಲ್ಲ.ಆದರೆ ಈಗ ತಂತ್ರಜ್ಞಾನ ಬಹಳ ಮುಂದುವರಿದಿದೆ. ಮಗುವಿನ ಪ್ರತಿ ಅಂಗವನ್ನು ಅದು ಗರ್ಭದಲ್ಲಿರುವಾಗಲೇ ತಿಳಿದುಕೊಳ್ಳವ ಅವಕಾಶಗಳಿದ್ದು, ಆ ಮಗುವಿನ ಆರೋಗ್ಯವನ್ನು ಅಗತ್ಯಬಿದ್ದರೆ ಪ್ರತಿದಿನವೂ ಪರೀಕ್ಷಿಸಿಕೊಳ್ಳಬಹುದು. ಹಾಗಾಗಿ ಮಗು ಹೇಗಿದೆ, ಅದರ ಮುಖ, ಕಾಲು, ಕೈ, ಹೃದಯ, ಕಿಡ್ನಿ, ಹೀಗೆ ಪ್ರತಿಯೊಂದನ್ನು 3ಡಿ ಸ್ಕ್ಯಾನಿಂಗ್ ಮೂಲಕ ತಿಳಿಯಬಹುದು. ಇದರ ಜೊತೆಗೆ ನಿಮಗೆ ಯಾವ ಮಗು ಹುಟ್ಟಲಿದೆ ಎಂಬ ವಿಚಾರವನ್ನೂ ಕೂಡ ಮಗು ಗರ್ಭದಲ್ಲಿರುವಾಗಲೇ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ.

How Genetics Determine Your Babys Gender

ಹೆಚ್ಚಿನ ಪೋಷಕರಿಗೆ ಮಗುವಿನ ಲಿಂಗದ ಬಗ್ಗೆ ಕುತೂಹಲವಿರುತ್ತದೆ. ಆದರೆ ಭಾರತದಲ್ಲಿ ಯಾವುದೇ ವೈದ್ಯರಿಗೂ ಕೂಡ ಲಿಂಗದ ಮಾಹಿತಿಯನ್ನು ಪೋಷಕರಿಗೆ ತಿಳಿಸುವ ಅವಕಾಶವಿಲ್ಲ. ಹೆಣ್ಣು ಭ್ರೂಣ ಹತ್ಯೆ ಭಾರತದಲ್ಲಿ ಅಧಿಕಗೊಂಡ ಹಿನ್ನೆಲೆಯಲ್ಲಿ ಈ ಕಾನೂನನ್ನು ಜಾರಿಗೆ ತರಲಾಗಿದೆ. ಅನೇಕ ದೇಶಗಳಲ್ಲಿ ಈ ಕಾನೂನು ಇದ್ದರೂ ಕೂಡ , ವಿಶ್ವದ ಕೆಲವು ದೇಶಗಳಲ್ಲಿ ಪೋಷಕರು ಇಚ್ಛಿಸಿದಲ್ಲಿ ಮಗು ಗರ್ಭದಲ್ಲಿರುವಾಗಲೇ ವೈದ್ಯರು ಮಗುವಿನ ಲಿಂಗ ಪರೀಕ್ಷೆ ಮಾಡಿ ಅದನ್ನು ಪೋಷಕರಿಗೆ ತಿಳಿಸುತ್ತಾರೆ.

ಮಗುವಿನ ಲಿಂಗವು ಯಾವ ಆಧಾರದಲ್ಲಿ ಸೃಷ್ಟಿಯಾಗುತ್ತದೆ. ದೇವರ ಸೃಷ್ಟಿ ಎಂದು ಹೇಳುವುದು ಹಳೆಯ ಕಾಲವಾಯಿತು. ಈಗ ವಿಜ್ಞಾನ ಸಾಕಷ್ಟು ಮುಂದುವರಿದಿದ್ದು, ಯಾವಾಗ ಮಗು ಗಂಡಾಗುತ್ತದೆ, ಯಾವಾಗ ಹೆಣ್ಣಾಗುತ್ತದೆ ಎಂಬ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ವೈದ್ಯ ಲೋಕ ಹೊರಹಾಕಿದೆ. ನಿಮಗೆ ಹೇಗೆ ಗಂಡು ಅಥವಾ ಹೆಣ್ಣು ಮಗು ಜನಿಸುತ್ತದೆ ಎಂಬ ಬಗ್ಗೆ ತಿಳಿದಿದೆಯಾ? ಒಂದು ವೇಳೆ ತಿಳಿಯದೇ ಇದ್ದಲ್ಲಿ ಈ ಲೇಖನ ನೀವು ಓದಲೇಬೇಕು.

