For Quick Alerts
ALLOW NOTIFICATIONS  
For Daily Alerts

ಬಂಜೆತನ ಸಮಸ್ಯೆ ವಿರುದ್ಧ ಹೋರಾಡುವ ಶಕ್ತಿಶಾಲಿ ಆಹಾರಗಳಿವು...

By Jaya
|

ಹೂವೊಂದು ಬೇಕು ಬಳ್ಳಿಗೆ, ಮಗುವೊಂದು ಬೇಕು ಹೆಣ್ಣಿಗೆ ಎಂದು ಕವಿಗಳು ಹಾಡಿ ಹೊಗಳಿದ್ದಾರೆ. ಹೌದು, ಒಂದು ಹೆಣ್ಣು ಪರಿಪೂರ್ಣಳೆಂದು ಭಾವಿಸುವುದು ತಾನು ತಾಯಿಯಾದಾಗ ಮಾತ್ರ. ಇಂದಿನ ದಿನಗಳಲ್ಲಿ ಈ ಬಯಕೆ ಈಡೇರದಿರುವ ಬಹಳಷ್ಟು ಪ್ರಕರಣಗಳು ಕಂಡುಬರುತ್ತವೆ. ತಾಯಿಯಾಗಲು ಪತಿ, ಪತ್ನಿ ಇಬ್ಬರ ಪಾತ್ರವೂ ಸಮಾನವಾಗಿದೆ. ಆದರೂ ಸಮಾಜ ಈ ವೈಫಲ್ಯತೆಗೆ ಹೆಣ್ಣನ್ನೇ ದೂಷಿಸುತ್ತದೆ. ಅಕ್ಕಪಕ್ಕದವರ ಚುಚ್ಚುನುಡಿಗಳಿಂದ ಮೊದಲೇ ಮಗುವಾಗದ ಸಂಕಟ ನೂರ್ಮಡಿಗೊಂಡು ಜೀವನದ ಸಂತಸವನ್ನೇ ನುಂಗಿಹಾಕುತ್ತದೆ.

ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ 10 ವೆಜ್ ಫುಡ್ಸ್

ಇತ್ತೀಚೆಗೆ ಬಂಜೆತನವೆನ್ನುವುದು ವಿಶ್ವಮಟ್ಟದಲ್ಲಿ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ. ಇದಕ್ಕೆ ಹಲವಾರು ಕಾರಣಗಳು ಇದೆ. ಆಧುನಿಕ ಜೀವನಶೈಲಿ, ಒತ್ತಡ ಇತ್ಯಾದಿಗಳು. ಆದರೆ ನಮ್ಮ ದೈನಂದಿನ ಕೆಲವೊಂದು ಚಟುವಟಿಕೆಯಿಂದಲೂ ಬಂಜೆತನ ಬರುತ್ತದೆ ಎಂದು ಕೆಲವೊಂದು ಅಧ್ಯಯನಗಳು ಕಂಡುಕೊಂಡಿವೆ. ಯಾವುದೇ ಗರ್ಭನಿರೋಧಕ ಕ್ರಮಗಳನ್ನು ಅನುಸರಿಸಿದೆ ಮಕ್ಕಳಾಗದೆ ಇದ್ದಾಗ ಇದನ್ನು ಬಂಜೆತನವೆಂದು ಕರೆಯಲಾಗುತ್ತದೆ.

