For Quick Alerts
ALLOW NOTIFICATIONS  
For Daily Alerts

ಗರ್ಭದಲ್ಲಿರುವಾಗಲೇ ಮಗುವಿಗೆ ಎಲ್ಲವೂ ಅರ್ಥವಾಗಿಬಿಡುತ್ತದೆ!

By Lekhaka
|

ತಾಯ್ತನ ಎನ್ನುವುದು ಹೆಣ್ಣಿಗೆ ತುಂಬಾ ಅದ್ಭುತ ಅನುಭವ. ಅದರಲ್ಲೂ ಗರ್ಭಧಾರಣೆಯ ಸಮಯದಲ್ಲಿ ಆಕೆ ಹಲವಾರು ಹಂತಗಳನ್ನು ದಾಟಿ ಮುನ್ನಡೆಯಬೇಕು. ಇದರಲ್ಲಿ ಪ್ರಮುಖವಾಗಿ ಆಕೆಯಲ್ಲಿ ಆಗುವಂತಹ ದೈಹಿಕ ಹಾಗೂ ಮಾನಸಿಕ ಬದಲಾವಣೆ ಪ್ರಮುಖವಾಗಿದೆ. ಇಷ್ಟು ಮಾತ್ರವಲ್ಲದೆ ಆಕೆಯಲ್ಲಿ ಬೆಳಗಿನ ಅವಧಿಯಲ್ಲಿ ವಾಕರಿಕ ಬರುವುದು, ಸುಸ್ತು ಇತ್ಯಾದಿ ಕಾಣಿಸಿಕೊಳ್ಳುವುದು.

ಇದು ಕೆಲವು ಸಮಯ ಮಾತ್ರ. ಆದರೆ ಗರ್ಭದಲ್ಲಿರುವ ಮಗು ತಾಯಿಯ ಹೊಟ್ಟೆಗೆ ತನ್ನ ಪುಟ್ಟ ಕಾಲುಗಳಿಂದ ಒದೆಯುವಾಗ ಸಿಗುವ ಅನುಭವ ಮಹಿಳೆಗೆ ತನ್ನ ಜೀವಮಾನದ ಅದ್ಭುತ ಅನುಭವವೆನ್ನಬಹುದು. ಗರ್ಭದಲ್ಲಿರುವ ನೆನಪು ಮಗುವಿಗೆ ತಿಳಿದಿರುವುದಿಲ್ಲ. ಆದರೆ ಗರ್ಭದಲ್ಲಿ ಮಗು ಕೆಲವೊಂದು ಪಾಠಗಳನ್ನು ಕಲಿತುಕೊಳ್ಳುವುದು. ಇದು ಮಾತ್ರ ಜೀವನಪೂರ್ತಿ ಉಳಿದುಬಿಡುತ್ತದೆ.

ಗರ್ಭದಲ್ಲಿನ ಮಗು ನಿಧಾನವಾಗಿ ಬೆಳೆಯಲು ಕಾರಣವೇನು?

ಮಗು ದೈಹಿಕವಾಗಿ ಗರ್ಭಧಲ್ಲಿ ಬೆಳವಣಿಗೆಯಾಗುವುದಲ್ಲದೆ, ಮಾನಸಿಕವಾಗಿ ಕೂಡ ಬೆಳೆಯುವುದು ಪ್ರಮುಖ ವಿಚಾರವಾಗಿದೆ. ಗರ್ಭದಲ್ಲಿರುವ ಮಗು ಕೂಡ ಹಲವಾರು ವಿಚಾರಗಳನ್ನು ಕಲಿತುಕೊಳ್ಳುವುದು. ಮಗು ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎನ್ನುವ ಬಗ್ಗೆ ಇಂದಿನ ಮುಂದುವರಿದಿರುವ ವಿಜ್ಞಾನದಿಂದ ತಿಳಿಯಬಹುದು.

