For Quick Alerts
ALLOW NOTIFICATIONS  
For Daily Alerts

ಅಂಡಾಣುಗಳ ಶೀತಲೀಕರಣ - ಎಷ್ಟರ ಮಟ್ಟಿಗೆ ಸಾರ್ಥಕ?

By Arshad
|

ಅಂಡಾಣುಗಳನ್ನು ಶೀಲತೀಕರಿಸಿ ಸಂಗ್ರಹಿಸಿ ಮುಂದೊಂದು ದಿನ ಅಗತ್ಯ ಬಿದ್ದಾಗ ಬಳಸಿಕೊಂಡು ಗರ್ಭ ಧರಿಸುವ ವ್ಯವಸ್ಥೆ ಈಗಾಗಲೇ ವಿಶ್ವದ ಹಲವೆಡೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ವಿಧಾನದಲ್ಲಿ ಮಹಿಳೆಯ ಗರ್ಭಾಶಯದಿಂದ ಮಿಲನಕ್ಕೆ ತಯಾರಾಗಲು ಪಕ್ವವಾಗಿರುವ ಅಂಡಾಣುವನ್ನು ಸಂಗ್ರಹಿಸಿ ಸೂಕ್ತ ತಾಪಮಾನ ಹಾಗೂ ವ್ಯವಸ್ಥೆಯ ಮೂಲಕ ಕೆಡದಂತೆ ಶೀತಲೀಕರಿಸಿ ಸಂರಕ್ಷಿಸಿಡಲಾಗುತ್ತದೆ.

ಮುಂದೊಂದು ದಿನ ಇದೇ ಮಹಿಳೆ ತನ್ನದೇ ಆದ ಸಂತಾನವನ್ನು ಹೊಂದಬಯಸಿದರೆ ಈ ಅಂಡಾಣುವನ್ನು ಮತ್ತೊಮ್ಮೆ ಗರ್ಭಾಶಯಕ್ಕೆ ಸೇರಿಸಿ ಗರ್ಭವತಿಯಾಗಿಸಲು ಸಾಧ್ಯವಾಗುತ್ತದೆ. ಆದರೆ ಈ ವಿಧಾನವನ್ನು ನೆಚ್ಚಿಕೊಳ್ಳದೇ ತಾರುಣ್ಯದಲ್ಲಿಯೇ ಒಂದು ಅಥವಾ ಎರಡು ಮಕ್ಕಳನ್ನು ಪಡೆದು ಸುಖಮಯ ಜೀವನವನ್ನು ನಡೆಸಲು ಸಲಹೆ ನೀಡುತ್ತಾರೆ. ಎರಡು ವಿರೋಧಾಭಾಸಗಳು ಏಕಿವೆ ಎಂದು ಗೊಂದಲವಾಯಿತೇ? ಕೆಳಗಿನ ವಾಸ್ತವಾಂಶಗಳು ನಿಮ್ಮ ಗೊಂದಲವನ್ನು ನಿವಾರಿಸಲಿವೆ...

ವಾಸ್ತವಾಂಶ #1

ವಾಸ್ತವಾಂಶ #1

ಅಷ್ಟಕ್ಕೂ ಈ ಒಂದು ವ್ಯವಸ್ಥೆ ಇದೆ ಎಂದ ಮಾತ್ರಕ್ಕೇ ಗರ್ಭಾಂಕುರವಾಗುವ ಸಮಯವನ್ನೇಕೆ ಮುಂದೂಡಬೇಕು? ಯಾವಾಗ ಸಮಯ ಪಕ್ವವಿದೆಯೋ, ಉತ್ತಮ ಆರೋಗ್ಯ ಹೊಂದಿದ್ದರೆ ಮಕ್ಕಳನ್ನು ಪಡೆಯುವುದೇ ಒಳ್ಳೆಯದು. ಆದರೆ ಯಾವುದೋ ಆರೋಗ್ಯ ಸಂಬಂಧಿತ ಕಾರಣಕ್ಕೆ ಗರ್ಭ ಧರಿಸುವುದು ಜೀವಕ್ಕೇ ಅಪಾಯವಾಗುವಂತಿದ್ದರೆ, ಈ ಕಾಯಿಲೆಗೆ ಪಡೆಯುತ್ತಿರುವ ಚಿಕಿತ್ಸೆ ದೀರ್ಘಾವಧಿಯದ್ದಾಗಿದ್ದು ಅಷ್ಟರವರೆಗೆ ರಜೋನಿವೃತ್ತಿ ವಯಸ್ಸು ಸಮೀಪಿಸಿದರೆ ಅಂತಹ ಸಂದರ್ಭಗಳಲ್ಲಿ ಈ ವ್ಯವಸ್ಥೆಯ ಸೇವೆಯನ್ನು ಪಡೆದುಕೊಳ್ಳುವುದು ಉತ್ತಮ. ಆದರೂ ಈ ವಿಧಾನದಲ್ಲಿ ಗರ್ಭ ಧರಿಸುವ ಸಾಧ್ಯತೆಗಳ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿದ್ದು ಇನ್ನೂ ಮುಂದುವರೆಯುತ್ತಿದೆ.

