For Quick Alerts
ALLOW NOTIFICATIONS  
For Daily Alerts

ಸಂತಾನಹೀನ ದಂಪತಿಗಳಿಗೆ ಪರ್ಯಾಯ ಆಶಾಕಿರಣ

By Arshad
|

ತಮ್ಮದೇ ಆದ ಮಕ್ಕಳಿರಬೇಕು ಎಂಬುದು ಪ್ರತಿ ದಂಪತಿಗಳ ಹೆಬ್ಬಯಕೆಯಾಗಿರುತ್ತದೆ. ಇಂದಿನ ದಿನಗಳಲ್ಲಿ ಸಂತಾನಹೀನತೆ ಹೆಚ್ಚಿನ ಸಂಖ್ಯೆಯ ದಂಪತಿಗಳಲ್ಲಿ ಕಂಡುಬರುತ್ತಿದೆ. ಸಂತಾನಹೀನತೆ ಅಥವಾ ಬಂಜೆತನ ಎಂದರೆ ತಮ್ಮದೇ ಆದ ಮಗುವನ್ನು ಪಡೆಯಲು ಆಗುವ ಅಸಮರ್ಥತೆ. ಇದಕ್ಕೆ ಇಂದಿನವರೆಗೂ ಹೆಣ್ಣನ್ನೇ ಕಾರಣವಾಗಿಸುತ್ತಿತ್ತು. ಆದರೆ ವಾಸ್ತವವಾಗಿ ದಂಪತಿಗಳಿಬ್ಬರೂ ಇದಕ್ಕೆ ಸಮನಾದ ಪಾಲುದಾರರಾಗಿದ್ದಾರೆ.

ಇಂದು ವೈದ್ಯವಿಜ್ಞಾನ ಬಹಳ ಮುಂದುವರೆದಿದ್ದು ಈ ಕೊರತೆಯ ಕಾರಣವನ್ನು ಕಂಡುಕೊಂಡು ಸೂಕ್ತ ಚಿಕಿತ್ಸೆ ಹಾಗೂ ಇತರ ಪರ್ಯಾಯ ವಿಧಾನಗಳ ಮೂಲಕ ಬಂಜೆತನವನ್ನು ನಿವಾರಿಸಲು ಬಹಳಷ್ಟು ಸಹಾಯ ಮಾಡಿದೆ. ಇಂದು ವಿಶ್ವದಾದ್ಯಂತ ಲಕ್ಷಾಂತರ ಬಂಜೆತನ ನಿವಾರಣಾ ಚಿಕಿತ್ಸಾಲಯಗಳು ಕೋಟ್ಯಂತರ ದಂಪತಿಗಳ ಒಡಲು ತುಂಬಿವೆ.

ಮಕ್ಕಳಾಗದಿರಲು ಪ್ರಮುಖ ಕಾರಣಗಳು

ಬಂಜೆತನಕ್ಕೆ ಹಲವಾರು ಕಾರಣಗಳಿವೆ. ವಾತಾವರಣದಲ್ಲಿ ಏರುಪೇರು, ಅಸಮರ್ಪಕ ಜೀವನಕ್ರಮ, ಆರೋಗ್ಯ ಸಂಬಂಧಿತ ತೊಂದರೆಗಳು ಹಾಗೂ ಸ್ವಾಭಾವಿಕವಾಗಿ ಏರಿದ ವಯಸ್ಸು ಸಹಾ ಇದಕ್ಕೆ ಪ್ರಮುಖ ಕಾರಣವಾಗಿವೆ. ಬಂಜೆತನಕ್ಕೆ ಹೆಣ್ಣಿನಲ್ಲಿನ ತೊಂದರೆ ಅರ್ಧದಷ್ಟು ಕಾರಣವಾದರೆ ಉಳಿದರ್ಧ ಗಂಡಿನಲ್ಲಿನ ತೊಂದರೆ ಕಾರಣವಾಗಿದೆ. ಅಪರೂಪಕ್ಕೆ ಇಬ್ಬರಲ್ಲಿಯೂ ಇರುವ ಕೊರತೆಗಳು ಕಾರಣವಾಗಿದ್ದುದು ಕಂಡುಬಂದಿದೆ.

