ಗರ್ಭಿಣಿಯರು ತಪ್ಪದೇ ಸೇವಿಸಬೇಕಾದ 12 ಆಹಾರ ಪದಾರ್ಥಗಳು

By: Divya
Subscribe to Boldsky

ಗರ್ಭಿಣಿ ಎಂದಾಗ ಮನೆ ಮಂದಿಗೆ, ಸ್ನೇಹಿತರಿಗೆ, ಮನೆಯ ಅಕ್ಕ ಪಕ್ಕದವರಿಗೆಲ್ಲಾ ಅದೇನೋ ಒಂದು ಬಗೆಯ ವಿಶೇಷ ಕಾಳಜಿ. ಸೂಕ್ತ ರೀತಿಯ ಆಹಾರ ಸೇವನೆ ಮಾಡಬೇಕು. ಮಗುವು ಆರೋಗ್ಯವಾಗಿರಬೇಕೆಂದು ತಾಯಿಯ ಊಟ-ತಿಂಡಿಯ ವಿಚಾರದಲ್ಲಿ ವಿಶೇಷ ಕಾಳಜಿವಹಿಸುತ್ತಾರೆ. ಅದಕ್ಕಾಗಿಯೇ ಹೊಸ ಹೊಸ ರುಚಿಯ ಅಡುಗೆಯನ್ನು ಮಾಡಿ ಬಡಿಸುತ್ತಾರೆ. ತಾಯಿಗೂ ಬಾಯಿ ರುಚಿ ಹಾಗೂ ಕೆಲವು ಬಯಕೆಗಳಿಂದಾಗಿ ಹೊಸ ರುಚಿಯನ್ನು ಸವಿಯಬಹುದು. ಆದರೆ ಗರ್ಭಿಣಿ ತಾನೇನು ಸೇವಿಸುತ್ತಿದ್ದೇನೆ ಎನ್ನುವುದರ ಅರಿವನ್ನು ಹೊಂದಿರಬೇಕು.

ಮೂರನೇ ತಿಂಗಳಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು?

ಈ ಸಮಯದಲ್ಲಿ ತಾಯಿ ಹಾಗೂ ಮಗುವಿನ ಆರೋಗ್ಯ ಬಹಳ ಸೂಕ್ಷ್ಮವಾಗಿರುತ್ತದೆ. ತಾಯಿ ಸೇವಿಸುವ ಆಹಾರವು ಯಾವ ಬಗೆಯದ್ದು? ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಹಾಗೊಮ್ಮೆ ತಾಯಿ ಆಹಾರದ ಆಯ್ಕೆಯಲ್ಲಿ ಸ್ವಲ್ಪ ಎಡವಿದರೂ ಆರೋಗ್ಯ ಸಮಸ್ಯೆ ಹಾಗೂ ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಅದೆಷ್ಟೇ ಬಾಯಿ ರುಚಿ ಬದಲಾದರೂ ಕೆಲವು ಆರೋಗ್ಯ ಪೂರ್ಣ ಆಹಾರ ಸೇವನೆ ಮಾಡಬೇಕು. ಆಗಲೇ ಮಗುವಿನ ಬೆಳವಣಿಗೆ ಸೂಕ್ತ ರೀತಿಯಲ್ಲಿ ಆಗುತ್ತದೆ. ನಿಮ್ಮ ಆರೋಗ್ಯ ಸುಧಾರಣೆಗೆ ಹಾಗೂ ಆರೈಕೆಗಾಗಿ ಕೆಲವು ಆರೋಗ್ಯ ಪೂರ್ಣ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ...  

ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿ ಸಮೃದ್ಧವಾದ ಪ್ರೋಟೀನ್‍ಅಂಶಗಳಿರುವುದರಿಂದ ಇದು ಮಗುವಿನ ಮೂಳೆ ಹಾಗೂ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಮೀನು

ಮೀನು

ಇದರಲ್ಲಿ ವಿಟಮಿನ್ ಇ ಹೇರಳವಾಗಿರುವುದರಿಂದ ಮಗುವಿನ ನರಮಂಡಲ ವ್ಯವಸ್ಥೆಯ ಬೆಳವಣಿಗೆ ಹಾಗೂ ಆರೈಕೆಗೆ ಸಹಾಯ ಮಾಡುತ್ತದೆ. ಕೆಲವರಿಗೆ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ. ವೈದ್ಯರ ಸಲಹೆ ಪಡೆದು ಸೇವಿಸಿದರೆ ಸೂಕ್ತ.

ಸೇಬು

ಸೇಬು

ಇದರಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಇರುವುದರಿಂದ ಮಗುವಿನ ಆರೋಗ್ಯ ಹಾಗೂ ತಾಯಿಯ ಆರೈಕೆಗೂ ಪೂರಕವಾಗಿದೆ. ಗರ್ಭಿಣಿಯರಿಗೆ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುವುದು.

