For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಮಲಗುವ ಕೋಣೆಯಲ್ಲಿ ಇವುಗಳನ್ನೆಲ್ಲಾ ಇಡಬೇಕಂತೆ!

By Manu
|

ಗರ್ಭದಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ತಾಯಿ ಹೆಚ್ಚು ಕಾಳಜಿ ವಹಿಸುವುದು ಸಹಜ. ಅದಕ್ಕಾಗಿಯೇ ಮಗುವಿನ ಬೆಳವಣಿಗೆಗೆ ಬೇಕಾದ ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸುವುದು ಮತ್ತು ಯೋಗ್ಯ ತಪಾಸಣೆ ಮಾಡಿಸುತ್ತಾಳೆ. ಇವೆಲ್ಲಕ್ಕೂ ಹೆಚ್ಚಾಗಿ ಕೆಲವು ಸಕಾರಾತ್ಮಕ ಶಕ್ತಿ ಮಗುವನ್ನು ರಕ್ಷಿಸುತ್ತದೆ. ಜೊತೆಗೆ ಅದರ ಅದೃಷ್ಟವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಮರೆಯಬಾರದು.

ಹೌದು, ನಮ್ಮ ಕಣ್ಣಿಗೆ ಹಾಗೂ ಅಂದಾಜಿಗೂ ನಿಲುಕದ ಅದ್ಭುತ ಶಕ್ತಿಗಳು ಗರ್ಭಿಣಿ ಹಾಗೂ ಹೊಟ್ಟೆಯಲ್ಲಿರುವ ಮಗುವನ್ನು ರಕ್ಷಿಸುತ್ತವೆ. ಈ ಸಕಾರಾತ್ಮಕ ಶಕ್ತಿಯನ್ನು ಸ್ವಾಗತಿಸಲು ಕೆಲವು ಕ್ರಮಗಳನ್ನು ನಾವು ಕೈಗೊಳ್ಳಬೇಕು. ಅದು ಯಾವುದೆಂಬುದನ್ನು ತಿಳಿಯಲು ಮುಂದೆ ಓದಿ...

ಹಳದಿ ಅಕ್ಕಿ

ಹಳದಿ ಅಕ್ಕಿ

ಹಿಂದೂ ಧರ್ಮದಲ್ಲಿ ಅಕ್ಕಿ ಆಧ್ಯಾತ್ಮಿಕವಾಗಿ ಗಮನಾರ್ಹ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಇದನ್ನು ಗರ್ಭಿಣಿಯ ಕೋಣೆ(ರೂಮ್)ನಲ್ಲಿ ಇರುವುದರಿಂದ ಸುತ್ತಲೂ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಇದನ್ನು ಮಂಗಳಕರ ಎಂದು ಭಾವಿಸಲಾಗುವುದು.

ಗುಲಾಬಿ ಬಣ್ಣ

ಗುಲಾಬಿ ಬಣ್ಣ

ಗುಲಾಬಿ ಬಣ್ಣವು ಹೆಚ್ಚು ಸುಖ ಮತ್ತು ಸಂತೋಷವನ್ನು ನೀಡುತ್ತದೆ. ಗರ್ಭಿಣಿಯ ಕೋಣೆಯಲ್ಲಿ ಗುಲಾಬಿ ಬಣ್ಣದ ಶೋ ಪೀಸ್ ಇಡುವುದರಿಂದ ಗರ್ಭಿಣಿ ಹಾಗೂ ಗರ್ಭದಲ್ಲಿರುವ ಮಗುವಿಗೆ ಸುಖದ ಅನುಭವ ನೀಡುವುದು.

