For Quick Alerts
ALLOW NOTIFICATIONS  
For Daily Alerts

ವೈದ್ಯರೂ ಕಗ್ಗಂಟಾಗಿ ಕಾಡುವ 'ಬಂಜೆತನ' ಸಮಸ್ಯೆ! ಯಾಕೆ ಹೀಗೆ?

By Arshad
|

ಇಂದಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯೆಂದರೆ ಬಂಜೆತನ. ಇದು ಪುರುಷರು ಹಾಗಿರಬಹುದು ಅಥವಾ ಮಹಿಳೆಯರು ಆಗಿರಬಹುದು. ಬಂಜೆತನ ಸಮಸ್ಯೆಯು ಗಂಭೀರವಾಗುತ್ತಾ ಸಾಗುತ್ತಿದೆ. ಒತ್ತಡದ ಜೀವನ ಸಹಿತ ಹಲವಾರು ಕಾರಣಗಳು ಇದಕ್ಕೆ ಇವೆ. ಪುರುಷರಲ್ಲಿ ವೀರ್ಯದ ಗಣತಿಯು ಹಿಂದಿನ ಪೀಳಿಗೆಗಿಂತ ತುಂಬಾ ಕಡಿಮೆಯಿದೆ. ಕೆಲವರು ಮಗು ಬೇಡವೆಂದು ಗರ್ಭಧಾರಣೆಯನ್ನು ಮಧ್ಯವಯಸ್ಸಿನ ತನಕ ಮುಂದೂಡುವರು. ಇದು ಕೂಡ ಫಲವತ್ತತೆಗೆ ಸಮಸ್ಯೆಯಾಗುವುದು.

ಸಂತಾನಹೀನ ದಂಪತಿಗಳಿಗೆ ಪರ್ಯಾಯ ಆಶಾಕಿರಣ

ಮಗು ಆಗದೆ ಇರುವಂತಹ ಸಂದರ್ಭದಲ್ಲಿ ದಂಪತಿ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಬಂಜೆತನಕ್ಕೆ ಕಾರಣಗಳನ್ನು ಪತ್ತೆ ಮಾಡಲಾಗುವುದು. ಕಾರಣ ಹುಡುಕಿದ ಬಳಿಕ ಅದಕ್ಕೆ ಸರಿಯಾದ ಪರಿಹಾರ ಒದಗಿಸಲಾಗುವುದು. ಆದರೆ ವೈದ್ಯರಿಂದಲೂ ಕೆಲವೊಂದು ಸಲ ಬಂಜೆತನಕ್ಕೆ ಕಾರಣ ಪತ್ತೆ ಹಚ್ಚಲು ಸಾಧ್ಯವಾಗಲ್ಲ. ವೈದ್ಯರಿಗೆ ಕೂಡ ಇಂತಹ ಪ್ರಕರಣಗಳನ್ನು ಪತ್ತೆ ಮಾಡಲು ಸಾಧ್ಯವಾಗಲ್ಲ. ಆಗ ಇವುಗಳನ್ನು ವಿವರಿಸಲು ಸಾಧ್ಯವಾಗದ ಬಂಜೆತನ ಎಂದು ಕರೆಯಲಾಗುತ್ತದೆ. ಇಂತಹ ಪರಿಸ್ಥಿತಿ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಯಿರಿ....

ವಿವರಿಸಲು ಸಾಧ್ಯವಿಲ್ಲದೆ ಬಂಜೆತನವೆಂದರೇನು?

ವಿವರಿಸಲು ಸಾಧ್ಯವಿಲ್ಲದೆ ಬಂಜೆತನವೆಂದರೇನು?

ಬಂಜೆತನಕ್ಕೆ ವೈದ್ಯರು ಸರಿಯಾದ ಕಾರಣ ಹುಡುಕಲು ವಿಫಲವಾಗುವುದೇ ಈ ವಿವರಿಸಲಾಗದ ಬಂಜೆತನ. ಹಲವಾರು ಪರೀಕ್ಷೆ ಮತ್ತು ಪರಿಶೀಲನೆ ಬಳಿಕವೂ ಬಂಜೆತನಕ್ಕೆ ಸರಿಯಾದ ಕಾರಣ ಪತ್ತೆ ಮಾಡಲು ವೈದ್ಯರಿಗೆ ಸಾಧ್ಯವಾಗಲಿಲ್ಲವೆಂದಾದರೆ ಇದನ್ನು ವಿವರಿಸಲು ಸಾಧ್ಯವಾಗದೆ ಬಂಜೆತನವೆನ್ನಲಾಗುವುದು. ಇಂತಹ ಪರಿಸ್ಥಿತಿಯಿಂದ ಮೇಲೆ ಬರಲು ಚಿಕಿತ್ಸೆ ಬೇಕಾಗುವುದು.