ನಿಮ್ಮ ವಂಶವಾಹಿಯು ಹೇಗೆ ಮಗುವಿನ ಲಿಂಗವನ್ನು ನಿರ್ಧಾರ ಮಾಡುತ್ತದೆ? ಪೋಷಕರ ಯಾವ ಅಂಶವು ಮಗುವು ಗಂಡು ಅಥವಾ ಹೆಣ್ಣಾಗಿ ಹುಟ್ಟಲು ಕಾರಣವಾಗುತ್ತದೆ. ಖಂಡಿತ ಈ ಸೂಕ್ಷ್ಮ ವಿಚಾರವನ್ನು ತಿಳಿದುಕೊಳ್ಳುವುದಕ್ಕೆ ಹೆಚ್ಚಿನವರು ಕುತೂಹಲರಾಗಿರುತ್ತಾರೆ. ಆ ಬಗೆಗೆ ಕೆಲವು ಪ್ರಮುಖ ಮಾಹಿತಿಗಳನ್ನು ಈ ಲೇಖನವು ಒಳಗೊಂಡಿದೆ.

ಕಾನ್ಸೆಪ್ಶನ್ ನ ಸಂದರ್ಭದಲ್ಲಿಯೇ ಮಗುವಿನ ಲಿಂಗವು ನಿರ್ಧಾರವಾಗಿ ಬಿಡುತ್ತದೆ

ಕಾನ್ಸೆಪ್ಶನ್ ನ ಸಂದರ್ಭದಲ್ಲಿಯೇ ಮಗುವಿನ ಲಿಂಗವು ನಿರ್ಧಾರವಾಗಿ ಬಿಡುತ್ತದೆ

*ಕಾನ್ಸೆಪ್ಶನ್ ನ ಸಂದರ್ಭದಲ್ಲಿಯೇ ಮಗುವಿನ ಲಿಂಗವು ತಂದೆಯ ವೀರ್ಯದಲ್ಲಿನ ಒಂದು ವರ್ಣತಂತುವು ಎಕ್ಸ್ ಅಥವಾ ವೈ ನಿರ್ಧರಿಸಿ ಬಿಡುತ್ತದೆ. ವೀರ್ಯಾಣು ಕೋಶವು ಮೊಟ್ಟೆಯನ್ನು ಫಲವತ್ತಾಗಿಸಿದಾಗ, ಅದರಲ್ಲಿರುವ ವರ್ಣತಂತುವು ಎಕ್ಸ್ ವರ್ಣತಂತುವಿನೊಂದಿಗೆ ಫ್ಯೂಸ್ ಆಗಿ ಮೊಟ್ಟೆಯು ಜೀವ ಪಡೆಯಲು ಕಾರಣವಾಗುತ್ತದೆ ಮತ್ತು ಇದೇ ಅಂಶವು ಮಗುವಿನ ಲಿಂಗವನ್ನು ನಿರ್ಧರಿಸುತ್ತದೆ.

