For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ತ್ವಚೆಯಲ್ಲಿ ಉಂಟಾಗುವ ಕಲೆಗಳ ನಿವಾರಣೆಗೆ ಮನೆಮದ್ದುಗಳು

By Jaya Subramanya
|

ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ಅತ್ಯಂತ ಪ್ರಮುಖವಾದುದು. ತನ್ನದೇ ಆದ ಕರುಳ ಕುಡಿ ತನ್ನ ಗರ್ಭದಲ್ಲಿ ಕುಡಿಯೊಡೆಯುತ್ತಿದೆ ಎಂಬ ಸುದ್ದಿಯಿಂದ ಯಾವ ಹೆಣ್ಣಿಗೆ ತಾನೇ ಹರ್ಷವಾಗದು. ಪ್ರತಿಯೊಬ್ಬ ಸ್ತ್ರೀ ಕೂಡ ಮಗುವಿನ ಜನನವನ್ನು ಆನಂದಿಸುತ್ತಾಳೆ ಮತ್ತು ಗರ್ಭಾವಸ್ಥೆಯ ಪ್ರತಿಯೊಂದು ಸನ್ನಿವೇಶವನ್ನು ತನ್ನ ಮನದಲ್ಲಿ ಹಿಡಿದಿಟ್ಟುಕೊಳ್ಳುತ್ತಾಳೆ.

ಗರ್ಭಾವಸ್ಥೆಯಲ್ಲಿ ಹೆಣ್ಣು ತನ್ನ ಅರೋಗ್ಯ ಮತ್ತು ದೇಹದ ಕಾಳಜಿಯನ್ನು ಚೆನ್ನಾಗಿ ಮಾಡಬೇಕಾಗುತ್ತದೆ. ದೇಹವು ಬೇಗನೇ ನಂಜಿಗೆ ಒಳಗಾಗುವ ಸಂದರ್ಭ ಈ ಸಮಯದಲ್ಲಿ ಅಧಿಕವಾಗಿರುವುದರಿಂದ ಗರ್ಭಿಣಿಯರು ಸೂಕ್ತ ಆರೈಕೆಯನ್ನು ಮಾಡಬೇಕಾಗುತ್ತದೆ. ನಿಮ್ಮ ಮಗುವಿನ ಕಾಳಜಿಯೊಂದಿಗೆ ನಿಮ್ಮ ಆರೈಕೆ ಕೂಡ ಪ್ರಮುಖವಾದುದಾಗಿದೆ.

Pregnancy

ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ಪ್ರಮುಖ ವಿಚಾರ ಗರ್ಭಾವಸ್ಥೆಯಲ್ಲಿ ಮೂಡುವ ಕಲೆಗಳ ಕುರಿತಾಗಿದೆ. ಕೆಲವೊಂದು ಕಲೆಗಳು ನಿಮ್ಮ ತ್ವಚೆಯಲ್ಲಿ ಗಾಢವಾದ ಪರಿಣಾಮವನ್ನು ಉಂಟುಮಾಡಬಲ್ಲವು ಇವುಗಳನ್ನು ಹೋಗಲಾಡಿಸುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿಸಲಿದ್ದೇವೆ.

