For Quick Alerts
ALLOW NOTIFICATIONS  
For Daily Alerts

ಮಹಿಳೆಯರ ಆಹಾರ ಕ್ರಮ ಹೀಗಿದ್ದರೆ, ಬಂಜೆತನ ಎಂದೂ ಕಾಡದು....

By Manohar Shetty
|

ಮದುವೆಯಾದ ದಂಪತಿಯ ಮುಂದೆ ಆಗಾಗ ಬರುವ ಪ್ರಶ್ನೆಯೆಂದರೆ ಮಗು ಯಾವಾಗ ಎಂದು? ಸಮಾಜದಲ್ಲಿ ಇದು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಸಂಪ್ರದಾಯವೆನ್ನಬಹುದು. ಮದುವೆಯಾದ ಕೆಲವೇ ತಿಂಗಳಲ್ಲಿ ಮಹಿಳೆ ಗರ್ಭಿಣಿಯಾಗಬೇಕು. ಇಲ್ಲವೆಂದಾದರೆ ಆಕೆಯಲ್ಲಿ ಏನಾದರೂ ಸಮಸ್ಯೆಯಿದೆ ಎನ್ನುವ ಮಾತುಗಳು ಬರುತ್ತದೆ.

ಪುರುಷರ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಒಂದಿಷ್ಟು ಸಲಹೆಗಳು

ಆದರೆ ಸಮಸ್ಯೆ ಮಹಿಳೆಯಲ್ಲಿ ಮಾತ್ರವಲ್ಲ ಪುರುಷನಲ್ಲೂ ಇರುತ್ತದೆ. ಇದನ್ನು ಸಮಾಜ ಒಪ್ಪಿಕೊಳ್ಳುವುದಿಲ್ಲ. ದಂಪತಿಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ಗರ್ಭನಿರೋಧಕಗಳನ್ನು ಬಳಸದೆ ಲೈಂಗಿಕ ಕ್ರಿಯೆ ನಡೆಸಿಯೂ ಅವರಿಗೆ ಮಕ್ಕಳಾಗದೆ ಇದ್ದರೆ ಆಗ ಬಂಜೆತನ ಕಾರಣವೆನ್ನಬಹುದು.

ಇಂದಿನ ದಿನಗಳಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಫಲವತ್ತತೆಯ ಕೊರತೆ ಕಂಡುಬರುತ್ತಿದ್ದು ಇದಕ್ಕೆ ಕಾರಣ ಪೋಷಕಾಂಶಗಳ ಕೊರತೆ ಎಂಬುದಾಗಿ ಅಧ್ಯಯನವೊಂದು ತಿಳಿಸುತ್ತಿದೆ. ಇಂದಿನ ಒತ್ತಡದ ಬದುಕು, ಚಟುವಟಿಕೆ ರಹಿತ ಜೀವನ ಪದ್ಧತಿ, ದುರ್ಬಲ ರೀತಿಯ ಡಯೆಟಿಂಗ್ ಮೊದಲಾದ ಕಾರಣಗಳಿಂದ ಇಂದು ಸ್ತ್ರೀಯರಲ್ಲಿ ಬಂಜೆತನ ಉಂಟಾಗುತ್ತಿದ್ದು, ಅವರಲ್ಲಿ ಸಾಮರ್ಥ್ಯ ಕುಂದುತ್ತಿದೆ.

ಮಹಿಳೆಯರ ಬಂಜೆತನ ಸಮಸ್ಯೆಗೆ ಕೆಲವೊಂದು ಮನೆ ಔಷಧಿ!