X (ಮೊಟ್ಟೆಯ ಜೀವಕೋಶ) + X (ವೀರ್ಯ ಕೋಶ) = XX, ಅಂದರೆ ಹೆಣ್ಣು ಅಥವಾ X (ಮೊಟ್ಟೆಯ ಜೀವಕೋಶ) + Y (ವೀರ್ಯ ಕೋಶ) = XY, ಅಂದರೆ ಗಂಡು ನಿಜ ಹೇಳಬೇಕು ಅಂದರೆ, ಗಂಡು ಮತ್ತು ಹೆಣ್ಣು ಸೃಷ್ಟಿಯಾಗುವ ಸಾಧ್ಯತೆಯನ್ನು ಶೇಕಡಾ 50 ತಂದೆಯಿಂದ ಮತ್ತು ಇನ್ನುಳಿದ ಅರ್ಧ ಅಂಶ ತಾಯಿಯಿಂದ ಎಂದು ಪರಿಗಣಿಸಲಾಗುತ್ತದೆ. ಆದರೆ ಮೈಸ್ ನ ಅಧ್ಯಯನವೊಂದರ ಪ್ರಕಾರ, ವಂಶವಾಹಿಯ ಪ್ರಕಾರ ಪ್ರತಿ ಮಗುವೂ ಹೆಚ್ಚಾಗಿ ತಾಯಿಗಿಂತ ತಂದೆಯ ಸ್ವರೂಪವನ್ನು ಪಡೆದಿರುತ್ತವೆಯಂತೆ. ಅದಕ್ಕೆ ಕಾರಣ ತಂದೆಯಿಂದ ಮಗುವಿಗೆ ಸಿಗುವ ಡಿಎನ್ಎ, ತಾಯಿಯಿಂದ ಮಗುವಿಗೆ ಸಿಗುವ ಡಿಎನ್ಎ ಅಂಶಕ್ಕಿಂತ ಅಧಿಕವಾಗಿರುತ್ತದೆ. ಇದು ಪ್ರತಿಯೊಂದು ಜೀವಸಂಕುಲಕ್ಕೂ ಅನ್ವಯಿಸುತ್ತದೆಯಂತೆ ಅದರಲ್ಲಿ ಮಾನವನೂ ಸೇರಿದ್ದಾನೆ ಎಂಬುದು ಅಧ್ಯಯನದಿಂದ ಬಹಿರಂಗವಾಗಿರುವ ಅಂಶವಾಗಿದೆ.

ಲೈಂಗಿಕ ಅಭಿವೃದ್ಧಿ ಮತ್ತು ಭ್ರೂಣದ ವ್ಯತ್ಯಾಸ

ಲೈಂಗಿಕ ಅಭಿವೃದ್ಧಿ ಮತ್ತು ಭ್ರೂಣದ ವ್ಯತ್ಯಾಸ

ಪ್ರಗ್ನೆನ್ಸಿಯ ಎರಡನೇ ತಿಂಗಳಿನಿಂದ, ಅಂದರೆ ಹೆಚ್ಚು ಕಡಿಮೆ ಏಳು ಅಥವಾ ಎಂಟನೇ ವಾರದಿಂದ, ಭ್ರೂಣಕ್ಕೆ ಹೊರಭಾಗದ ಸೆಕ್ಸುವಲ್ ಅಂಗಾಂಶಗಳು ಬೆಳೆಯಲು ಆರಂಭವಾಗುತ್ತದೆ. ಅಲ್ಲಿವರೆಗೂ ಅದು ಕೇವಲ ನ್ಯೂಟ್ರಲ್ ಆಗಿರುತ್ತದೆ. ಅಂದರೆ ಅಲ್ಲಿಯವರೆಗೂ ಅದು ಗಂಡಾ ಹೆಣ್ಣಾ ನಿರ್ಧಾರವಾಗಿರುವುದಿಲ್ಲ.ಎರಡನೇ ತಿಂಗಳ ನಂತರ ಭ್ರೂಣವು ಹಾರ್ಮೋನುಗಳನ್ನು ಉತ್ಪತ್ತಿ ಮಾಡಲು ಶುರುವಾಗುತ್ತದೆ ಮತ್ತು ಅದೇ ಕಾರಣಕ್ಕೆ ಮಗುವಿನ ಸೆಕ್ಸುವಲ್ ಆರ್ಗನ್ ಗಳು ಬೆಳೆಯಲು ಪ್ರಾರಂಭವಾಗುತ್ತದೆ. ಅದನ್ನು ಸೆಕ್ಸುವಲ್ ಡೆವಲಪ್ ಮೆಂಟ್ ಅಥವಾ ಸೆಕ್ಸುವಲ್ ಡಿಫರೆನ್ಸಿಯೇಷನ್ ಎಂದು ಕರೆಯಲಾಗುತ್ತೆ.

ವಂಶದಿಂದ ವಂಶಕ್ಕೆ ವಂಶವಾಹಿಗಳು ಹೇಗೆ ಬೆರಸಿ ಬರುತ್ತದೆ ತಿಳಿದಿದೆಯಾ?

ವಂಶದಿಂದ ವಂಶಕ್ಕೆ ವಂಶವಾಹಿಗಳು ಹೇಗೆ ಬೆರಸಿ ಬರುತ್ತದೆ ತಿಳಿದಿದೆಯಾ?

