ಗರ್ಭಾವಸ್ಥೆಯಲ್ಲಿರುವಾಗ ಈ ಸಮಸ್ಯೆಯಾದರೆ ಮರೆಯದೇ ವೈದ್ಯರ ಬಳಿ ಹೋಗಿ

By: Divya
Subscribe to Boldsky

ಗರ್ಭಾವಸ್ಥೆಯ ಮೊದಲ ದಿನದಿಂದ ಹೆರಿಗೆಯ ತನಕವೂ ವಿಶೇಷವಾದ ಕಾಳಜಿಯನ್ನು ಹೊಂದಿರಬೇಕು. ದೇಹದಲ್ಲಿ ಹೇಗೆ ಬದಲಾವಣೆಯಾಗುತ್ತದೆಯೋ ಹಾಗೆಯೇ ಅದರ ಆರೈಕೆಯನ್ನು ಸೂಕ್ತ ರೀತಿಯಲ್ಲಿ ಮಾಡಬೇಕು. ಕೆಲವು ಹಂತಗಳಲ್ಲಿ ಅಸಹಜ ಚಿಹ್ನೆಗಳು ಮತ್ತು ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆ ಸಂದರ್ಭದಲ್ಲಿ ಅವಶ್ಯವಾಗಿ ವೈದ್ಯರ ಪರೀಕ್ಷೆಗೆ ಒಳಗಾಗಬೇಕು. ಇಲ್ಲವಾದರೆ ಗಂಭೀರ ಸಮಸ್ಯೆ ಉಂಟಾಗುವ ಸಾಧ್ಯತೆಯೇ ಹೆಚ್ಚು.

ಗರ್ಭಧಾರಣೆ ಪರೀಕ್ಷೆಗಳನ್ನು, ಮನೆಯಲ್ಲಿಯೇ ಮಾಡಬಹುದು!

ಮೊದಲನೇ ತಿಂಗಳಿಂದ 9ನೇ ತಿಂಗಳವರೆಗೂ ತಾಯಿ ಮತ್ತು ಮಗುವಿನ ದೇಹದಲ್ಲಿ ಬದಲಾವಣೆಗಳು ಉಂಟಾಗುತ್ತಲೇ ಇರುತ್ತವೆ. ಗರ್ಭದಲ್ಲಿ ಇರುವ ಮಗುವಿನ ಬೆಳವಣಿಗೆ ಆದಂತೆ ತಾಯಿ ದೇಹದ ಆರೋಗ್ಯದಲ್ಲೂ ಕೆಲವು ಬದಲಾವಣೆಗಳು ಸಂಭವಿಸುವುದು. ಇದಕ್ಕೆ ಗಾಬರಿಗೊಳ್ಳುವ ಅಗತ್ಯವಿರುವುದಿಲ್ಲ. ಆದರೆ ಕೆಲವೊಮ್ಮೆ ಸಣ್ಣ ಪುಟ್ಟ ನಿರ್ಲಕ್ಷದಿಂದ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಗರ್ಭಿಣಿಯರು ಕೆಲವು ಸಂಗತಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅವುಗಳ ಸರಳ ವಿರವರಣೆ ಈ ಲೇಖನದಲ್ಲಿದೆ....

ರಕ್ತಸ್ರಾವ

ರಕ್ತಸ್ರಾವ

ಯಾವ ತಿಂಗಳಲ್ಲೇ ಆದರೂ ಸರಿಯೇ ರಕ್ತಸ್ರಾವ ಕಾಣಿಸಿಕೊಂಡಿತೆಂದರೆ ಮೊದಲು ವೈದ್ಯರನ್ನು ಭೇಟಿಯಾಗಬೇಕು. ಇದು ಅಪಸ್ಥಾನೀಯ ಗರ್ಭಧಾರಣೆ ಅಥವಾ ಗರ್ಭಪಾತದ ಸಂಕೇತವಾಗುವ ಸಾಧ್ಯತೆ ಇರುತ್ತದೆ. 7 ಮತ್ತು 8ನೇ ತಿಂಗಳಲ್ಲಿ ನೋವು ಮತ್ತು ರಕ್ತಸ್ರಾವ ಸಂಭವಿಸಿತು ಎಂದರೆ ಅದು ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಯಾವುದೇ ಹಂತದಲ್ಲಿ ರಕ್ತಸ್ರಾವವಾದರೆ ತಕ್ಷಣ ವೆದ್ಯರ ಸಲಹೆ ಪಡೆಯಬೇಕು.

ವಾಂತಿ

ವಾಂತಿ

ಹೊಟ್ಟೆಯಲ್ಲಿ ಪಿಂಡ ಗಟ್ಟಿಯಾಗುತ್ತಿದ್ದಂತೆ ತಾಯಿಯ ದೇಹದಲ್ಲಿ ಅನೇಕ ಬದಲಾವಣೆಯಾಗುತ್ತದೆ. ಅದರಲ್ಲಿ ವಾಂತಿಯಾಗುವುದು ಒಂದು. ದೇಹಕ್ಕೆ ಒಗ್ಗದ ಆಹಾರವನ್ನು ಸೇವಿಸಿದಾಗ ಮತ್ತು ದೇಹದಲ್ಲಾಗುವ ಬದಲಾವಣೆಗೆ ವಾಂತಿ ಉಂಟಾಗುವುದು. ಆದರೆ ಇದು ವಿಪರೀತ ಮಟ್ಟಕ್ಕೆ ತಲುಪಿದರೆ ಬಹಳ ಅಪಾಯಕಾರಿ ಎಂದು ಹೇಳಲಾಗುತ್ತದೆ. ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದು. ಜೊತೆಗೆ ದೇಹಕ್ಕೆ ಬೇಕಾದ ಪೋಷಕಾಂಶ ಕಡಿಮೆಯಾಗುವುದು.

