For Quick Alerts
ALLOW NOTIFICATIONS  
For Daily Alerts

ಸ್ತನ್ಯಪಾನದ ಸಮಯದಲ್ಲಿ ಬ್ರಾ ಧರಿಸುವುದು ಸುರಕ್ಷಿತವೇ?

By Arshad
|

ಹೆರಿಗೆಯ ಬಳಿಕ ಮುಂದಿನ ಕೆಲವು ತಿಂಗಳುಗಳ ಕಾಲ ತಾಯಿ ತನ್ನ ಮಗುವಿಗೆ ಹಾಲೂಡಿಸುವುದು ಅನಿವಾರ್ಯವಾಗಿದೆ. ಈ ಅವಧಿಯಲ್ಲಿ ಎಲ್ಲಾ ತಾಯಂದಿರು ಕೇಳುವ ಒಂದು ಸಮಾನವಾದ ಪ್ರಶ್ನೆ ಎಂದರೆ "ಈ ಸಮಯದಲ್ಲಿ ನಾನು ಕಂಚುಕ ತೊಡಬಹುದೇ?" ಹೆಚ್ಚಿನ ವೈದ್ಯರು ನೀಡುವ ಸಮಾನವಾದ ಉತ್ತರವೆಂದರೆ "ನಿಮಗೆ ಅನುಕೂಲಕರವಾದ ಹಾಗೂ ಸ್ತನಗಳಿಗೆ ಸೂಕ್ತ ಆಧಾರವನ್ನು ನೀಡುವ ಕಂಚುಕಗಳನ್ನು ಖಂಡಿತಾ ತೊಡಬಹುದು"

ಸ್ತನ್ಯಪಾನದ ಸಮಯದಲ್ಲಿ ಕಂಚುಕ ಧರಿಸುವುದು ಸುರಕ್ಷಿತವೇ? ಹೌದು, ಆದರೆ ನಿತ್ಯವೂ ತೊಡುವಂತಹ ಕಂಚುಕಗಳಲ್ಲ. ಏಕೆಂದರೆ ಈ ಅವಧಿಯಲ್ಲಿ ಸ್ತನಗಳ ಗಾತ್ರ ಇತರ ಸಮಯಕ್ಕಿಂತ ಕೊಂಚ ಹಿಗ್ಗುವ ಕಾರಣ ಈ ಸಮಯಕ್ಕೆ ಹೊಂದುವ ಗಾತ್ರದ ಕಂಚುಕಗಳನ್ನು ಖರೀದಿಸಬೇಕು. ಎಂದಿನ ಸಮಯದ ಕಂಚುಕ ಧರಿಸಿದರೆ ಇದು ಈಗಿನ ಗಾತ್ರಕ್ಕೆ ಹೊಂದಿಕೆಯಾಗದೇ ಅನಾನುಕೂಲವಾಗಬಹುದು.

ಮಗು ಅತೀ ಹೆಚ್ಚೇ ಎದೆಹಾಲು ಕುಡಿಯುತ್ತಿದೆಯೇ? ಹಾಗಾದರೆ ಇತ್ತ ಗಮನಿಸಿ...

ಕೆಲವು ತಾಯಂದಿರು ಉದ್ಯೋಗಸ್ಥೆಯಾಗಿದ್ದು ಇಡಿಯ ದಿನ ಧರಿಸುವುದು ಅನಿವಾರ್ಯವಾಗಬಹುದು. ಈ ಸಮಯದಲ್ಲಿ ಸೂಕ್ತವಲ್ಲದ ಗಾತ್ರದ ಕಂಚುಕ ಅಥವಾ ಬ್ರಾ ಧರಿಸುವ ಮೂಲಕ ಸ್ತನಗಳ ಮೇಲಿನ ಒತ್ತಡ ಹಾಲಿನ ಉತ್ಪಾದನೆಯ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ಈ ಸಮಯದಲ್ಲಿ ಸರಿಯಾದ ಗಾತ್ರದ ಕಂಚುಕ ಹಾಗೂ ಹತ್ತಿಯ ಬಟ್ಟೆಯ ಕಂಚುಕವನ್ನು ಆಯ್ದುಕೊಳ್ಳುವುದು ಜಾಣತನವಾಗಿದೆ. ಹಾಲಿನ ಉತ್ಪಾದನೆ ದಿನದ ಎಲ್ಲಾ ಸಮಯದಲ್ಲಿ ಹಾಲಿನ ಉತ್ಪಾದನೆ ಏಕ ಪ್ರಕಾರವಾಗಿರುವುದಿಲ್ಲ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....

 ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ಆರೋಗ್ಯ ತಜ್ಞರು ನೀಡುವ ಸಲಹೆಯ ಪ್ರಕಾರ ಈ ಅವಧಿಯಲ್ಲಿ ನಿತ್ಯಬಳಕೆಯ ಗಾತ್ರದ ಕಂಚುಕಗಳನ್ನು ತೊಡುವುದು ಸಲ್ಲದು. ಏಕೆಂದರೆ ಈ ಕಂಚುಕಗಳು ಈಗಿನ ಸ್ತನಗಳ ಗಾತ್ರಕ್ಕಿಂದ ಚಿಕ್ಕದಾಗಿರುತ್ತವೆ. ಸ್ತನಪಾನದ ಸಮಯದಲ್ಲಿ ಸ್ತನಗಳು ಹೆಚ್ಚು ಸೂಕ್ಷ್ಮಸಂವೇದಿಯಾಗಿರುತ್ತವೆ. ಆದ್ದರಿಂದ ಕೆಲವು ಬಗೆಯ ಕಂಚುಕಗಳು ಸ್ತನಗಳಿಗೆ ಅಸುಖಕರವಾಗಿರಬಹುದು ಹಾಗೂ ಕೆಲವು ತೊಂದರೆಗಳನ್ನು ಹುಟ್ಟುಹಾಕಬಹುದು. ಆದ್ದರಿಂದ ಹಾಲೂಡಿಸುವ ಅವಧಿ ಪೂರ್ಣಗೊಳ್ಳುವವರೆಗಾದರೂ ನಿತ್ಯದ ಕಂಚುಕಗಳನ್ನು ಕಪಾಟಿನ ಒಳಗೆ ಸುರಕ್ಷಿತವಗಿರಿಸುವುದೇ ಉತ್ತಮ.

ಮಗುವಿಗೆ ಎದೆಹಾಲುಣಿಸುವ ತಾಯಂದಿರು, ಇಂತಹ ತಪ್ಪುಗಳನ್ನು ಮಾಡಬೇಡಿ..

ಇದರಿಂದ ಯಾವ ತೊಂದರೆ ಎದುರಾಗಬಹುದು?

ಇದರಿಂದ ಯಾವ ತೊಂದರೆ ಎದುರಾಗಬಹುದು?

ಈ ಅವಧಿಯಲ್ಲಿ ಹಿಗ್ಗಿರುವ ಸ್ತನಗಳನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳಲು ನಿಮ್ಮ ನಿತ್ಯದ ಕಂಚುಕಗಳಿಗೆ ಸಾಧ್ಯವಾಗಲಾರದು. ಏಕೆಂದರೆ ಕಂಚುಕಗಳ ಅಂಚುಗಳು ಹೆಚ್ಚಿನ ಒತ್ತಡ ಹೇರಿ ನೋವುಂಟುಮಾಡಬಹುದು. ಕೆಲವು ಸಂದರ್ಭಗಳಲ್ಲಿ ಈ ಒತ್ತಡ ಅತಿ ಹೆಚ್ಚಾಗಿದ್ದು ನಿದ್ರೆ ಆವರಿಸಲೂ ಅಡ್ಡಿಯಾಗಬಹುದು. ಅಲ್ಲದೇ ಬಿಗಿಯಾಗಿರುವ ಭಾವನೆ ಇಡಿಯ ದಿನ ಸತತವಾಗಿ ಕಾಡುತ್ತಾ ನಿತ್ಯದ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲೂ ಅಡ್ಡಿಯುಂಟುಮಾಡಬಹುದು. ನಾಲ್ಕು ಜನರೆದುದು ಇದನ್ನು ಸರಿಪಡಿಸಲಾಗದೇ ಮುಜುಗರವನ್ನೂ ಎದುರಿಸಬೇಕಾಗಿಬರಬಹುದು.