ಎಸ್, ನೀವು ಸರಿಯಾಗಿಯೇ ಓದಿದ್ದೀರಿ. ಪ್ರತಿಯೊಂದು ಜನರೇಷನ್ ಹೆಚ್ಚಾಗುತ್ತಿದ್ದಂತೆ ವಂಶವಾಹಿಗಳು ಬೆರೆಸಿ ಬರಲು ಆರಂಭವಾಗುತ್ತದೆ. ಮಗುವಿನ ಹುಟ್ಟಿಗೆ ತಾಯಿಯ ಜೀನ್ಸ್ ಅರ್ಧ ಕಾರಣವಾದರೆ ಇನ್ನುಳಿದ 50 ಶೇಕಡಾ ಪ್ರಮಾಣವು ತಂದೆಯಿಂದ ಬರುತ್ತದೆ. ಅದೇ ರೀತಿ,ಪ್ರತಿಪೋಷಕರಿಗೂ ಕೂಡ ಅವರ ಪೋಷಕರಿಂದ ಜೀನ್ಸ್ ಬಂದಿರುತ್ತದೆ.ಅಂದರೆ ಒಂದು ಮಗುವಿನ ಜೀನ್ಸ್ ನಲ್ಲಿ ಕಾಲು ಭಾಗದಷ್ಟು ಅವರ ಅಜ್ಜ ಅಜ್ಜಿ ಬೆರೆತಿರುತ್ತಾರೆ.

ಕೌಟುಂಬಿಕ ಇತಿಹಾಸವನ್ನು ಗಮನಿಸಿ ಮಗುವಿನ ಲಿಂಗವನ್ನುಊಹಿಸಲು ಸಾಧ್ಯವಾಗುತ್ತದೆಯೇ?

ಕೌಟುಂಬಿಕ ಇತಿಹಾಸವನ್ನು ಗಮನಿಸಿ ಮಗುವಿನ ಲಿಂಗವನ್ನುಊಹಿಸಲು ಸಾಧ್ಯವಾಗುತ್ತದೆಯೇ?

ನ್ಯೂಕೆಸಲ್ ವಿಶ್ವವಿದ್ಯಾಲಯವೊಂದು ನಡೆಸಿದ ಅಧ್ಯಯನವು ಹಲವಾರು ಪೋಷಕರಿಗೆ ಅವರ ಮಗು ಹೆಣ್ಣಾಗಿರಲಿದೆಯಾ ಅಥವಾ ಗಂಡಾಗಿರಲಿದೆಯಾ ಎಂದು ನಿರೀಕ್ಷಿಸಲು ಸಹಾಯ ಮಾಡಿದೆ. ಈ ಅಧ್ಯಯನದ ಪ್ರಕಾರ ಒಬ್ಬ ಮನುಷ್ಯನಿಗೆ ಹೆಚ್ಚು ಸೋದರಿಯರಿದ್ದರೆ ಅವರಿಗೆ ಹೆಣ್ಣು , ಸಹೋದರರಿದ್ದರೆ ಗಂಡು ಮಗು ಆಗಲಿದೆಯಂತೆ. ಅಂದರೆ ಪೋಷಕರ ತಂದೆತಾಯಿಗೆ ಹೆಣ್ಣು ಮಗು ಹೆಚ್ಚಾಗಿದೆಯಾ ಅಥವಾ ಗಂಡು ಮಗು ಹೆಚ್ಚಾಗಿದೆಯಾ ಎಂಬುದರ ಆಧಾರದ ಮೇಲೆ ನಿಮಗೆ ಹೆಣ್ಣಾ, ಗಂಡಾ ಎಂದು ನಿರ್ಧರಿಸುವ ಒಂದು ಊಹೆಯ ಕ್ರಮ ಅಷ್ಟೇ.

ವಂಶವಾಹಿಯು ಮಗುವು ಗಂಡು ಅಥವಾ ಹೆಣ್ಣು ಎಂದು ನಿರ್ಧರಿಸುವುದು ಹೇಗೆ?

ವಂಶವಾಹಿಯು ಇಬ್ಬರೂ ಪೋಷಕರಿಂದ ಅನುವಂಶಿಕವಾಗಿ ಪಡೆಯಲ್ಪಡುತ್ತದೆ,ಇದು ಅಲೀಲ್ಸ್ ಎಂಬ ಎರಡು ಭಾಗಗಳನ್ನು ಒಳಗೊಂಡಿರುತ್ತದೆ.