ಮಹಿಳೆಯರ ಬಂಜೆತನ ಸಮಸ್ಯೆಗೆ ಕೆಲವೊಂದು ಮನೆ ಔಷಧಿ!

ಇದು ಸಾಮಾನ್ಯ ಸಮಸ್ಯೆಯೇ?

ಇದು ಸಾಮಾನ್ಯ ಸಮಸ್ಯೆಯೇ?

100ರಲ್ಲಿ ಸುಮಾರು 30ರಷ್ಟು ಬಂಜೆತನದ ಪ್ರಕರಣವು ವಿವರಿಸಲು ಸಾಧ್ಯವಾಗದ ಬಂಜೆತನದ ವಿಭಾಗಕ್ಕೆ ಸೇರಿಕೊಳ್ಳುವುದು. ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವುದು. ಪುರುಷರಲ್ಲಿ ಬಂಜೆತನಕ್ಕೆ ಕಾರಣಗಳು ಪತ್ತೆಯಾಗುವುದು. ಸ್ವಲ್ಪ ಪ್ರಮಾಣದ ಪುರುಷರಲ್ಲಿ ಮಾತ್ರ ವಿವರಿಸಲು ಸಾಧ್ಯವಾಗದ ಬಂಜೆತನ ಕಂಡುಬರುವುದು.

ಪತ್ತೆಯಾಗದೆ ಇರಲು ಕಾರಣಗಳು ಏನು?

ಪತ್ತೆಯಾಗದೆ ಇರಲು ಕಾರಣಗಳು ಏನು?

ಪರೀಕ್ಷಾ ವಿಧಾನಗಳು ಪ್ರಮುಖವಾಗಿರುವ ಬಂಜೆತನ ಪತ್ತೆ ಮಾಡುವುದು ಮಾತ್ರ. ಪ್ರಸಕ್ತ ವಿಧಾನದ ಮೂಲಕ ಬಂಜೆತನಕ್ಕೆ ಕಾರಣವಾಗುವ ಕೆಲವು ಸಣ್ಣ ಕಾರಣಗಳನ್ನು ಪತ್ತೆ ಮಾಡಲು ಸಾಧ್ಯವಾಗದೆ ಇರುವುದು. ಅಂಡಾಣುವಿನ ಗುಣಮಟ್ಟವು ತುಂಬಾ ಮುಖ್ಯವಾಗಿದೆ ಮತ್ತು ಕಳಪೆ ಗುಣಮಟ್ಟದ ಅಂಡಾಣು ಬಂಜೆತನಕ್ಕೆ ಕಾರಣವಾಗಬಹುದು.

ವಿವರಿಸಲು ಸಾಧ್ಯವಾಗದ ಬಂಜೆತನಕ್ಕೆ ಕಾರಣವೇನು?

ವಿವರಿಸಲು ಸಾಧ್ಯವಾಗದ ಬಂಜೆತನಕ್ಕೆ ಕಾರಣವೇನು?

ಈ ಸಮಸ್ಯೆಗೆ ಕಾರಣಗಳು ಏನು ಎಂದು ನಿಮಗೆ ತಿಳಿದಿದೆಯಾ? ವಿವರಿಸಲು ಆಗದೆ ಇರುವ ಬಂಜೆತನಕ್ಕೆ ಕಾರಣ ಹುಡುಕುವುದು ಕೂಡ ತುಂಬಾ ಕಷ್ಟ. ಆದರೆ ಆರೋಗ್ಯ ತಜ್ಞರ ಪ್ರಕಾರ ಕೆಲವೊಂದು ವೈದ್ಯಕೀಯ ಪರಿಸ್ಥಿತಿಯು ವಿವರಿಸಲು ಸಾಧ್ಯವಾಗದೆ ಇರುವ ಬಂಜೆತನಕ್ಕೆ ಕಾರಣವೆನ್ನುತ್ತಾರೆ. ವಿವರಿಸಲು ಆಗದೆ ಇರುವ ಬಂಜೆತನಕ್ಕೆ ಮೂರು ಪ್ರಮುಖ ಕಾರಣಗಳು ಇವೆ. ಪ್ರತಿರೋಧಕ ಬಂಜೆತನ, ಎಂಡೊಮೆಟ್ರೋಸಿಸ್ ಮತ್ತು ಅಕಾಲಿಕ ಅಂಡಾಶಯದ ವಯಸ್ಸಾಗುವಿಕೆ.