ತಮ್ಮದೇ ಆದ ಮಗುವನ್ನು ಪಡೆಯಲು ಯತ್ನಿಸುತ್ತಿರುವ ದಂಪತಿಗಳಿಗೆ ಇದು ಸಾಧ್ಯವಾಗದಿದ್ದಾಗ ಇದಕ್ಕೆ ತಮ್ಮಲ್ಲೊಬ್ಬರಲ್ಲಿರುವ ಕೊರತೆಯೇ ಕಾರಣವೆಂದು ಕಂಡುಬಂದ ತಕ್ಷಣ ಇಬ್ಬರಿಗೂ ಸಿಡಿಲು ಎರಗಿದಂತಾಗುತ್ತದೆ. ಆದರೆ ಇದು ಗರ್ಭಾವಸ್ಥೆ ಪಡೆಯದೇ ಇರುವುದಕ್ಕೆ ಅಂತಿಮ ಕಾರಣವೆಂದು ಸರ್ವಥಾ ನಿರ್ಧರಿಸಕೂಡದು.

ಮಹಿಳೆಯರ ಆಹಾರ ಕ್ರಮ ಹೀಗಿದ್ದರೆ, ಬಂಜೆತನ ಎಂದೂ ಕಾಡದು....

ಇಂದು ಈ ಕೊರತೆಗಳನ್ನು ಕಂಡುಹಿಡಿದು ಸೂಕ್ತ ಚಿಕಿತ್ಸೆ ಹಾಗೂ ಇತರ ಪರ್ಯಾಯ ವಿಧಾನಗಳಿಂದ ಒಡಲನ್ನು ತುಂಬಿಸಲು ನೂರಾರು ವಿಧಾನಗಳಿವೆ. ಯಾವುದಕ್ಕೂ ದಂಪತಿಗಳು ತಮ್ಮ ಪ್ರಥಮ ಪ್ರಯತ್ನಗಳಲ್ಲಿ ಗರ್ಭಾವಸ್ಥೆ ಪಡೆಯಲು ಸಾಧ್ಯವಾಗದೇ ಇದ್ದರೆ ಮೊದಲು ವೈದ್ಯರನ್ನು ಕಂಡು ಪ್ರಾಥಮಿಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಈ ಕೊರತೆ ಇನ್ನಷ್ಟು ಹೆಚ್ಚುವುದನ್ನು ಮೂಲಾವಸ್ಥೆಯಲ್ಲಿಯೇ ಕಂಡುಕೊಂಡು ಸೂಕ್ತ ಚಿಕಿತ್ಸೆ ಪಡೆದು ಯಶಸ್ಸು ಗಳಿಸಬಹುದು. ಬನ್ನಿ, ವೈದ್ಯವಿಜ್ಞಾನ ಈ ದಂಪತಿಗಳಿಗೆ ಯಾವ ರೀತಿಯಲ್ಲಿ ನೆರವಾಗುತ್ತಿದೆ ಎಂಬುದನ್ನು ನೋಡೋಣ....