ಪುರುಷರ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಒಂದಿಷ್ಟು ಸಲಹೆಗಳು

ಆದರೆ ನೆನಪಿಡಿ ಬಂಜೆತನಕ್ಕೆ ಪುರುಷ ಮತ್ತು ಸ್ತ್ರೀ ಇಬ್ಬರೂ ಸಮಾನವಾಗಿ ಕಾರಣರಾಗಿದ್ದಾರೆ, ಇದಕ್ಕೆ ಮಹಿಳೆಯನ್ನೇ ದೂಷಿಸುವುದು ಸರಿಯಲ್ಲ.. ಒಂದು ವೇಳೆ ತೊಂದರೆ ಮಹಿಳೆಯಲ್ಲಿದೆ ಎಂದರೆ ಅದಕ್ಕೆ ಹಲವಾರು ಕಾರಣಗಳಲ್ಲಿವೆ. ದೇಹದಲ್ಲಿ ಹಾರ್ಮೋನುಗಳ ಸ್ರವಿಕೆಯಲ್ಲಿ ಏರುಪೇರು, ಸಾಕಷ್ಟು ಪೌಷ್ಟಿಕ ಆಹಾರವಿಲ್ಲದಿರುವುದು, ಋತುಚಕ್ರದಲ್ಲಿ ಏರುಪೇರು, ಗರ್ಭನಾಳದಲ್ಲಿ ಸೋಂಕು ಮೊದಲಾದ ಹಲವು ತೊಂದರೆಗಳಿವೆ. ಚಿಂತಿಸದಿರಿ ಕೆಲವೊಂದು ಆಹಾರಗಳ ಸಮರ್ಪಕ ಸೇವನೆಯಿಂದ ಹಾರ್ಮೋನುಗಳ ಏರುಪೇರು ಸರಿಯಾಗಿ ಸಂತಾನಫಲ ಬಯಸುವ ಪ್ರತಿ ಹೆಣ್ಣಿಗೂ ಆಶಾಭಾವನೆ ಮೂಡಿಸುತ್ತದೆ....

ಆಹಾರಕ್ರಮದಲ್ಲಿ ಬೆಳ್ಳುಳ್ಳಿಗೆ ಆದ್ಯತೆ ನೀಡಿ

ಆಹಾರಕ್ರಮದಲ್ಲಿ ಬೆಳ್ಳುಳ್ಳಿಗೆ ಆದ್ಯತೆ ನೀಡಿ

ಬೆಳ್ಳುಳ್ಳಿಯಲ್ಲಿರುವ ಸೆಲೆನಿಯಂ ಎಂಬ ಖನಿಜ ಫಲಿತವಾಗಿದ್ದ ಅಂಡಾಣು ಸುಲಭವಾಗಿ ದೇಹದಿಂದ ಹೊರಹೋಗದಂತೆ ತಡೆಯುತ್ತದೆ. ಇದರಿಂದಾಗಿ ಗರ್ಭ ನಿಲ್ಲುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಫಲವತ್ತತೆಯ ನಿಟ್ಟಿನಲ್ಲಿ ಬೆಳ್ಳುಳ್ಳಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.

ಎಲೆಕೋಸು

ಎಲೆಕೋಸು

ಸಾಮಾನ್ಯವಾಗಿ ಎಲೆಕೋಸು ಎಂದರೆ ನಮಗೆಲ್ಲಾ ಒಂದು ರೀತಿಯ ಅಸಡ್ಡೆ. ಆದರೆ ಗರ್ಭಧರಿಸಲು ಬಯಸುವ ಮಹಿಳೆಯ ಮಟ್ಟಿಗೆ ಮಾತ್ರ ಎಲೆಕೋಸು ಅತ್ಯಂತ ಉಪಯುಕ್ತ ತರಕಾರಿಯಾಗಿದೆ. ಇದರಲ್ಲಿರುವ di-indole methane ಎಂಬ ಪೋಷಕಾಂಶ ಮಹಿಳೆಯರ ದೇಹದಲ್ಲಿ ಸ್ರವಿತವಾಗುವ ಈಸ್ಟ್ರೋಜೆನ್ ಎಂಬ ಹಾರ್ಮೋನು ಸೂಕ್ತಪ್ರಮಾಣದಲ್ಲಿ ಹಾಗೂ ಕ್ಲುಪ್ತಕಾಲದಲ್ಲಿ ಸ್ರವಿಸಿ fibroids ಮತ್ತು endometriosis ಎಂಬ ಕಾರ್ಯಗಳು ಜರುಗಲು ನೆರವಾಗುತ್ತದೆ. ಎಲೆಕೋಸನ್ನು ಆಯ್ದುಕೊಳ್ಳುವಾಗ ಮೇಲಿನ ತುದಿಯನ್ನು ಬೆರಳಿನಿಂದ ಒತ್ತಿದರೆ ಗಟ್ಟಿಯಾಗಿ ಕಲ್ಲಿನಂತಿರುವ ಕೋಸನ್ನು ಆರಿಸಿಕೊಳ್ಳಬೇಕು. ಮೆದುವಾಗಿ ಒತ್ತಿದರೆ ಸ್ಪಂಜಿನಂತಿರುವ ಕೋಸು ಪೋಷಕಾಂಶಗಳ ಮಟ್ಟಿಗೆ ಉಪಯುಕ್ತವಲ್ಲ.