ಇನ್ನೊಂದು ತೊಂದರೆ

ಇನ್ನೊಂದು ತೊಂದರೆ

ಈ ಅವಧಿಯಲ್ಲಿ ತಾಯಂದಿರುವ ಎದುರಿಸುವ ಇನ್ನೊಂದು ತೊಂದರೆ ಎಂದರೆ ಸ್ತನಗಳ ಗಾತ್ರದಲ್ಲಿ ಆಗುವ ಏರುಪೇರು. ಮಗು ಹಾಲು ಕುಡಿಯುವ ಮುನ್ನ ಇರುವ ಗಾತ್ರ ಬಳಿಕ ಕೊಂಚ ಚಿಕ್ಕದಾಗುತ್ತದೆ. ಆದ್ದರಿಂದ ಹಾಲು ಖಾಲಿಯಾದ ಬಳಿಕ ನಿತ್ಯಗಾತ್ರದ ಕಂಚುಕ ಸೂಕ್ತ ಎಂದೆನ್ನಿಸಿದರೂ ಹಾಲು ತುಂಬಿದ ಬಳಿಕ ಅಸುಖಕರವಾಗಬಹುದು. ಇದೇ ಕಾರಣಕ್ಕೆ ಸಡಿಲವಾದ ಹಾಗೂ ಹತ್ತಿಯ ಬಟ್ಟೆಯಿಂದ ತಯಾರಾದ ಕಂಚುಕಗಳನ್ನು ಧರಿಸುವುದು ಸೂಕ್ತ.

ಇದರಿಂದ ಸ್ತನಗಳ ಉರಿಯೂತ (Mastitis) ಎದುರಾಗಬಹುದೇ?

ಇದರಿಂದ ಸ್ತನಗಳ ಉರಿಯೂತ (Mastitis) ಎದುರಾಗಬಹುದೇ?

ಒಂದು ವೇಳೆ ಸ್ತನಪಾನದ ಸಮಯದಲ್ಲಿ ನಿತ್ಯದ ಕಂಚುಕಗಳನ್ನೇ ತೊಡಬೇಕಾಗಿ ಬಂದರೆ ಕೆಲವು ಮಹಿಳೆಯರಿಗೆ Mastitis ಅಥವಾ ಸ್ತನಗಳ ಉರಿಯೂತವೂ ಎದುರಾಗಬಹುದು. ಇದೇ ಕಾರಣಕ್ಕೆ ತಜ್ಞರು ನಿತ್ಯದ ಕಂಚುಕಗಳನ್ನು ತ್ಯಜಿಸುವಂತೆ ಸಲಹೆ ಮಾಡುತ್ತಾರೆ. ಒಂದು ವೇಳೆ ಈ ಸಮಯದಲ್ಲಿ Mastitis ಎದುರಾದರೆ ಇದರ ಚಿಕಿತ್ಸೆ ಹಾಗೂ ಈ ಸಂದರ್ಭವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಆದ್ದರಿಂದ ಯಾವುದೇ ತೊಂದರೆ ಎದುರಾಗದೇ ಇರಲು ಕೆಲವು ಮಾರ್ಪಾಡುಗಳನ್ನು ಅಳವಡಿಸಿಕೊಳ್ಳುವ ಮೂಲಕ ಯಾವುದೇ ತೊಂದರೆಗೆ ಒಳಗಾಗದಿರುವುದು ಜಾಣತನದ ಕ್ರಮವಾಗಿದೆ.

 ಹಾಗಾದರೆ ಹೆರಿಗೆಯ ಬಳಿಕ ಯಾವ ಕಂಚುಕ ಧರಿಸುವುದು ಸೂಕ್ತ?

ಹಾಗಾದರೆ ಹೆರಿಗೆಯ ಬಳಿಕ ಯಾವ ಕಂಚುಕ ಧರಿಸುವುದು ಸೂಕ್ತ?