ಇಂದಿನ ಲೇಖನದಲ್ಲಿ ಗರ್ಭಾವಸ್ಥೆಗೆ ಪೂರಕವಾಗಿರುವ ಪ್ರೊಟೀನ್, ವಿಟಮಿನ್ ಅಂಶಗಳನ್ನು ತನ್ನಲ್ಲಿ ಯಥೇಚ್ಛವಾಗಿ ಹೊಂದಿರುವ ಕೆಲವೊಂದು ಆಹಾರ ಪದಾರ್ಥಗಳನ್ನು ನೀಡುತ್ತಿದ್ದೇವೆ. ಇವುಗಳು ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಗರ್ಭಾವಸ್ಥೆಗೆ ಸಹಕಾರಿಯಾಗಲಿವೆ. ಇನ್ನು ಪುರುಷರಿಗೂ ಶಕ್ತಿ ಸಾಮರ್ಥ್ಯವನ್ನು ಒದಗಿಸುವಲ್ಲಿ ಈ ಆಹಾರಗಳು ಪ್ರಯೋಜನಕಾರಿಯಾಗಲಿವೆ....

ವಿಟಮಿನ್ ಇ ಯನ್ನು ಒಳಗೊಂಡಿರುವ ಆಹಾರಗಳು

ವಿಟಮಿನ್ ಇ ಯನ್ನು ಒಳಗೊಂಡಿರುವ ಆಹಾರಗಳು

ಸೂರ್ಯಕಾಂತಿ ಎಣ್ಣೆ, ಆಲೀವ್ ಆಯಿಲ್, ವೀಟ್ ಜರ್ಮ್ ಆಯಿಲ್, ನಟ್ಸ್, ಪುದೀನಾ, ಬ್ರಕೋಲಿ ಮೊದಲಾದವುಗಳು ವಿಟಮಿನ್ ಇ ಯನ್ನು ಒಳಗೊಂಡಿವೆ. ಇ ಆಹಾರಗಳು ಮಹಿಳೆಯರಲ್ಲಿ ಗರ್ಭಕಂಠದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ. ಮತ್ತು ಗರ್ಭಕೋಶದಲ್ಲಿ ಫಲೀಕರಣದ ಮೊಟ್ಟೆಗಳನ್ನು ಅಳವಡಿಸಲು ಸಹಕಾರಿಯಾಗಿವೆ.

ವಿಟಮಿನ್ ಸಿ ಆಹಾರಗಳು

ವಿಟಮಿನ್ ಸಿ ಆಹಾರಗಳು

ಇದು ಸ್ತ್ರೀ ಸಂತಾನೋತ್ಪತ್ತಿ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಕಡಿಮೆ ಪ್ರೊಜೆಸ್ಟರಾನ್ ಮಟ್ಟವನ್ನು ಹೊಂದಿರುವ ಮಹಿಳೆಯರ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮಹಿಳೆಯರು ಬೇಗನೇ ಗರ್ಭಾವತಿಯಾಗಲು ಈ ಆಹಾರಗಳು ಸಹಾಯ ಮಾಡುತ್ತವೆ. ಈ ವಿಟಮಿನ್ ಇರುವ ಆಹಾರಗಳೆಂದರೆ ಕಿತ್ತಳೆ, ನಿಂಬೆಹಣ್ಣು, ಕೋಸುಗಡ್ಡೆ, ಕ್ಯಾನ್‌ಬೆರ್ರಿಗಳು, ಟೊಮೆಟೊ.

ಫೋಲಿಕ್ ಆಸಿಡ್ ಹೊಂದಿರುವ ಆಹಾರಗಳು

ಫೋಲಿಕ್ ಆಸಿಡ್ ಹೊಂದಿರುವ ಆಹಾರಗಳು

ಗರ್ಭಾವಸ್ಥೆಯ ಮೊದಲು ಮತ್ತು ನಂತರ ಈ ಅಂಶವಿರುವ ಆಹಾರವನ್ನು ಗರ್ಭಿಣಿಯರು, ಸ್ತ್ರೀಯರು ಸೇವಿಸಬೇಕು. ಇದು ಫಲವತ್ತತೆಯನ್ನು ಹೆಚ್ಚಿಸಿ ಗರ್ಭಾವಸ್ಥೆಗೆ ಸ್ತ್ರೀಯನ್ನು ಸಜ್ಜುಗೊಳಿಸುತ್ತದೆ. ಫೋಲಿಕ್ ಆಸಿಡ್ ಇರುವ ಆಹಾರಗಳೆಂದರೆ ಬ್ರಕೋಲಿ, ಬೀನ್ಸ್, ಪಾಲಾಕ್ ಇತ್ಯಾದಿ.