ವಾಸ್ತವಾಂಶ #2

ವಾಸ್ತವಾಂಶ #2

ಕೆಲವು ಮಹಿಳೆಯರಿಗೆ ಗರ್ಭಧರಿಸುವುದನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೆ ಹಾಕಲೇಬೇಕಾಗುತ್ತದೆ. ಆಗ ಈ ವ್ಯವಸ್ಥೆ ಈ ಮಹಿಳೆಯರ ಪಾಲಿಗೆ ಒಂದು ವರದಾನವೇ ಆಗಿದೆ. ಅದರಲ್ಲೂ ಕೆಲವು ಕಾಯಿಲೆಗಳ ಅಡ್ಡಪರಿಣಾಮವಾಗಿ ಗರ್ಭಧರಿಸುವ ಸಾಧ್ಯತೆ ಕ್ಷೀಣಿಸುತ್ತಾ ಹೋಗುತ್ತದೆ.

ವಾಸ್ತವಾಂಶ #3

ವಾಸ್ತವಾಂಶ #3

ಈ ವ್ಯವಸ್ಥೆಯನ್ನು ಇದುವರೆಗೆ ಅತಿ ಕಡಿಮೆ ಪ್ರಮಾಣದ ಮಹಿಳೆಯರು ಪಡೆದುಕೊಂಡಿದ್ದಾರೆ. ಅದರಲ್ಲೂ ಇದುವರೆಗೆ ಸಂಗ್ರಹಿಸಲಾದ ಪ್ರತಿ ನೂರು ಅಂಡಾಣುಗಳಲ್ಲಿ ಕೇವಲ ಐದರಷ್ಟು ಮಾತ್ರವೇ ಮುಂದಿನ ದಿನದ ಗರ್ಭಾಂಕುರಕ್ಕಾಗಿ ಬಳಸಲಾಗಿದೆ. ಉಳಿದ ತೊಂಭತ್ತೈದು ಶೇಖಡಾ ಶೀತಲೀಕರಣ ಘಟಕದಲ್ಲಿಯೇ ಇವೆ. ಇವರು ಕ್ರಮೇಣ ಅಗತ್ಯಕ್ಕೆ ತಕ್ಕಂತೆ ತಮ್ಮ ಮನಸ್ಸುಗಳನ್ನು ಬದಲಾಯಿಸಬಹುದು.

ವಾಸ್ತವಾಂಶ #4

ವಾಸ್ತವಾಂಶ #4

ಈ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿರಬೇಕಾದುದೆಂದರೆ: ಈ ವ್ಯವಸ್ಥೆಯಿಂದ ಗರ್ಭ ಧರಿಸುವ ಸಾಧ್ಯತೆ ಪರಿಪೂರ್ಣವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ವ್ಯವಸ್ಥೆಯಿಂದ ಮುಂದಿನ ದಿನದಲ್ಲಿ ಅಗತ್ಯವಿದ್ದಾಗ ಮೂಲಸ್ಥಿತಿಯಲ್ಲಿಯೇ ಅಂಡಾಣುವನ್ನು ಬಳಸಬಹುದು ಎಂಬುದೊಂದು ಮಾತ್ರವೇ ಧನಾತ್ಮಕ ಅಂಶವಾಗಿದ್ದು ಉಳಿದಂತೆ ಗರ್ಭ ಧರಿಸುವ ಸಾಧ್ಯತೆಯ ಇತರ ಅಂಶಗಳೂ ಈ ಸಾಧ್ಯತೆಯ ಮೇಲೆ ಪ್ರಭಾವ ಬೀರುತ್ತವೆ.

ವಾಸ್ತವಾಂಶ #5

ವಾಸ್ತವಾಂಶ #5

ಒಂದು ವೇಳೆ ಅಂಡಾಣುವನ್ನು ಶೀತಲೀಕರಿಸಲೇಬೇಕಿದ್ದರೆ ಆದಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮಾಡಿಸಿಬಿಡಬೇಕು. ಏಕೆಂದರೆ ವರದಿಗಳ ಪ್ರಕಾರ ಮೂವತ್ತೈದು ವರ್ಷ ದಾಟಿದ ಮಹಿಳೆಯರ ಅಂಡಾಣುಗಳು ಫಲಿತಗೊಳ್ಳುವ ಸಾಧ್ಯತೆ ಕಡಿಮೆ.

ವಾಸ್ತವಾಂಶ #6

ವಾಸ್ತವಾಂಶ #6

ಈ ವ್ಯವಸ್ಥೆಯ ಬಗ್ಗೆ ಇನ್ನೂ ಹಲವಾರು ಸಂಶೋಧನೆಗಳು ಇನ್ನೂ ನಡೆಯಬೇಕಾಗಿದ್ದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿದೆ ಎಂಬುದನ್ನು ಕಂಡುಕೊಳ್ಳಬೇಕಾಗಿದೆ. ಪ್ರಸ್ತುತ ಕೇವಲ ಬೆರಳೆಣಿಕೆಯಷ್ಟೇ ಪ್ರಕರಣಗಳಲ್ಲಿ ಸಫಲತೆ ಕಂಡುಬಂದಿದೆ. ಆದ್ದರಿಂದ ಅನಿವಾರ್ಯವೆನಿಸಿದ ಹೊರತು ಈ ವ್ಯವಸ್ಥೆಯನ್ನು ನೆಚ್ಚಿಕೊಳ್ಳದಿರುವುದೇ ಸರಿಯಾದ ನಿರ್ಣಯವಾಗಿದೆ.

English summary

Is Egg Freezing Worth It?

Egg freezing surely helps in increasing the chances of getting pregnant at an older age. But researchers advice not to rely too much on such procedures when you can have children when you are young enough. Are you wondering why? Well, here are some facts that will explain you more about egg freezing.
X
Desktop Bottom Promotion