For Quick Alerts
ALLOW NOTIFICATIONS  
For Daily Alerts

ಶಿಶುಗಳಿಗೆ ಗ್ಯಾಸ್ ಸಮಸ್ಯೆ ಇದ್ದರೆ, ಈ ಟಿಪ್ಸ್ ಅನುಸರಿಸಿ...

By Divya Pandith
|

ಶಿಶುಗಳಿಗೆ ಗ್ಯಾಸ್ ಸಮಸ್ಯೆ ಇದ್ದರೆ ಅವರಿಗೊಂದು ಶಿಕ್ಷೆಯಿದ್ದಂತೆ ಎಂದು ಹೇಳಬಹುದು. ಹೊಟ್ಟೆಯುಬ್ಬರದಿಂದ ಉಂಟಾಗುವ ನೋವು ಹಾಗೂ ನಿದ್ರೆ ಇಲ್ಲದೆ ಪರಿತಪಿಸುತ್ತಾರೆ. ಇಂತಹದ್ದೇ ಸಮಸ್ಯೆ ಎಂದು ಗುರುತಿಸುವುದು ಪಾಲಕರಿಗೂ ಕಷ್ಟವಾಗುವುದು. ಈ ಸಮಸ್ಯೆ ರಾತ್ರಿಯ ವೇಳೆ ಹೆಚ್ಚು ತೊಂದರೆ ಕೊಡುವುದರಿಂದ ಮಕ್ಕಳಿಗೆ ಹಾಗೂ ಪಾಲಕರಿಬ್ಬರಿಗೂ ನಿದ್ರೆ ಇಲ್ಲದೆ ಪರಿತಪಿಸಬೇಕಾಗುವುದು.

ಶಿಶು ಮಕ್ಕಳಿಗೆ ಜೀರ್ಣಕ್ರಿಯೆಯು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಾ ಸಾಗುವುದರಿಂದ ಈ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿಸುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ವಾಂತಿ ಮತ್ತು ಗ್ಯಾಸ್ ತುಂಬುವ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಕೆಲವು ಮಕ್ಕಳಿಗೆ ಸೂರ್ಯಾಸ್ತದ ನಂತರ ಗ್ಯಾಸ್ ತುಂಬುವ ಸಮಸ್ಯೆ ಇರುತ್ತದೆ. ಇದರಿಂದ ಮಗುವಿಗೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚು.

ಪುಟ್ಟ ಮಕ್ಕಳೇಕೆ ಅಷ್ಟು ರಭಸದಿಂದ ಉಸಿರಾಡುತ್ತವೆ?

ಮಗುವಿನ ಬೆಳವಣಿಗೆಯಾದಂತೆ ಆಹಾರವನ್ನು ಸಂಪೂರ್ಣವಾಗಿ ಜೀರ್ಣಮಾಡುವ ಶಕ್ತಿಯು ಜೀರ್ಣಾಂಗ ವ್ಯವಸ್ಥೆಯಲ್ಲಿರುತ್ತದೆ. ಆಗ ನಿಧಾನವಾಗಿ ಈ ಸಮಸ್ಯೆಯು ನೈಸರ್ಗಿಕವಾಗಿಯೇ ಕಡಿಮೆಯಾಗುತ್ತ ಬರುತ್ತದೆ. ಮಗುವಿಗೆ ಗ್ಯಾಸ್ ತುಂಬಿರುವ ಸಮಯದಲ್ಲಿ ಒಮ್ಮೆಲೆ ಹಾಲನ್ನು ಕುಡಿಸಲು ಪ್ರಯತ್ನಿಸದಿರಿ. ಆ ಸಂದರ್ಭದಲ್ಲಿ ಶಿಶುಗಳಿಗೆ ಉಸಿರು ಗಟ್ಟುವಂತೆ ಆಗುವುದು. ಆ ಸಮಯದಲ್ಲಿ ಏನು ಮಾಡಬಹುದು ಎನ್ನುವ ಕೆಲವು ಪರಿಹಾರ ಕ್ರಮಗಳು ಈ ಕೆಳಗಿನಂತಿವೆ...

ಇದು ಯಾವುದರ ಸಮಸ್ಯೆ?

ಇದು ಯಾವುದರ ಸಮಸ್ಯೆ?

ದೊಡ್ಡಕರುಳಿನ ಕಾರಣದಿಂದ ಈ ಸಮಸ್ಯೆ ಉಂಟಾಗುತ್ತದೆ. ದೊಡ್ಡ ಕರುಳು ಹೆಚ್ಚು ಕೆಲಸ ಮಾಡಿದಾಗ ಈ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಮಗು ಗ್ಯಾಸ್ ಉಂಟುಮಾಡುವಂತಹ ಗಾಳಿಯನ್ನು ಸೇವಿಸಿದಾಗ ಈ ಸಮಸ್ಯೆ ಉಂಟಾಗುವುದು.

ತಾಯಿ ಸೇವಿಸಿರುವ ಆಹಾರದಿಂದ ಇರಬಹುದೇ?