 ವಿಟಮಿನ್ ಬಿ6 ಆಹಾರಗಳು

ವಿಟಮಿನ್ ಬಿ6 ಆಹಾರಗಳು

ಇದು ಫಲವತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ಹಾರ್ಮೋನುಗಳನ್ನು ನಿಯಂತ್ರಣದಲ್ಲಿರಿಸುತ್ತದೆ. ಕಡಿಮೆ ಪ್ರೊಜೆಸ್ಟರಾನ್ ಮಟ್ಟವನ್ನು ಹೊಂದಿರುವ ಮಹಿಳೆಯರು ವಿಟಮಿನ್ ಬಿ6 ಆಹಾರವನ್ನು ಸೇವಿಸುವುದರಿದ ಬೇಗನೇ ಗರ್ಭವತಿಯಾಗಬಹುದಾಗಿದೆ. ವಿಟಮಿನ್ ಬಿ6 ಇರುವ ಆಹಾರ ಪದಾರ್ಥಗಳೆಂದರೆ ಬಾಳೆಹಣ್ಣು, ಧಾನ್ಯಗಳು ಇತ್ಯಾದಿ.

ವಿಟಮಿನ್ ಬಿ 12 ಆಹಾರಗಳು

ವಿಟಮಿನ್ ಬಿ 12 ಆಹಾರಗಳು

ಇದು ಅಂಡೋತ್ಪತ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಂಡೋತ್ಪತ್ತಿ ಕಡಿಮೆಯಾಗಿರುವ ಮಹಿಳೆಯರಲ್ಲಿ ಈ ವಿಟಮಿನ್ ಕಾರ್ಯನಿರ್ವಹಿಸುತ್ತದೆ. ವಿಟಮಿನ್ ಬಿ 12 ಹೊಂದಿರುವ ಆಹಾರ ಪದಾರ್ಥಗಳು ಗರ್ಭಾಶಯದ ಒಳಪದರವನ್ನು ಸುಧಾರಿಸುತ್ತದೆ ಹೀಗಾಗಿ ಫಲವತ್ತಾದ ಮೊಟ್ಟೆಗಳ ಅಳವಡಿಕೆಗೆ ಅನುಕೂಲಕರ ವಾತಾವರಣ ದೊರೆಯುತ್ತದೆ. ವಿಟಮಿನ್ ಬಿ 12 ಹೊಂದಿರುವ ಆಹಾರಗಳೆಂದರೆ ಮಾಂಸ, ಮೀನು, ಕೋಳಿ, ಮೊಟ್ಟೆ, ಅಂಗಗಳ ಮಾಂಸ, ಹಾಲಿನ ಉತ್ಪನ್ನಗಳು ಇತ್ಯಾದಿ.

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್

ಸಂತಾನೋತ್ಪತ್ತಿಯ ಭಾಗಗಳಿಗೆ ರಕ್ತದ ಪರಿಚಲನೆಯನ್ನು ಉತ್ತೇಜಿಸಲು ದಾಳಿಂಬೆ ನೆರವಾಗುತ್ತದೆ. ಇದು ಗರ್ಭಪಾತದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ಭ್ರೂಣದ ಬೆಳವಣಿಗೆಗೂ ಇದು ಸಹಕಾರಿ. ಒಂದು ಲೋಟ ದಾಳಿಂಬೆ ಜ್ಯೂಸ್ ಅನ್ನು ಪ್ರತೀ ದಿನ ಸೇವಿಸಿ.

ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು

English summary

Foods That Help You Get Pregnant Fast

These foods can also be taken during your pregnancy, as they are much needed for the growing baby. In this article, we have mentioned some foods that will increase your fertility and help you in getting pregnant faster. Have a look at some best fertility foods to get pregnant faster.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more