ಈ ಕೆಳಗೆ ಮೂರು ಸಂಯೋಜನೆಗಳನ್ನು ತಿಳಿಸಲಾಗಿದ್ದು ಇವು ಪುರುಷರ ವೀರ್ಯದಲ್ಲಿನ ಎಕ್ಸ್ ಮತ್ತು ವೈ ವರ್ಣತಂತುಗಳನ್ನು ನಿರ್ವಹಿಸುವ ಕ್ರಮಗಳು:

X & Y ವರ್ಣತಂತುಗಳು

X & Y ವರ್ಣತಂತುಗಳು

1. ಎಂಎಂ: ಈ ಸಂಯೋಜನೆಯಿಂದಾಗಿ ಹೆಚ್ಚಾಗಿ ಗಂಡು ಮಕ್ಕಳಾಗುತ್ತದೆ ಯಾಕೆಂದರೆ ಇದು ವೈ ವರ್ಣತಂತುಗಳನ್ನು ಹೆಚ್ಚು ಉತ್ಪತ್ತಿ ಮಾಡುತ್ತದೆ.

2. ಎಂಎಫ್: ಇದು ಸಮಾನ ಸಂಖ್ಯೆಯಲ್ಲಿ ಎಕ್ಸ್ ಮತ್ತು ವೈ ವರ್ಣತಂತುಗಳನ್ನು ಸೃಷ್ಟಿಸುತ್ತದೆ ಹಾಗಾಗಿ ಹೆಣ್ಣು ಅಥವಾ ಗಂಡು ಎರಡೂ ಆಗುವ ಸಾಧ್ಯತೆಯು ಸಮ ಪ್ರಮಾಣದಲ್ಲಿರುತ್ತದೆ.

3. ಎಫ್ ಎಫ್: ಈ ಸಂಯೋಜನೆಯು ಎಕ್ಸ್ ವರ್ಣತಂತುಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ಅದರ ಫಲಿತಾಂಶವಾಗಿ ಹೆಣ್ಣು ಮಕ್ಕಳು ಜನಿಸುತ್ತಾರೆ.

ಮಗುವಿನ ಲಿಂಗವನ್ನು ಊಹಿಸುವುದರ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಸತ್ಯ ವಿಚಾರಗಳು

ಮಗುವಿನ ಲಿಂಗವನ್ನು ಊಹಿಸುವುದರ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಸತ್ಯ ವಿಚಾರಗಳು

• ಭ್ರೂಣದ ಹೃದಯ ಬಡಿತ: ಮಗುವಿನ ಹೃದಯ ಬಡಿತದ ಆಧಾರದ ಮೇಲೆ ಮಗುವಿನ ಲಿಂಗವನ್ನು ಲೆಕ್ಕಾಚಾರ ಆಗುವುದೊಂದು ಪ್ರಸಿದ್ಧ ಕ್ರಮವಾಗಿ ಬಿಟ್ಟಿದೆ. ಒಂದು ವೇಳೆ ಭ್ರೂಣದ ಹಾರ್ಟ್ ಬೀಟ್ ರೇಟ್ 140ಬಿಪಿಎಮ್ ಗಿಂತ ಹೆಚ್ಚು ಇದ್ದರೆ ಆಗ ಮಗುವು ಹೆಣ್ಣು, ಒಂದು 140 ಬಿಪಿಎಮ್ ಗಿಂತ ಕಡಿಮೆ ಇದ್ದರೆ ಗಂಡು ಮಗು ಎಂದು ಅಂದಾಜು ಮಾಡಲಾಗುತ್ತದೆ

ಆದರೆ, ಪ್ರತಿ ಮಗುವಿನ ಹಾರ್ಟ್ ಬೀಟ್ 120 ಯಿಂದ 140 ಬಿಪಿಎಮ್ ಇದ್ದೇ ಇರುತ್ತದೆ ಮತ್ತು ಇದು ಸಹಜ ಕೂಡ ಹೌದು.ಈ ರೀತಿ ಲಿಂಗವನ್ನು ಲೆಕ್ಕಾಚಾರ ಹಾಕುವುದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ.

