For Quick Alerts
ALLOW NOTIFICATIONS  
For Daily Alerts

ಗರ್ಭದಲ್ಲಿನ ಮಗು ನಿಧಾನವಾಗಿ ಬೆಳೆಯಲು ಕಾರಣವೇನು?

By Lekhaka
|

ಗರ್ಭಧಾರಣೆ ಎನ್ನುವುದು ಮಹಿಳೆಯ ಜೀವನದಲ್ಲಿ ಬರುವಂತಹ ಪ್ರಮುಖ ಕಾಲಘಟ್ಟವಾಗಿದೆ. ಇಂತಹ ಸಮಯದಲ್ಲಿ ಮಹಿಳೆ ತನ್ನ ಹಾಗೂ ತನ್ನ ಗರ್ಭದಲ್ಲಿರುವ ಮಗುವಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು. ಆಕೆ ಸೇವಿಸುವ ಆಹಾರ, ಜೀವನಶೈಲಿ ಮತ್ತು ಸುತ್ತಲಿನ ಪರಿಸರ ಪ್ರತಿಯೊಂದು ಕೂಡ ಮಗುವಿನ ಮೇಲೆ ಪರಿಣಾಮ ಬೀರುವುದು. ಅದರಲ್ಲೂ ಗರ್ಭಿಣಿ ಮಹಿಳೆಯರು ಸಾವಯವ ಆಹಾರ ಸೇವಿಸಿ ರಾಸಾಯನಿಕಗಳಿಂದ ದೂರವಿರಬೇಕು ಮತ್ತು ಹೆಚ್ಚಿನ ನೀರು ಹಾಗೂ ಹಣ್ಣಿನ ಜ್ಯೂಸ್ ಕುಡಿಯಬೇಕು. ಸರಿಯಾದ ನಿದ್ರೆ ಮತ್ತು ವಿಶ್ರಾಂತಿ ಕೂಡ ಅತೀ ಅಗತ್ಯವಾಗಿದೆ. ಸರಿಯಾದ ಪೋಷಕಾಂಶಗಳು ಇಲ್ಲದೆ ಇರುವಂತಹ ಆಹಾರ ಸೇವನೆ ಮಾಡಿದರೆ ಅದರಿಂದ ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಉಂಟಾಗಬಹುದು.

reasons for slow foetal growth

ಮಗುವಿನ ಆರೋಗ್ಯ ಸರಿಯಾಗಿದ್ದರೂ ಆಕೆ ಪೋಷಕಾಂಶಗಳನ್ನು ಮಗುವಿಗೆ ಸರಿಯಾಗಿ ಒದಗಿಸುತ್ತಿದ್ದರೂ ಮಗುವಿನ ಬೆಳವಣೆಗೆ ಸರಿಯಾಗಿ ಆಗುತ್ತಿಲ್ಲವೆಂದಾದರೆ ಅದಕ್ಕೆ ಸರಿಯಾದ ರೀತಿಯಲ್ಲಿ ಆಹಾರ ಸೇವಿಸದೆ ಇರುವುದೇ ಕಾರಣವಾಗಿದೆ. ಚಿಕಿತ್ಸೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬಹುದು. ಗರ್ಭದಲ್ಲಿರುವ ಮಗು ತುಂಬಾ ನಿಧಾನವಾಗಿ ಬೆಳೆಯಲು ಕಾರಣಗಳು ಏನು ಎಂದು ತಿಳಿಯಿರಿ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಇಂಟ್ರಾಯುಟ್ರೈನೆ ಗ್ರೋಥ್ ರಿಸ್ಟ್ರಿಕ್ಷನ್(ಗರ್ಭಾಶಯದ ಬೆಳವಣಿಗೆ ನಿರ್ಬಂಧ) ಎಂದು ಕರೆಯಲಾಗುತ್ತದೆ.

ಗರ್ಭಾಶಯದ ಬೆಳವಣಿಗೆ ನಿರ್ಬಂಧವೆಂದರೇನು?

ಗರ್ಭಾಶಯದ ಬೆಳವಣಿಗೆ ನಿರ್ಬಂಧವೆಂದರೇನು?