ಗರ್ಭದಲ್ಲಿರುವ ಮಗುವಿನ ನಡವಳಿಕೆ ಬಗ್ಗೆ ಹಿಂದಿಗಿಂತಲೂ ಹೆಚ್ಚಾಗಿ ಈಗ ತಿಳಿದುಕೊಳ್ಳಬಹುದಾಗಿದೆ. ಮಗು ಯಾವೆಲ್ಲಾ ವಿಚಾರಗಳನ್ನು ಗರ್ಭದಲ್ಲಿ ಇರುವಾಗಲೇ ಕಲಿತುಕೊಳ್ಳುವುದು ಎನ್ನುವ ಬಗ್ಗೆ ಈ ಲೇಖನದಲ್ಲಿ ನಾವು ತಿಳಿದುಕೊಳ್ಳುವ. ಇದರಿಂದ ಗರ್ಭದರಿಸಿರುವ ಮತ್ತು ಗರ್ಭಧರಿಸಲಿರುವ ಮಹಿಳೆಯರಿಗೆ ಇದರಿಂದ ನೆರವಾಗಲಿದೆ....

ಗರ್ಭದಲ್ಲಿರುವ ಮಗುವಿಗೆ ಒತ್ತಡ ತಿಳಿಯುವುದು

ಗರ್ಭದಲ್ಲಿರುವ ಮಗುವಿಗೆ ಒತ್ತಡ ತಿಳಿಯುವುದು

ಗರ್ಭದಲ್ಲಿರುವ ಮಗುವಿಗೆ ಒತ್ತಡ ತಿಳಿದುಬರುವುದು ಮತ್ತು ತಾಯಿ ಒತ್ತಡದಲ್ಲಿದ್ದರೆ ಅದು ಮಗುವಿನ ಅರಿವಿಗೆ ಬರುತ್ತದೆ. ಗರ್ಭದಲ್ಲಿರುವ ಮಗುವಿನ 3ಡಿ ಚಿತ್ರ ತೆಗೆದಾಗ ತಿಳಿದುಬಂದಿರುವ ವಿಚಾರದ ಪ್ರಕಾರ, ಮಗು ಒತ್ತಡಕ್ಕೆ ಒಳಗಾದಾಗ ತನ್ನ ಕೈಗಳನ್ನು ಎಳೆದುಕೊಂಡು ಮುಖದ ಮೇಲಿಡುತ್ತದೆ. ಇದು ರಕ್ಷಣಾತ್ಮಕ ವಿಧಾನವೆನ್ನಲಾಗಿದೆ. ಹಾರ್ಮೋನುಗಳು ಮತ್ತು ತಾಯಿಯ ರಕ್ತದೊತ್ತಡದಲ್ಲಿ ಬದಲಾವಣೆಯಿಂದಾಗಿ ಮಗುವಿಗೆ ಒತ್ತಡ ಉಂಟಾಗಬಹುದು. ಗರ್ಭಿಣಿಯರು ಒತ್ತಡ ಕಡಿಮೆ ಮಾಡಿಕೊಂಡರೆ ಅದರಿಂದ ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮಗುವಿಗೆ ರುಚಿ ತಿಳಿದುಬರುವುದು

ಮಗುವಿಗೆ ರುಚಿ ತಿಳಿದುಬರುವುದು

ಗರ್ಭದಲ್ಲಿರುವ ಮಗು 20 ವಾರಗಳಾದಾಗ ಅದಕ್ಕೆ ರುಚಿ ತಿಳಿಯುವ ಗ್ರಹಣ ಶಕ್ತಿ ಬೆಳೆದಿರುವುದು. ತಾಯಿ ಸೇವಿಸುವ ಆಹಾರದ ರುಚಿಯನ್ನು ಅಮನಿಯೊಟಿಕ್ ದ್ರವದ ಮೂಲಕ ಮಗು ತಿಳಿದುಕೊಳ್ಳುವುದು. ವಿವಿಧ ರೀತಿಯ ರುಚಿಗೆ ಮಗು ಪ್ರತಿಕ್ರಿಯಿಸುವುದು. ಮಗುವಿಗೆ ಇಷ್ಟವಾಗಿರುವಂತಹ ರುಚಿ ಸಿಕ್ಕಿದರೆ ಆಗ ಮಗು ಮತ್ತಷ್ಟು ಕ್ರಿಯಾಶೀಲವಾಗುವುದು. ಈ ಕಾರಣಕ್ಕಾಗಿ ಗರ್ಭಿಣಿ ಮಹಿಳೆಯರು ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಗರ್ಭದಲ್ಲಿ ಮಗು ಇಷ್ಟಪಡುವ ರುಚಿಯು ಜೀವನಮಾನವಿಡಿ ಮುಂದುವರಿಸಿಕೊಂಡು ಹೋಗುವುದು.

