For Quick Alerts
ALLOW NOTIFICATIONS  
For Daily Alerts

ಹುಟ್ಟುವ ಮಗು ಗಂಡೋ ಹೆಣ್ಣೋ? ಈ ಸಂಜ್ಞೆಗಳ ಮೂಲಕ ತಿಳಿಯಬಹುದು!!

By Arshad
|

ತಾನು ಗರ್ಭಿಣಿ ಎಂದು ಗೊತ್ತಾದ ಬಳಿಕ ಪ್ರತಿ ಗರ್ಭಿಣಿಗೂ ತನ್ನ ಗರ್ಭದಲ್ಲಿರುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲವಿದ್ದೇ ಇರುತ್ತದೆ. ಗರ್ಭಿಣಿಗೆ ಮಾತ್ರವಲ್ಲ, ಮನೆಯ ಎಲ್ಲಾ ಸದಸ್ಯರಿಗೂ ಈ ಕುತೂಹಲವಿದ್ದೇ ಇರುತ್ತದೆ. ಯಾವ ಮಗು ಎಂದು ಗೊತ್ತಾದರೆ ಆ ಪ್ರಕಾರವೇ ಮಗುವಿನ ವಸ್ತುಗಳನ್ನು ಕೊಳ್ಳಬಹುದಲ್ಲ, ಹೆಸರನ್ನು ಆಯ್ಕೆ ಮಾಡಬಹುದಲ್ಲ! ಆದರೆ ಮಗುವಿನ ಲಿಂಗವನ್ನು ಪತ್ತೆಹಚ್ಚುವುದು ಕಾನೂನಿಗೂ ವಿರುದ್ಧವಾಗಿರುವ ಕಾರಣ ಇದನ್ನು ವೈದ್ಯಕೀಯವಾಗಿ ಅರಿಯುವುದು ಅಸಾಧ್ಯ.

Pregnancy

ಪಾಶ್ಚಾತ್ಯ ದೇಶಗಳಲ್ಲಿ ಅಲ್ಟ್ರಾಸೌಂಡ್ ವಿಧಾನದಿಂದ ಮಗುವಿನ ಲಿಂಗವನ್ನು ಮೊದಲೇ ಹೇಳಿಬಿಡುತ್ತಾರೆ. ಆದರೆ ಭಾರತದಲ್ಲಿ ಗಂಡು ಮಗುವಿನ ಬಯಕೆ ಅತಿ ಹೆಚ್ಚಿನ ಮಹತ್ವ ಹೊಂದಿರುವ ಪರಿಣಾಮವಾಗಿ ಹೆಣ್ಣುಭ್ರೂಣ ಹತ್ಯೆ ನಡೆಯುತ್ತವೆ. ಇದನ್ನು ತಡೆಯಲೆಂದೇ ಈ ಕಾನೂನನ್ನು ರಚಿಸಲಾಗಿದೆ.

ಕಾನೂನು ಏನೇ ಇರಲಿ, ಪ್ರತಿ ಗರ್ಭಿಣಿಗೂ ತನ್ನ ಮಗು ಯಾವುದಿರಬಹುದೆಂದು ತಿಳಿಯುವ ಕುತೂಹಲವಂತೂ ಇದ್ದೇ ಇರುತ್ತದೆ. ಆದರೆ ಗರ್ಭಿಣಿಯ ದೇಹದ ಲಕ್ಷಣಗಳನ್ನು ಕಂಡ ಹಿರಿಯರು ತಮ್ಮ ಅನುಭವದಿಂದ ಬರಲಿರುವ ಅತಿಥಿ ಗಂಡೋ ಹೆಣ್ಣೋ ಎಂದು ಹೇಳಿಬಿಡುತ್ತಾರೆ. ಈ ಸಂಜ್ಞೆಗಳು ಸೂಕ್ಷ್ಮವಾಗಿದ್ದು ಹಿರಿಯ ಅನುಭವಿ ಕಣ್ಣುಗಳು ಮಾತ್ರವೇ ಗುರುತಿಸಬಲ್ಲುದು.

ಗಂಡು ಮಗು ಬೇಕೆಂಬ ಬಯಕೆಯೇ? ಹಾಗಾದರೆ ಆಹಾರ ಕ್ರಮ ಹೀಗಿರಲಿ....