ವೈದ್ಯಕೀಯ ಕೋಷ್ಠಕದ ಪ್ರಕಾರ ಗರ್ಭದಲ್ಲಿರುವ ಮಗು ಕಾಲಕಾಲಕ್ಕೆ ಬೆಳೆಯುತ್ತಾ ಇರಬೇಕು. ಇದರಿಂದ ಮಗು ಆರೋಗ್ಯವಾಗಿರುವುದು. ಆದರೆ ಕೆಲವೊಂದು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಮಗುವಿನ ಬೆಳವಣಿಗೆ ಆಗುವುದಿಲ್ಲ. ಇದನ್ನು ಗರ್ಭಾಶಯದ ಬೆಳವಣಿಗೆ ನಿರ್ಬಂಧ(ಐಯುಜಿಆರ್) ಎಂದು ಕರೆಯಲಾಗುವುದು. ಇಲ್ಲಿ ಮಗುವಿನ ಗಾತ್ರವು ಸಾಮಾನ್ಯಕ್ಕಿಂತ ಕಡಿಮೆ ಇರುವುದು. ಭ್ರೂಣದ ಬೆಳವಣಿಗೆ ನಿರ್ಬಂಧ(ಎಫ್ ಜಿಆರ್) ಎನ್ನಲಾಗುತ್ತದೆ.

ಐಯುಜಿಆರ್ ನ ವಿಧಗಳು ಯಾವುದು?

ಐಯುಜಿಆರ್ ನ ವಿಧಗಳು ಯಾವುದು?

ಐಯುಜಿಆರ್ ನಲ್ಲಿ ಎರಡು ವಿಧಗಳು ಇವೆ. ಸಮ್ಮತೀಯ ಅಥವಾ ಪ್ರಾಥಮಿಕ, ಅಸಮ್ಮತೀಯ ಅಥವಾ ದ್ವಿತೀಯ. ಪ್ರಾಥಮಿಕ ಐಯುಜಿಆರ್ಆರ್ ಮಗುವಿನ ದೇಹವು ಆಂತರಿಕ ಅಂಗಗಳಿಗೆ ಅನುಗುಣವಾಗಿರುತ್ತವೆ. ಆದರೆ ಮಗುವಿನ ತೂಕವು ಗರ್ಭಧಾರಣೆಯ ವಯಸ್ಸಿಗಿಂತ ಕಡಿಮೆಯಿರುವುದು. ಎರಡನೇ ಐಯುಜಿಆರ್ ನಲ್ಲಿ ಮಗುವಿನ ತಲೆ ಮತ್ತು ಮೆದುಳು ವಯಸ್ಸಿಗೆ ಸರಿಯಾಗಿರುವುದು. ಆದರೆ ದೇಹವು ನಿಗದಿತ ಸಣ್ಣ ಪ್ರಮಾಣದಲ್ಲಿರುವುದು.

ಗರ್ಭಧಾರಣೆಯ ಯಾವ ಹಂತದಲ್ಲಿ ಇದು ಕಂಡುಬರುವುದು?

ಗರ್ಭಧಾರಣೆಯ ಯಾವ ಹಂತದಲ್ಲಿ ಇದು ಕಂಡುಬರುವುದು?

ಸರಳವಾಗಿ ಹೇಳಬೇಕೆಂದರೆ ಐಯುಜಿಆರ್ ಗರ್ಭಧಾರಣೆಯ ಯಾವುದೇ ಹಂತದಲ್ಲೂ ನಡೆಯಬಹುದು. ಗರ್ಭ ನಿಲ್ಲುವುದರಿಂದ ಹಿಡಿದು ಗರ್ಭಧಾರಣೆಯ ಮೂರನೇ ಹಂತದ ತನಕ ಇದು ನಡೆಯಬಹುದು. ಮೊದಲ ಹಂತದಲ್ಲೇ ಇದು ನಡೆದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುವುದು. ಗರ್ಭಧಾರಣೆಯ ಯಾವುದೇ ಹಂತದಲ್ಲಿ ಬೇಕಾದರೂ ಪ್ರಾಥಮಿಕ ಐಜಿಯುಆರ್ ನ್ನು ಪತ್ತೆ ಮಾಡಬಹುದು. ಆದರೆ ದ್ವಿತೀಯ ಐಯುಜಿಆರ್ ನ್ನು ಮೂರನೇ ಹಂತದ ತನಕ ಪತ್ತೆ ಮಾಡುವುದು ಕಷ್ಟ.

ಐಯುಜಿಆರ್ ನ ಸಂಭವನೀಯ ಲಕ್ಷಣಗಳು

ಐಯುಜಿಆರ್ ನ ಸಂಭವನೀಯ ಲಕ್ಷಣಗಳು

ಇದರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಎರಡು ಮಾತ್ರ. ಆದರೆ ಪ್ರತಿಯೊಂದು ಐಯುಜಿಆರ್ ಪ್ರಕರಣದಲ್ಲೂ ಇದು ನಿಮಗೆ ಕಾಣಸಿಗುವುದು ಎಂದು ಹೇಳಲಾಗದು. ಮೊದಲ ಲಕ್ಷಣವೆಂದರೆ ಗರ್ಭಧರಿಸಿದ ಮಹಿಳೆಯ ತೂಕವು ನಿರೀಕ್ಷಿತವಾಗಿರುವುದು. ಎರಡನೇ ಲಕ್ಷಣವೆಂದರೆ ಗರ್ಭಾಶಯವು ಗರ್ಭಧಾರಣೆಗೆ ಬೇಕಾದಷ್ಟು ದೊಡ್ಡದಾಗಿರುವುದಿಲ್ಲ.