ಯಶೋಧಾ ಮತ್ತು ಕೃಷ್ಣನ ಚಿತ್ರ

ಯಶೋಧಾ ಮತ್ತು ಕೃಷ್ಣನ ಚಿತ್ರ

ಕೋಣೆಯಲ್ಲಿ ಯಶೋಧಾ ಮತ್ತು ಕೃಷ್ಣನ ಚಿತ್ರವನ್ನು ಗೋಡೆಯ ಮೇಲೆ ಅಂಟಿಸಿ. ಮುಂಜಾನೆ ಎದ್ದಾಗ ಮೊದಲು ಆ ಚಿತ್ರವೇ ಕಾಣುವಂತೆ ಇರಬೇಕು. ಓಡಾಡುವಾಗ ದೃಷ್ಟಿ ಆ ಚಿತ್ರದ ಮೇಲೆ ಬೀಳುತ್ತಿರಬೇಕು.

ವಾಸ್ತು ದೇವರ ಚಿತ್ರ

ವಾಸ್ತು ದೇವರ ಚಿತ್ರ

ವಾಸ್ತುವು ಗರ್ಭಿಣಿಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಕೋಣೆಯಲ್ಲಿ ವಾಸ್ತು ದೇವರ ಚಿತ್ರ ಅಂಟಿಸುವುದರಿಂದ ವಾಸ್ತು ದೇವರು ನಕಾರಾತ್ಮಕ ಶಕ್ತಿಯನ್ನು ನಿಯಂತ್ರಿಸುತ್ತದೆ.

ಹಿತ್ತಾಳೆ ವಸ್ತು

ಹಿತ್ತಾಳೆ ವಸ್ತು

ಹಿತ್ತಾಳೆಯ ಪಾತ್ರೆ ಅಥವಾ ಹಿತ್ತಾಳೆಯ ವಸ್ತುವು ನಕಾರಾತ್ಮಕ ಶಕ್ತಿಯನ್ನು ನಿಯಂತ್ರಿಸಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಗರ್ಭಿಣಿ ತನ್ನ ರೂಮ್‍ನಲ್ಲಿ ಇಟ್ಟುಕೊಂಡರೆ ಉತ್ತಮ ಪರಿಣಾಮ ಪಡೆಯಬಹುದು.

ನವಿಲು ಗರಿ

ನವಿಲು ಗರಿ

ನವಿಲು ಗರಿ ಶ್ರೀಕೃಷ್ಣನ ಸಹಾಯಕ ಎಂದು ಕರೆಯಲಾಗುತ್ತದೆ. ಇದನ್ನು ಪೂಜಾ ಮಂದಿರದಲ್ಲಿ ಅಥವಾ ಮಲಗುವ ಕೋಣೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಹೆಚ್ಚುತ್ತದೆ ಎನ್ನಲಾಗುತ್ತದೆ.

ಬಿಳಿಯ ಪ್ರದರ್ಶನ ಗೊಂಬೆ

ಬಿಳಿಯ ಪ್ರದರ್ಶನ ಗೊಂಬೆ

ಬಿಳಿ ಬಣ್ಣ ಶಾಂತಿ ಮತ್ತು ಉತ್ತಮ ಆರೋಗ್ಯದ ಸಂಕೇತ. ಹಾಗಾಗಿ ಬಿಳಿಯ ಬಣ್ಣದ ಪ್ರದರ್ಶನ ಗೊಂಬೆ ಅಥವಾ ಚಿತ್ರಗಳನ್ನು ಕೋಣೆಯಲ್ಲಿಟ್ಟುಕೊಂಡರೆ ಶುಭವಾಗುವುದು.

ಹೂವು ಮತ್ತು ಗಿಡ

ಹೂವು ಮತ್ತು ಗಿಡ

ತಾಜಾ ಹೂವು ಅಥವಾ ಹಸಿರು ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಇವು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕೊಳೆತ ಹೂವು ಮತ್ತು ಗಿಡವನ್ನು ಇಡಬಾರದು.

English summary

Pregnant Lady Should Keep These Things In Her Room For Having A Happy Baby

Are you waiting for your bundle of joy to take birth? There are certain things or items mentioned in Vastu Shastras, which if kept close to you or in your room, can dissipate negative energy of the surroundings, remove any Vastu dosh and boost your good luck. Check out...
Story first published: Thursday, June 29, 2017, 20:07 [IST]
X
Desktop Bottom Promotion