For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಜ್ವರ ಕಾಣಿಸಿಕೊಂಡರೆ, ಈ ಮನೆಮದ್ದು ಪ್ರಯತ್ನಿಸಿ...

ಇನ್ನೊಂದು ಜೀವದ ಹೊಣೆಯನ್ನು ಹೊತ್ತಿರುವ ತಾಯಿಯ ದೇಹ ತುಂಬಾ ಜಾಗರೂಕವಾಗಿರ ಬೇಕಾಗುತ್ತದೆ. ಆದ್ದರಿಂದ ಗರ್ಭವತಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಅಗತ್ಯ.

By Manu
|

ಪ್ರತಿ ಗರ್ಭವತಿಗೆ ಗರ್ಭಾವಸ್ಥೆಯಲ್ಲಿ ಹಲವಾರು ಅನಾರೋಗ್ಯಗಳು ಕಾಡುತ್ತವೆ. ಈ ಅವಧಿಯಲ್ಲಿ ಅತಿ ಹೆಚ್ಚಿನ ಕಾಳಜಿ ತೆಗೆದು ಕೊಳ್ಳಬೇಕಾಗುತ್ತದೆ. ಏಕೆಂದರೆ ತನ್ನ ಒಡಲಲ್ಲಿ ಮೂಡುತ್ತಿರುವ ಇನ್ನೊಂದು ಜೀವದ ಹೊಣೆಯನ್ನು ಹೊತ್ತಿರುವ ತಾಯಿಯ ದೇಹ ತುಂಬಾ ಜಾಗರೂಕವಾಗಿರಬೇಕಾಗುತ್ತದೆ. ಆದ್ದರಿಂದ ಗರ್ಭವತಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಅಗತ್ಯ. ಅದರಲ್ಲೂ ಸೋಂಕು ಉಂಟುಮಾಡುವ ಅಂಟುರೋಗಗಳ ವಿರುದ್ಧ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಗರ್ಭಿಣಿಯರು ಸೇವಿಸಲೇಬೇಕಾದ ಆಹಾರಗಳಿವು, ಮಿಸ್ ಮಾಡಬೇಡಿ

ಆದರೆ, ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ಯಾವುದೋ ಅಗೋಚರ ಕಾರಣದಿಂದ ಸೋಂಕಿಗೆ ಒಳಗಾಗಿಯೇ ಆಗುತ್ತೇವೆ. ವಿಶೇಷವಾಗಿ ಗಾಳಿಯಲ್ಲಿ ತೇಲಿಬರುವ ವೈರಸ್ಸುಗಳಿಂದ. ಈ ಸೋಂಕುಗಳಿಗೆ ಗರ್ಭಿಣಿಯರೂ ಹೊರತಾಗಿಲ್ಲ. ಇತರರ ದೇಹಕ್ಕಿಂತ ಗರ್ಭಿಣಿಯ ದೇಹ ಹೆಚ್ಚು ಸಂವೇದಿಯಾಗಿರುವ ಕಾರಣ ಇತರರಿಗಿಂತಲೂ ಸೋಂಕು ಇವರಿಗೆ ಬೇಗನೇ ಹರಡುತ್ತದೆ. ಗರ್ಭಾವಸ್ಥೆಯಲ್ಲಿ ಕಾಡುವ ಶೀತ, ಜ್ವರ, ಕೆಮ್ಮಿಗೆ ಸರಳೋಪಾಯ

ಏಕೆಂದರೆ ಗರ್ಭಾವಸ್ಥೆಯಲ್ಲಿ ಹಾರ್ಮೋನು ಅಥವಾ ರಸದೂತಗಳ ಪ್ರಭಾವದಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಪರಿಣಾಮವಾಗಿ ಚಿಕ್ಕ ಸೋಂಕಿಗೂ ಗರ್ಭಿಣಿಯ ದೇಹ ತೀವ್ರವಾಗಿ ಸ್ಪಂದಿಸುತ್ತದೆ. ಫ್ಲೂ, ಶೀತ ಮೊದಲಾದ ಸೋಂಕುಗಳು ಸುಲಭವಾಗಿ ಆವರಿಸುತ್ತದೆ. ಆದರೆ ಈ ಸೋಂಕುಗಳು ಉಲ್ಬಣಗೊಂಡರೆ ಗರ್ಭದಲ್ಲಿರುವ ಮಗುವಿನ ಆರೋಗ್ಯವೂ ಬಾಧೆಗೊಳಗಾಗಬಹುದು. ಆದ್ದರಿಂದ ಗರ್ಭಾವಸ್ಥೆಯಲ್ಲಿದ್ದಾಗ ರೋಗ ನಿರೋಧಕ ಶಕ್ತಿಯನ್ನು ಪೂರ್ಣವಾಗಿ ಉಡುಗಲು ಬಿಡದೇ ಸಾಕಷ್ಟು ಸಾಮರ್ಥ್ಯ ಉಳಿಸಿಕೊಂಡಿರುವಂತೆ ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಶಕ್ತಿಯನ್ನು ಹೆಚ್ಚಿಸುವ ವಿಧಾನವನ್ನು ಈಗ ನೋಡೋಣ....