ಈ ಸಮಯದಲ್ಲಿ ಮೆಟರ್ನಿಟಿ ಬ್ರಾ ಎಂಬ ಹೆಸರಿನಲ್ಲಿ ದೊರಕುವ ಕಂಚುಕಗಳನ್ನು ಧರಿಸುವುದು ಅತಿ ಹೆಚ್ಚು ಸೂಕ್ತವಾಗಿದೆ. ಈ ಕಂಚುಕಗಳು ನೋಡಲು ಇತರ ಕಂಚುಕಗಳಷ್ಟು ಆಕರ್ಷಕವಾಗಿಲ್ಲದಿದ್ದರೂ ಬಾಣಂತಿಗೆ ಅಗತ್ಯವಾದ ಆರಾಮವನ್ನು ಮಾತ್ರ ಖಂಡಿತವಾಗಿಯೂ ನೀಡುತ್ತದೆ. ಈ ಸಮಯದಲ್ಲಿ ಸ್ತನಗಳಿಗೆ ಸೂಕ್ತ ಬೆಂಬಲ ಹಾಗೂ ಆರಾಮವನ್ನು ನೀಡುವ ಗುಣಮಟ್ಟದ ಕಚ್ಚಾವಸ್ತುಗಳಿಂದ ಈ ಕಂಚುಕಗಳನ್ನು ತಯಾರಿಸಲಾಗಿದ್ದು ಕೊಂಚ ಹಿಗ್ಗುವ ಸಾಮರ್ಥ್ಯವನ್ನೂ ಹೊಂದಿರುವ ಕಾರಣ ಅತ್ಯಂತ ಸುಖಕರವಾಗಿರುತ್ತವೆ. ಅಲ್ಲದೇ ಸೂಕ್ಷ್ಮಸಂವೇದಿಯಾಗಿರುವ ಸ್ತನಗಳಿಗೂ ಸೂಕ್ತವಾಗಿರುತ್ತವೆ. ಒಂದು ವೇಳೆ ನಿಮ್ಮ ತ್ವಚೆ ಸೂಕ್ಷ್ಮವಾಗಿದ್ದರೆ ಕಂಚುಕವನ್ನು ಕೊಳ್ಳುವ ಮುನ್ನ ಇದಕ್ಕೆ ಬಳಸಲಾಗಿರುವ ಕಚ್ಚಾವಸ್ತು ನಿಮಗೆ ಅಲರ್ಜಿಕಾರಕವಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

ಈ ಕಂಚುಕಗಳನ್ನೇ ಏಕೆ ಆಯ್ಕೆ ಮಾಡಿಕೊಳ್ಳಬೇಕು?

ಈ ಕಂಚುಕಗಳನ್ನೇ ಏಕೆ ಆಯ್ಕೆ ಮಾಡಿಕೊಳ್ಳಬೇಕು?

ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಗರ್ಭಿಣಿಯ ದೇಹದ ಸಹಿತ ಸ್ತನಗಳೂ ಹಲವಾರು ಬದಲಾವಣೆಗೆ ಒಳಗಾಗುತ್ತದೆ. ವಿಶೇಷವಾಗಿ ಕಡೆಯ ಮೂರು ತಿಂಗಳುಗಳಲ್ಲಿ ಮಗುವಿಗೆ ಅಗತ್ಯವಿರುವ ಹಾಲಿನ ಉತ್ಪಾದನೆ ಹೆಚ್ಚುತ್ತದೆ ಹಾಗೂ ಹಾಲು ತುಂಬಿಕೊಂಡ ಪರಿಣಾಮವಾಗಿ ಸ್ತನಗಳ ಗಾತ್ರ ಹಿಗ್ಗುತ್ತದೆ. ಆರು ತಿಂಗಳು ಕಳೆದ ಬಳಿಕ ಪ್ರತಿದಿನವು ಸ್ತನಗಳ ಗಾತ್ರ ಕೊಂಚವೇ ಹೆಚ್ಚುತ್ತಾ ಬರುವ ಮೂಲಕ ಗರ್ಭಿಣಿಗೆ ತನ್ನ ನಿತ್ಯದ ಗಾತ್ರದ ಕಂಚುಕಗಳನ್ನು ಧರಿಸುವುದು ಬಿಗಿ ಎಂದು ಅನ್ನಿಸಬಹುದು. ಆದ್ದರಿಂದ ಈ ಅವಧಿಯಲ್ಲಿಯೇ ತಮ್ಮ ಕುಟುಂಬ ವೈದ್ಯರ ಸಲಹೆ ಪಡೆದು ಮೆಟರ್ನಿಟಿ ಬ್ರಾಗಳನ್ನೇ ಕೊಂಡು ಧರಿಸುವುದು ಆರೋಗ್ಯದ ದೃಷ್ಟಿಯಿಂದ ಸರಿಯಾದ ಕ್ರಮವಾಗಿದೆ.