ಗಾಢ ಕಲೆಗಳು
ಗರ್ಭಾವಸ್ಥೆಯ ಸಮಯದಲ್ಲಿ, ಸ್ತ್ರೀಯರು ಹೆಚ್ಚು ಕಡಿಮೆ ಗಾಢ ಬಣ್ಣದ ಕಲೆಗಳನ್ನು ತಮ್ಮ ಮುಖ ಮತ್ತು ದೇಹದ ಭಾಗಗಳಲ್ಲಿ ಹೊಂದುತ್ತಾರೆ. ಇದನ್ನು ಮೆಲಾಸ್ಮ ಅಥವಾ ಚಲೋಸ್ಮಾ ಎಂದು ಕರೆಯಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಉಂಟಾಗುವ ಮಾಸ್ಕ್ ಎಂಬುದಾಗಿ ಇದನ್ನು ಬಣ್ಣಿಸಲಾಗಿದೆ. ಹಣೆ, ಮೂಗು ಮತ್ತು ಕೆನ್ನೆಯ ಮೂಳೆಗಳಲ್ಲಿ ಪಿಗ್ಮಂಟೇಶನ್ ಉಂಟಾಗುತ್ತದೆ ಮತ್ತು ಇದು ಮಾಸ್ಕ್‌ನ ಆಕಾರವನ್ನು ತಾಳುತ್ತದೆ. ದವಡೆಯ ಕೆಳಗೆ, ಮೊಲೆ ತೊಟ್ಟು ಮತ್ತು ಜನನಾಂಗ ಭಾಗದಲ್ಲೂ ಈ ಪಿಗ್ಮಂಟೇಶನ್ ಉಂಟಾಗುತ್ತದೆ. ಈ ಪಿಗ್ಮೆಂಟೇಶನ್ ತಾತ್ಕಾಲಿಕವಾಗಿದ್ದರೂ ಸೂರ್ಯನ ಬಿಸಿಲನ ಪ್ರಭಾವಕ್ಕೆ ಒಳಗಾದಾಗ ಇದು ಹೆಚ್ಚಾಗುತ್ತದೆ. ಆದ್ದರಿಂದ ಬಿಸಿಲಿಗೆ ಅಡ್ಡಾಡುವ ಸಮಯದಲ್ಲಿ ಛತ್ರಿ ಬಳಸಿ

ನಿಮ್ಮ ತ್ವಚೆಗೆ ಹಾನಿಕಾರಕ ಸೌಂದರ್ಯ ವರ್ಧಕಗಳನ್ನು ಬಳಸುವುದನ್ನು ನಿಲ್ಲಿಸಿ. ಈ ಸಮಯದಲ್ಲಿ ತ್ವಚೆಯು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ವಿಶೇಷವಾಗಿ ತಾಯಂದಿರಿಗಾಗಿ ಸಿದ್ಧಪಡಿಸಲಾದ ಔಷಧವನ್ನು ಬಳಸಿ. ಮೆಲಾಸ್ಮದ ಪರಿಣಾಮ ಕಡಿಮೆ ಇದ್ದಾಗ ಇದು ಅಷ್ಟೊಂದು ಹಾನಿಕಾರಕ ಎಂದೆನಿಸುವುದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಆಯುರ್ವೇದಿಕ್ ಅಂಶಗಳ ಮೂಲಕ ಕೂ ಈ ಪರಿಸ್ಥಿತಿಯನ್ನು ಹತೋಟಿಗೆ ತರಬಹುದಾಗಿದೆ. ಇಂದಿನ ಲೇಖನದಲ್ಲಿ ಕೆಲವೊಂದು ಆಯುರ್ವೇದಿಕ್ ಪರಿಹಾರಗಳನ್ನು ನಾವು ನೀಡುತ್ತಿದ್ದು ಇದರಿಂದ ಈ ಕಲೆಗಳನ್ನು ನೀವು ಹೋಗಲಾಡಿಸಿಕೊಳ್ಳಬಹುದಾಗಿದೆ.

ಗ್ರೇಪ್ ಸೀಡ್ ಆಯಿಲ್
ಮೆಲಾಸ್ಮಾವನ್ನು ಉಪಚರಿಸಲು ಇದು ಅತ್ಯುತ್ತಮವಾಗಿದೆ. ಈ ಆಯಿಲ್‌ನಲ್ಲಿ ಪ್ರೊನ್ಟೋಸಯಾನಿಡಿನ್ಗಳಿದ್ದು ಇದು ಕಪ್ಪು ಕಲೆ ಮತ್ತು ಮೆಲಾಸ್ಮವನ್ನು ನಿವಾರಿಸುತ್ತದೆ. ಗ್ರೇಪ್ ಸೀಡ್ ಆಯಿಲ್‌ನೊಂದಿಗೆ ತೆಂಗಿನೆಣ್ಣೆಯನ್ನು ಮಿಶ್ರ ಮಾಡಿ ಮತ್ತು ಕಲೆ ಇರುವ ಭಾಗಕ್ಕೆ ಹಚ್ಚಿ.