ಪ್ರತಿರೋಧಕ ಬಂಜೆತನವೆಂದರೇನು?

ಪ್ರತಿರೋಧಕ ಬಂಜೆತನವೆಂದರೇನು?

ವಿವರಿಸಲು ಸಾಧ್ಯವಿರದ ಬಂಜೆತನಕ್ಕೆ ಶೇ.20ರಷ್ಟು ಪ್ರತಿರೋಧಕ ಬಂಜೆತನವು ಕಾರಣವಾಗಿದೆ. ದೇಹದ ಪ್ರತಿರೋಧಕ ವ್ಯವಸ್ಥೆಯು ಬಾಹ್ಯಕೋಶಗಳೆಂದು ಭಾವಿಸಿ ಸಂತಾನೋತ್ಪತ್ತಿ ಪ್ರದೇಶದ ಕೋಶಗಳ ಮೇಲೆ ದಾಳಿ ಮಾಡಿದಾಗ ಹೀಗೆ ಆಗುವುದು. ಇದನ್ನೇ ಪ್ರತಿರೋಧಕ ಬಂಜೆತನವೆನ್ನಲಾಗುವುದು. ನಮ್ಮದೇ ದೇಹದ ಪ್ರತಿರೋಧಕ ವ್ಯವಸ್ಥೆಯು ಈ ಬಂಜೆತನಕ್ಕೆ ಕಾರಣವಾಗುವುದು.

ಎಂಡೊಮೆಟ್ರೋಸಿಸ್ ಎಂದರೇನು?

ಎಂಡೊಮೆಟ್ರೋಸಿಸ್ ಎಂದರೇನು?

ಶೇ.30ರಷ್ಟು ವಿವರಿಸಲು ಸಾಧ್ಯವಾಗದ ಬಂಜೆತನಕ್ಕೆ ಎಂಡೊಮೆಟ್ರೋಸಿಸ್ ಕಾರಣವಾಗಿದೆ. ಗರ್ಭಕೋಶದ ಹೊರಗಡೆ ಕೆಲವು ಅಸಾಮಾನ್ಯ ಕೋಶಗಳು ಬೆಳೆದು ನೋವು ಉಂಟಾಗುವುದು. ಈ ಪರಿಸ್ಥಿತಿಯಲ್ಲಿ ಪೆಲ್ವಿಕ್ ನೋವು ಕಾಣಿಸಿಕೊಳ್ಳುವುದು. ಪೆಲ್ವಿಕ್ ನೋವು ಕಾಣಿಸಿಕೊಂಡರೆ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ.

ಅಂಡಾಣುವಿಗೆ ಅಕಾಲಿಕ ವಯಸ್ಸಾಗುವುದೆಂದರೇನು?

ಅಂಡಾಣುವಿಗೆ ಅಕಾಲಿಕ ವಯಸ್ಸಾಗುವುದೆಂದರೇನು?

ವಿವರಿಸಲು ಸಾಧ್ಯವಾಗದೆ ಇರುವ ಬಂಜೆತನಕ್ಕೆ ಶೇ.50ರಷ್ಟು ಕಾರಣ ಅಂಡಾಣುಗಳಿಗೆ ಅಕಾಲಿಕ ವಯಸ್ಸಾಗುವುದು. ಈ ಸಮಸ್ಯೆಯು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುವುದು. ಗರ್ಭಧಾರಣೆಯನ್ನು ಹಿಂದಕ್ಕೆ ಹಾಕುವಂತಹ ಮಹಿಳೆಯರು ತಮ್ಮ ಅಂಡಾಣುಗಳನ್ನು ಶೀತಲೀಕರಿಸುವರು. ಆದರೆ ಈ ಪ್ರಕ್ರಿಯೆಯು ಶೇ.100ರಷ್ಟು ಯಶಸ್ವಿಯಾಗುವುದು ಎಂದು ಹೇಳಲು ಸಾಧ್ಯವಿಲ್ಲ.

ಏನು ಪರೀಕ್ಷೆ ಮಾಡಬೇಕು?

ಏನು ಪರೀಕ್ಷೆ ಮಾಡಬೇಕು?