ಇನ್ನೊಂದು ತೊಂದರೆ

ಇನ್ನೊಂದು ತೊಂದರೆ

ನಿಮ್ಮ ನಿತ್ಯದ ಕಂಚುಕಗಳ ಅಂಚುಗಳಿಗೆ ಅಗತ್ಯವಿರುವ ಬಲ ನೀಡಲು ಬಲಿಷ್ಟವಾದ ದಾರದಂತಹ ಕಚ್ಚಾವಸ್ತುಗಳನ್ನು ಬಳಸಲಾಗಿರುತ್ತದೆ. ಇವು ದೃಢವಾಗಿದ್ದು ಎಷ್ಟು ಎಳೆದರೂ ಹಿಗ್ಗುವುದಿಲ್ಲ. ಇತರ ಸಮಯದಲ್ಲಿ ಈ ಕಂಚುಕಗಳು ಸೂಕ್ತವೆನ್ನಿಸಿದರೂ ಗರ್ಭಾವಸ್ಥೆ ಹಾಗೂ ಬಾಣಂತನದ ಅವಧಿಯಲ್ಲಿ ಸೂಕ್ತವಲ್ಲ. ಏಕೆಂದರೆ ಈ ದೃಢ ಅಂಚುಗಳು ಹೆಚ್ಚಿನ ಒತ್ತಡ ಹೇರಿ ಹಾಲಿನ ಉತ್ಪಾದನೆ ಹಾಗೂ ಪೂರೈಕೆಯ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ಮಗುವಿನ ಹಾಗೂ ತಾಯಿಯ ಆರೋಗ್ಯಕ್ಕಾಗಿ ಸೂಕ್ತವಾದ ಕಂಚುಕವನ್ನು ಧರಿಸುವುದೇ ಉತ್ತಮ.

ಯಾವಾಗ ಧರಿಸಬಾರದು?

ಯಾವಾಗ ಧರಿಸಬಾರದು?

ಆರೋಗ್ಯ ತಜ್ಞರ ಸಲಹೆಯ ಪ್ರಕಾರ ಹೆರಿಗೆಯ ನಂತರದ ಆರು ತಿಂಗಳಾದರೂ ನಿತ್ಯದ ಗಾತ್ರದ ಕಂಚುಕಗಳಿಗೆ ವಿದಾಯ ಹೇಳುವುದೇ ಒಳ್ಳೆಯದು. ಏಕೆಂದರೆ ಬಾಣಂತನದ ಪ್ರಾರಂಭದ ದಿನಗಳಲ್ಲಿ ಹಾಲಿನ ಉತ್ಪಾದನೆ ಗರಿಷ್ಟವಾಗಿದ್ದು ಹಾರ್ಮೋನುಗಳ ಪ್ರಭಾವದಿಂದ ದೇಹವೂ ಕೆಲವಾರು ಬದಲಾವಣೆಯನ್ನು ಪಡೆಯುತ್ತದೆ. ಆರು ತಿಂಗಳ ಬಳಿಕ ಮಗುವಿನ ಆಹಾರ ಹಾಲಿನ ಜೊತೆಗೇ ಇತರ ಅಹಾರಗಳಿಗೆ ಬದಲಾಗುವ ಕಾರಣ ಉತ್ಪಾದನೆ ಕೊಂಚಕೊಂಚವಾಗಿ ಕಡಿಮೆಯಾಗುತ್ತಾ ಬರುವ ಕಾರಣ ಉತ್ಪಾದನೆಯೂ ಕಡಿಮೆಯಾಗುತ್ತಾ ಬರುತ್ತದೆ. ಇದೇ ಸಮಯಕ್ಕೆ ಸ್ತನಗಳ ಗಾತ್ರವೂ ಕುಗ್ಗಿ ಹಿಂದಿನ ಗಾತ್ರ ಪಡೆಯಬಹುದು.

