For Quick Alerts
ALLOW NOTIFICATIONS  
For Daily Alerts

ಜೀರಿಗೆ ನೀರು : ಗರ್ಭಿಣಿಯರಿಗೆ ಅತ್ಯುತ್ತಮ ಮನೆ ಔಷಧಿ

By Divya Pandith
|

ಗರ್ಭಧಾರಣೆಯು ಜೀವನದ ಅದ್ಭುತವಾದ ಹಂತ. ಕುಟುಂಬದ ಹೊಸ ವ್ಯಕ್ತಿ ಒಂದು ಜೀವದಲ್ಲಿ ಬೆರೆತು ಬೆಳೆಯುತ್ತಿರುವ ಒಂದು ಅದ್ಭುತವಾದ ಸಮಯ. ಮಗುವಿನ ಬೆಳವಣಿಗೆಗಾಗಿ ತಾಯಿ ಸೂಕ್ತ ರೀತಿಯ ಆಹಾರ ಹಾಗೂ ಆರೈಕೆಯನ್ನು ಮಾಡಬೇಕಾಗುವುದು. ಮಗುವಿನ ಆರೈಕೆಯಲ್ಲಿ ತಾಯಿಯ ದೇಹವು ಮಗುವನ್ನು ಬೆಳೆಸಲು ಮತ್ತು ಜನ್ಮ ನೀಡುವ ವಿಚಾರದಲ್ಲಿ ಹೆಚ್ಚು ದಣಿದಿರುತ್ತದೆ. ಆಕೆಯ ದೇಹದ ಬಗ್ಗೆ ಸೂಕ್ತ ಆರೈಕೆ ಮಾಡ ಬೇಕಾಗುವುದು.

ತಾಯಿಯ ಜೀವದಲ್ಲಿ ಮಗು ಬೆರೆತಿರುವಾಗ ಹಾಗೂ ಪ್ರಸವದ ನಂತರವು ತಾಯಿಯ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಮತೋಲಿತ ಆಹಾರವನ್ನು ತಾಯಿ ಸೇವಿಸಬೇಕಾಗುತ್ತದೆ. ವೈದ್ಯರು ನೀಡುವ ಆಹಾರದ ಪಟ್ಟಿಯಲ್ಲಿ ಕಾರ್ಬ್, ಪ್ರೋಟೀನ್ ಸೇರಿದಂತೆ ಇನ್ನಿತರ ಪೋಷಕಾಂಶ ಭರಿತ ಆಹಾರಗಳ ಪಟ್ಟಿಯನ್ನು ನೀಡಿರುತ್ತಾರೆ. ಅವೆಲ್ಲವೂ ಗರ್ಭಾವಸ್ಥೆ ಹಾಗೂ ನಂತರದ ಸಮಯದಲ್ಲಿ ತಾಯಿ ಸ್ವೀಕರಿಸಬೇಕು. ಅದು ಮಗುವಿನ ಆರೋಗ್ಯಕ್ಕಾಗಿ ಹಾಗೂ ತನ್ನ ದೇಹದ ಆರೈಕೆಗಾಗಿ ಎನ್ನುವುದನ್ನು ಮರೆಯಬಾರದು.

ಈ ಪುಟ್ಟ ಜೀರಿಗೆಯಲ್ಲಿದೆ, ಬೆಟ್ಟದಷ್ಟು ಗುಣಗಳು...

ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದಲ್ಲಿ ಬಹಳಷ್ಟು ಬದಲಾವಣೆ ಉಂಟಾಗುತ್ತದೆ. ಬೆಳಗಿನ ಬೇನೆ, ಹೊಟ್ಟೆ ಉಬ್ಬರ, ಮಲಬದ್ಧತೆ, ರಕ್ತ ಹೀನತೆ, ಮಧುಮೇಹ, ಅಧಿಕ ರಕ್ತದ ಒತ್ತಡ ಮುಂತಾದ ಕೆಲವು ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಹಾಗೆಯೇ ಪ್ರಸವದ ನಂತರವೂ ಮಹಿಳೆಯ ದೇಹ ಬಹಳಷ್ಟು ದಣಿದಿರುತ್ತದೆ. ಜೊತೆಗೆ ತಾಯಿ ಸೇವಿಸುವ ಆಹಾರವು ಹಾಲಿನ ಮುಖಾಂತರ ಮಗುವಿಗೆ ತಲುಪುವುದರಿಂದ ಸೂಕ್ತ ಆಹಾರ ಸೇವನೆ ಅಗತ್ಯವಾಗಿರುತ್ತದೆ.