ಐಯುಜಿಆರ್ ಗೆ ಕಾರಣಗಳು

ಐಯುಜಿಆರ್ ಗೆ ಕಾರಣಗಳು

ಇಲ್ಲಿ ಹೇಳಿರುವಂತಹ ಯಾವುದೇ ಕಾರಣಗಳು ಇದಕ್ಕೆ ಕಾರಣವಾಗಿರಬಹುದು. ತಾಯಿಯ ಆರೋಗ್ಯ ಪ್ರಮುಖ ಕಾರಣವಾಗಿದೆ. ಇದರಲ್ಲಿ ಆಕೆಯ ಕೆಟ್ಟ ಆಹಾರ ಕ್ರಮ, ಅತಿಯಾದ ರಕ್ತದೊತ್ತಡ ಮತ್ತು ತಾಯಿಯಿಂದ ಬಂದಿರುವಂತಹ ಸೋಂಕು. ಗರ್ಭದ ಆರೋಗ್ಯವು ಇದಕ್ಕೆ ಕಾರಣವಾಗಿರಬಹುದು. ಅನಾರೋಗ್ಯಕರ ಹೊಕ್ಕಳಬಳ್ಳಿ, ಆಮ್ನಿಯೋಟಿಕ್ ದ್ರವ್ಯವು ಕಡಿಮೆ ಪ್ರಮಾಣದಲ್ಲಿರುವುದು ಮತ್ತು ಸಮಸ್ಯೆಯಾಗಿರುವ ಜಠಾಯು ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದು. ಗರ್ಭ ಧರಿಸಿದ ಮಹಿಳೆಯು ಸರಿಯಾದ ಜೀವನಶೈಲಿ ಅಳವಡಿಸಿಕೊಳ್ಳದೆ ಇರುವುದು ಕೂಡ ಪ್ರಮುಖವಾಗಿದೆ. ಇದರಲ್ಲಿ ಮುಖ್ಯವಾಗಿ ಧೂಮಪಾನ, ಮದ್ಯಪಾನ, ಡ್ರಗ್ಸ್ ಸೇವನೆ, ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು ಇತ್ಯಾದಿ. ಇನ್ನೊಂದು ಕಾರಣವೆಂದರೆ ಅನುವಂಶೀಯ ಮತ್ತು ವರ್ಣತಂತು ವೈಪರೀತ್ಯ. ಗರ್ಭಾಶಯದ ಗಾತ್ರ ಮತ್ತು ವಿನ್ಯಾಸ ಅಸಾಮಾನ್ಯವಾಗಿರುವುದು ಮತ್ತು ದೀರ್ಘಕಾಲದ ಅನಾರೋಗ್ಯ.

ಐಯುಜಿಆರ್ ಪತ್ತೆಯಾದ ಮಕ್ಕಳಿಗೆ ಅಪಾಯಗಳು?

ಐಯುಜಿಆರ್ ಪತ್ತೆಯಾದ ಮಕ್ಕಳಿಗೆ ಅಪಾಯಗಳು?

ಐಯುಜಿಆರ್ ಪತ್ತೆಯಾದ ಮಕ್ಕಳಲ್ಲಿ ಜನನಕ್ಕೆ ಮೊದಲು ಅಥವಾ ಬಳಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವು ಸಮಸ್ಯೆಯು ಜೀವನಪೂರ್ತಿ ಇರಬಹುದು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯೆಂದರೆ ಕಡಿಮೆ ತೂಕ, ರೋಗನಿರೋಧಕ ಶಕ್ತಿ ಕಡಿಮೆಯಿರುವುದು, ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆಯಿರುವುದು, ದೇಹದ ಉಷ್ಣಾಂಶದಲ್ಲಿ ವೈಪರೀತ್ಯ, ನರಗಳಲ್ಲಿ ತೊಂದರೆ, ಜನನದ ತನಕ ಕೆಂಪುರಕ್ತ ಕಣಗಳ ಹೆಚ್ಚಳ.

ಐಯುಜಿಆರ್ ಪತ್ತೆ ಹೇಗೆ?

ಐಯುಜಿಆರ್ ಪತ್ತೆ ಹೇಗೆ?

