For Quick Alerts
ALLOW NOTIFICATIONS  
For Daily Alerts

ಅಚ್ಚರಿಯಾದರೂ ಸತ್ಯ! ಇವರಿಗೆಲ್ಲಾ ಅವಳಿ ಮಕ್ಕಳಾಗುವ ಸಾಧ್ಯತೆ ಜಾಸ್ತಿ!!

By Arshad
|

ಹೆಚ್ಚಿನ ಮಹಿಳೆಯರಿಗೆ ತಮಗೆ ಅವಳಿ ಮಕ್ಕಳಾಗಲಿ ಎಂಬ ಹಂಬಲವಿರುತ್ತದೆ. ಅಂದರೆ ಒಂದೇ ಹೆರಿಗೆಯಲ್ಲಿ ಎರಡು ಮಕ್ಕಳನ್ನು ಪಡೆಯುವ ಲಾಭ ಒಂದಾದರೆ ಇಬ್ಬರು ಮಕ್ಕಳನ್ನು ಜೊತೆಜೊತೆಯಾಗಿ ಬೆಳೆಸುವ ವಿಭಿನ್ನವಾದ ಅನುಭವ ಇನ್ನೊಂದು ಲಾಭ. ಮಕ್ಕಳು ಪಡೆಯುವ ಹಂಬಲವಿದ್ದರೂ ಎರೆಡೆರಡು ಬಾರಿ ಹೆರಿಗೆಯ ನೋವನ್ನು ಅಥವಾ ಸಿಸೇರಿಯನ್ ಹೆರಿಗೆ ಅನುಭವಿಸುವುದನ್ನು ಇಷ್ಟಪಡದ ಮಹಿಳೆಯರಿಗೆ ಇದು ವರದಾನವೇ ಆಗಿದೆ. ಅಲ್ಲದೇ ಇಬ್ಬರು ಮಕ್ಕಳಿದ್ದರೆ ಒಂದೇ ಬಾರಿಗೆ ಹೆಚ್ಚಿನ ಶ್ರಮವಿಲ್ಲದೇ ಪಾಲನೆ ಮಾಡಬಹುದು. ಆದರೆ ಇನ್ನೊಂದು ಕಡೆ ಅವಳಿ ಮಕ್ಕಳು ತಾಯಿಯ ಕೆಲಸವನ್ನು ದ್ವಿಗುಣಗೊಳಿಸುತ್ತವೆ.

pregnancy test

ಹೆಚ್ಚಿನ ತಾಯಂದಿರು ಎದುರಿಸುವ ತೊಂದರೆ ಎಂದರೆ ಇಬ್ಬರು ಮಕ್ಕಳೂ ಒಂದೇ ರೀತಿಯದ್ದಾಗಿದ್ದು ಒಂದು ಮಗುವಿಗೆ ಆಹಾರವುಣಿಸಿ ಕ್ಷಣಕಾಲ ಗಮನ ಬೇರೆಡೆ ಹರಿಸಿ ಹಿಂದಿರುಗಿದಾಗ ಈಗತಾನೇ ಯಾವ ಮಗುವಿಗೆ ಆಹಾರ ನೀಡಿದ್ದೆ ಎಂದು ಗೊತ್ತಾಗದೇ ಈಗಾಗಲೇ ಆಹಾರ ಒದಗಿಸಿದ್ದ ಮಗುವಿಗೇ ಮತ್ತೊಮ್ಮೆ ಉಣಿಸುವ ಸಂದರ್ಭ ಎದುರಾಗಬಹುದು. ಕೆಲವೊಮ್ಮೆ ಒಂದು ಮಗುವಿಗೆ ಆಹಾರ ಉಣಿಸಿ ಇನ್ನೊಂದನ್ನು ಉಣಿಸಿ ಮುಗಿಸಿದಾಕ್ಷಣ ಮೊದಲ ಮಗು ಮತ್ತೊಮ್ಮೆ ಆಹಾರಕ್ಕಾಗಿ ಅಳಬಹುದು.

