For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಹಾಲು ಕುಡಿಯುವ ಬಯಕೆ ಜಾಸ್ತಿ ಆಗುತ್ತದೆಯಂತೆ! ಯಾಕೆಂದರೆ...

By Arshad
|

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ಏನೇನೋ ತಿನ್ನ ಬಯಸುತ್ತಾರೆ. ಕೆಲವರಿಗೆ ಹುಳಿ ಮಾವಿನ ಕಾಯಿ ಇಷ್ಟವಾದರೆ ಕೆಲವರಿಗೆ ನೆಲ್ಲಿಕಾಯಿ, ಇನ್ನು ಕೆಲವರಿಗೆ, ಸಿಹಿ ತಿಸಿಸುಗಳು, ಹೀಗೆ ಏನೆನೋ ತಿನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ಗರ್ಭಿಣಿಯರ ಬಯಕೆ ಈಡೇರಿಸದಿದ್ದರೆ ಮಗುವಿನ ಕಿವಿ ಕಿವುಡಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಬೆಳೆದುಬಂದಿರುವ ಕಾರಣ ಇದನ್ನು ಈಡೇರಿಸಲು ಮನೆಯವರು ಮುಂದಾಗುತ್ತಾರೆ. ಕೆಲವು ಗರ್ಭಿಣಿಯರಿಗೆ ನಾಲ್ಕು ತಿಂಗಳಾಗುತ್ತಿದ್ದಂತೆಯೇ ಹಾಲು ಕುಡಿಯುವ ಬಯಕೆಯುಂಟಾಗುತ್ತದೆ. ಅದೂ ಬರೆಯ ಒಂದು ಲೋಟವಲ್ಲ, ಲೀಟರುಗಟ್ಟಲೆ ಹಾಲು!

ಹಾಲು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಈ ಸಂಗತಿಗಳು ತಿಳಿದಿರಲಿ...

ಇದು ಅಸಾಮಾನ್ಯವಾದ ಬಯಕೆಯಲ್ಲ. ಅಲ್ಲದೇ ಹಾಲು ಸದಾ ಪ್ರತಿ ಮನೆಯಲ್ಲಿಯೂ ಲಭ್ಯವಿರುವ ಕಾರಣ ಇವರು ಎಲ್ಲರಲ್ಲಿಯೂ ತಮ್ಮ ಬಯಕೆಯನ್ನು ವ್ಯಕ್ತಪಡಿಸದಿರುವುದರಿಂದ ಹೀಗೊಂದು ಬಯಕೆಯೂ ಇರಬಹುದು ಎಂದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಹಾಲು ಕುಡಿಯುವ ಬಯಕೆಯ ಬಗ್ಗೆ ಕೆಲವಾರು ಮಿಥ್ಯೆಗಳಿವೆ. ಈ ಬಯಕೆ ಹೆಚ್ಚಿದ್ದಷ್ಟೂ ಗರ್ಭದಲ್ಲಿರುವ ಮಗು ಹೆಣ್ಣು ಎಂದು ಹಲವು ಅನುಭವಿಗಳ ಅಭಿಪ್ರಾಯವಾಗಿದ್ದರೂ ತಜ್ಞರು ಈ ಮಾಹಿತಿಯನ್ನು ಅಲ್ಲಗಳೆಯುತ್ತಾರೆ. ಬನ್ನಿ, ಈ ಬಯಕೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಅರಿಯೋಣ...

ಗರ್ಭಾವಸ್ಥೆಯಲ್ಲಿ ಹಾಲು ಕುಡಿಯುವ ಬಯಕೆಯ ಅರ್ಥವೇನು?

ಗರ್ಭಾವಸ್ಥೆಯಲ್ಲಿ ಹಾಲು ಕುಡಿಯುವ ಬಯಕೆಯ ಅರ್ಥವೇನು?

ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಗರ್ಣಿಣಿಯ ದೇಹಕ್ಕೆ ವಿವಿಧ ಬಗೆಯ ಪೋಷಕಾಂಶಗಳ ಅಗತ್ಯತೆಯುಂಟಾಗುತ್ತದೆ. ವಿಶೇಷವಾಗಿ ಉಪ್ಪು, ಚಾಕಲೇಟು, ಹಣ್ಣುಗಳು, ಹಾಲು ಮೊದಲಾದವುಗಳನ್ನು ಕುಡಿಯುವ ಬಯಕೆಯೂ ಮೂಡುತ್ತದೆ. ಈ ಪೋಷಕಾಂಶಗಳು ಯಾವ ಹೊತ್ತಿನಲ್ಲಿ ಹೆಚ್ಚು ಬೇಕಾಗಿರುತ್ತದೆಯೇ ಆ ಪೋಷಕಾಂಶ ಹೆಚ್ಚಿರುವ ಆಹಾರಗಳನ್ನು ತಿನ್ನುವಂತೆ ದೇಹಕ್ಕೆ ಯಾವುದೋ ಅಗೋಚರ ಸೂಚನೆ ಸಿಗುತ್ತದೆ.

ಗರ್ಭಾವಸ್ಥೆಯಲ್ಲಿ ಹಾಲು ಕುಡಿಯುವ ಬಯಕೆಯ ಅರ್ಥವೇನು?

ಗರ್ಭಾವಸ್ಥೆಯಲ್ಲಿ ಹಾಲು ಕುಡಿಯುವ ಬಯಕೆಯ ಅರ್ಥವೇನು?

ಈ ಸೂಚನೆಯೇ ಬಯಕೆಗೆ ಮೂಲವಾಗಿದೆ. ಆದರೆ ಈ ಸೂಚನೆ ಗರ್ಭದಲ್ಲಿರುವ ಮಗುವಿನ ಲಿಂಗವನ್ನಾಧರಿಸಿದೆಯೇ ಅಥವಾ ಇದು ಮನೋಭಾವವನ್ನು ಆಧರಿಸಿದೆಯೇ ಅಥವಾ ಕೌಟುಂಬಿಕ-ಸಂಸ್ಕೃತಿಯನ್ನು ಆಧರಿಸಿದೆಯೇ ಎಂಬುದು ವಿವಾದಾತ್ಮಕ ವಿಷಯವಾಗಿದೆ.

ಇದು ಹಾರ್ಮೋನುಗಳನ್ನು ಆಧರಿಸಿದೆಯೇ?

ಇದು ಹಾರ್ಮೋನುಗಳನ್ನು ಆಧರಿಸಿದೆಯೇ?

ಆರೋಗ್ಯ ತಜ್ಞರ ಪ್ರಕಾರ ಈ ಎಲ್ಲಾ ಬಯಕೆಗಳು ಗರ್ಭಾವಸ್ಥೆಯಲ್ಲಿ ಹಾರ್ಮೋನು ಅಥವಾ ರಸದೂತಗಳ ಸ್ರಾವದ ಪರಿಣಾಮದಿಂದ ಉಂಟಾಗುತ್ತದೆ. ಆದರೆ ಈ ರಸದೂತಗಳು ಕೇವಲ ಹಾಲು ಕುಡಿಯಲು ಅಥವಾ ಒಂದು ಬಗೆಯ ಹುಳಿಯನ್ನು ಮಾತ್ರವೇ ತಿನ್ನಲು ಬಯಸುವುದಕ್ಕೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ವಿವರಿಸಲು ಸಾಧ್ಯವಾಗಿಲ್ಲ.

ಇನ್ನೊಂದು ಆಯ್ಕೆ

ಇನ್ನೊಂದು ಆಯ್ಕೆ

ಕೆಲವು ತಜ್ಞರ ಪ್ರಕಾರ ಗರ್ಭಾವಸ್ಥೆಯಲ್ಲಿ ಗರ್ಭವತಿಯ ದೇಹಕ್ಕೆ ಅಗತ್ಯವಿರುವ ಕೆಲವು ಪೋಷಕಾಂಶಗಳ ಕೊರತೆಯನ್ನು ಇತರ ಆಹಾರಗಳ ಮೂಲಕ ಪೂರ್ಣಗೊಳಿಸುವ ಸಲುವಾಗಿಯೇ ಈ ಬಯಕೆಗಳು ಮೂಡುತ್ತವೆ.

