For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೂ ಕಾಡುವ ಮಧುಮೇಹ! ಮುನ್ನೆಚ್ಚರಿಕೆ ಕ್ರಮಗಳೇನು?

By Arshad
|

ಗರ್ಭಾವಸ್ಥೆಯಲ್ಲಿ ತಾತ್ಕಾಲಿಕವಾಗಿ ಮಧುಮೇಹ (gestational diabetes) ಆವರಿಸಬಹುದು ಹಾಗೂ ಇದನ್ನು ಅರಿತುಕೊಳ್ಳುವುದು ತುಂಬಾ ಅಗತ್ಯವಾಗಿದೆ. ವಿಶೇಷವಾಗಿ 28 ವಾರಗಳ ಬಳಿಕ ಜರಾಯು (placenta) ವಿನ ಚಟುವಟಿಕೆ ತುಂಬಾ ಹೆಚ್ಚುತ್ತದೆ ಹಾಗೂ ಈ ಚಟುವಟಿಕೆ ಮಗುವಿನ ಆರೋಗ್ಯವನ್ನು ಕಾಪಾಡಲು ಅಗತ್ಯವಾಗಿದೆ. ಈ ಚಟುವಟಿಕೆಗಾಗಿ ಕೆಲವು ಹಾರ್ಮೋನುಗಳನ್ನು ಜರಾಯು ಬಿಡುಗಡೆಗೊಳಿಸುತ್ತದೆ ಹಾಗೂ ಈ ಹಾರ್ಮೋನುಗಳು ದೇಹದ ಇನ್ಸುಲಿನ್‌ಗೆ ವಿರುದ್ಧವಾಗಿ ಕೆಲಸ ಮಾಡುತ್ತವೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಇನ್ಸುಲಿನ್ ಅಗತ್ಯತೆ ಹೆಚ್ಚಾಗುತ್ತದೆ.

ಈ ಪ್ರಮಾಣವನ್ನು ಸರಿದೂಗಿಸಲು ಇನ್ಸುಲಿನ್ ಅನ್ನು ಕೊಂಚ ಹೆಚ್ಚೇ ನೀಡಬೇಕಾಗುತ್ತದೆ. ಇದೇ ಕಾರಣದಿಂದ ಗರ್ಭಾವಸ್ಥೆಯಲ್ಲಿ ಮಧುಮೇಹ ಆವರಿಸುವುದು ಸಾಮಾನ್ಯವಾಗಿದ್ದು ಹೆರಿಗೆಯ ಬಳಿಕ ತನ್ನಿಂತಾನೇ ಸರಿಪಡುವುದರಿಂದಲೇ ಈ ಮಧುಮೇಹಕ್ಕೆ ತಾತ್ಕಾಲಿಕ ಎಂಬ ವಿಶೇಷಣವನ್ನು ಜೊತೆಗೂಡಿಸಲಾಗಿದೆ. ಕೆಲವು ಗರ್ಭಿಣಿಯರಲ್ಲಿ ಈ ಮಧುಮೇಹ ಕಾಣಬರುವುದೇ ಇಲ್ಲ.

Pregnancy

ಇದು ಸಂತೋಷಪಡುವ ವಿಷಯವಂತೂ ಅಲ್ಲ, ಬದಲಿಗೆ ಜರಾಯು ಅಗತ್ಯ ಹಾರ್ಮೋನುಗಳನ್ನು ಬಿಡುಗಡೆಗೊಳಿಸಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಹಾಗಾಗಿ ತಾತ್ಕಾಲಿಕ ಮಧುಮೇಹ ಆವರಿಸಿದರೇ ಎಲ್ಲಾ ಸರಿ ಎಂದು ವೈದ್ಯರು ಪರಿಗಣಿಸುತ್ತಾರೆ. ಈ ಹಂತದಲ್ಲಿ ಎದುರಾಗುವ ಕೆಲವು ಪ್ರಶ್ನೆಗಳನ್ನು ಇಂದು ವಿವರಿಸಲಾಗಿದ್ದು ಇವುಗಳನ್ನು ಅನುಸರಿಸುವ ಮೂಲಕ ಗರ್ಭಿಣಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಗರ್ಭಾವಸ್ಥೆಯಲ್ಲಿ ಯಾವ ವ್ಯಾಯಾಮಗಳು ಉತ್ತಮ?
ಮಧುಮೇಹವನ್ನು ಪರಿಗಣಿಸುವುದಾದರೆ ಪ್ರಸವಪೂರ್ವ ಅವಧಿಯಲ್ಲಿ ಸಾಮಾನ್ಯವಾದ ವ್ಯಾಯಾಮಗಳು ಉತ್ತಮವಾಗಿವೆ. ಎಲ್ಲಕ್ಕಿಂತ ಉತ್ತಮವೆಂದರೆ ನಡಿಗೆ. ಭಾರ ಎತ್ತುವುದು, ಕಾಲುಗಳನ್ನು ಸೆಳೆಯುವ, ನೆಗೆಯುವ ಮೊದಲಾದ ವ್ಯಾಯಾಮಗಳನ್ನು ಮಾಡಬಾರದು. ಈಜು ಸಹಾ ಉತ್ತಮವಾದ ವ್ಯಾಯಾಮವಾಗಿದೆ.