ಈಗಾಗಲೇ ಹೀಗೆ ಮಗುವಿನ ಹಾರ್ಟ್ ಬೀಟ್ ರೇಟ್ ಗೂ ಲಿಂಗಕ್ಕೂ ಸಂಬಂಧವಿದೆಯಾ ಎಂದು ಪರೀಕ್ಷಿಸಲು ಹಲವಾರು ಅಧ್ಯಯನಗಳು ನಡೆದಿದೆ. ಮತ್ತು ಪ್ರತಿ ಬಾರಿಯೂ ಇದು ಋಣಾತ್ಮಕವಾಗಿ ದಾಖಲಾಗಿದೆ. ಒಂದು ವೇಳೆ ಯಾರಾದರೂ ಈ ರೀತಿ ಲೆಕ್ಕಾಚಾರ ಹಾಕಿ ಹೇಳಿದರೆ, ಅದು ಕೇವಲ ಅವರ ಊಹೆ ಅಷ್ಟೇ ಆದೀತು.

ತಾಯಿಯು ಮಗುವನ್ನು ಹೊಟ್ಟೆಯ ಮೇಲ್ಭಾಗದಲ್ಲಿ ಅಥವಾ ಮಧ್ಯದಲ್ಲಿ ಇಟ್ಟುಕೊಂಡಿರುವ ಸ್ಥಿತಿಗತಿಗಳು:

ತಾಯಿಯು ಮಗುವನ್ನು ಹೊಟ್ಟೆಯ ಮೇಲ್ಭಾಗದಲ್ಲಿ ಅಥವಾ ಮಧ್ಯದಲ್ಲಿ ಇಟ್ಟುಕೊಂಡಿರುವ ಸ್ಥಿತಿಗತಿಗಳು:

ಗರ್ಭಿಣಿಯ ಹೊಟ್ಟೆಯ ಮೇಲ್ಭಾಗದಲ್ಲಿ ಮಗು ಇದ್ದರೆ ಅಥವಾ ಹೊಟ್ಟೆಯ ಮಧ್ಯಭಾಗದಲ್ಲಿ ಮಗು ಇದ್ದರೆ ಅದು ಹೆಣ್ಣು ಎಂಬ ನಂಬಿಕೆ ಇದೆ. ಆದರೆ, ಮಗುವಿನ ದೇಹವು ತಾಯಿ ಹೊಟ್ಟೆಯ ಮುಂಭಾಗದಲ್ಲಿ ಇದ್ದಂತೆ ಆಕೆಗೆ ಭಾಸವಾಗುತ್ತಿದ್ದರೆ ಅದು ಗಂಡಂತೆ..! ಇದೊಂದು ಸುಳ್ಳು ಪರಿಕಲ್ಪನೆಯಾಗಿದ್ದು, ತಾಯಿಯ ಹೊಟ್ಟೆಯ ಆಕಾರ, ಎತ್ತರ, ತೂಕ, ಗಾತ್ರ ಇತ್ಯಾದಿ ಯಾವುದೇ ಅಂಶಗಳು ಮಗುವಿನ ಲಿಂಗಕ್ಕೆ ಸಂಬಂಧ ಹೊಂದಿಲ್ಲ.

• ಎಣ್ಣೆ ತ್ವಚೆ ಮತ್ತು ಮೊಡವೆ: ಇನ್ನೊಂದು ಉದಾಹರಣೆಯೆಂದರೆ, ಒಂದು ವೇಳೆ ಗರ್ಭಿಣಿಯು ಹೆಣ್ಣು ಮಗುವನ್ನು ಹೊತ್ತುಕೊಂಡಿದ್ದರೆ, ಆಕೆಯ ಚರ್ಮವು ಎಣ್ಣೆಯಂತಾಗುತ್ತದೆ ಮತ್ತು ಮೊಡವೆಗಳು ಏಳುತ್ತವೆ. ಒಂದು ವೇಳೆ ಗಂಡಾಗಿದ್ದರೆ ಹಾಗೆ ಆಗುವುದಿಲ್ಲ ಎಂಬುದು. ಆದರೆ ಇದೆಲ್ಲ ಆಗುವುದು ಕೇವಲ ಹಾರ್ಮೋನುಗಳ ವ್ಯತ್ಯಾಸದಿಂದಲೇ ಹೊರತು ಇದಕ್ಕೂ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ.