ಬೀನ್ಸ್/ರಾಜ್ಮಾ

ಬೀನ್ಸ್/ರಾಜ್ಮಾ

ಪ್ರೋಟೀನ್‍ಗಳು ಸಮೃದ್ಧವಾಗಿರುವುದರಿಂದ ಇದನ್ನು ಸೇವಿಸಿದರೆ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.

ಸಿಹಿ ಗೆಣಸು

ಸಿಹಿ ಗೆಣಸು

ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯ ಸುಧಾರಣೆಯಾಗುವುದು. ಅಲ್ಲದೆ ರೋಗ ನಿರೋಧಕ ಶಕ್ತಿಯು ಹೆಚ್ಚುವುದು.

 ವಾಲ್‌ನಟ್

ವಾಲ್‌ನಟ್

ಇದರಲ್ಲಿ ಒಮೆಗಾ-3 ಮತ್ತು ಕೊಬ್ಬಿನಾಮ್ಲ ಸಮೃದ್ಧವಾಗಿರುವುದರಿಂದ ಮಹಿಳೆಯರು ನಿತ್ಯವೂ ಸೇವಿಸಿದರೆ ಉತ್ತಮ. ಇದು ಮಗುವಿನ ಮೆದುಳು ಬೆಳವಣಿಗೆಗೆ ಸಹಾಯಕವಾಗಿರುತ್ತದೆ.

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿ ವಿಟಮಿನ್ ಇ ಹೇರಳವಾಗಿರುವುದರಿಂದ ತಾಯಿಯ ಆರೋಗ್ಯ ಹಾಗೂ ಮಗುವಿನ ಮೂಳೆ ಬೆಳವಣಿಗೆಗೆ ಸಹಾಯವಾಗುತ್ತದೆ.

ಹಾಲು

ಹಾಲು

ವಿಟಮಿನ್ ಹಾಗೂ ಪ್ರೋಟೀನ್ ಪಡೆಯಲು ಹಾಲೊಂದು ಉತ್ತಮವಾದ ಮೂಲ. ನಿತ್ಯವೂ ಇದರ ಸೇವನೆ ಮಾಡಿದರೆ ಮಗುವಿನ ತ್ವಚೆ, ಬುದ್ಧಿ, ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುವುದು.

ಬಾರ್ಲಿ

ಬಾರ್ಲಿ

ಇದರಲ್ಲಿ ಕಾರ್ಬೋಹೈಡ್ರೇಟ್ ಉತ್ತಮವಾಗಿರುವುದರಿಂದ ಮಗು ಮತ್ತು ತಾಯಿಯ ಆರೋಗ್ಯ ಸುಧಾರಣೆಗೆ ಉತ್ತಮವಾಗಿದೆ. ಅಲ್ಲದೆ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.

 ಕಡ್ಲೆ

ಕಡ್ಲೆ

ಹೆಚ್ಚಿನ ಪ್ರೋಟೀನ್‍ಅಂಶ ಇರುವುದರಿಂದ ಗರ್ಭಿಣಿಯರು ತಮ್ಮ ಆಹಾರ ಸೇವನೆಯಲ್ಲಿ ಇದನ್ನು ಸೇರಿಸಿಕೊಂಡರೆ ಉತ್ತಮವಾದದ್ದು.

ಬಸಳೆ ಮತ್ತು ಪಾಲಕ್

ಬಸಳೆ ಮತ್ತು ಪಾಲಕ್

ಬಸಳೆ, ಪಾಲಕ್ ಮತ್ತು ಹಸಿರು ಸೊಪ್ಪುಗಳ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಹಿಮಗ್ಲೋಬಿನ್ ಹೆಚ್ಚುವುದು. ಅಲ್ಲದೆ ಮಗುವಿಗೆ ಅಗತ್ಯವಾದ ಕಬ್ಬಿಣಾಂಶವು ದೊರೆಯುವುದು.

ಆವಕಾಡೂ/ಬೆಣ್ಣೆ ಹಣ್ಣು

ಆವಕಾಡೂ/ಬೆಣ್ಣೆ ಹಣ್ಣು

ಇದರಲ್ಲಿ ಒಮೆಗಾ-3 ಹೆಚ್ಚಾಗಿರುವುದರಿಂದ ಇದನ್ನು ಸೇವಿಸಿದರೆ ಮಗುವಿನ ಬೆಳವಣಿಗೆಗೆ ಸಹಾಯವಾಗುವುದು.

English summary

Best Foods To Eat During Pregnancy For A Healthy Baby!

Pregnancy is a phase in a woman's life in which she needs to be extremely careful about everything she does, as both her health and her baby's health may be at stake. If the pregnant mother is not taking in enough nutrients, then her body will not be able to nourish her unborn baby. So, when you are pregnant, it is important to watch what you eat.
Subscribe Newsletter