ಈ ಸೂಚನೆಗಳು ಗರ್ಭಾವಸ್ಥೆಯ ಕಡೆಯ ತಿಂಗಳುಗಳಲ್ಲಿ ಮಾತ್ರವೇ ಸ್ಪಷ್ಟವಾಗಿ ಗೋಚರಿಸುವ ಕಾರಣ ಪ್ರಾರಂಭಿಕ ತಿಂಗಳುಗಳಲ್ಲಿ ಹೇಳಲಾಗದು. ಆದ್ದರಿಂದ ಕಡೆಯ ತಿಂಗಳುಗಳಲ್ಲಿ ಮಗುವಿನ ಲಿಂಗವನ್ನು ಸುತ್ತಮುತ್ತಲಿನವರು ಊಹಿಸುವ ಪ್ರಮಾಣವೂ ಹೆಚ್ಚಾಗುತ್ತದೆ. ಮಗು ಯಾವುದೆಂದು ತಿಳಿದುಕೊಳ್ಳುವ ಮನೆಯ ಸದಸ್ಯರ ಹಾಗೂ ಸ್ನೇಹಿತರ ಪ್ರಯತ್ನಗಳು ಗರ್ಭಿಣಿಗೆ ಹೆಚ್ಚಿನ ಆನಂದ ನೀಡುತ್ತವೆ. ಹಿರಿಯರು ಹೇಗೆ ಈ ಮಾಹಿತಿಯನ್ನು ಪಡೆಯುತ್ತಾರೆ ಎಂಬ ಕುತೂಹಲ ಗರ್ಭಿಣಿಯ ಸಹಿತ ನಿಮಗೂ ಇದ್ದರೆ ಕೆಳಗೆ ನೀಡಿರುವ ಸೂಚನೆಗಳು ಮಗು ಗಂಡೋ ಹೆಣ್ಣೋ ಎಂಬುದನ್ನು ನಿರ್ಧರಿಸಲು ನೆರವಾಗಲಿವೆ.

ಹೊಟ್ಟೆಯ ಸ್ಥಾನ:
ಒಂದು ವೇಳೆ ಮಗು ಗಂಡಾಗಿದ್ದರೆ ಗರ್ಭಾವಸ್ಥೆಯಲ್ಲಿ ಹೊಟ್ಟೆಯ ಸ್ಥಾನ ಕೊಂಚ ಕೆಳಗಿರುತ್ತದೆ. ಹೆಣ್ಣಾಗಿದ್ದರೆ ಕೊಂಚ ಮೇಲೆ ಇರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಈ ವ್ಯತ್ಯಾಸವನ್ನು ಕಂಡುಕೊಳ್ಳಬಹುದು.

ಮೂತ್ರದ ಬಣ್ಣ
ಮಗುವಿನ ಲಿಂಗವನ್ನು ಗರ್ಭಿಣಿಯ ಕಡೆಯ ತಿಂಗಳ ಮೂತ್ರದ ಬಣ್ಣ ವಿವರಿಸುತ್ತದೆ. ಒಂದು ವೇಳೆ ಮೂತ್ರದ ಬಣ್ಣ ಗಾಢವಾಗಿದ್ದರೆ ಮಗು ಗಂಡು ಎಂದೂ, ತಿಳಿಯಾಗಿದ್ದು ಮೋಡದಂತೆ ಅಸ್ಪಷ್ಟವಾಗಿದ್ದರೆ ಮಗು ಹೆಣ್ಣು ಎಂದೂ ತಿಳಿದುಕೊಳ್ಳಬಹುದು.

ಮೊಡವೆಗಳು
ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹದಲ್ಲಿ ಹಲವಾರು ರಸದೂತಗಳು ಸ್ರವಿಸಲ್ಪಡುವ ಕಾರಣ ದೇಹ ಹಲವಾರು ಬದಲಾವಣೆಗೆ ಒಳಗಾಗುತ್ತದೆ. ಇದರಲ್ಲಿ ಮುಖದಲ್ಲಿ ಮೂಡುವ ಮೊಡವೆಗಳೂ ಒಂದು. ಒಂದು ವೇಳೆ ಮೊಡವೆಗಳು ಹೆಚ್ಚೂ ಕಡಿಮೆ ಇಡಿಯ ಗರ್ಭಾವಸ್ಥೆಯ ಸಮಯದಲ್ಲಿ ಕಾಡಿದರೆ ಮಗು ಗಂಡು ಎಂದು ತಿಳಿದುಕೊಳ್ಳಬಹುದು.