ವಿಟಮಿನ್ ಡಿ ಕೊರತೆ ಎದುರಾಗದಂತೆ ನೋಡಿ...

ವಿಟಮಿನ್ ಡಿ ಕೊರತೆ ಎದುರಾಗದಂತೆ ನೋಡಿ...

ವಿಟಮಿನ್ ಡಿ ಕೊರತೆಯಿಂದಾಗಿ ಬಂಜೆತನ ಅಥವಾ ಗರ್ಭಪಾತವಾಗಬಹುದು. ಇದರಿಂದ ಬೆಳಿಗ್ಗೆ ಹಾಗು ಸಂಜೆ ವೇಳೆ ಬಿಸಿಲಿಗೆ ಮೈಯೊಡ್ಡಿ. ಮೊಟ್ಟೆ, ಗಿಣ್ಣು ಮತ್ತು ಸಾಲ್ಮನ್ ನಂತಹ ಆಹಾರ ಸೇವನೆಯಿಂದ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು.

ಒಂದು ಲೋಟ ದಾಳಿಂಬೆ ಜ್ಯೂಸ್ ಪ್ರತಿದಿನ ಸೇವಿಸಿ...

ಒಂದು ಲೋಟ ದಾಳಿಂಬೆ ಜ್ಯೂಸ್ ಪ್ರತಿದಿನ ಸೇವಿಸಿ...

ಸಂತಾನೋತ್ಪತ್ತಿಯ ಭಾಗಗಳಿಗೆ ರಕ್ತದ ಪರಿಚಲನೆಯನ್ನು ಉತ್ತೇಜಿಸಲು ದಾಳಿಂಬೆ ನೆರವಾಗುತ್ತದೆ. ಇದು ಗರ್ಭಪಾತದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ಭ್ರೂಣದ ಬೆಳವಣಿಗೆಗೂ ಇದು ಸಹಕಾರಿ. ಒಂದು ಲೋಟ ದಾಳಿಂಬೆ ಜ್ಯೂಸ್ ಅನ್ನು ಪ್ರತೀ ದಿನ ಸೇವಿಸಿ.

ಅಶ್ವಗಂಧದ ಪುಡಿ

ಅಶ್ವಗಂಧದ ಪುಡಿ

ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಅಶ್ವಗಂಧದ ಹುಡಿಯನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ದಿನದಲ್ಲಿ ಎರಡು ಸಲ ಇದನ್ನು ಕುಡಿಯಿರಿ. ಆದರೆ ಇದನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.

ಮೊಟ್ಟೆ

ಮೊಟ್ಟೆ

ಕೋಳಿಮೊಟ್ಟೆ ಫಲವತ್ತತೆಗೆ ಅತ್ಯುತ್ತಮವಾದ ಆಹಾರವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕೋಲಿನ್, ಫೋಲಿಕ್ ಆಮ್ಲ, ಒಮೆಗಾ ೩ ಕೊಬ್ಬಿನ ಆಮ್ಲ (omega 3 fatty acid) ಮತ್ತು ವಿಟಮಿನ್ ಡಿ ಇದ್ದು ಎಲ್ಲವೂ ಗರ್ಭಾಂಕುರಕ್ಕೆ ನೆರವಾಗುತ್ತವೆ.