• ಭಯಾನಕ ಮತ್ತು ಊಹಿಸಲು ಅಸಾಧ್ಯವಾಗುವ ಮನಸ್ಸಿನ ಸ್ಥಿತಿಗತಿ: ಹೆಣ್ಣು ಭ್ರೂಣವು ಹೊಟ್ಟೆಯಲ್ಲಿದ್ದರೆ ಗರ್ಭಿಣಿಗೆ ಸಿಕ್ಕಾಪಟ್ಟೆ ಮನಸ್ಸು ಚಂಚಲಿತವಾಗುತ್ತಿರುತ್ತದೆಯಂತೆ.. ಭಯಾನಕ ಮತ್ತು ಊಹಿಸಲು ಅಸಾಧ್ಯವಾದಂತ ಮನಸ್ಸಿನ ಸ್ಥಿತಿಗತಿಗಳಿಗೆ ಕಾರಣವಾಗುತ್ತದೆಯಂತೆ. ಆದರೆ ನಿಜಕ್ಕೂ ಹೇಳುವುದಾದರೆ, ಇದು ಆಗುವುದು ತಾಯಿಯ ದೇಹದಲ್ಲಾಗುವ ಹಾರ್ಮೋನುಗಳ ವ್ಯತ್ಯಾಸದಿಂದಲೇ ಹೊರುತು ತಾಯಿಯು ಗಂಡು ಮಗುವನ್ನೋ ಹೆಣ್ಣು ಮಗುವನ್ನೋ ಹೊಟ್ಟೆಯಲ್ಲಿ ಇಟ್ಟುಕೊಂಡಿರುವ ಕಾರಣದಿಂದಲ್ಲ.

• ಸಹಿ ಮತ್ತು ಉಪ್ಪಿನಾಂಶ ತಿನ್ನಬೇಕೆಂಬ ಬಯಕೆಗಳು: ಯಾವ ತಾಯಿಗೆ ಸಿಹಿ ತಿನ್ನಬೇಕು ಎಂದು ಪ್ರಗ್ನೆನ್ಸಿಯಲ್ಲಿ ಆಸೆ ಯಾಗುತ್ತಿರುತ್ತದೆಯೋ ಆಕೆ ಹೆಣ್ಣು ಮಗು, ಉಪ್ಪಿನಾಂಶ ತಿನ್ನಬೇಕು ಎಂದು ಬಯಸುವ ಮಹಿಳೆಗೆ ಗಂಡು ಮಗು ಆಗುತ್ತದೆ ಎಂಬ ನಂಬಿಕೆಯೂ ಇದೆ.ಆದರೆ ಈ ವಿಚಾರದಲ್ಲಿ ಯಾವುದೇ ಹುರುಳಿಲ್ಲ. ಬಯಕೆಗಳಾಗುವುದು ಕೇವಲ ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯಿಂದ ಅಷ್ಟೇ. ಈ ಬಯಕೆಗಳಿಗೂ , ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ.

ಮಗುವಿನ ಲಿಂಗವನ್ನು ನಿರ್ಧಾರ ಮಾಡುವ ಇತರೆ ಮಾರ್ಗಗಳು / ಸಂದರ್ಭಗಳು

ಮಗುವಿನ ಲಿಂಗವನ್ನು ನಿರ್ಧಾರ ಮಾಡುವ ಇತರೆ ಮಾರ್ಗಗಳು / ಸಂದರ್ಭಗಳು

20-22 ನೇ ವಾರದ ನಂತರದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಲ್ಲಿ ಸುಮಾರು ಶೇಕಡಾ 90 ರಷ್ಟು ನಿಖರವಾಗಿ ಮಗುವಿನ ಲಿಂಗವನ್ನು ತಿಳಿಸಲು ಸಾಧ್ಯವಾಗುತ್ತದೆ.ಅಷ್ಟೇ ಅಲ್ಲ ಅನುವಂಶಿಕ ಅಸ್ವಸ್ಥತೆಗಳು ಅಥವಾ ಭ್ರೂಣದಲ್ಲಿ ವರ್ಣತಂತುಗಳ ವೈಪರೀತ್ಯಗಳನ್ನು ಅನುಭವಿಸುತ್ತಿರುವ ತಾಯಂದಿರಲ್ಲಿ ಆಮ್ನಿಯೊಸೆನ್ಟೆಸಿಸ್ ಅಥವಾ ಕೊರಿಯಾನಿಕ್ ವಿಲಸ್ ಸ್ಯಾಂಪ್ಲಿಂಗ್ನಂತಹ ಪರೀಕ್ಷೆಗಳ ಮೂಲಕ ಲಿಂಗವನ್ನು ತಿಳಿಯಬಹುದು.