ಕೆಲವು ಆಯುರ್ವೇದ ಉತ್ಪನ್ನವು ಗರ್ಭಾವಸ್ಥೆ ಮತ್ತು ಪ್ರಸವದ ನಂತರ ಸಮಯದಲ್ಲಿ ಹೆಚ್ಚು ಔಷಧೀಯ ಗುಣದಿಂದ ದೇಹವನ್ನು ರಕ್ಷಿಸುತ್ತವೆ. ಅಂತಹ ಉತ್ಪನ್ನಗಳಲ್ಲಿ ಜೀರಿಗೆಯೂ ಒಂದು. ಇದು ಗರ್ಭಾವಸ್ಥೆಯ ಸಮಯದಲ್ಲಿ ಕಾಡುವ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೀರಿಗೆ ನೀರಿನಿಂದ ಯಾವೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವುದರ ವಿವರಣೆ ಈ ಮುಂದೆ ನೀಡಲಾಗಿದೆ...

ಅನೀಮಿಯಾವನ್ನು ನಿವಾರಿಸುತ್ತದೆ

ಅನೀಮಿಯಾವನ್ನು ನಿವಾರಿಸುತ್ತದೆ

ಹೆಚ್ಚಿನವರು ಗರ್ಭಾವಸ್ಥೆಯಲ್ಲಿ ಕಬ್ಬಿಣದ ಕೊರತೆಯನ್ನು ಎದುರಿಸುತ್ತಾರೆ. ಜೀರಿಗೆ ಕಬ್ಬಿಣದ ಸಮೃದ್ಧ ಮೂಲವಾಗಿದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಮ್ಮ ಜೀವಕೋಶಗಳಿಗೆ ಆಮ್ಲಜನಕವನ್ನು ಸೂಕ್ತ ಪ್ರಮಾಣದಲ್ಲಿ ಸಾಗಿಸಿ, ಹಿಮಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ. ಪ್ರತಿ ದಿನ ಜೀರಿಗೆ ನೀರನ್ನು ಸೇವಿಸುವುದರಿಂದ ಕಬ್ಬಿಣದ ಕೊರತೆಯನ್ನು ಕಡಿಮೆಗೊಳಿ ಸಿ, ಮಗುವಿನ ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ

ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ

ಗರ್ಭಾವಸ್ಥೆಯಲ್ಲಿ ಆಮ್ಲೀಯತೆಯು ಒಂದು ಪ್ರಮುಖ ಸಮಸ್ಯೆಯಾಗಿದೆ. ಗರ್ಭಾಶಯವು ಹೊಟ್ಟೆ ಮತ್ತು ಕರುಳಿನ ಮೂಲಕ ಅತಿಯಾದ ಅನಿಲ ಮತ್ತು ಉಬ್ಬುವುದನ್ನು ಕಡಿಮೆ ಮಾಡುತ್ತದೆ. ಜೀರಿಗೆ ನೀರು ಈ ಎಲ್ಲ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ

ಗರ್ಭಾವಸ್ಥೆಯಲ್ಲಿ ಕೆಲವರಿಗೆ ಮಧುಮೇಹ ಸಾಮಾನ್ಯವಾಗಿರುತ್ತದೆ. ದೇಹದಲ್ಲಿ ಹೆಚ್ಚುವರಿ ಸಕ್ಕರೆ ಮಗುವಿಗೆ ಹಾನಿಯಾಗಬಹುದು. ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಜೀರಿಗೆ ನೀರು ಅತ್ಯುತ್ತಮ ನೈಸರ್ಗಿಕ ಪರಿಹಾರ.

ರಕ್ತದೊತ್ತಡ ಸ್ಥಿರಗೊಳಿಸುತ್ತದೆ

ರಕ್ತದೊತ್ತಡ ಸ್ಥಿರಗೊಳಿಸುತ್ತದೆ

ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ ಬೆಳೆಯುತ್ತಿರುವ ಮಗುವಿಗೆ ತುಂಬಾ ಹಾನಿಕಾರಕವಾಗಿದೆ. ಅಧಿಕ ರಕ್ತದೊತ್ತಡ ಭ್ರೂಣದ ಬೆಳವಣಿಗೆಗೆ ಕಾರಣವಾಗಬಹುದು. ಅದಕ್ಕಾಗಿಯೇ ಮಹಿಳೆಯರು ತಮ್ಮ ರಕ್ತದೊತ್ತಡವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಸಲಹೆ ನೀಡುತ್ತಾರೆ. ಜೀರಿಗೆ ನೀರನ್ನು ಸೇವಿಸುವುದರಿಂದ ರಕ್ತದೊತ್ತಡದ ಮೇಲೆ ನಿಯಂತ್ರಣ ಹೇರುತ್ತದೆ. ವಿವಿಧ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಲಬದ್ಧತೆ ಮತ್ತು ಇತರ ತೊಂದರೆಗಳನ್ನು ತಡೆಯುತ್ತದೆ

