For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಇದೆಲ್ಲಾ ಮಾಮೂಲು!, ಅನಗತ್ಯ ಭಯಪಟ್ಟುಕೊಳ್ಳಬೇಡಿ!

By Hemanth
|

ಗರ್ಭಧಾರಣೆ ವೇಳೆ ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುವುದು ಪ್ರಕೃತಿ ಸಹಜ ಲಕ್ಷಣವಾಗಿದೆ. ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಿಂದ ಮಹಿಳೆಯು ಸ್ವಲ್ಪ ಮಟ್ಟಿಗೆ ಹತಾಶೆಗೆ ಒಳಗಾಗುತ್ತಾಳೆ. ಗರ್ಭದಲ್ಲಿ ಮತ್ತೊಂದು ಜೀವವು ಬೆಳೆಯುವ ಕಾರಣ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಸಹಜ. ದೇಹದ ತೂಕ ಹೆಚ್ಚಳವಾಗುವುದರಿಂದ ಹಿಡಿದು ಕೂದಲಿನಲ್ಲೂ ಕೆಲವೊಂದು ಬದಲಾವಣೆಗಳು ಆಗುವುದು. ಕೂದಲಿನ ಬಣ್ಣ ಬದಲಾಗುವುದು ಮಾತ್ರವಲ್ಲದೆ, ಮುಖದ ಮೇಲೆ ಕೂಡ ಕೂದಲು ಬೆಳೆಯಲು ಆರಂಭವಾಗುವುದು.

ಮುಖದ ಮೇಲೆ ಕೂದಲು ಬೆಳೆಯಲು ಶಾಂಪೂ ಅಥವಾ ಕಂಡೀಷನರ್ ಕಾರಣವೆಂದು ನೀವು ಭಾವಿಸಿರಬಹುದು. ಆದರೆ ಮುಖದ ಮೇಲೆ ಕೂದಲು ಮೂಡಲು ಬೇರೆಯೇ ಕಾರಣವಿದೆ. ಗರ್ಭಧಾರಣೆ ಸಮಯದಲ್ಲಿ ಕೂದಲಿನಲ್ಲಿ ಆಗುವಂತಹ ಬದಲಾವಣೆಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ಓದಿಕೊಳ್ಳಿ....

ಬಣ್ಣ ಬದಲಾಗುವುದೇ?

ಬಣ್ಣ ಬದಲಾಗುವುದೇ?

ಕೆಲವೊಂದು ಸಲ ಗರ್ಭಧಾರಣೆ ಸಂದರ್ಭದಲ್ಲಿ ಕೂದಲಿನ ಬಣ್ಣವು ಬದಲಾವಣೆ ಆಗುವುದು. ಹಾರ್ಮೋನಿನಲ್ಲಿ ಆಗುವಂತಹ ಬದಲಾವಣೆಗಳು ಇದಕ್ಕೆ ಕಾರಣವಾಗಿದೆ. ಚರ್ಮ ಹಾಗೂ ಕೂದಲಿನಲ್ಲಿ ಮೆಲನಿನ್ ಮಟ್ಟವು ಹೆಚ್ಚಿನ ಮಟ್ಟದಲ್ಲಿ ಇರುವುದು ಇದಕ್ಕೆ ಕಾರಣವಾಗಿದೆ.

ಇದಕ್ಕೆ ಕಾರಣವೇನು?

ಇದಕ್ಕೆ ಕಾರಣವೇನು?

ಗರ್ಭಧಾರಣೆ ಸಂದರ್ಭದಲ್ಲಿ ಕೆಲವು ಮಹಿಳೆಯರಲ್ಲಿ ಎಂಡ್ರೋಜನ್ ಮತ್ತು ಈಸ್ಟ್ರೋಜನ್ ಆರೋಗ್ಯಕರ ಕೂದಲಿಗೆ ಕಾರಣವಾಗುವುದು. ಗರ್ಭಧಾರಣೆ ವೇಳೆ ಕೂದಲು ಬಿಳಿಯಾದರೆ ಪೋಷಕಾಂಶಗಳ ಕೊರತೆಯೇ ಇದಕ್ಕೆ ಕಾರಣವಾಗಿದೆ.

ಇದು ಶಾಶ್ವತ ಬದಲಾವಣೆಯೇ?

ಇದು ಶಾಶ್ವತ ಬದಲಾವಣೆಯೇ?

ಕೆಲವು ಮಹಿಳೆಯರಲ್ಲಿ ಇದು ಶಾಶ್ವತವಾಗಿರುತ್ತದೆ. ಕೆಲವು ಮಹಿಳೆಯರಲ್ಲಿ ಹೆರಿಗೆ ಬಳಿಕ ಕೂದಲು ಬಿಳಿಯಾಗುವುದು.

ಬೇರೆ ಏನು ಆಗುವುದು?

ಬೇರೆ ಏನು ಆಗುವುದು?

ಕೆಲವು ಮಹಿಳೆಯರಲ್ಲಿ ಗರ್ಭಧಾರಣೆ ಸಂದರ್ಭ ಅನಗತ್ಯ ಕೂದಲು ಬೆಳೆಯುವುದು. ಈ ಕೂದಲು ತುಂಬಾ ದಪ್ಪಗೆ ಇರುತ್ತದೆ. ಕೆಲವು ಸಂದರ್ಭ ಗುಂಗುರು ಕೂದಲು ನೇರವಾಗಬಹುದು. ಎಣ್ಣೆಯಂಶವಿರುವ ತಲೆಬುರುಡೆಯು ಒಣಗಿ ಹೋಗಬಹುದು.

ಇದು ಯಾವುದರ ಕೊರತೆ?

ಇದು ಯಾವುದರ ಕೊರತೆ?

ವಿಟಮಿನ್ ಬಿ12ನ ಕೊರತೆಯಿಂದಾಗಿ ಹೀಗೆ ಆಗಬಹುದು. ಎಲ್ಲಾ ರೀತಿಯ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು.

ಇದು ಏನು?

ಇದು ಏನು?

ಹಾರ್ಮೋನಿನಲ್ಲಿ ಕೆಲವೊಂದು ಅಸಾಮಾನ್ಯ ಏರಿಳಿತದಿಂದ ಹೀಗೆ ಆಗುತ್ತದೆ. ಕೂದಲು ಮತ್ತು ಅದರ ವಿನ್ಯಾಸದಲ್ಲೂ ಬದಲಾವಣೆ ಆಗುತ್ತದೆ ಎಂದು ಕೆಲವು ಮಹಿಳೆಯರು ದೂರುತ್ತಾರೆ.

English summary

Unwanted Hair Growth During Pregnancy

There is a lot being talked about various physiological changes that occur during pregnancy. But in fact, one of the things that can occur during pregnancy is change in hair colour. Actually, it need not be change of colour or greying. It could also be growth of facial hair in some. If you have been through that, you must have suspected the shampoo or conditioner and its quality. Here are some facts related to hair changes during pregnancy..
Story first published: Tuesday, August 29, 2017, 20:32 [IST]
X
Desktop Bottom Promotion