ಗರ್ಭಪಾತದಿಂದ ಪಾರಾಗಲು ಈ 8 ಆಹಾರಗಳಿಂದ ದೂರವಿರಿ!

By: MAHESH PALLAKKI
Subscribe to Boldsky

ಪ್ರತಿ ಮಹಿಳೆಯರು ತಮ್ಮ ಗರ್ಭಧಾರಣೆಯ ಸಮಯದಲ್ಲಿ, ಎಲ್ಲಿ ಗರ್ಭಪಾತವಾಗಿಬಿಡುವುದೋ ಎಂಬ ಆತಂಕದಲ್ಲಿರುತ್ತಾರೆ. ಗರ್ಭಪಾತವು ಮಹಿಳೆಯರ ಮನಸ್ಸಿನ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಿ ಅವರನ್ನು ಮಾಸಿಕವಾಗಿ ಖಿನ್ನರನ್ನಾಗಿಸುತ್ತದೆ. ಇಂತಹ ಗರ್ಭಪಾತದ ಸಮಸ್ಯೆಯಿಂದ ಪಾರಾಗಲು ಕೆಲವೊಂದು ಆಹಾರಗಳಿಂದ ದೂರವಿದ್ದರೆ ಬಹಳ ಒಳ್ಳೆಯದು. ಎರಡೆರಡು ಬಾರಿ ಗರ್ಭಪಾತವಾದರೆ, ಮುನ್ನೆಚ್ಚರಿಕೆ ಕ್ರಮ ಹೀಗಿರಲಿ

ನಮಗೆಲ್ಲರಿಗು ತಿಳಿದಿರುವಂತೆ ಗರ್ಭಧಾರಣೆಯ ಸಮಯವು ಮಹಿಳೆಯರ ಜೀವನದಲ್ಲಿನ ಬಹುಮುಖ್ಯ ಹಂತಗಳಲ್ಲೊಂದು. ಇಂತಹ ಸಮಯದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹಾಗೂ ಮಗುವಿನ ಭ್ರೂಣದ ಬಗ್ಗೆ ಅತ್ಯಂತ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಒಂದು ಸಣ್ಣ ಉದಾಸೀನತೆಯೂ ಕೂಡ ಭ್ರೂಣದ ಮೇಲೆ ಅಹಿತಕರವಾದಂತಹ ಪರಿಣಾಮ ಬೀರುತ್ತದೆ. ಆರೋಗ್ಯದಲ್ಲಿ ಏರುಪೇರುಂಟಾಗಿ ತಾಯಿ ಹಾಗೂ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ. ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರಿಗೆ ಸೂಕ್ತ ಸಲಹೆಗಳು

ಉತ್ತಮ ಆಹಾರದ ಅಭ್ಯಾಸವು ತಾಯಿಯ ಆರೋಗ್ಯವನ್ನು ಪೋಷಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕಾರಣ, ತಾಯಿಯು ಸೇವಿಸುವ ಆಹಾರವು ಭ್ರೂಣದಲ್ಲಿರುವ ಮಗುವಿಗೂ ತಲುಪುತ್ತದೆ. ಹೀಗಾಗಿ ಗರ್ಭಧಾರಣೆಯ ಸಮಯದಲ್ಲಿ ಎಷ್ಟು ಆರೋಗ್ಯಕರವಾದ ಆಹಾರವನ್ನು ಸೇವಿಸುವರೋ ಅಷ್ಟು ತಾಯಿಯ ಆರೋಗ್ಯಕ್ಕೆ ಒಳ್ಳೆಯದು. ಗರ್ಭಧಾರಣೆಯ ಸಮಯದಲ್ಲಿ ಸೇವಿಸಬಾರದಂತಹ ಆಹಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ....

ತೊಳೆಯದ ತರಕಾರಿಗಳು ಮತ್ತು ಹಣ್ಣುಗಳು

ತೊಳೆಯದ ತರಕಾರಿಗಳು ಮತ್ತು ಹಣ್ಣುಗಳು

ತರಕಾರಿಗಳು ಮತ್ತು ಹಣ್ಣುಗಳನ್ನು ಸ್ವಚ್ಛಗೊಳಿಸದೇ ಬಳಸುವುದರಿಂದ ಹಾನಿಕಾರಕ ಸೂಕ್ಷ್ಮಜೀವಿಗಳು ದೇಹದೊಳಗೆ ಸೇರಿ ಸೋಂಕುಗಳನ್ನು ಹರಡುತ್ತವೆ ಹಾಗೂ ಕೊನೆಗೆ ಇದು ಅಪಾಯಕಾರಿ ಮಟ್ಟಕ್ಕೆ ತಲುಪಿ ಗರ್ಭಪಾತಕ್ಕೆ ಎಡೆಮಾಡಿ ಕೊಡುತ್ತದೆ.