ಮಲಬದ್ಧತೆ ಮತ್ತು ಇತರ ತೊಂದರೆಗಳನ್ನು ತಡೆಯುತ್ತದೆ

ಗರ್ಭಿಣಿಯರು ಎದುರಿಸುವ ಮತ್ತೊಂದು ಸಮಸ್ಯೆ ಮಲಬದ್ಧತೆ. ಬೆಳೆಯುತ್ತಿರುವ ಗರ್ಭಾಶಯವು ಕರುಳುಗಳನ್ನು ತಳ್ಳುತ್ತದೆ ಮತ್ತು ಮಲಬದ್ಧತೆಗೆ ಇದು ಕಾರಣವಾಗುತ್ತದೆ. ಇದು ಉದರದಲ್ಲಿ ಉಬ್ಬುವುದು ಮತ್ತು ನೋವಿಗೆ ಕಾರಣವಾಗಬಹುದು. ಗರ್ಭಿಣಿಯರು ಇದನ್ನು ನಿಭಾಯಿಸಲು ಕಷ್ಟವಾಗಬಹುದು. ಜೀರಿಗೆ ನೀರು ಅನಿಲವನ್ನು ನಿವಾರಿಸುತ್ತದೆ. ದ್ರವಗಳನ್ನು ಪುನಃ ತುಂಬಿಸುತ್ತದೆ ಮತ್ತು ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬೆಳಗಿನ ಬೇನೆಯು ಮತ್ತು ವಾಕರಿಕೆ ಮುಂತಾದ ಇತರ ಸಾಮಾನ್ಯ ಗರ್ಭಾವಸ್ಥೆಯ ತೊಂದರೆಗಳನ್ನು ಸಹ ಇದು ಗುಣಪಡಿಸುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಜೀರಿಗೆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ನಿತ್ಯವೂ ಜೀರಿಗೆ ನೀರನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ವೇಗವಾಗಿಸುವ ಕಿಣ್ವಗಳ ಸ್ರವಿಸುವಿಕೆಯಲ್ಲಿ ನೆರವು ನೀಡುತ್ತದೆ ಹಾಗೂ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ಜೀರಿಗೆ ನೀರು ತಯಾರಿಸುವ ವಿಧಾನ

ಜೀರಿಗೆ ನೀರು ತಯಾರಿಸುವ ವಿಧಾನ

ಗರ್ಭಿಣಿಯರಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುವುದು ಜೀರಿಗೆ ನೀರು. ಇದನ್ನು ತಯಾರಿಸುವ ವಿಧಾನ ಹೀಗಿದೆ ನೋಡಿ.

ಸಾಮಾಗ್ರಿಗಳು

-3 ಟೇಬಲ್ ಚಮಚ ಜೀರಿಗೆ.

-1-1/2 ಲೀಟರ್ ನೀರು.

ವಿಧಾನ

ವಿಧಾನ

1. ನೀರಿಗೆ ಜೀರಿಗೆಯನ್ನು ಸೇರಿಸಿ 5 ನಿಮಿಷಗಳಕಾಲ ಕುದಿಯಲು ಬಿಡಿ.

2. ನಂತರ ಜರಡಿ ಹಿಡಿದು, ತಣಿಯಲು ಬಿಡಿ.

3. ಇದನ್ನು ಒಂದು ಬಾಟಲಿಗೆ ವರ್ಗಾಯಿಸಿ. ದಿನವಿಡೀ ಆಗಾಗ ಸೇವಿಸಬಹುದು.

3. ನಿತ್ಯವೂ ತಾಜಾ ಜೀರಿಗೆ ನೀರನ್ನು ತಯಾರಿಸಿಕೊಳ್ಳಿ.

English summary

How To Prepare Jeera Water; It’s Benefits During Pregnancy

Drinking jeera water during pregnancy is very beneficial. Read to know how you can be benefited by drinking jeera water during pregnancy.
X
Desktop Bottom Promotion