ಗರ್ಭಾವಸ್ಥೆಯ ಸಂಭವವನ್ನು ಹೆಚ್ಚಿಸುವ ಔಷಧಿಗಳು

ಗರ್ಭಾವಸ್ಥೆಯ ಸಂಭವವನ್ನು ಹೆಚ್ಚಿಸುವ ಔಷಧಿಗಳು

ಯಾವುದೇ ವೈದ್ಯರು ಮೊತ್ತ ಮೊದಲಾಗಿ ದಂಪತಿಗಳ ಆರೋಗ್ಯವನ್ನು ತಪಾಸಣೆಗೊಳಿಸಿ ಇಬ್ಬರಲ್ಲಿಯೂ ಇರುವ ಸಂಭಾವ್ಯ ಕೊರತೆಗಳನ್ನು ಗಮನಿಸುತ್ತಾರೆ. ಈ ಕೊರತೆಯನ್ನು ನೀಗಿಸಬಲ್ಲ ಔಷಧಿಗಳನ್ನು ನೀಡುವ ಮೂಲಕ ಗರ್ಭಾಂಕುರಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಒಂದು ವೇಳೆ ಮಹಿಳೆಯಲ್ಲಿ ಸೂಕ್ತಕಾಲಕ್ಕೆ ಅಂಡಾಣು ಬಿಡುಗಡೆಯಾಗದೇ ಇದ್ದರೆ ಸಕಾಲಕ್ಕೆ ಬಿಡುಗಡೆ ಮಾಡಲು ನೆರವಾಗುವ ಹಾರ್ಮೋನು ಅಥವಾ ರಸದೂತದ

ಔಷಧಿಗಳನ್ನು ನೀಡುವ ಮೂಲಕ ಗರ್ಭಾಂಕುರವಾಗುವಂತೆ ನೋಡಿಕೊಳ್ಳಲಾಗುತ್ತದೆ. ಒಂದು ವೇಳೆ ಪುರುಷರ ವೀರ್ಯಾಣುಗಳ ಸಂಖ್ಯೆಯಲ್ಲಿ ಕೊರತೆ ಇದ್ದರೆ ಇದನ್ನು ಹೆಚ್ಚಿಸಲು ಸಹಾ ಸುಲಭ ಔಷಧಿಗಳಿದ್ದು ಅಂಡಾಣುವಿನೊಂದಿಗೆ ಸಂಯೋಗಗೊಳ್ಳುವ ಸಂಭವ ಹೆಚ್ಚುತ್ತದೆ. ಇಬ್ಬರ ಆರೋಗ್ಯವೂ

ಚೆನ್ನಾಗಿಯೇ ಇದ್ದರೂ ಅಗೋಚರ ಕಾರಣಗಳಿಂದಾಗಿ ಸಂಯೋಗ ಸಾಧ್ಯವಾಗದಿದ್ದರೆ ಈ ಸಂಯೋಗವನ್ನು ಕೃತಕವಾಗಿ ನಡೆಸಲಾಗುತ್ತದೆ. ದೇಹದ ಹೊರಭಾಗದಲ್ಲಿ ನಡೆಸಲಾಗುವ ಸಂಯೋಗ-IVF (In Vitro Fertilization) ಅಥವಾ ಕೃತಕ ಗರ್ಭಧಾರಣೆ (artificial insemination) ವಿಧಾನಗಳನ್ನು ಅನುಸರಿಸಲಾಗುತ್ತದೆ. ಈ ವಿಧಾನದಲ್ಲಿ ಅಂಡಾಣು ಹಾಗೂ ವೀರ್ಯಾಣುಗಳು ದಂಪತಿಗಳದ್ದೇ ಆಗಿರುತ್ತವೆ.