ಈಗೇನು ಮಾಡಬೇಕು

ಈಗೇನು ಮಾಡಬೇಕು

ಒಂದು ವೇಳೆ ನಿಮ್ಮ ನಿತ್ಯದ ಕಂಚುಕವನ್ನು ಬಿಡಲು ಸಾಧ್ಯವೇ ಇಲ್ಲ ಎಂಬ ಮನಃಸ್ಥಿತಿ ಇದ್ದರೆ ಇದನ್ನು ತೊಟ್ಟರೆ ನಿಮಗೆ ಆರಾಮದಾಯಕವೋ ಅಲ್ಲವೋ, ಹಾಲಿನ ಉತ್ಪಾದನೆ ಸೂಕ್ತವಾಗಿದೆಯೇ ಇಲ್ಲವೇ ಎಂದು ಮೊದಲು ಅವಲೋಕಿಸಿ. ಒಂದು ಶೇಖಡವಾದರೂ ಆರಾಮದಾಯಕವಲ್ಲ ಎಂದೆನ್ನಿಸಿದರೂ ನೀವು ಇವುಗಳನ್ನು ಅನಿವಾರ್ಯವಾಗಿ ತ್ಯಜಿಸಲೇಬೇಕಾಗುತ್ತದೆ. ವೈದ್ಯರ ಸಲಹೆ ಹಾಗೂ ನಿಮ್ಮ ಅನುಭವವನ್ನು ತಾಳೆಹಾಕಿ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ.

 ನಿಮ್ಮ ಅಗತ್ಯಕ್ಕೆ ಯಾವುದು ಸೂಕ್ತ?

ನಿಮ್ಮ ಅಗತ್ಯಕ್ಕೆ ಯಾವುದು ಸೂಕ್ತ?

ನಿಮ್ಮ ಶರೀರದ ಆರಾಮಕ್ಕೆ ಯಾವ ಕಂಚುಕ ಸೂಕ್ತ ಹಾಗೂ ಆರಾಮದಾಯಕ ಎಂಬುದನ್ನು ನೀವೇ ಕಂಡುಕೊಳ್ಳಬೇಕಾಗುತ್ತದೆ. ಯಾವುದೇ ಕಂಚುಕವನ್ನು ಆಯ್ದುಕೊಳ್ಳುವ ಮೊದಲು ಇದು ನಿಮ್ಮ ಎದೆ ಹಾಗೂ ಭುಜಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿಲ್ಲ ಹಾಗೂ ಆರಾಮಕರವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅಲ್ಲದೇ ರಕ್ತಪರಿಚಲನೆಗೆ ಇದರ ಪಟ್ಟಿಗಳು ಅಡ್ಡಿಯಾಗಕೂಡದು. ನಿಮ್ಮ ಕುಟುಂಬ ವೈದ್ಯರು ಅಥವಾ ಸ್ತ್ರೀರೋಗ ತಜ್ಞರು ಈ ಬಗ್ಗೆ ಸೂಕ್ತವಾದ ಸಲಹೆ ನೀಡಬಲ್ಲರು.

English summary

Is It Safe To Wear A Bra During Breastfeeding?

One question that bothers many nursing women is: "Should I wear bra during breastfeeding?" Well, the answer to this question is simple. It is better to offer support to the breasts while ensuring that there is no discomfort caused due to the bra. Is it safe to wear bra during breastfeeding? Yes, but not the regular ones. As the size of the breasts tends to increase during that phase, one may need to carefully choose the bra to avoid certain minor issues.
X
Desktop Bottom Promotion