ಅತಿಯಾದ ಕಾಫಿ ಸೇವನೆ

ಅತಿಯಾದ ಕಾಫಿ ಸೇವನೆ

ಅತಿಯಾದ ಕಾಫಿ ಸೇವನೆಯಿಂದ ,ಕಾಫಿಯಲ್ಲಿರುವ ಕೆಫೀನ್ ಅಂಶವು ದೇಹಕ್ಕೆ ಸೇರಿ, ದೇಹವು ಅತಿಯಾದ ಉಷ್ಣತೆಗೊಳಗಾಗುತ್ತದೆ. ಹಾಗೂ ಇದು ಗರ್ಭಪಾತಕ್ಕೆ ಅನುವು ಮಾಡಿಕೊಡುತ್ತದೆ.

ಗ್ರೀನ್ ಟೀ ಸೇವನೆ

ಗ್ರೀನ್ ಟೀ ಸೇವನೆ

ಗ್ರೀನ್ ಟೀನಲ್ಲೂ ಸಹ ಕೆಫಿನ್ ಅಂಶ ಸೇರಿರುವುದರಿಂದ, ದಿನಕ್ಕೆ ಒಂದು ಲೋಟಕ್ಕಿಂತ ಹೆಚ್ಚು ಟೀ ಸೇವಿಸುವುದರಿಂದ ಗರ್ಭಪಾತವಾಗುವ ಸಾಧ್ಯತೆಗಳು ಹೆಚ್ಚು.

ಲಿಚಿ ಹಣ್ಣುಗಳು

ಲಿಚಿ ಹಣ್ಣುಗಳು

ಗರ್ಭಿಣಿಯರು ಲಿಚಿ ಹಣ್ಣುಗಳಿಂದ ದೂರವಿದ್ದರೆ ಒಳ್ಳೆಯದು. ಇದೂ ಸಹ ಅತಿಯಾದ ಉಷ್ಣತೆಯನ್ನು ಬಿಡುಗಡೆ ಮಾಡುವುದರಿಂದ , ಯೋನಿಸ್ರಾವದಂತಹ ಗಂಭೀರ ಪರಿಣಾಮಗಳಿಗೆ ಎಡೆಮಾಡಿಕೊಟ್ಟು, ಗರ್ಭಪಾತಕ್ಕೆ ಕಾರಣವಾಗುತ್ತದೆ.

ಮೊಳಕೆಯೊಡೆದ ಆಲೂಗಡ್ಡೆ

ಮೊಳಕೆಯೊಡೆದ ಆಲೂಗಡ್ಡೆ

ವೈಜ್ಞಾನಿಕ ಸಂಶೋದನೆಗಳು ಹೇಳುವ ಪ್ರಕಾರ ಮೊಳಕೆಯೊಡೆದ ಆಲೂಗಡ್ಡೆಗಳಿಂದ ಸೋಲನಿನ್ ಎಂಬ ವಿಷಯುಕ್ತ ಪದಾರ್ಥ ಬಿಡುಗಡೆಯಾಗುವುದರಿಂದ ಇದು ಭ್ರೂಣದ ಮೇಲೆ ಗಂಭೀರ ಪರಿಣಾಮ ಬೀಳುತ್ತದೆ.

ಎಳ್ಳು

ಎಳ್ಳು

ಎಳ್ಳು ಸಹ ಅತಿಯಾದ ಉಷ್ಣಕ್ಕೆ ಕಾರಣವಾಗುತ್ತದೆ. ಅದರಲ್ಲೂ ಎಳ್ಳನ್ನು ಜೇನುತುಪ್ಪದ ಜೊತೆ ಸೇವಿಸುವುದರಿಂದ ಗರ್ಭಪಾತಕ್ಕೆ ದಾರಿಮಾಡಿಕೊಟ್ಟಂತಾಗುತ್ತದೆ.

ಲಿವರ್

ಲಿವರ್

ನೀವು ಮಾಂಸಾಹಾರಿಗಳಾಗಿದ್ದಲ್ಲಿ, ಪ್ರಾಣಿಗಳ ಲಿವರ್(ಯಕೃತ್ತು) ಸೇವಿಸುವುದನ್ನು ಖಡಾಖಂಡಿತವಾಗಿ ನಿಲ್ಲಿಸಬೇಕು. ಲಿವರ್‌ನಲ್ಲಿ ವಿಟಮಿನ್ 'ಎ' ಹೆಚ್ಚು ಇರುತ್ತದೆ.ಇದು ಬ್ರೂಣವನ್ನು ವಿಕಾರಗೊಳಿಸುತ್ತದೆ ಹಾಗು ಗರ್ಭಪಾತಕ್ಕೆ ಕಾರಣವಾಗುತ್ತದೆ.

ಮೀನು

ಮೀನು

ಕೆಲವು ಜಾತಿಯ ಮೀನುಗಳು ಪಾದರಸದಂತಹ ರಾಸಾಯನಿಕವನ್ನು ಹೆಚ್ಚು ಬಿಡುಗಡೆ ಮಾಡುವುದರಿಂದ ಗರ್ಭಪಾತದಂತಹ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.

 
English summary

Stay Away From These 8 Foods If You Want To Avoid Miscarriages!

There are some foods that a pregnant woman must never consume, because they can induce a miscarriage, causing her to lose her child. Have a look at the list of foods here.
Please Wait while comments are loading...
Subscribe Newsletter