ಕೃತಕ ಗರ್ಭಧಾರಣೆ

ಕೃತಕ ಗರ್ಭಧಾರಣೆ

ಇದು ಅತ್ಯಂತ ಸುಲಭವಾದ ವಿಧಾನವಾಗಿದ್ದು ಪತಿಯಿಂದ ಪಡೆಯಲಾದ ವೀರ್ಯಾಣುಗಳನ್ನು ಅಗತ್ಯಕ್ಕೆ ಸೂಕ್ತವಾಗುವಷ್ಟು ಸಾಂದ್ರೀಕರಿಸಿ ಗಾಜಿನ ನಳಿಕೆಯ ಮೂಲಕ ಪತ್ನಿಯ ಗರ್ಭಾಶಯಕ್ಕೆ ಒದಗಿಸಲಾಗುತ್ತದೆ. ಯಾವ ದಿನ ಅಂಡಾಣು ವೀರ್ಯಾಣುವಿನೊಂದಿಗೆ ಕೂಡುತ್ತದೆ ಎಂಬ ಸಾಧ್ಯತೆಯನ್ನು ಒಂದೇ ಪ್ರಯತ್ನಕ್ಕೆ ಹೇಳಲು ಸಾಧ್ಯವಿಲ್ಲದ ಕಾರಣ ಈ ಸಂಭವ ಅತಿ ಹೆಚ್ಚಾಗಿರುವ ಆರು ದಿನಗಳನ್ನು ಆಯ್ದುಕೊಂಡು ಆರೂ ದಿನ ಸತತವಾಗಿ ಈ ಸಾಂದ್ರೀಕೃತ ವೀರ್ಯಾಣುಗಳನ್ನು ಒದಗಿಸಲಾಗುತ್ತದೆ. ಈ ವಿಧಾನದಲ್ಲಿ ಗರ್ಭಧಾರಣೆಯ ಸಾಧ್ಯತೆ (ಒಂದು ವೇಳೆ ಪತಿಯ ವೀರ್ಯಾಣುಗಳ ಸಂಖ್ಯೆ ಕಡಿಮೆ ಇದ್ದಲ್ಲಿ) ಅತಿ ಹೆಚ್ಚಾಗಿರುತ್ತದೆ. ಈ ವಿಧಾನವನ್ನು ಸಾಮಾನ್ಯ ಚಿಕಿತ್ಸಾಲಯದಲ್ಲಿಯೇ ನಡೆಸಬಹುದು. ಈ ವಿಧಾನ ಪತಿಯ ವೀರ್ಯಾಣುಗಳಿಗೆ ಪ್ರತಿಜೀವಕಗಳನ್ನು ಉತ್ಪಾದಿಸಿ ನಿರಾಕರಿಸುವ ಮಹಿಳೆಯರಿಗೂ ಸೂಕ್ತವಾಗಿದೆ.

ಬಂಜೆತನ ಸಮಸ್ಯೆ ವಿರುದ್ಧ ಹೋರಾಡುವ ಶಕ್ತಿಶಾಲಿ ಆಹಾರಗಳಿವು...

In-Vitro Fertilization (IVF)

In-Vitro Fertilization (IVF)