ಇವು ಕೇವಲ ಕೆಲವು ಪೋಷಕಾಂಶಗಳಿಗೆ ಮಾತ್ರವೇ ಸೀಮಿತವೇ

ಇವು ಕೇವಲ ಕೆಲವು ಪೋಷಕಾಂಶಗಳಿಗೆ ಮಾತ್ರವೇ ಸೀಮಿತವೇ

ಇನ್ನೊಂದು ಮಾಹಿತಿಯ ಪ್ರಕಾರ ದೇಹದಲ್ಲಿ ಕೆಲವು ಸಮಯದಲ್ಲಿ ಉಳಿದ ಸಮಯಕ್ಕಿಂತಲೂ ಹೆಚ್ಚಾಗಿ ಕೆಲವು ಪೋಷಕಾಂಶಗಳ ಅಗತ್ಯವಿರುತ್ತದೆ. ಆದ್ದರಿಂದ ಈ ಪೋಷಕಾಂಶ ಹೆಚ್ಚಿರುವ ಆಹಾರವನ್ನೇ ಬಯಸಲು ನಿಸರ್ಗ ಈ ವಿಧಾನವನ್ನು ನೀಡಿರಬಹುದು. ಹಾಲಿನಲ್ಲಿರುವ ಕ್ಯಾಲ್ಸಿಯಂ ನಾಲ್ಕನೆಯ ತಿಂಗಳ ಬಳಿಕ ಮಗುವಿನ ಮೂಳೆಗಳ ಬೆಳವಣಿಗೆಗೆ ಹೆಚ್ಚು ಅಗತ್ಯವಿರುವ ಕಾರಣದಿಂದಲೇ ಹಾಲು ಕುಡಿಯುವ ಬಯಕೆಯಾಗುತ್ತಿರಬಹುದು.

ವೈದ್ಯರ ಸಲಹೆ ಪಡೆಯಿರಿ

ವೈದ್ಯರ ಸಲಹೆ ಪಡೆಯಿರಿ

ಒಂದು ವೇಳೆ ನೀವು ಗರ್ಭವತಿಯಾಗಿದ್ದು ಹಾಲು ಕುಡಿಯುವ ಬಯಕೆಯಾದರೆ ಇದನ್ನು ದಮನಿಸದೇ ನಿಮ್ಮ ಮನಸ್ಸಿಗೆ ತೃಪ್ತಿಯಾಗುವಷ್ಟು ಕುಡಿಯಿರಿ. ಹಾಲಿನಲ್ಲಿರುವ ಲ್ಯಾಕ್ಟೋಸ್ ಕೆಲವರಿಗೆ ಅಲರ್ಜಿಕಾರಕವಾಗಿರುತ್ತದೆ.

ವೈದ್ಯರ ಸಲಹೆ ಪಡೆಯಿರಿ

ವೈದ್ಯರ ಸಲಹೆ ಪಡೆಯಿರಿ

ಒಂದು ವೇಳೆ ಈ ಅಲರ್ಜಿ ನಿಮಗಿದ್ದು ನೀವು ಹಾಲು ಕುಡಿಯಕೂಡದು ಎಂದು ವೈದ್ಯರು ಸಲಹೆ ನೀಡಿದ್ದರೆ ಮಾತ್ರ ಹಾಲು ಕುಡಿಯಬಾರದೇ ವಿನಃ ನಿಮಗಿಷ್ಟ ಬಂದಷ್ಟು ಹಾಲನ್ನು ಕುಡಿಯಿರಿ. ಒಂದು ವೇಳೆ ಹಾಲು ಕುಡಿಯುವ ಬಯಕೆ ವಿಪರೀತವಾಗಿದ್ದರೆ ಹಾಗೂ ತುಂಬಾ ದಿನಗಳವರೆಗೆ ಮುಂದುವರೆದರೆ ಮಾತ್ರ ವೈದ್ಯರ ಸಲಹೆಯನ್ನು ಅವಶ್ಯವಾಗಿ ಪಡೆಯಿರಿ.

English summary

What Does Craving Milk During Pregnancy Mean?

What does craving milk during pregnancy mean? You know what? Some women tend to experience cravings for milk roughly around the second trimester. They prefer to drink at least a liter of milk. It is not uncommon to feel like drinking milk during pregnancy as it is among the cravings that are common during pregnancy. There are also some myths related to the milk cravings. It is said that a female foetus may cause the craving but this myth has been debunked by health experts.
X
Desktop Bottom Promotion