ಹೊಟ್ಟೆಯ ಗಾತ್ರ
ಹಲವು ಭಾರತೀಯ ಹಿರಿಯ ಮಹಿಳೆಯರ ಅನುಭವದ ಮೂಲಕ ಕಂಡುಕೊಂಡಂತೆ ಹೊಟ್ಟೆಯ ಗಾತ್ರ ಕೊಂಚ ಚಿಕ್ಕದಿದ್ದರೆ ಮಗು ಗಂಡು ಎಂದು ತಿಳಿದುಕೊಳ್ಳಬಹುದು. ಮಗು ಗಂಡೇ ಎಂದು ಹೊರನೋಟಕ್ಕೇ ಹಿರಿಯರು ನಿರ್ಧರಿಸುವಲ್ಲಿ ಈ ಮಾಹಿತಿ ಪ್ರಮುಖವಾಗಿದೆ.

ಸ್ತನಗಳ ಗಾತ್ರ
ಹೆರಿಗೆಯ ಸಮಯ ಹತ್ತಿರಾಗುತ್ತಿದ್ದಂತೆಯೇ ಸ್ತನಗಳ ಗಾತ್ರವೂ ಸ್ವಾಭಾವಿಕವಾಗಿ ಹೆಚ್ಚುತ್ತದೆ. ಏಕೆಂದರೆ ಹುಟ್ಟಲಿರುವ ಮಗುವಿಗೆ ಅಗತ್ಯವಾದ ತಾಯಿಹಾಲನ್ನು ಸಂಗ್ರಹಿಸತೊಡಗುವ ಕಾರಣ ಗಾತ್ರವೂ ಹೆಚ್ಚುತ್ತದೆ. ಆದರೆ ಎರಡೂ ಸ್ತನಗಳು ಏಕಪ್ರಕಾರವಾಗಿ ಹೆಚ್ಚುವುದಿಲ್ಲ. ಒಂದು ವೇಳೆ ಬಲಸ್ತನ ಎಡಸ್ತನಕ್ಕಿಂತ ದೊಡ್ಡದಾಗಿದ್ದರೆ ಮಗು ಗಂಡು ಎಂದು ತಿಳಿಯಬಹುದು. ವ್ಯತಿರಿಕ್ತವಾದ ಗಾತ್ರ ಮಗು ಹೆಣ್ಣು ಎಂದು ತಿಳಿಸುತ್ತದೆ.


ಸಾಮಾನ್ಯವಾಗಿ ಗರ್ಭಾವಸ್ಥೆಯ ಸಂದರ್ಭದಲ್ಲಿ ದೇಹದಲ್ಲಿ ಗರ್ಭಧಾರಣೆಯ ಹಾರ್ಮೋನುಗಳು ತುಂಬಿರುವ ಕಾರಣದಿಂದಾಗಿ ಸ್ತನವು ಭಾರವೆನಿಸಬಹುದು. ಸ್ತನದಲ್ಲಿರುವ ಗ್ರಂಥಿಗಳು ಗರ್ಭಧಾರಣೆ ವೇಳೆ ಹಿಗ್ಗುವ ಕಾರಣದಿಂದ ಸ್ತನವು ಭಾರವಾದಂತೆ ಭಾಸವಾಗುವುದು. ಅಲ್ಲದೆ ಕೆಲವೊಮ್ಮೆ ಗರ್ಭಧಾರಣೆ ವೇಳೆ ಸ್ತನದ ತೊಟ್ಟು ದೊಡ್ಡದಾಗುತ್ತದೆ. ಈ ಭಾಗದಲ್ಲಿ ಗ್ರಂಥಿಗಳು ಹಿಗ್ಗುವ ಕಾರಣದಿಂದಾಗಿ ಕೆಲವು ಮಹಿಳೆಯರ ಸ್ತನದ ತೊಟ್ಟು ಗಡಸು ಮತ್ತು ದೊಡ್ಡದಾಗುತ್ತದೆ.

ಪಾದಗಳು ತಣ್ಣಗಾಗುವುದು
ಗರ್ಭಾವಸ್ಥೆಯ ಹೆಚ್ಚಿನ ಸಮಯದಲ್ಲಿ ಗರ್ಭಿಣಿ ತನ್ನ ಪಾದಗಳು ತಣ್ಣಗಿರುವ ಅನುಭವ ಪಡೆದರೆ ಇದು ಮಗು ಗಂಡಾಗಿರುವ ಸೂಚನೆಯಾಗಿದೆ.