ಮಗುವಿಗೆ ಭಾವನೆಗಳು ಅರ್ಥವಾಗುವುದು ಮತ್ತು ಅದನ್ನು ವ್ಯಕ್ತಪಡಿಸುವುದು

ಮಗುವಿಗೆ ಭಾವನೆಗಳು ಅರ್ಥವಾಗುವುದು ಮತ್ತು ಅದನ್ನು ವ್ಯಕ್ತಪಡಿಸುವುದು

ಗರ್ಭದಲ್ಲಿರುವ ಮಗುವಿಗೆ 36 ವಾರಗಳು ಆಗುತ್ತಿರುವಂತೆ ಮಗುವಿನ ಮುಖದ ಸ್ನಾಯುಗಳು ಭಾವನೆಗಳನ್ನು ತೋರಿಸುವಷ್ಟು ಬಲಿಷ್ಠವಾಗುವುದು. ಮಗುವಿಗೆ ಭಾವನೆಗಳು ಅರ್ಥವಾಗುವುದು ಮತ್ತು ಅದನ್ನು ಅವುಗಳು ವ್ಯಕ್ತಪಡಿಸುವವು. ಮಗು ನಗುವುದು, ಮುಖ ಗಂಟಿಕ್ಕುವುದು ಮತ್ತು ಬೇಸರ ವ್ಯಕ್ತಪಡಿಸಲು ತುಟಿಗಳನ್ನು ತಿರುಗಿಸುವುದು.

ಗರ್ಭದಲ್ಲಿರುವ ಮಗು ಅಳುವುದು

ಗರ್ಭದಲ್ಲಿರುವ ಮಗು ಅಳುವುದು

ಭೂಮಿಗೆ ಬರುವ ಮೊದಲೇ ಗರ್ಭದಲ್ಲೇ ಮಗು ಅಳುವುದು ಎಂದು ನಿಮಗೆ ತಿಳಿದಿದೆಯಾ? 3ಡಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವೇಳೆ ಹಲವಾರು ಮಕ್ಕಳು ಅಳುತ್ತಾ ಇದ್ದವು. ಮಗುವಿನ ಮುಖದ ಭಾವ ನೋಡಿದಾಗ ಅವುಗಳು ಅಳುತ್ತಾ ಇದ್ದವು ಎನ್ನುವುದು ಸ್ಪಷ್ಟವಾಗುತ್ತಾ ಇತ್ತು. ಗರ್ಭಧಾರಣೆಯ ಮೂರನೇ ಅವಧಿಯಲ್ಲಿ ಅಲ್ಟ್ರಾಸೌಂಡ್ ಮೈಕ್ರೋಫೋನ್ ಬಳಸಿದರೆ ಮಗು ಅಳುವ ಶಬ್ದ ಕೂಡ ಕೇಳಬಹುದು.

ನಿಮ್ಮನ್ನು ಅರ್ಥಮಾಡಿಕೊಳ್ಳಬಹುದು

ನಿಮ್ಮನ್ನು ಅರ್ಥಮಾಡಿಕೊಳ್ಳಬಹುದು

ಗರ್ಭಿಣಿ ತಾಯಿಯು ಯಾವ ರೀತಿ ಭಾವಿಸುತ್ತಿದ್ದಾಳೆ ಎನ್ನುವುದನ್ನು ಮಗು ಅರ್ಥ ಮಾಡಿಕೊಳ್ಳಬಹುದು. ತಾಯಿಯು ಸಂತೋಷದಲ್ಲಿ ಇದ್ದಾಗ ಮಗು ಕೂಡ ತುಂಬಾ ಸಂತೋಷ ಹಾಗೂ ಆರಾಮವಾಗಿರುವುದು. ತಾಯಿ ತುಂಬಾ ಬೇಸರದಲ್ಲಿದ್ದರೆ ಆಗ ಮಗು ಕೂಡ ಅದೇ ರೀತಿಯಲ್ಲಿರುವುದು.