ಆಲೂಗಡ್ಡೆ

ಆಲೂಗಡ್ಡೆ

ಗರ್ಭವತಿಯಾಗ ಬಯಸುವ ಪ್ರತಿಯೊಬ್ಬ ಮಹಿಳೆಯೂ ನಿಯಮಿತವಾಗಿ ಬೇಯಿಸಿದ ಆಲೂಗಡ್ಡೆಯನ್ನು ತಮ್ಮ ಆಹಾರದಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಬಿ ಮತ್ತು ಇ ಜೀವಕೋಶಗಳ ಉತ್ಪತ್ತಿಗೆ ಸಹಕರಿಸುತ್ತವೆ. ಅಂಡಾಶಯದಲ್ಲಿ ಆರೋಗ್ಯವಂತ ಅಂಡ ಉತ್ಪತ್ತಿಯಾಗಲು ಈ ಎರಡು ವಿಟಮಿನ್ ಗಳು ಅತ್ಯಗತ್ಯವಾಗಿವೆ.

ಹಸಿರು ಎಲೆತರಕಾರಿಗಳು

ಹಸಿರು ಎಲೆತರಕಾರಿಗಳು

ತಜ್ಞರ ಪ್ರಕಾರ ಗಾಢ ಹಸಿರು ಬಣ್ಣದ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೋಲಿಕ್ ಆಮ್ಲ ಮತ್ತು ಕಬ್ಬಿಣ ಇರುವುದರಿಂದ ಗರ್ಭಧರಿಸಲು ಬಯಸುವ ಮಹಿಳೆಯರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಈ ಪೋಷಕಾಂಶಗಳು ಗರ್ಭಾಶಯದ ಒಳಭಾಗದ ಪದರವನ್ನು ಬಲಪಡಿಸುತ್ತದೆ. ವಿಶೇಷವಾಗಿ ಕಬ್ಬಿಣ ಅಂಡವನ್ನು ಗರ್ಭಾಶಯದಲ್ಲಿ ಅಂಟಿಕೊಂಡಿರಲು ಸಹಕರಿಸುತ್ತದೆ. ಬಸಲೆ, ಪಾಲಕ್ ಮೊದಲಾದ ಸೊಪ್ಪುಗಳು ಉತ್ತಮವಾಗಿವೆ.

ದಿನಿನಿತ್ಯದ ಆಹಾರಕ್ರಮದಲ್ಲಿ ಚಿಟಿಕೆಯಷ್ಟು ಅರಿಶಿನ

ದಿನಿನಿತ್ಯದ ಆಹಾರಕ್ರಮದಲ್ಲಿ ಚಿಟಿಕೆಯಷ್ಟು ಅರಿಶಿನ

ಭಾರತೀಯರು ಹೆಚ್ಚಾಗಿ ತಮ್ಮ ಅಡುಗೆಗಳಲ್ಲಿ ಅರಿಶಿನವನ್ನು ಹಿಂದಿನಿಂದಲೂ ಬಳಸುತ್ತಾ ಬಂದಿದ್ದಾರೆ. ಆರೋಗ್ಯವನ್ನು ದೃಷ್ಟಿಯಲ್ಲಿರಿಸಿಕೊಂಡೇ ಅರಿಶಿನವನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆ. ಅದರಲ್ಲೂ ನಿಯಮಿತವಾಗಿ ಅರಿಶಿನವನ್ನು ದಿನನಿತ್ಯದ ಅಡುಗೆಯಲ್ಲಿ ಬಳಸುವುದರಿಂದ ಇದರಲ್ಲಿರುವ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮಹಿಳೆಯರಲ್ಲಿ ಗರ್ಭಧರಿಸುವ ಸಂಭವತೆಯನ್ನು ಹೆಚ್ಚಿಸುತ್ತದೆ.

English summary

Best Fertility Superfoods To Help You Conceive

In this article list of fertility-boosting foods packed with the most important vitamins and minerals for a healthy reproductive system. But in addition to a healthy balanced diet full of essential nutrients, there are also a number of foods you should avoid if you really want to increase your pregnancy prospects.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more