ಹೃದಯ ಬಡಿತ
ಮುಂದಿನ ಬಾರಿ ವೈದ್ಯರಲ್ಲಿ ಆರೋಗ್ಯದ ತಪಾಸಣೆಗೆ ಹೋದಾಗ ಮಗುವಿನ ಹೃದಯಬಡಿತದ ವೇಗವನ್ನು ಅರಿಯಿರಿ. ಒಂದು ವೇಳೆ ಇದು ನಿಮಿಷಕ್ಕೆ 140 ಕ್ಕೂ ಕಡಿಮೆ ಇದ್ದರೆ ಮಗು ಗಂಡು ಎಂದು ಊಹಿಸಬಹುದು.

ಕೂದಲ ಬೆಳವಣಿಗೆ
ಗರ್ಭದಲ್ಲಿರುವ ಮಗು ಗಂಡೇ ಎಂದು ಸೂಚಿಸುವ ಇನ್ನೊಂದು ಸಂಜ್ಞೆ ಎಂದರೆ ನಿಮ್ಮ ಕೂದಲ ಬೆಳವಣಿಗೆಯ ವೇಗ ಇತರ ಸಮಯಕ್ಕಿಂತಲೂ ಕೊಂಚ ಹೆಚ್ಚಾಗಿರುತ್ತದೆ.

ಆಹಾರದ ಬಯಕೆ
ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ಏನೇನೋ ತಿನ್ನ ಬಯಸುತ್ತಾರೆ. ಕೆಲವರಿಗೆ ಹುಳಿ ಮಾವಿನ ಕಾಯಿ ಇಷ್ಟವಾದರೆ ಕೆಲವರಿಗೆ ನೆಲ್ಲಿಕಾಯಿ, ಇನ್ನು ಕೆಲವರಿಗೆ, ಸಿಹಿ ತಿಸಿಸುಗಳು, ಹೀಗೆ ಏನೆನೋ ತಿನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ಗರ್ಭಿಣಿಯರ ಬಯಕೆ ಈಡೇರಿಸದಿದ್ದರೆ ಮಗುವಿನ ಕಿವಿ ಕಿವುಡಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಬೆಳೆದುಬಂದಿರುವ ಕಾರಣ ಇದನ್ನು ಈಡೇರಿಸಲು ಮನೆಯವರು ಮುಂದಾಗುತ್ತಾರೆ. ಇನ್ನು ಕೆಲವರಿಗೆ ಹುಳಿ ತಿನ್ನುವ ಬಯಕೆ ಮೂಡುತ್ತದೆ ಇದು, ಗರ್ಭಾವಸ್ಥೆಯಲ್ಲಿ ಸ್ವಾಭಾವಿಕ. ಅಷ್ಟೇ ಅಲ್ಲ, ದಿನ ಕಳೆದಂತೆ ಈ ಬಯಕೆ ಹೆಚ್ಚುತ್ತಾ ಹೋಗುತ್ತದೆ ಹಾಗೂ ಇತರ ಆಹಾರಗಳ ಸೇವನೆಯ ಪ್ರಮಾಣವೂ ಹೆಚ್ಚುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಕೆಲವು ವಿಶೇಷ ಆಹಾರ ಸೇವಿಸುವ ಬಯಕೆಯಾಗುತ್ತದೆ. ಒಂದು ವೇಳೆ ಮಗು ಗಂಡಾಗಿದ್ದರೆ ಈ ಬಯಕೆ ಅತಿ ಹೆಚ್ಚಾಗಿರುತ್ತದೆ. ವಿಶೇಷವಾಗಿ ಹುಳಿ ಮತ್ತು ಉಪ್ಪು ಹೆಚ್ಚಾಗಿರುವ ಆಹಾರಗಳ ಬಯಕೆ ಹೆಚ್ಚುತ್ತದೆ.

ಗರ್ಭಿಣಿಯರಲ್ಲಿ ಹುಳಿ ತಿನ್ನುವ ಬಯಕೆ; ಏನಿದರ ರಹಸ್ಯ?