ಮಗು ಸಂಗೀತ ಕೇಳಬಹುದು ಮತ್ತು ಅದಕ್ಕೂ ಯಾವುದಾದರೂ ಹಾಡು ಇಷ್ಟವಾಗಬಹುದು

ಮಗು ಸಂಗೀತ ಕೇಳಬಹುದು ಮತ್ತು ಅದಕ್ಕೂ ಯಾವುದಾದರೂ ಹಾಡು ಇಷ್ಟವಾಗಬಹುದು

ಗರ್ಭಿಣಿ ಮಹಿಳೆಯು ಯಾವಾಗಲೂ ಹಾಡುತ್ತಲಿದ್ದರೆ ಅಥವಾ ಸಂಗೀತ ಕೇಳುತ್ತಿದ್ದರೆ ಆಗ ಮಗು ಕೂಡ ಹಾಡನ್ನು ಇಷ್ಟಪಡಲು ಆರಂಭಿಸಬಹುದು. ಈ ಹಾಡು ಮಗುವಿನ ನೆನಪಿನಲ್ಲಿ ಉಳಿದುಕೊಳ್ಳುವುದು ಮತ್ತು ಹುಟ್ಟಿದ ಬಳಿಕ ಇದೇ ಹಾಡನ್ನು ಕೇಳಿದಾಗ ಅದಕ್ಕೆ ಹಾಡು ಕೇಳಿದ ನೆನಪಾಗುವುದು. ಬೇರೆ ಹಾಡಿಗಿಂತ ಈ ಹಾಡಿಗೆ ಹೆಚ್ಚಿನ ಮಹತ್ವ ನೀಡಬಹುದು.

ಗರ್ಭದಲ್ಲೇ ಕಣ್ಣು-ಕೈಯ ಸಂಯೋಜನೆಯು ಮಗುವಿನಲ್ಲಿ ಬೆಳೆಯುವುದು

ಗರ್ಭದಲ್ಲೇ ಕಣ್ಣು-ಕೈಯ ಸಂಯೋಜನೆಯು ಮಗುವಿನಲ್ಲಿ ಬೆಳೆಯುವುದು

ಹುಟ್ಟಿದ ಬಳಿಕ ಮಗುವಿನ ದೈಹಿಕ ಸಾಮರ್ಥ್ಯಗಳ ಬೆಳವಣಿಗೆಯಾಗುವುದು. ಆದರೆ ಈ ಬೆಳವಣಿಗೆಯು ಮಗು ಗರ್ಭದಲ್ಲಿ ಇರುವಾಗಲೇ ಆರಂಭವಾಗುವುದು. ಕೈ ಮತ್ತು ಕಣ್ಣಿನ ಸಂಯೋಜನೆಯು ಇದಕ್ಕೆ ಒಳ್ಳೆಯ ಉದಾಹರಣೆ. ಗರ್ಭದಲ್ಲಿ ಇರುವಾಗಲೇ ಮಗು ತನ್ನ ಹೆಬ್ಬೆರಳು ಅಥವಾ ಇತರ ಬೆರಳುಗಳನ್ನು ಚೀಪಲು ಆರಂಭಿಸುವುದು. ಇದು ಭವಿಷ್ಯದಲ್ಲಿ ತಾನೇ ಪೋಷಿಸುವ ಮಗುವಿನ ಕ್ರಿಯೆಯ ಮುನ್ಸೂಚಕವಾಗಿದೆ.

English summary

Eight Things That The Babies Feel In The Womb

We know more about a baby's behaviour within the womb today than ever before. This knowledge can be put to use to help give our children a great start even before they are born. Today, we shall talk about the surprising things that the baby perceives and experiences within the womb. If you are a mother or a mother to be, this article will truly astound you. Read on to know more
X
Desktop Bottom Promotion