ಹಲವಾರು ಸಲ ಗರ್ಭಪಾತಕ್ಕೆ ಒಳಗಾಗಿರುವವರು ಮತ್ತು ಐವಿಎಫ್ ವೈಫಲ್ಯಕ್ಕೆ ಒಳಗಾಗಿರುವಂತಹವರು ಇದನ್ನು ಪರೀಕ್ಷಿಸಿಕೊಳ್ಳಬೇಕು. ಹಲವಾರು ಪ್ರಯತ್ನಗಳ ಬಳಿಕವೂ ಗರ್ಭಧಾರಣೆಯಾಗದೆ ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಅತ್ಯಾಧುನಿಕ ವೈದ್ಯಕೀಯ ಪರೀಕ್ಷಾ ಕೇಂದ್ರ ಅಥವಾ ಫಲವತ್ತತೆ ಕ್ಲಿನಿಕ್ ಗೆ ಭೇಟಿ ನೀಡಿ ಸರಿಯಾದ ಪರೀಕ್ಷೆಗಳನ್ನು ಮಾಡಿಸಿ.

ಗರ್ಭಧರಿಸುವ ಸಾಧ್ಯತೆಗಳು ಎಷ್ಟಿದೆ?

ಗರ್ಭಧರಿಸುವ ಸಾಧ್ಯತೆಗಳು ಎಷ್ಟಿದೆ?

ವಿವರಿಸಲು ಸಾಧ್ಯವಿಲ್ಲದ ಬಂಜೆತನದಿಂದ ಬಳಲುತ್ತಾ ಇರುವಂತವರು ಗರ್ಭಧರಿಸುವಂತಹ ಸಾಧ್ಯತೆಯು ತುಂಬಾ ಕಡಿಮೆ ಇದೆ. ಗರ್ಭಧರಿಸುವಂತಹ ಸಾಧ್ಯತೆಯು ಶೇ.1ರಷ್ಟು ಮಾತ್ರ ಇರುವುದು. ಈ ಪರಿಸ್ಥಿತಿಯನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ವರ್ಷ ಸಾಗುತ್ತಾ ಹೋದಂತೆ ಗರ್ಭಧರಿಸುವ ಸಾಧ್ಯತೆಯು ಕಡಿಮೆಯಾಗುವುದು. ಇದಕ್ಕೆ ಚಿಕಿತ್ಸೆ ಅತೀ ಅಗತ್ಯ.

ವಿವರಿಸಲು ಆಗದ ಬಂಜೆತನಕ್ಕೆ ಏನು ನೆರವಾಗುವುದು?

ವಿವರಿಸಲು ಆಗದ ಬಂಜೆತನಕ್ಕೆ ಏನು ನೆರವಾಗುವುದು?

ಕೆಲವೊಂದು ಸಂದರ್ಭದಲ್ಲಿ ಕೆಲವು ಚಿಕಿತ್ಸೆಗಳು ಫಲ ನೀಡುವುದು. ಸರಿಯಾದ ರೀತಿಯಲ್ಲಿ ಮಾತ್ರೆ ತೆಗೆದುಕೊಳ್ಳುವುದು ಮತ್ತು ಲೈಂಗಿಕ ಕ್ರಿಯೆ ನಡೆಸುವ ಸಮಯದ ಬಗ್ಗೆ ಎಚ್ಚರ ವಹಿಸುವುದು. ಹೆಚ್ಚಿನ ಪ್ರಕರಣಗಳಲ್ಲಿ ಸಮಸ್ಯೆಯನ್ನು ಪ್ರಸಕ್ತ ಚಿಕಿತ್ಸಾ ಕ್ರಮದ ಮೂಲಕ ನಿವಾರಣೆ ಮಾಡಬಹುದು. ಇದರಿಂದ ದಂಪತಿ ವೈದ್ಯರೊಂದಿಗೆ ಮಾತನಾಡುವುದರಿಂದ ದೂರ ಉಳಿಯಬಾರದು. ಆರೋಗ್ಯ ತಜ್ಞರಿಂದ ಸಲಹೆ ಪಡೆದುಕೊಂಡರೆ ತುಂಬಾ ಒಳ್ಳೆಯದು.

English summary

What Is Unexplained Infertility?

Not getting pregnant even after repeated attempts could be a sign of infertility. And today, the cases of infertility are increasing due to many factors. Firstly, the sperm counts of men today are much lesser than the men of the previous generation. Added to that, the stressful lifestyles of today have also contributed to the infertility of many couples. Some couples who postpone pregnancy till middle age may need to blame the age-related degeneration for the infertility. When a couple doesn't get pregnant, they may try to consult a doctor to know the reason behind the infertility. In most of the cases, the reasons could be detected.
X
Desktop Bottom Promotion