ತಾಯಿ ಸೇವಿಸಿರುವ ಆಹಾರದಿಂದ ಇರಬಹುದೇ?

ಕೆಲವೊಮ್ಮೆ ಮಗುವಿನ ಅನಿಲ ಸಮಸ್ಯೆಯು ತಾಯಿ ಸೇವಿಸುವ ಆಹಾರದ ಕಾರಣದಿಂದಾಗಿರಬಹುದು. ನಿಮ್ಮ ಮಗುವಿಗೆ ಹಾಲುಣಿಸುವ ವೇಳೆ ಅನಿಲವನ್ನು ಉಂಟುಮಾಡುವ ಆಹಾರವನ್ನು ಸೇವಿಸಬಾರದು. ನೀವು ಗ್ಯಾಸ್ ತುಂಬುವಂತಹ ಆಹಾರವನ್ನು ತ್ಯಜಿಸಿದ ನಂತರವೂ ಮಗುವಿಗೆ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ ಎಂದಾದರೆ ಅದು ನಿಮ್ಮ ಆಹಾರದ ಸಮಸ್ಯೆಯಲ್ಲ ಎಂದು ಪರಿಗಣಿಸಬಹುದು.

ಅಳುವುದರಿಂದ ಗ್ಯಾಸ್ ತುಂಬುವುದೇ?

ಅಳುವುದರಿಂದ ಗ್ಯಾಸ್ ತುಂಬುವುದೇ?

ಇದು ನಿಮಗೆ ಆಶ್ಚರ್ಯ ಎನಿಸಬಹುದು. ಅಳುವುದರಿಂದಲೂ ಕೆಲವು ಶಿಶುಗಳಿಗೆ ಗ್ಯಾಸ್ ತುಂಬುತ್ತದೆ. ಬಾಯಿ ಕಳೆದು ಕೂಗುವಾಗ ಗಾಳಿಯು ಒಳಗೆ ಹೋಗುವುದು. ಆ ಗಾಳಿಯು ಮಗುವಿನ ಹೊಟ್ಟೆಯಲ್ಲಿ ಶೇಖರಣೆಯಾಗುವುದರಿಂದ ಅನಿಲ ಸಮಸ್ಯೆ ಉಂಟಾಗುತ್ತದೆ.

ಅನಿಯಮಿತ ಕರುಳಿನ ಚಲನೆ

ಅನಿಯಮಿತ ಕರುಳಿನ ಚಲನೆ

ಕರುಳಿನ ಕಾರ್ಯ ಅನಿಯಮಿತವಾಗಿದ್ದರೆ ಅದು ಅನಿಲ ಸೃಷ್ಟಿಸುವ ಸಾಧ್ಯತೆ ಇರುತ್ತದೆ. ಆಹಾರವು ಕರುಳಿನ ಮೂಲಕ ಹಾದು, ಸೂಕ್ತ ರೀತಿಯಲ್ಲಿ ಜೀರ್ಣವಾಗದಿದ್ದಾಗ ಈ ಸಮಸ್ಯೆ ಉಂಟಾಗುತ್ತದೆ.

ಸಲಹೆ-1:

ಸಲಹೆ-1:

ಮಗುವಿನ ಅನಿಲ ಸಮಸ್ಯೆಯನ್ನು ನಿವಾರಿಸಲು ಒಂದು ಸರಳ ವಿಧಾನವೆಂದರೆ ಮಗುವಿನ ಕಾಲುಗಳನ್ನು ನಿಧಾನವಾಗಿ ಮಡಿಸಿ, ನಂತರ ಮಡಿಸಿದ ಕಾಲನ್ನು ನಿಧಾನವಾಗಿ ಹೊಟ್ಟೆಯ ಮೇಲೆ ಒತ್ತಬೇಕು. ಆಗ ಗ್ಯಾಸ್ ಹೊರ ಬರುತ್ತದೆ. ಮಗುವಿನ ದೇಹವು ಹೆಚ್ಚು ಸೂಕ್ಷ್ಮವಾಗಿರುವುದರಿಂದ ಒತ್ತುವಾಗ ಹೆಚ್ಚು ಕಾಳಜಿಯಿಂದ ಇರಬೇಕು. ನೀವು ಇದನ್ನು ಎಚ್ಚರಿಕೆಯಿಂದ ಮಾಡುತ್ತೀರಿ ಎನ್ನುವ ಖಾತ್ರಿಯಿದ್ದರೆ ಮಾತ್ರ ಮಾಡಿ. ಇಲ್ಲವಾದರೆ ವೈದ್ಯರ ಸಲಹೆ ಪಡೆಯಿರಿ.