ಈ ವಿಧಾನ ದುಬಾರಿಯೂ, ಜಟಿಲವೂ ಅತಿ ಸೂಕ್ಷ್ಮವಾಗಿ ನಡೆಸಬೇಕಾಗಿರುವ ಕಾರಣ ಅತಿ ಕಡಿಮೆ ದಂಪತಿಗಳ ಮೇಲೆ ಈ ಪ್ರಯೋಗವನ್ನು ನಡೆಸಲಾಗುತ್ತದೆ. ಯಾವುದೋ ಕಾರಣಕ್ಕೆ ಅಂಡಾಣು ಹಾಗೂ ವೀರ್ಯಾಣುವಿನ ಸಂಯೋಗ ಗರ್ಭಾಶಯದಲ್ಲಿ ಸಾಧ್ಯವಾಗದೇ ಇದ್ದರೆ ಇದನ್ನು ದೇಹದ ಹೊರಗೆ, ಒಂದು ಗಾಜಿನ ಚಿಕ್ಕ ಪಾತ್ರೆಯಲ್ಲಿ, ದೇಹದ ತಾಪಮಾನವನ್ನು ಹೋಲುವ ಪರಿಸರದಲ್ಲಿ ವೀರ್ಯಾಣುಗಳನ್ನು ಸುರಿದು ಸಂಯೋಗಗೊಳ್ಳುವಂತೆ ಮಾಡಲಾಗುತ್ತದೆ. ಅಂಡಾಣು ಫಲಿತಗೊಂಡಿರುವುದನ್ನು ಖಚಿತಪಡಿಸಿದ ಬಳಿಕ ಮತ್ತೊಮ್ಮೆ ಮಹಿಳೆಯ ಗರ್ಭಾಶಯದಲ್ಲಿ ಅತ್ಯಂತ ಕಾಳಜಿಯಿಂದ ಸ್ಥಾಪಿಸಲಾಗುತ್ತದೆ. ಈ ವಿಧಾನದಿಂದ ಜನ್ಮತಳೆದ ಮಕ್ಕಳನ್ನು 'ಟೆಸ್ಟ್ ಟ್ಯೂಬ್ ಬೇಬಿ' ಎಂದೇ ಕರೆಯುತ್ತಾರೆ. ಇಲ್ಲಿ ಟೆಸ್ಟ್ ಟ್ಯೂಬ್ ಗೆ ಯಾವುದೇ ಪಾತ್ರವೇ ಇಲ್ಲದಿದ್ದರೂ ಹೆಸರು ಮಾತ್ರ ಏಕೆ ಬಂತೋ ಗೊತ್ತಿಲ್ಲ. ಗರ್ಭಾಶಯದ ಒಳಗೋಡೆಯ ಮೇಲೆ ಅನಗತ್ಯವಾಗಿ ಬೆಳೆಯುವ ಪದರ (endometriosis), ಪತಿಯ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು, ಗರ್ಭಾಶಯ, ಅಂಡಾಣು ಬಿಡುಗಡೆ, ಗರ್ಭನಾಳ ಮೊದಲಾದ ಅಂಗಗಳಲ್ಲಿ ಯಾವುದೋ ತೊಂದರೆ ಇರುವ ದಂಪತಿಗಳಿಗೆ ಈ ವಿಧಾನ ಸೂಕ್ತವಾಗಿದ್ದು ಸಾಮಾನ್ಯವಾಗಿ ವೈದ್ಯರು ಈ ವಿಧಾನವನ್ನು ಬೇರಾವುದೇ ವಿಧಾನ ಯಶಸ್ವಿಯಾಗದಿದ್ದಾಗ ಮಾತ್ರ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಬಾಡಿಗೆ ತಾಯಿ

ಬಾಡಿಗೆ ತಾಯಿ

ಈ ವಿಧಾನದಲ್ಲಿ ಹೆಸರೇ ತಿಳಿಸುವಂತೆ ಹೆರಿಗೆಯ ಹೊಣೆಯನ್ನು ಮೂರನೆಯ ವ್ಯಕ್ತಿ (ಮಹಿಳೆಯ) ಮೂಲಕ ಪಡೆಯಲಾಗುತ್ತದೆ. ಯಾವುದೋ ಅನಾರೋಗ್ಯದ ಕಾರಣ ಅಥವಾ ಗರ್ಭ ಧರಿಸಿದರೆ ಪ್ರಾಣಾಪಾಯದ ಸಾಧ್ಯತೆ ದಟ್ಟವಾಗಿದ್ದರೆ ಸಹಜ ಹೆರಿಗೆಯ ಮೂಲಕ ಮಗುವನ್ನು ಪಡೆಯಲು ಅಸಾಧ್ಯವಾದ ಮಹಿಳೆಯರಿಗೆ ಈ ವಿಧಾನ ಸೂಕ್ತವಾಗಿದೆ. ಈ ವಿಧಾನದಲ್ಲಿ ಒಂದು ವೇಳೆ ಪತಿ ಪತ್ನಿಯರ ಅಂಡಾಣು ವೀರ್ಯಾಣುಗಳನ್ನು ಕೃತಕ ಗರ್ಭಧಾರಣಾ ವಿಧಾನದ ಮೂಲಕ ಸಂಯೋಗಗೊಳಿಸಿ ಫಲಿತಗೊಂಡ ಅಂಡಾಣುವನ್ನು ಬಾಡಿಗೆ ತಾಯಿಯಾಗಲು ಒಪ್ಪಿರುವ ಮಹಿಳೆಯ