ಅಂತಿಮ ನಿರ್ಧಾರ

ಅಂತಿಮ ನಿರ್ಧಾರ

ವಂಶವಾಹಿ ವಿಚಾರಗಳನ್ನುಹೊರತುಪಡಿಸಿ, ಕೆಲವು ಹವಾಮಾನದ ವಿಚಾರಗಳು ಕೂಡ ಮಗುವಿನ ಲಿಂಗಕ್ಕೆ ಪ್ರಭಾವ ಬೀರುತ್ತದೆ.ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸರಿಯಾಗ ಮಾಹಿತಿಯೂ ಲಭ್ಯವಿಲ್ಲ. ಹಲವಾರು ಅಧ್ಯಯನಗಳು ಅನೇಕ ವಾತಾವರಣದ ವಿಚಾರಗಳ ಬಗ್ಗೆ ಅಧ್ಯಯನ ನಡೆಸಿವೆ ಆದರೆ ಅದಕ್ಕೆ ಸಂಬಂಧಿಸಿದಂತೆ ಸರಿಯಾದ ಫಲಿತಾಂಶ ನೀಡಲು ಅಧ್ಯಯನಗಳು ವಿಫಲವಾಗಿವೆ. ಸದ್ಯದ ಮಟ್ಟಿಗೆ ವಂಶವಾಹಿ ವಿಚಾರ ಮಾತ್ರವೇ ಮಗುವಿನ ಲಿಂಗವನ್ನು ನಿರ್ಧರಿಸುತ್ತೆ ಎಂದು ನಂಬಲಾಗುತ್ತೆ.

ಗಂಡೇ ಇರಲಿ ಹೆಣ್ಣೇ ಇರಲಿ ಮಗು ನಮ್ಮದು ಅನ್ನುವ ಭಾವನೆಯೇ ಶ್ರೇಷ್ಟ!

ಗಂಡೇ ಇರಲಿ ಹೆಣ್ಣೇ ಇರಲಿ ಮಗು ನಮ್ಮದು ಅನ್ನುವ ಭಾವನೆಯೇ ಶ್ರೇಷ್ಟ!

ಒಟ್ಟಿನಲ್ಲಿ ವೈಜ್ಞಾನಿಕವಾಗಿ ಏನೇನು ನಡೆಯುತ್ತೋ ತಿಳಿಯದು. ಜೀವವೊಂದು ಜೀವದ ಮೂಲಕ ಹೊರ ಬರುವ ಪ್ರಕ್ರಿಯೆ ವಿಸ್ಮಯ ಮತ್ತು ಭಾವನಾತ್ಮಕ ಅನ್ನುವುದರಲ್ಲಿ ಎರಡು ಮಾತಿಲ್ಲ. ಅದು ಗಂಡೇ ಇರಲಿ ಹೆಣ್ಣೇ ಇರಲಿ ಮಗು ನಮ್ಮದು ಅನ್ನುವ ಭಾವನೆಯೇ ಶ್ರೇಷ್ಟ. ಕೆಲವು ಇನ್ನೂ ತಿಳಿಯಲಾರದ ಸೃಷ್ಟಿಯ ವೈಜ್ಞಾನಿಕ ಗುಟ್ಟನ್ನು ಸದ್ಯಕ್ಕೆ ದೇವರ ಸೃಷ್ಟಿ ಅಷ್ಟೇ..

English summary

boy-or-girl-how-genetics-determines-your-baby-s-gender

Couples expecting a baby are always eager to know every bit of information related to their baby. Right from the health of the fetus, to the baby's overall development, its response to dietary routine or changes as prescribed by the doctor, and so on.How does genetics determine the baby's gender? Which of the parents determine the sex of the baby? If you are curious to know about these aspects, read on to know how genes establish the gender of babies.
X
Desktop Bottom Promotion