ಸಲಹೆ-2

ಸಲಹೆ-2

ಇನ್ನೊಂದು ಸರಳವಾದ ವಿಧಾನವೆಂದರೆ ನಿಮ್ಮ ಕೈಗಳಿಂದ ಮಗುವಿನ ಹೊಟ್ಟೆ ಭಾಗದಲ್ಲಿ ಮಸಾಜ್ ಮಾಡುವುದು. ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಕಡಿಮೆ ಒತ್ತಡ ಇರುವ ಭಾಗದಲ್ಲಿ ಕೆಳಮುಖವಾಗಿ ಕೈಯಾಡಿಸಿ. ಆಗ ಗ್ಯಾಸ್ ಹೊರ ಬರುವುದು. ಇಲ್ಲವಾದರೆ ಮಗುವಿನ ಬೆನ್ನಿನ ಮೇಲೆ ಕೆಳಮುಖವಾಗಿ ಮಸಾಜ್ ಮಾಡಿ. ಬಹು ಬೇಗ ಗ್ಯಾಸ್ ಹೊರ ಬರುವುದು.

ಸಲಹೆ -3

ಸಲಹೆ -3

ಮಗುವನ್ನು ಹಾಸಿಗೆಯಲ್ಲಿ ಮಲಗಿಸಿ ಕಾಲುಗಳನ್ನು ಸೈಕಲ್ ತುಳಿಯುವ ವಿಧಾನದಂತೆ, ನಿಧಾನವಾಗಿ ಚಲಿಸಿ. ಹೀಗೆ ಮಾಡುವುದರಿಂದ ಮಗುವಿನ ಮಲಬದ್ಧತೆಯ ಸಮಸ್ಯೆಯು ತೆಡೆಯುವುದು ಮತ್ತು ಗ್ಯಾಸ್ ಸಮಸ್ಯೆಯು ನಿವಾರಣೆ ಹೊಂದುವುದು.

ಭಂಗಿಯು ಮುಖ್ಯ

ಭಂಗಿಯು ಮುಖ್ಯ

ಮಗುವು ದಿನಕ್ಕೆ ಕಡಿಮೆ ಎಂದರೂ 10-20 ಬಾರಿ ಅನಿಲವನ್ನು ಬಿಡುಗಡೆ ಮಾಡುತ್ತಾರೆ. ಮಗುವು ಬಲ ಭಂಗಿಯಲ್ಲಿ ಮಲಗಿ ಹಾಲು ಕುಡಿಯುವಂತೆ ನೋಡಿಕೊಳ್ಳಿ. ಆಗ ತಲೆಯು ಹೊಟ್ಟೆಯ ಮಸಾನತೆಗಿಂತ ಸ್ವಲ್ಪ ಮೇಲ್ಭಾಗದಲ್ಲಿ ಇರುವಂತೆ ನೋಡಿ.

ಗಾಳಿಗುಳ್ಳೆಗಳು

ಗಾಳಿಗುಳ್ಳೆಗಳು

ಬಾಟಲಿಯ ಮೂಲಕ ಹಾಲು ಕುಡಿಯುವಾಗ ಗಾಳಿ ಗುಳ್ಳೆ ಇದೆಯೇ ಎಂದು ಪರೀಕ್ಷಿಸಿ. ಇವು ಮಗುವಿನ ಗ್ಯಾಸ್ ತುಂಬುವ ಪ್ರಕ್ರಿಯೆಗೆ ಕಾರಣವಾಗುತ್ತವೆ. ಮಗುವು ಕಾಲಿ ಬಾಟಲಿಯನ್ನು ಸೇದುತ್ತಿದೆ ಎಂದಾದರೆ ತಕ್ಷಣವೇ ಅದನ್ನು ನಿಲ್ಲಿಸಿ. ಕಾಲಿ ಬಾಟಲಿಯನ್ನು ಹೀರುವುದರಿಂದ ಗಾಳಿಯು ಹೊಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ.

ವೈದ್ಯರನ್ನು ಸಂಪರ್ಕಿಸಿ

ವೈದ್ಯರನ್ನು ಸಂಪರ್ಕಿಸಿ

ಈ ಮೇಲೆ ಹೇಳಿರುವ ಸಲಹೆಗಳು ಯಾವುದೂ ಸಹ ಗ್ಯಾಸ್ ಸಮಸ್ಯೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಪ್ರಭಾವ ಬೀರಲಿಲ್ಲ ಎಂದಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಗ್ಯಾಸ್ ಸಮಸ್ಯೆ ಇದ್ದರೆ ಮಗುವಿಗೆ ಬಹಳ ತೊಂದರೆ ಉಂಟಾಗುತ್ತದೆ. ಮಗುವಿಗೆ ಗ್ಯಾಸ್ ತುಂಬುವುದು ಮತ್ತು ಅದನ್ನು ಹೊರ ಹಾಕುವ ಪ್ರಕ್ರಿಯೆಯಲ್ಲಿ ಮಗು ಬಳಲುತ್ತದೆಯೇ ಎನ್ನುವುದನ್ನು ಪರೀಕ್ಷಿಸಿ ವೈದ್ಯರಲ್ಲಿ ತಪಾಸಣೆ ನಡೆಸುವುದು ಸೂಕ್ತ.

English summary

how-to-relieve-gas-in-babies

As your baby grows, the digestive system may become better in dealing with food. That is when the gas problems in the baby may naturally subside. Also, never try to make the baby drink a lot of milk at once. That could cause gas problems and choking. Here are some more facts about gas issues in babies and their remedies.
X
Desktop Bottom Promotion