ಗರ್ಭಾಶಯದಲ್ಲಿ ಸ್ಥಾಪಿಸಿ ಸಹಜ ಹೆರಿಗೆಯಾಗುವಂತೆ ಮಾಡಲಾಗುತ್ತದೆ. ಹೆರಿಗೆಯ ಬಳಿಕ ಕಾನೂನುಬದ್ದವಾಗಿ ದಂಪತಿಗಳು ಈ ಮಗುವಿನ ಪಾಲಕರಾಗುತ್ತಾರೆ.

ದಾನಿಯ ವೀರ್ಯಾಣುಗಳು ಹಾಗೂ ಅಂಡಾಣುಗಳು

ದಾನಿಯ ವೀರ್ಯಾಣುಗಳು ಹಾಗೂ ಅಂಡಾಣುಗಳು

ಒಂದು ವೇಳೆ ಪತಿ ಅಥವಾ ಪತ್ನಿ ಇಬ್ಬರಲ್ಲೊಬ್ಬರ ಅಥವಾ ಇಬ್ಬರ ಅಂಡಾಣು-ವೀರ್ಯಾಣುಗಳು ಫಲಿತಗೊಳ್ಳುವ ಕ್ಷಮತೆ ಹೊಂದಿರದ ಪಕ್ಷದಲ್ಲಿ ಇವುಗಳಲ್ಲಿ ಅಗತ್ಯವಿರುವ ಅಂಡಾಣು ವೀರ್ಯಾಣುಗಳನ್ನು ಅಜ್ಞಾತ ದಾನಿಯರಿಂದ ಪಡೆಯಲಾಗುತ್ತದೆ. ಈ ಸೇವೆಯನ್ನು ನೀಡುವ ಚಿಕಿತ್ಸಾಲಯಗಳಲ್ಲಿ ದಾನಿಯರ ವಿವರಗಳನ್ನು ಅತಿ ಗೋಪ್ಯವಾಗಿರಿಸಲಾಗುವ ಕಾರಣ ಹಾಗೂ ಕಾನೂನಿನ ಮಾನ್ಯತೆ ಪಡೆದ ಬಳಿಕ ಮಾತ್ರವೇ ಈ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿರುವ ಕಾರಣ ಹೆರಿಗೆಯ ಬಳಿಕ ಪತಿ ಪತ್ನಿಯರೇ ಮಗುವಿನ ಕಾನೂನುಬದ್ಧ ಪಾಲಕರಾಗುತ್ತಾರೆ.

ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಧಾರಣೆ

ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಧಾರಣೆ

ಕೆಲವೊಮ್ಮೆ ದೈಹಿಕ ಕಾರಣಗಳಿಂದಾಗಿ, ಅಂದರೆ ಯಾವುದಾದರೊಂದು ಅಂಗದಲ್ಲಿ ಅಸಾಮಾನ್ಯ ಬೆಳವಣಿಗೆ ಅಥವಾ ತೊಂದರೆ ಇದ್ದು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬಹುದಾಗಿದ್ದರೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ ಬಳಿಕ ಗರ್ಭಧಾರಣೆಯ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಗರ್ಭಾಶಯದ ಒಳಗೋಡೆಯ ಮೇಲೆ ಅನಗತ್ಯವಾಗಿ ಬೆಳೆಯುವ ಪದರ (endometriosis), ಗರ್ಭನಾಳ ಒಳಗಿನಿಂದ ಕಟ್ಟಿಕೊಂಡಿರುವುದು, ಪುರುಷನ ವೃಷಣದಲ್ಲಿ ತೊಂದರೆ ಮೊದಲಾದ ತೊಂದರೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬಹುದಾಗಿದೆ. ಆದರೆ ಆಯಾ ತೊಂದರೆಯ ಗಂಭೀರತೆಯನ್ನು ಪರಿಗಣಿಸಿ ಕೆಲವಾರು ಪರೀಕ್ಷೆಯ ಬಳಿಕವೇ ತಜ್ಞ ವೈದ್ಯರ ತಂಡ ಶಸ್ತ್ರಚಿಕಿತ್ಸೆಯ ನಿರ್ಧಾರವನ್ನು ಕೈಗೊಳ್ಳುತ್ತದೆ.