ಆದರೆ ಯಾವುದಕ್ಕೂ ಮೊದಲು ಅವಳಿ ಮಕ್ಕಳು ಹುಟ್ಟಬೇಕಾದರೆ ಏಕಕಾಲಕ್ಕೆ ಎರಡು ಅಂಡಾಣುಗಳು ಮಹಿಳೆಯ ಗರ್ಭದಲ್ಲಿ ಬಿಡುಗಡೆಯಾಗಬೇಕು. ಇವೆರಡೂ ಎರಡು ಪ್ರತ್ಯೇಕ ವೀರ್ಯಾಣುಗಳಿಂದ ಫಲಗೊಳ್ಳಬೇಕು. ಅಪರೂಪವಾದ ಈ ಸಾಧ್ಯತೆಗೆ ಹೆಚ್ಚಿನ ಶ್ರಮದ ಅಗತ್ಯವಿಲ್ಲ ಹಾಗೂ ಈ ನೈಸರ್ಗಿಕ ಸಾಧ್ಯತೆಯ ಮೇಲೆ ಯಾರ ನಿಯಂತ್ರಣವೂ ಸಾಧ್ಯವಿಲ್ಲ. ಆದರೆ, ಕೆಲವು ವಿಷಯಗಳು ಈ ಸಾಧ್ಯತೆಯನ್ನು ಹೆಚ್ಚಿಸುವುದನ್ನು ಕಂಡುಕೊಳ್ಳಲಾಗಿದೆ. ಒಂದು ವೇಳೆ ಮಗುವನ್ನು ಪಡೆಯಲು ಕೆಲವು ಔಷಧಿಗಳನ್ನು ಸೇವಿಸುತ್ತಿದ್ದರೆ ನಿಮಗೆ ಅವಳಿಗಳಾಗುವ ಸಾಧ್ಯತೆ ಹೆಚ್ಚು. ಬನ್ನಿ, ಅವಳಿ ಮಕ್ಕಳನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುವ ಅಚ್ಚರಿಯ ವಿಷಯಗಳನ್ನು ಇಂದು ಅರಿಯೋಣ:

ಫಲವತ್ತತೆ ಹೆಚ್ಚಿಸುವ ಆಹಾರ ಸೇವಿಸುವ ಮಹಿಳೆಯರು
ಗರ್ಭ ಧರಿಸುವ ಸಾಧ್ಯತೆಯನ್ನು ಹೆಚ್ಚಿಸುವ ಕೆಲವು ಔಷಧಿಗಳನ್ನು ಸೇವಿಸುವ ಮಹಿಳೆಯರಿಗೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು. ಏಕೆಂದರೆ ಈ ಔಷಧಿಗಳು ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಅಂಡಾಣುಗಳನ್ನು ಬಿಡುಗಡೆ ಮಾಡುವ ಸಂಭವವಿರುತ್ತದೆ. ಇವೆರಡೂ ಅಂಡಾಣುಗಳು ವೀರ್ಯಾಣುಗಳೊಂದಿಗೆ ಕೂಡುವ ಸಾಧ್ಯತೆ ಅಧಿಕವಾಗಿರುತ್ತದೆ.

ವಂಶದ ಇತಿಹಾಸ
ಒಂದು ವೇಳೆ ಮಹಿಳೆಯ ವಂಶದಲ್ಲಿ ಅವಳಿ ಮಕ್ಕಳಾದ ಇತಿಹಾಸವಿದ್ದರೆ, ವಿಶೇಷವಾಗಿ ಆಕೆಯ ತಾಯಿ, ಅಜ್ಜಿ ಅಥವಾ ಇತರ ಹತ್ತಿರದ ರಕ್ತಸಂಬಂಧಿಗಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರೆ ಈ ಮಹಿಳೆಯರೂ ಅವಳಿ ಮಕ್ಕಳಿಗೆ ಜನ್ಮ ನೀಡುವ ಸಾಧ್ಯತೆ ಹೆಚ್ಚು.

ನಡುವಯಸ್ಸು ದಾಟಿದ ಮಹಿಳೆಯರು
ಸುಮಾರು ಮೂವತ್ತೈದು ವರ್ಷ ದಾಟಿದ ಮಹಿಳೆಯರು ಗರ್ಭ ಧರಿಸಿದರೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು ಎಂದು ಒಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ಅವಳಿ ಮಕ್ಕಳಾದಾಗ ಹೆಚ್ಚಿನ ತಾಯಂದಿರ ವಯಸ್ಸು ಮುವತ್ತೈದು ದಾಟಿದವರೂ ಹೆಚ್ಚಾಗಿರುವುದು ಕಂಡುಬಂದಿದೆ.