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಜೇನು- ಎರಡು ದೊಡ್ಡ ಚಮಚ

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಬೆಳ್ಳುಳ್ಳಿಯ ರಸ = ಒಂದು ದೊಡ್ಡ ಚಮಚ

ಫ್ಲೂ ವೈರಸ್ಸುಗಳನ್ನು ನಿಷ್ಕ್ರಿಯಗೊಳಿಸುತ್ತದೆ

ಫ್ಲೂ ವೈರಸ್ಸುಗಳನ್ನು ನಿಷ್ಕ್ರಿಯಗೊಳಿಸುತ್ತದೆ

ಮನೆಯಲ್ಲಿಯೇ ತಯಾರಿಸಬಹುದಾದ ಈ ಅದ್ಭುತ ಪೇಯ ಗರ್ಭಾವಸ್ಥೆಯಲ್ಲಿ ಗರ್ಭವತಿಯ ದೇಹದ ಮೇಲೆ ಆಕ್ರಮಣ ಮಾಡುವ ಫ್ಲೂ ವೈರಸ್ಸುಗಳನ್ನು ನಿಷ್ಕ್ರಿಯಗೊಳಿಸಿ ಜ್ವರ, ಶೀತ, ಕೆಮ್ಮು ಮೊದಲಾದವುಗಳಿಂದ ದೂರವಿರಲು ನೆರವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ಇದನ್ನು ನಿತ್ಯವೂ ಸೇವಿಸುವುದು ಅಗತ್ಯ.

ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ....

ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ....

ಆದರೆ ಈ ವಿಧಾನವನ್ನು ಅನುಸರಿಸುವ ಮುನ್ನ ಗರ್ಭಿಣಿಯರು ತಮ್ಮ ಕುಟುಂಬ ವೈದ್ಯರನ್ನು ಭೇಟಿಯಾಗಿ ಅವರ ಸಲಹೆಯನ್ನು ಪಡೆದೇ ಮುಂದುವರೆಯುವುದು ಅವಶ್ಯ. ಅಲ್ಲದೇ ಜ್ವರ ಒಂದು ವೇಳೆ ಒಂದು ವಾರಕ್ಕೂ ಹೆಚ್ಚು ಕಾಲ ಕಾಡಿದರೆ ಇದಕ್ಕೆ ಬೇರೆ ಕಾರಣಗಳೂ ಇರಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಪೋಷಕಾಂಶವಿದ್ದು ಇದು ಅತಿಸೂಕ್ಷ್ಮಜೀವಿ ನಿರೋಧಕ ಗುಣ ಹೊಂದಿದೆ. ಈ ಗುಣವೇ ಗಾಳಿಯಲ್ಲಿ ತೇಲಿಬರುವ ಅತಿಸೂಕ್ಷ್ಮ ಕೀಟಾಣುಗಳ ವಿರುದ್ದ ಹೋರಾಡಿ ಆರೋಗ್ಯವನ್ನು ಕಾಪಾಡುತ್ತದೆ. ವಿಶೇಷವಾಗಿ ಫ್ಲೂ ಜ್ವರದ ವೈರಸ್ಸುಗಳನ್ನು ಎದುರಿಸಲು ಈ ಪೋಷಕಾಂಶ ಸಮರ್ಥವಾಗಿದೆ.ಬೆಳ್ಳುಳ್ಳಿಯಲ್ಲಿರುವ ಪ್ರಮುಖ 15 ಗುಣಗಳು

ಜೇನು

ಜೇನು

ಇದರೊಂದಿಗೆ ಬೆರೆಸಲಾಗುವ ಜೇನಿನಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ಇತರ ಪೋಷಕಾಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಫ್ಲೂ ಜ್ವರವನ್ನು ಎದುರಿಸಲು ದೇಹವನ್ನು ಇನ್ನಷ್ಟು ಬಲಗೊಳಿಸುತ್ತದೆ.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಮೇಲೆ ತಿಳಿಸಿದ ಪ್ರಮಾಣದಲ್ಲಿ ಎಲ್ಲಾ ಸಾಮಗ್ರಿಗಳನ್ನು ಒಂದು ಕಪ್‌ನಲ್ಲಿ ಬೆರೆಸಿ ದಪ್ಪನೆಯ ಲೇಪನವಾಗುವಂತೆ ಮಾಡಿ.

*ಈ ಲೇಪನವನ್ನು ಪ್ರತಿದಿನ ಬೆಳಗ್ಗಿನ ಉಪಾಹಾರ ಹಾಗೂ ರಾತ್ರಿ ಊಟದ ಬಳಿಕ ನಿತ್ಯವೂ ಸೇವಿಸಿ.

*ಉತ್ತಮ ಪರಿಣಾಮ ಪಡೆಯಲು ಸತತವಾಗಿ ಕನಿಷ್ಠ ಒಂದು ವಾರ ಕಾಲ ಸೇವಿಸಿ.

English summary

Effective Home Remedy For fever During Pregnancy

When a pregnant women is affected with infectious diseases like flu, she may have to take certain strong medications to treat the diseases and these medications can have negative effects on her unborn. So, if you want to treat the flu during pregnancy, naturally, follow this remedy....
X
Desktop Bottom Promotion