ಆಕ್ಯುಪಂಕ್ಚರ್

ಆಕ್ಯುಪಂಕ್ಚರ್

ಈ ಚಿಕಿತ್ಸೆಯಲ್ಲಿ ಇದು ಹೊಸದಾಗಿ ಪ್ರಸ್ತುತಪಡಿಸಲಾಗಿರುವ ವಿಧಾನವಾಗಿದ್ದರೂ ಚೀನಾ ಸಹಿತ ಇತರ ದೇಶಗಳಲ್ಲಿ ನೂರಾರು ವರ್ಷಗಳಿಂದ ಚಿಕಿತ್ಸಾ ಪದ್ದತಿಯಾಗಿ ಬಳಸಲಾಗುತ್ತದೆ. ಕೃತಕ ಗರ್ಭಧಾರಣೆಯೂ ಯಶಸ್ವಿಯಾಗದ ದಂಪತಿಗಳಿಗೆ ಈ ವಿಧಾನ ಆಶಾಕಿರಣವಾಗಿ ಗೋಚರಿಸುತ್ತದೆ. ಈ ವಿಧಾನದಲ್ಲಿ ದೇಹದ ಕೆಲವು ಪ್ರಮುಖ ಸ್ಥಾನಗಳಲ್ಲಿ ಸೂಜಿಯನ್ನು ಚುಚ್ಚುವ ಮೂಲಕ ದೇಹದ ಶಕ್ತಿ ಹೆಚ್ಚು ಪ್ರವಹಿಸುವಂತೆ ಮಾಡಲಾಗುತ್ತದೆ. ಈ ಸ್ಥಾನಗಳು ತಲೆಯಿಂದ ಪಾದದವರೆಗೆ ವಿವಿಧ ಭಾಗಗಳಲ್ಲಿರುತ್ತವೆ. ಈ ವಿಧಾನದಿಂದ ಬಂಜೆತನ ಎದುರಿಸುತ್ತಿರುವ ದಂಪತಿಗಳಿಗೆ ಹೆಚ್ಚಿನ ಫಲವಂತಿಕೆ ಲಭಿಸುತ್ತದೆ. ಇಂದಿನ ದಿನಗಳಲ್ಲಿ ಈ ವಿಧಾನ ಹೆಚ್ಚು ಜನಪ್ರಿಯವಾಗುತ್ತಿದ್ದು ಕೃತಕ ಗರ್ಭಧಾರಣೆಯ ಜೊತೆಜೊತೆಗೇ ನಿರ್ವಹಿಸುವ ಮೂಲಕ ಗರ್ಭಧರಿಸುವ ಸಾಧ್ಯತೆ ಹೆಚ್ಚುತ್ತಿರುವುದನ್ನು ಗಮನಿಸಲಾಗಿದೆ.

English summary

Pregnancy options for infertile couples

Infertility is a major issue that haunts couples nowadays. It is the inability to conceive or bear a child. This is definitely on the rise which is very much evident from the increasing number of fertility clinics all over the world. The reasons are numerous for the problem. It may include environmental factors, lifestyle, health issues, and of course age. It is not only the women who are affected by infertility, in fact, men are also subjects to it. In many cases, both the man and woman are reported to be infertile.
X
Desktop Bottom Promotion