ಹೆರಿಗೆಯ ಸಮಯದಲ್ಲಿ ಯಾವ ವಿಶೇಷ ಕಾಳಜಿ ವಹಿಸಬೇಕು?
ಹೆರಿಗೆಯ ಸಮಯದಲ್ಲಿ ದೇಹದಲ್ಲಿ ಸಾಮಾನ್ಯ ಮಟ್ಟದ ಸಕ್ಕರೆ ಇರುವಂತೆ ನೋಡಿಕೊಳ್ಳಬೇಕು. ಹೆರಿಗೆ ಹತ್ತಿರಾಗುತ್ತಿದ್ದಂತೆ ವೈದ್ಯರು ಗರ್ಭಿಣಿಗೆ ಏನನ್ನೂ ತಿನ್ನದಿರುವಂತೆ ಸಲಹೆ ಮಾಡುತ್ತಾರೆ. ವಿಶೇಷವಾಗಿ ಹೆರಿಗೆ ಸಿಸೇರಿಯನ್ ಆಗುವುದಿದ್ದರೆ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ.

ಆದ್ದರಿಂದ ಈ ಅವಧಿಯಲ್ಲಿ ದೇಹ ಬಳದಂತೆ ರಕ್ತಕ್ಕೆ ಗ್ಲುಕೋಸ್ ಅನ್ನು ಡ್ರಿಪ್ ಮೂಲಕ ನೀಡಲಾಗುತ್ತದೆ. ಇದರೊಂದಿಗೆ ಅಗತ್ಯ ಪ್ರಮಾಣದ ಇನ್ಸುಲಿನ್ ಅನ್ನೂ ದೇಹಕ್ಕೆ ಒದಗಿಸಲಾಗುತ್ತದೆ. ಈ ಸಮಯದಲ್ಲಿ ಬೆರಳನ್ನು ಚುಚ್ಚಿ ರಕ್ತದ ಮಾದರಿಯನ್ನು ಸಂಗ್ರಹಿಸಿ ಸಕ್ಕರೆಯ ಪ್ರಮಾಣವನ್ನು ಅಳೆಯಲಾಗುತ್ತದೆ.

ಅಗತ್ಯವಿದ್ದರೆ ಪ್ರತಿ ಗಂಟೆಗೊಂದು ಬಾರಿಯಾದರೂ ಈ ತಪಾಸಣೆ ನಡೆಸಬೇಕಾಗುತ್ತದೆ. ಹೆರಿಗೆಯ ಬಳಿಕ ಜರಾಯು ವಿಸರ್ಜನೆಗೊಂಡ ಬಳಿಕ ಗರ್ಭಿಣಿಗೆ ನೀಡಲಾಗುವ ಗ್ಲುಕೋಸ್ ಮುಂದುವರೆಸಲಾಗುತ್ತದೆ ಆದರೆ ಇನ್ಸುಲಿನ್ ನಿಲ್ಲಿಸಲಾಗುತ್ತದೆ. ಒಂದು ವೇಳೆ ಗರ್ಭಿಣಿಗೆ ಗರ್ಭಾವಸ್ಥೆಗೂ ಮೊದಲೇ ಮಧುಮೇಹವಿದ್ದರೆ ಆ ಸಮಯದಲ್ಲಿ ನೀಡಲಾಗುತ್ತಿದ್ದ ಇನ್ಸುಲಿನ್ ಪ್ರಮಾಣವನ್ನೇ ಹೆರಿಗೆಯ ಬಳಿಕವೂ ಮುಂದುವರೆಸಲಾಗುತ್ತದೆ. ಒಂದು ವೇಳೆ ಮಧುಮೇಹಕ್ಕಾಗಿ ಯಾವುದಾದರೂ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಈ ಮಾತ್ರೆಗಳನ್ನು ಮಗುವಿಗೆ ಸ್ತನಪಾನ ಮಾಡತೊಡಗಿದ ಬಳಿಕ ಮುಂದುವರೆಸಬೇಕಾಗುತ್ತದೆ. ಅಲ್ಲಿಯವರೆಗೆ ಇನ್ಸುಲಿನ್ ನೀಡುವಿಕೆಯನ್ನು ಯಥಾಪ್ರಕಾರ ಮುಂದುವರೆಸಬೇಕಾಗುತ್ತದೆ.