ಐವಿಎಫ್ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು
ಸಹಜ ರೀತಿಯಲ್ಲಿ ಗರ್ಭ ಧರಿಸಲು ಅಸಮರ್ಥರಾದ ಮಹಿಳೆಯರಿಗೆ ಕೃತಕ ವಿಧಾನದ ಇನ್ ವಿಟ್ರೋ ಗರ್ಭಧಾರಣೆ ( in vitro fertilization (IVF)) ವರದಾನದ ರೂಪವಾಗಿದೆ. ಈ ವಿಧಾನದಲ್ಲಿಯೂ ಅವಳಿ ಮಕ್ಕಳನ್ನು ಪಡೆಯುವ ಸಂಭವ ಹೆಚ್ಚು. ಈ ವಿಧಾನದಲ್ಲಿ ಅಂಡಾಣು ವೀರ್ಯಾಣುಗಳ ಸಂಯೋಜನೆಯನ್ನು ಗರ್ಭದ ಹೊರಗೆ ಸಾಧಿಸಿ ಬಳಿಕ ಗರ್ಭಾಶಯದಲ್ಲಿ ಸ್ಥಾಪಿಸಲಾಗುತ್ತದೆ ಅಥವಾ ಕೃತಕವಾಗಿ ವೀರ್ಯಾಣುಗಳನ್ನು ಸಾಂದ್ರೀಕರಿಸಿ ಗರ್ಭಾಶಯದಲ್ಲಿ ಸ್ಥಾಪಿಸಲಾಗುತ್ತದೆ.

ಎತ್ತರದ ಮಹಿಳೆಯರು
ಎತ್ತರವಾಗಿ ಆರೋಗ್ಯವಾಗಿರುವ ಮಹಿಳೆಯರು ಸಹಾ ಅವಳಿ ಮಕ್ಕಳಿಗೆ ಜನ್ಮ ನೀಡುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲ, ಎತ್ತರವಾಗಿದ್ದು ಸಹಜತೂಕಕ್ಕಿಂತ ಹೆಚ್ಚು ತೂಕವುಳ್ಳ ಮಹಿಳೆಯರಿಗೂ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು.

ಹಸಿ ಗಡ್ಡೆಗಳನ್ನು ಸೇವಿಸಿದ ಮಹಿಳೆಯರು
ಒಂದು ವೇಳೆ ಹಸಿಯಾಗಿ ಸೇವಿಸಬಹುದಾದ ಗಡ್ಡೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಈ ಮಹಿಳೆಯರಿಗೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು. ಆದರೆ ಅವಳಿ ಮಕ್ಕಳಾದರೆ ಎಷ್ಟು ಮತ್ತು ಯಾವ ಗಡ್ಡೆಯನ್ನು ತಿನ್ನಬೇಕು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸಿಹಿಗೆಣಸು, ಮರಗೆಣಸು ಮೊದಲಾದವುಗಳನ್ನು ಹೆಚ್ಚು ಹೆಚ್ಚು ತಿಂದವರಿಗೆ ಅವಳಿ ಮಕ್ಕಳ ಭಾಗ್ಯ.