ಮಲಗುವ ಭಂಗಿ
ಗರ್ಭಾವಸ್ಥೆಯಲ್ಲಿ ಕಡೆಯ ತಿಂಗಳುಗಳಲ್ಲಿ ಹೆಚ್ಚು ಸುಸ್ತು ಆವರಿಸುತ್ತದೆ. ಪರಿಣಾಮವಾಗಿ ನಿದ್ದೆಯೂ ಹೆಚ್ಚುತ್ತದೆ. ಒಂದು ವೇಳೆ ಗರ್ಭಿಣಿ ಹೆಚ್ಚಿನ ಸಮಯ ಎಡಮಗ್ಗುಲಲ್ಲಿ ಮಲಗಿದರೆ ಹುಟ್ಟಲಿರುವ ಮಗು ಗಂಡೇ ಎಂದು ಅರ್ಥೈಸಿಕೊಳ್ಳಬಹುದು.
ಗರ್ಭಿಣಿಯರು ಮಲಗುವ ಅವಧಿಯಲ್ಲಿ ಪಾಲಿಸಬೇಕಾದ ಕೆಲವೊಂದು ನಿಯಮಗಳು
*ಗರ್ಭಿಣಿಯರು ಆರಂಭದಲ್ಲಿ ಹೊಟ್ಟೆ ಮೇಲೆ ಮಲಗಿಕೊಂಡರೆ ಯಾವುದೇ ಸಮಸ್ಯೆಯಿಲ್ಲ. ಆದರೆ ಹೊಟ್ಟೆ ದೊಡ್ಡದಾಗುತ್ತಾ ಇರುವಂತೆ ಹೊಟ್ಟೆ ಕೆಳಗೆ ಹಾಕಿಕೊಂಡು ಮಲಗಬಾರದು. ಇದರಿಂದ ತುಂಬಾ ಅನಾನುಕೂಲವಾಗುವುದು.


*ದೀರ್ಘ ಕಾಲದ ತನಕ ಹೊಟ್ಟೆ ಕೆಳಗೆ ಹಾಕಿಕೊಂಡು ಮಲಗುವುದರಿಂದ ಹೆಚ್ಚಿನ ಸಮಸ್ಯೆಯಾಗುವುದು. ಕೆಲವು ಆರೋಗ್ಯ ತಜ್ಞರ ಪ್ರಕಾರ ಗರ್ಭಿಣಿಯರು ತಮ್ಮ ಸ್ಥಿತಿ ಬದಲಾಯಿಸಿಕೊಂಡು ಮಲಗುವುದರಿಂದ ಯಾವುದೇ ಸಮಸ್ಯೆಯಾಗದು. ಗರ್ಭಧಾರಣೆ ವೇಳೆ ಕೆಲವೊಂದು ಭಂಗಿಯಲ್ಲಿ ಮಲಗಲು ನಿಮಗೆ ಸಾಧ್ಯವಾಗದು.
*ಗರ್ಭಿಣಿಯರು ಬೆನ್ನಿನ ಮೇಲೆ ಮಲಗುವುದು ತುಂಬಾ ಆರೋಗ್ಯಕಾರಿಯೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ. ಇದರಿಂದ ಗರ್ಭದಲ್ಲಿರುವ ಶಿಶುವಿಗೆ ರಕ್ತಸಂಚಾರ ಕಡಿಮೆಯಾಗಬಹುದು.
*ಎಡ ಬದಿಗೆ ಮಲಗಿರುವಾಗ ಮಡಚಿರುವ ಕಾಲುಗಳ ಮಧ್ಯೆ ತಲೆದಿಂಬು ಇಟ್ಟುಕೊಂಡು ಮಲಗಿದರೆ ನಿಮಗೆ ಆರಾಮವಾಗುವುದು.
ಹಸ್ತಗಳು ಒಣಗುವುದು
ಎಷ್ಟೇ ಕೋಲ್ಡ್ ಕ್ರೀಂ ಹಚ್ಚಿದರೂ ಹಸ್ತಗಳು ಒಣಗಿಯೇ ಇದ್ದು ಬಿರುಕು ಬಿಟ್ಟಿರುವಂತೆ ಅನ್ನಿಸುತ್ತಿದೆಯೇ? ಆದರೆ ಇದು ಸಂತೋಷಪಡಬೇಕಾದ ವಿಚಾರವಾಗಿದೆ. ಏಕೆಂದರೆ ಈ ಸೂಚನೆ ಹೊಟ್ಟೆಯಲ್ಲಿರುವ ಮಗು ಗಂಡು ಎಂದು ಸೂಚಿಸುತ್ತವೆ.
English summary

Are You Having A Baby Boy? Signs During Pregnancy

If you are staying in the West, doctors can tell you if you are having a boy or a girl baby with the help of an ultrasound. Sadly, in India, for various reasons, there is a craze for boys. And because of serious problems of sex-selective abortion in India, tests that can tell you the gender of the baby before birth are illegal.
X
Desktop Bottom Promotion