ಗರ್ಭಿಣಿಗೆ ಮಧುಮೇಹವಿದ್ದರೆ ಮಗುವಿನ ರಕ್ತದ ಸಕ್ಕರೆಗೂ ಬಾಧಿಸುತ್ತದೆಯೇ?
ಸಾಮಾನ್ಯವಾಗಿ ಮಗುವಿನ ರಕ್ತದಲ್ಲಿನ ಸಕ್ಕರೆ ಸಮಾನ್ಯ ಮಟ್ಟದಲ್ಲಿರುತ್ತದೆ. ಒಂದು ವೇಳೆ ಹೆರಿಗೆಯ ಸಮಯದಲ್ಲಿ ತಾಯಿಯ ದೇಹದ ರಕ್ತದ ಪ್ರಮಾಣ ನಿಯಂತ್ರಣಕ್ಕೆ ಬರದೇ ಇದ್ದ ಸಮಯದಲ್ಲಿ ಮಗುವಿನ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ ವಿನಃ ಹೆಚ್ಚುವುದಿಲ್ಲ. ಆದ್ದರಿಂದ ಹೆರಿಗೆಯ ಬಳಿಕ ಆದಷ್ಟು ಬೇಗನೇ ಮಗುವಿನ ಸ್ತನಪಾನ ಮಾಡಿಸಲು ವೈದ್ಯರು ಸಲಹೆ ನೀಡುತ್ತಾರೆ.

ಹೆರಿಗೆಯ ಬಳಿಕ ಯಾವ ಸೂಚನೆಗಳನ್ನು ಅನುಸರಿಸಬೇಕು?
ಗರ್ಭಾವಸ್ಥೆಯಲ್ಲಿ ತಾತ್ಕಾಲಿಕ ಮಧುಮೇಹ ಅನುಭವಿಸಿದ ತಾಯಂದಿರು ಹೆರಿಗೆಯ ಆರು ವಾರಗಳ ಬಳಿಕ ದೇಹ ಗ್ಲೂಕೋಸ್ ತಾಳಬಲ್ಲದೇ ಎಂಬ ಪರೀಕ್ಷೆಗೆ (glucose tolerance test) ಒಳಗಾಗಬೇಕು. ಏಕೆಂದರೆ ಈ ತಾಯಂದಿರು ಮುಂದಿನ ದಿನಗಳಲ್ಲಿ ಮಧುಮೇಹಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ನಿಮಗೆ ಅನಿವಾರ್ಯ. ಆರೋಗ್ಯಕರ ಆಹಾರ ಸೇವನೆ, ನಿತ್ಯವೂ ಲಘು ವ್ಯಾಯಾಮಗಳನ್ನು ಮಾಡುವುದು, ಸ್ಥೂಲಕಾಯಕ್ಕೆ ಒಳಗಾಗದಂತೆ ಕಾಪಾಡಿಕೊಳ್ಳುವುದು ಇತ್ಯಾದಿ ಅಗತ್ಯವಾಗಿವೆ. ಮಧುಮೇಹ ಟೈಪ್ -1 ಅಥವಾ 2 ಯಾವುದೇ ಇದ್ದರೂ ಹೆರಿಗೆಯ ಬಳಿಕ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು ಸಮನಾಗಿವೆ.

ಒಂದು ವೇಳೆ ನೀವು ಎರಡನೆಯ ಮಗುವಿಗಾಗಿ ಗರ್ಭ ಧರಿಸಲು ತಯಾರಿ ನಡೆಸಿದ್ದರೆ ಇದಕ್ಕೂ ಮುನ್ನ ನಿಮ್ಮ ದೇಹದ ಸಕ್ಕರೆಯ ಮೇಲಿನ ನಿಯಂತ್ರಣ ಉತ್ತಮವಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ ಹಾಗೂ ಫೋಲಿಕ್ ಆಮ್ಲದ ವಿಟಮಿನ್ ನ ಒಂದು ಮಾತ್ರೆಯನ್ನು(5 gm) ನಿತ್ಯವೂ ಸೇವಿಸಬೇಕು.

English summary

Diabetes During Pregnancy: Symptoms, Risks and Treatment

This is very important to understand. As pregnancy advances, particularly from after 28 weeks, placental activity increases to keep the baby in good health. To do this placenta produces some hormones which act against Insulin and your dose of Insulin goes up and up during pregnancy, sometimes on daily basis we need to increase Insulin dose. So, increment of Insulin dose in pregnancy is normal, if the dose does not go up, we get worried whether the placenta is working normally or not.
X
Desktop Bottom Promotion