ಅಲ್ಟ್ರಾಸೌಂಡ್ ಮೂಲಕವಾಗಿ ಐಯುಜಿಆರ್ ನ್ನು ಪತ್ತೆ ಮಾಡಬಹುದು. ಸ್ಕ್ಯಾನಿಂಗ್ ವೇಳೆ ಮಗುವಿನ ಮಾಪನ ಮಾಡಲಾಗುವುದು. ಗರ್ಭಧಾರಣೆಯ ವಯಸ್ಸು, ಗಾತ್ರ, ತೂಕ ಮತ್ತು ಎತ್ತರ ಪರಿಗಣಿಸಲಾಗುವುದು. ಆಮ್ನಿಯೋಟಿಕ್ ದ್ರವದ ಪ್ರಮಾಣವನ್ನು ಇಲ್ಲಿ ನೋಡಲಾಗುವುದು. ಅಲ್ಟ್ರಾಸೌಂಡ್ ಮಾಡುವ ವೇಳೆ ಮಗುವಿನ ರಕ್ತದೊತ್ತಡ ಪರೀಕ್ಷೆ ಮಾಡಲಾಗುತ್ತದೆ.

ಇಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡರೆ ವೈದ್ಯರು ಐಯುಜಿಆರ್ ನ್ನು ಪರೀಕ್ಷೆ ಮಾಡುವ ಸಾಧ್ಯತೆಯಿದೆ. ಮಗುವಿನ ಸುರಕ್ಷತೆಗಾಗಿ ತಾಯಿಯು ಆಗಾಗ ಸ್ಕ್ಯಾನಿಂಗ್ ಗೆ ಒಳಗಾಗಬೇಕೆಂದು ವೈದ್ಯರು ಸೂಚಿಸುವರು. ತಾಯಿಯ ತೂಕ ಪರಿಶೀಲಿಸುವುದು ಮತ್ತೊಂದು ವಿಧಾನ. ಮಗುವಿನ ಎದೆಬಡಿತ ಮತ್ತು ವರ್ಣತಂತುವಿನ ಸಮಸ್ಯೆಗಾಗಿ ಆಮ್ನಿಯೋಟಿಕ್ ದ್ರವ್ಯದ ಪರೀಕ್ಷೆ ಮಾಡಲಾಗುತ್ತದೆ.

ಐಯುಜಿಆರ್ ಗೆ ಚಿಕಿತ್ಸೆಗಳು

ಐಯುಜಿಆರ್ ಗೆ ಚಿಕಿತ್ಸೆಗಳು

ಐಯುಜಿಆರ್ ಬೆಳವಣೆಯಾದರೆ ಅದಕ್ಕೆ ಯಾವುದೇ ರೀತಿಯ ಚಿಕಿತ್ಸೆ ಎನ್ನುವುದು ಇಲ್ಲ. ತಾಯಿ ಮತ್ತು ಮಗುವಿನ ಮೇಲೆ ಇದರ ಪರಿಣಾಮ ಕಡಿಮೆ ಮಾಡಲು ಕೆಲವು ವಿಧಾನಗಳು ಇವೆ. ಗರ್ಭದ ವಯಸ್ಸನ್ನು ನೋಡಿಕೊಂಡು ಈ ವಿಧಾನ ಅನುಸರಿಸಲಾಗುವುದು. 34 ವಾರ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾಗಿದ್ದರೆ ಬೇಗನೆ ಹೆರಿಗೆ ಮಾಡಿಕೊಳ್ಳಲು ಸೂಚಿಸಲಾಗುವುದು. 34 ವಾರಕ್ಕಿಂತ ಕಡಿಮೆ ವಯಸ್ಸಿನದ್ದಾಗಿದ್ದರೆ ಆಗ ಭ್ರೂಣವನ್ನು ನಿಯಮಿತವಾಗಿ ಪರಿಶೀಲಿಸಿ ಅಂತಿಮವಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿ ಮಗುವಿಗೆ ಜನ್ಮ ಕೊಡಲಾಗುವುದು. ಅತ್ಯಂತ ಕ್ಲಿಷ್ಟ ಸಂದರ್ಭಗಳಲ್ಲಿ 32ನೇ ವಾರದಲ್ಲಿ ಸಿಸೇರಿಯನ್ ಮಾಡಿ ಮಗುವನ್ನು ಒಳ್ಳೆಯ ರೀತಿಯಲ್ಲಿ ಬೆಳೆಯಲು ನವಜಾತ ಆರೈಕೆಯಲ್ಲಿಡಲಾಗುತ್ತದೆ.

English summary

facts about slow foetal growth

Pregnancy is one of the crucial phases in the lifetime of a woman. Any woman would want to give birth to a healthy baby and for this several measures are taken. Eating organic foods that are toxin free, drinking lots of water, juices, taking ample amount of rest, and the list goes on. The lifestyle itself changes for all the good that the mother can provide the baby with. But what if such measures are not taken? Improper nutrition can affect the growth of the baby in the womb, which is not supposed to happen to a developing embryo.
Story first published: Monday, October 23, 2017, 16:21 [IST]
X
Desktop Bottom Promotion