ಭೌಗೋಳಿಕ ಸ್ಥಾನ ಹಾಗೂ ವಂಶವಾಹಿನಿ
ಕೆಲವು ಪಂಗಡಗಳಿಗೆ ಸೇರಿದ ಮಹಿಳೆಯರಿಗೆ ಹಾಗೂ ಅವರ ಭೌಗೋಳಿಕ ಸ್ಥಾನ ಅವಳಿ ಮಕ್ಕಳನ್ನು ಹೊಂದುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ಭಾರತದ ಒಂದು ಹಳ್ಳಿಯಲ್ಲಿ ಅತಿ ಹೆಚ್ಚು ಅವಳಿ ಮಕ್ಕಳಿದ್ದಾರೆ. ಆಫ್ರಿಕಾದ ಕೆಲವು ಬುಡಕಟ್ಟು ಜನಾಂಗಗಳಲ್ಲಿಯೂ ಅತಿಹೆಚ್ಚು ಅವಳಿಮಕ್ಕಳು ಜನಿಸುವುದನ್ನು ಗಮನಿಸಲಾಗಿದೆ.ಅವಳಿ ಮಕ್ಕಳ ಕುರಿತ ಒಂದಿಷ್ಟು ಕುತೂಹಲಕಾರಿ ಸಂಗತಿಗಳು ನಿಮಗಾಗಿ...
ಅವಳಿ ಮಕ್ಕಳು ಇತರರಿಗಿಂತ ವಿಭಿನ್ನವಾಗಿದ್ದು ಕೌತುಕಮಯರಾಗಿರುತ್ತಾರೆ. ಹೆಚ್ಚಿನವರ ಪಾಲಿಗೆ ಈ ಅವಳಿ ಮಕ್ಕಳು ಕುತೂಹಲವನ್ನುoಟು ಮಾಡುವವರು ಹಾಗೂ ನಿಗೂಢಪ್ರಾಯರಾಗಿರುತ್ತಾರೆ. ಅವಳಿ ಮಕ್ಕಳ ಕುರಿತು ಜನರಲ್ಲಿ ಹಲವಾರು ಕಾಲ್ಪನಿಕ ಅನಿಸಿಕೆ, ಅಭಿಪ್ರಾಯಗಳಿರುತ್ತವೆ... ಮುಂದೆ ಓದಿ

1.ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ತದ್ರೂಪಿ ಅವಳಿಗಳಾಗಲು ಸಾಧ್ಯವೇ ?
ತದ್ರೂಪಿ ಅವಳಿ ಮಕ್ಕಳು, ಒಂದೋ ಹೆಣ್ಣು ಮಕ್ಕಳಾಗಿರುತ್ತವೆ ಇಲ್ಲವೇ ಗಂಡು ಮಕ್ಕಳಾಗಿರುತ್ತವೆ (XX). ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಾಗಿರಲು ಸಾಧ್ಯವಿಲ್ಲ. ಈಗ ಮತ್ತೊಂದೆಡೆ, ಬ್ರಾತೃತ್ವ (ಅಥವಾ ಸಹೋದರೀಯ) ಅವಳಿಗಳು ಎರಡು ವಿಭಿನ್ನ ಅಂಡಾಣುಗಳಿoದ ರೂಪುಗೊoಡಿರುತ್ತವೆ. ಈ ಕಾರಣದಿಂದ, ಬ್ರಾತೃತ್ವ ಅವಳಿಗಳು ಒಂದೋ ಇಬ್ಬರೂ ಗಂಡು ಮಕ್ಕಳಾಗಿರಬಹುದು, ಇಲ್ಲವೇ ಇಬ್ಬರೂ ಹೆಣ್ಣು ಮಕ್ಕಳಾಗಿರಬಹುದು, ಅಥವಾ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಾಗಿರಲೂಬಹುದು.

ಅವಳಿ ಮಕ್ಕಳಿಗೆ ಅನುವಂಶೀಯ ಕಾರಣವೇ?
ಅವಳಿ ಮಕ್ಕಳ ಜನನಕ್ಕೆ ಅನುವಂಶೀಯ ಅಥವಾ ಕೌಟುoಬಿಕ ಕಾರಣಗಳೇನಾದರೂ ಇರಬಹುದೇ ? ತಾಯಿಯು ಒಂದಕ್ಕಿಂತ ಹೆಚ್ಚು ಅಂಡಾಣುಗಳನ್ನು ಬಿಡುಗಡೆ ಮಾಡುವ ಜೀನ್ ಅನ್ನು ಅನುವoಶೀಯವಾಗಿ ಪಡೆದವಳಾಗಿದ್ದು, ತನ್ಮೂಲಕ ಬ್ರಾತೃತ್ವ ಅವಳಿಗಳನ್ನು ಪಡೆದವಳಾಗಿದ್ದರೆ, ಅವಳಿ ಮಕ್ಕಳ ಜನನಕ್ಕೆ ಅನುವoಶೀಯತೆಯೂ ಸಹ ಕಾರಣವಾಗಿರುತ್ತದೆ. ತದ್ರೂಪು ಅವಳಿಗಳು ಯಾದೃಚ್ಚಿಕವಾಗಿದ್ದು, ಇವುಗಳ ಜನನಕ್ಕೆ ಕುಟುಂಬವು ಕಾರಣವಾಗಿರುವುದಿಲ್ಲ.