ದಾಳಿಂಬೆ ಜ್ಯೂಸ್
ತಾಜಾ ದಾಳಿಂಬೆ ಜ್ಯೂಸ್ ಮೆಲಾಸ್ಮಾವನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ. ಬೀಜವನ್ನು ಮಿಕ್ಸರ್‌ನಲ್ಲಿ ಹಾಕಿ ಜ್ಯೂಸ್ ಸಿದ್ಧಪಡಿಸಿ.

ಅಲೊವೇರಾ ಜೆಲ್
ಗರ್ಭಾವಸ್ಥೆಯಲ್ಲಿ ತ್ವಚೆಯು ಒಣಗುತ್ತದೆ. ಇದಕ್ಕೆ ಉತ್ತಮ ಪರಿಹಾರವೆಂದರೆ ಅಲೊವೇರಾ ಆಗಿದೆ. ಇದು ಸೂರ್ಯನ ಬಿಸಿಲಿನಿಂದ ತ್ವಚೆಯನ್ನು ಸಂರಕ್ಷಿಸುತ್ತದೆ. ಕಲೆ ಇರುವ ಭಾಗದಲ್ಲಿ ಈ ಜೆಲ್ ಹಚ್ಚಿ ಮತ್ತು 15 ನಿಮಿಷಗಳ ನಂತರ ಅದನ್ನು ತೊಳೆದುಕೊಳ್ಳಿ.

ಶ್ರೀಗಂಧದ ಪೇಸ್ಟ್
ಇದು ಬ್ಲೀಚಿಂಗ್ ಅಂಶವನ್ನು ತನ್ನಲ್ಲಿ ಒಳಗೊಂಡಿದೆ. ಇದು ತ್ವಚೆಯಲ್ಲಿ ಉಂಟಾಗುವ ಉರಿಯನ್ನು ಕಡಿಮೆ ಮಾಡುತ್ತದೆ. 1 ಚಮಚ ಶ್ರೀಗಂಧದ ಹುಡಿಯನ್ನು 2 ಚಮಚ ನೀರಿನೊಂದಿಗೆ ಮಿಶ್ರ ಮಾಡಿ ಮತ್ತು ಈ ಭಾಗಕ್ಕೆ ಹಚ್ಚಿ.

ಬಾದಾಮಿ ಹಾಲು
ಬಾದಾಮಿಯಲ್ಲಿ ಹೆಚ್ಚು ಪ್ರೊಟೀನ್ ಮತ್ತು ವಿಟಮಿನ್ ಇ ಅಂಶಗಳಿವೆ. ಇದು ತ್ವಚೆಗೆ ಬೇಕಾದ ಪೋಷಕಾಂಶವನ್ನು ಒದಗಿಸುತ್ತದೆ. ರಾತ್ರಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಮತ್ತು ಇವುಗಳ ಸಿಪ್ಪೆ ಸುಲಿದು ಅದನ್ನು ಬ್ಲೆಂಡರ್‌ನಲ್ಲಿ ಗ್ರೈಂಡ್ ಮಾಡಿಕೊಳ್ಳಿ. ಈ ಹಾಲನ್ನು ತ್ವಚೆಗೆ ಹಚ್ಚಿಕೊಳ್ಳಿ.

English summary

Skin Darkening During Pregnancy & How It Is Caused

Pregnancy is a very beautiful phase of a woman's life. The feeling of giving birth to a bundle of joy is beyond comparable. But pregnancy comes with its own set of problems. Pregnancy causes a lot of changes in our body. We gain weight, our belly expands, we experience morning sickness, etc. All these are common affects of pregnancy but differ in some women.
X
Desktop Bottom Promotion