ಮಗುವಿನ ಚಟುವಟಿಕೆ

ಮಗುವಿನ ಚಟುವಟಿಕೆ

ಸುಮಾರು ಐದನೇ ತಿಂಗಳು ಆರಂಭವಾಗುತ್ತಿದ್ದಂತೆ ಗರ್ಭದಲ್ಲಿರುವ ಮಗುವಿನ ಚಲನ-ವಲನ ಆರಂಭವಾಗಿರುತ್ತದೆ. ಮಗುವಿನ ಚಲನ-ವಲನಗಳನ್ನು ತಾಯಿ ಗಮನಿಸುತ್ತಿರಬೇಕು. ಹಾಗೊಮ್ಮೆ ಮಗುವಿನ ಚಟುವಟಿಕೆಯನ್ನು ಗುರುತಿಸಲಾಗದಿದ್ದರೆ ವೈದ್ಯರಲ್ಲಿ ತೋರಿಸಿಕೊಳ್ಳಬೇಕು.

ಬದಲಾವಣೆಗಳ ಗಮನ

ಬದಲಾವಣೆಗಳ ಗಮನ

ತಿಂಗಳಿಗೆ ಅನುಗುಣವಾಗಿ ಮಗುವಿನ ಬೆಳವಣಿಗೆ ಆಗುತ್ತಿಲ್ಲ ಅಥವಾ ತಾಯಿಯ ದೇಹದಲ್ಲೂ ಯಾವುದೇ ಬದಲಾವಣೆ ಕಾಣುತ್ತಿಲ್ಲ ಎಂದಾದರೆ ಮೊದಲು ವೈದ್ಯರಲ್ಲಿ ತೋರಿಸಿಕೊಳ್ಳಬೇಕು. ಮಗುವಿನ ಬೆಳವಣಿಗೆ ಅರ್ಧದಲ್ಲೇ ನಿಲ್ಲುವ ಸಾಧ್ಯತೆಯೂ ಇರುವುದು.

ನೀರು ಹೋಗುವುದು

ನೀರು ಹೋಗುವುದು

ಮಗುವಿನ ರಕ್ಷಣೆಗೆ ಇರುವ ನೀರಿನ ಚೀಲವು ಕೆಲವೊಮ್ಮೆ ಒಡೆಯುವ ಸಾಧ್ಯತೆ ಇರುತ್ತದೆ. ಇದು ಒಡೆದಾಗ ಮೂತ್ರ ವಿಸರ್ಜನೆಯಂತೆ ಆಗುತ್ತದೆ. ನಂತರ ನಿಯಂತ್ರಣವಿಲ್ಲದಂತೆ ಹೋಗುತ್ತೆ. ಹೀಗೆ ನೀರಿನಚೀಲ ಕಾಲಿಯಾಗಿ ಮಗು ಬರುಡಾಗುವ ಸಾಧ್ಯತೆ ಇರುತ್ತದೆ. ನೀರು ಹೋಗುತ್ತಿರುವುದು ಗಮನಕ್ಕೆ ಬಂದ ತಕ್ಷಣ ವೈದ್ಯರನ್ನು ಕಾಣಬೇಕು.

ತೀವ್ರವಾದ ತಲೆನೋವು ಮತ್ತು ಹೊಟ್ಟೆ ನೋವು

ತೀವ್ರವಾದ ತಲೆನೋವು ಮತ್ತು ಹೊಟ್ಟೆ ನೋವು

ಹೆಚ್ಚುವರಿ ರಕ್ತದೊತ್ತಡ ಮತ್ತು ತೀವ್ರ ತಲೆನೋವು ಮೂರನೇ ತ್ರೈಮಾಸಿಕದಲ್ಲಿ ಕಂಡುಬಂದಿತು ಎಂದಾದಲ್ಲಿ ಇದು ಪ್ರಿಕ್ಲಾಂಪ್ಸಿಯಾ ಆಗಿರಬಹುದು. ಆಗ ವೈದ್ಯರ ಆಗಮನ ಆಗಲೇಬೇಕು.

ಜ್ವರ

ಜ್ವರ

ಕೆಲವು ಗರ್ಭಿಣಿಯರಿಗೆ ಆಗಾಗ ಜ್ವರ ಕಾಣಿಸಿಕೊಳ್ಳುತ್ತದೆ ಎಂದರೆ ಅದು ಹೆಚ್ಚು ಹಾನಿಕಾರಕವಾದದ್ದು. ಜ್ವರದ ಲಕ್ಷಣಗಳು ಕಂಡು ಬಂದಾಗ ವೈದ್ಯರಲ್ಲಿ ಕಾಣಿಸಿಕೊಳ್ಳಬೇಕು.

English summary

These symptoms you shouldn't ignore during pregnancy

During that phase, some abnormal signs and symptoms may need immediate medical attention. The health of the mother and the baby should be safely monitored. Here are some such pregnancy problems that may occur anytime from the first trimester to the last. Consult your doctor if you see such signs.
Subscribe Newsletter