ಅವಳಿ ಮಕ್ಕಳು ಒಂದೇ ರೀತಿಯ ಬೆರಳಚ್ಚನ್ನು ಹೊoದಿರುತ್ತಾರೆಯೇ?
ತದ್ರೂಪು ಅವಳಿಗಳ ಕುರಿತು ಹೇಳುವುದಾದರೆ ಉತ್ತರವು "ಇಲ್ಲ" ಎಂದೇ ಆಗಿದೆ. ತದ್ರೂಪು ಅವಳಿಗಳು ಒಂದೇ ತೆರನಾದ ಜೀನ್ (ವಂಶವಾಹಿ)ಗಳ ವಿನ್ಯಾಸವನ್ನು ಹೊಂದಿರುತ್ತವೆ. ಈ ಅವಳಿ ಮಕ್ಕಳ DNA ಯು ಸಿಪ್ಪೆಯೊಳಗಿನ ಏರಡು ಕಾಳುಗಳಂತೆ ಇದ್ದು, ಮೇಲ್ನೋಟಕ್ಕೆ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಿರುವುದಿಲ್ಲ.

ಅವಳಿಗಳು ರಹಸ್ಯ ಭಾಷೆಯನ್ನು ಹೊoದಿರುತ್ತವೆಯೇ?
ಅವಳಿಗಳು ರಹಸ್ಯ ಭಾಷೆಯನ್ನು ಹಂಚಿಕೊಳ್ಳುತ್ತವೆ ಎಂಬುದು ಕೇವಲ ಕಾಲ್ಪನಿಕ. "ರಹಸ್ಯ ಭಾಷೆ " "ಸ್ವತಂತ್ರ ಭಾಷೆ" , ಅಥವಾ "ಸಮೂಹ ಭಾಷೆ" ಇತ್ಯಾದಿ ಪದಗಳು ಅವಳಿ ಮಕ್ಕಳ ಭಾಷೆಯ ಪರಿಕಲ್ಪನೆಯನ್ನು ವಿವರಿಸುತ್ತವೆ. ಈ ಭಾಷೆಯು ಅವಳಿಗಳ ತೊದಲುವಿಕೆ, ಅಸಂಗತ ಅಥವಾ ಅನಿಯಮಿತ ಧ್ವನಿಯಾಗಿದ್ದು, ಇತರ ಎಲ್ಲಾ ಮಕ್ಕಳ ತೊದಲು ನುಡಿಯೇ ಆಗಿದ್ದು ಬೇರೇನೂ ವಿಶೇಷವಿಲ್ಲ. ಇದು ಈ ಮಕ್ಕಳ ಪರಸ್ಪರ ಸಂವಹನ ಮತ್ತು ಭಾಷಾಭಿವೃದ್ಧಿಯ ಒಂದು ಮಾರ್ಗವಾಗಿದೆ.

ಅವಳಿ ಮಕ್ಕಳು ವಿಭಿನ್ನ ಜನ್ಮದಿನಗಳನ್ನು ಹೊಂದಿರುವುದು ಸಾಧ್ಯವೇ?
ಅವಳಿ ಮಕ್ಕಳು, ಎರಡು ಪ್ರತ್ಯೇಕ ಮಕ್ಕಳಾಗಿದ್ದು ಒಟ್ಟಿಗೆ ಜನಿಸಿದವರಾಗಿರುತ್ತಾರೆ. ಅಂದಮಾತ್ರಕ್ಕೆ ಅವರು ಒಂದೇ ದಿನದಂದು ಹುಟ್ಟಿದವರಾಗಿರಬೇಕೆoದೇನೂ ಇಲ್ಲ. ಕೆಲವೇ ಕ್ಷಣಗಳ ಅಂತರದಲ್ಲಿ ಅವರು ಹುಟ್ಟಿರುವ ಸಾಧ್ಯತೆಗಳೂ ಇವೆ.

English summary

surprising things which increase chances of giving birth to twins

If you are having fertility drugs to conceive a baby then the chances for you to give birth to twins are more. Read on the article to find out the surprising things which increase chances of giving birth to twins.
X
Desktop Bottom Promotion