For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ, 'ಫಲವಂತಿಕೆ ಔಷಧ' ಸೇವಿಸಿ ತಪ್ಪು ಮಾಡಬೇಡಿ!

ಗರ್ಭ ಧರಿಸಲು ಸಾಧ್ಯವಾಗದೆ ಇರುವಂತಹ ಮಹಿಳೆಯರು ಹೆಚ್ಚಾಗಿ ಫಲವತ್ತತೆಯ ಮಾತ್ರೆ ಅಥವಾ ಬೇರೆ ರೀತಿಯ ಔಷಧಿಯನ್ನು ತೆಗೆದುಕೊಳ್ಳುತ್ತಾ ಇದ್ದಾರೆ. ಆದರೆ ಇಂತಹ ಔಷಧಿಗಳಿಂದ ಆಗಬಹುದಾದ ಅಡ್ಡ ಪರಿಣಾಮಗಳೇನು ಎಂಬುದನ್ನು ನೀಡಿದ್ದೇವೆ, ಮುಂದೆ ಓದಿ...

By Hemanth
|

ಹಿಂದಿನ ಕಾಲದಲ್ಲಿ ಮಹಿಳೆಗೆ ಮಕ್ಕಳಾಗಲಿಲ್ಲವೆಂದರೆ ಆಗ ಆಕೆಯನ್ನು ಬಂಜೆಯೆಂದು ಕರೆದು ಹೀಯಾಳಿಸಲಾಗುತ್ತಿತ್ತು. ಕೆಲವೊಂದು ವೈದ್ಯರು ಪರೀಕ್ಷೆ ನಡೆಸಿ ವೈದ್ಯಕೀಯ ಕಾರಣಗಳಿಂದ ಆಕೆಗೆ ಗರ್ಭ ಧರಿಸಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದ ಕಾಲವಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಯಾವುದೇ ಮಹಿಳೆ ಕೂಡ ಗರ್ಭ ಧರಿಸಬಹುದು ಎಂದು ವೈದ್ಯಕೀಯ ವಿಜ್ಞಾನಗಳು ಹೇಳುತ್ತಿವೆ.

ಹಲವಾರು ಸಂಶೋಧನೆಗಳು ಇದನ್ನು ಸಾಬೀತು ಮಾಡಿದೆ. ಮಹಿಳೆಯರು ಗರ್ಭ ಧರಿಸಲು ಇಂದು ಹಲವಾರು ರೀತಿಯ ವೈದ್ಯಕೀಯ ಚಿಕಿತ್ಸೆಗಳು ಇವೆ. ಫಲವತ್ತತೆಯನ್ನು ಉಂಟು ಮಾಡಬಲ್ಲ ಹಲವಾರು ರೀತಿಯ ಔಷಧಿಗಳು ವೈದ್ಯಕೀಯ ಜಗತ್ತು ಕಂಡುಹಿಡಿದಿದೆ. ಹಾರ್ಮೋನು ಅಸಮತೋಲನ, ಗರ್ಭ ಹಾಗೂ ಜನನಾಂಗದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಕೂಡ ಸರಿಪಡಿಸಬಹುದಾಗಿದೆ. ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬಾರದ 10 ಔಷಧಿಗಳು

ಇದರಿಂದಾಗಿ ಗರ್ಭ ಧರಿಸಲು ಸಾಧ್ಯವಾಗದೆ ಇರುವಂತಹ ಮಹಿಳೆಯರು ಹೆಚ್ಚಾಗಿ ಫಲವತ್ತತೆಯ ಮಾತ್ರೆ ಅಥವಾ ಬೇರೆ ರೀತಿಯ ಔಷಧಿಯನ್ನು ತೆಗೆದುಕೊಳ್ಳುತ್ತಾ ಇದ್ದಾರೆ. ಆದರೆ ಇದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಕಾಡುತ್ತದೆ. ಫಲವತ್ತತೆಯ ಔಷಧಿಯನ್ನುತೆಗೆದುಕೊಳ್ಳುವ ಮೊದಲು ಅನುಸರಿಸಬೇಕಾದ ಕೆಲವೊಂದು ಎಚ್ಚರಿಕೆಯ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ....

ಬಹು ಗರ್ಭಧಾರಣೆ

ಬಹು ಗರ್ಭಧಾರಣೆ

ಫಲವತ್ತತೆಯ ಔಷಧಿಯು ಬಹು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಬಹು ಅಂಡಾಣುಗಳು ಫಲವತ್ತತೆ ಪಡೆಯುತ್ತಿರುವ ಕಾರಣದಿಂದಾಗಿ ಅಕಾಲಿಕ ಜನನವಾಗುವ ಸಾಧ್ಯತೆ ತುಂಬಾ ಹೆಚ್ಚಿದೆ.

ಅಂಡಾಶಯ ವೈಫಲ್ಯ

ಅಂಡಾಶಯ ವೈಫಲ್ಯ

ಫಲವತ್ತತೆಯ ಔಷಧಿಯನ್ನು ತೆಗೆದುಕೊಳ್ಳುವುದು ಅಷ್ಟು ಸುರಕ್ಷಿತವಲ್ಲ. ಯಾಕೆಂದರೆ ಇದರಿಂದ ಅಂಡಾಶಯದ ವೈಫಲ್ಯದಂತಹ ಸಮಸ್ಯೆ ಕಾಡಬಹುದು. ಈ ಪರಿಸ್ಥಿತಿಯಲ್ಲಿ ಮಹಿಳೆಯು ಬಿಡುಗಡೆ ಮಾಡುವ ಅಂಡಾಣುಗಳ ಸಂಖ್ಯೆಯು ವಿಪರೀತವಾಗಿ ಹೆಚ್ಚಾಗುತ್ತದೆ.

ಅವಧಿಪೂರ್ಣ ಋತುಬಂಧ

ಅವಧಿಪೂರ್ಣ ಋತುಬಂಧ

ದೀರ್ಘಕಾಲದ ತನಕ ಫಲವತ್ತತೆಯ ಔಷಧಿ ಸೇವಿಸುವುದರಿಂದ ಅವಧಿಪೂರ್ಣ ಋತುಬಂಧದ ಸಮಸ್ಯೆ ಕಾಡಬಹುದು. ಅಂಡೋತ್ಪತ್ತಿಯನ್ನು ಪ್ರೇರೇಪಿಸುವಂತಹ ಫಲವತ್ತತೆಯ ಔಷಧಿಯು ಹಾರ್ಮೋನು ಅಸಮತೋಲನವನ್ನು ಉಂಟು ಮಾಡಬಹುದು.

ಅಂಡಾಶಯದ ಕ್ಯಾನ್ಸರ್

ಅಂಡಾಶಯದ ಕ್ಯಾನ್ಸರ್

ದೀರ್ಘ ಸಮಯದ ತನಕ ಫಲವತ್ತತೆಯ ಔಷಧಿ ಸೇವಿಸುವಂತಹ ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯ ಹೆಚ್ಚಿದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.

ತೂಕ ಹೆಚ್ಚಳ

ತೂಕ ಹೆಚ್ಚಳ

ಫಲವತ್ತತೆಯ ಔಷಧಿಯು ತುಂಬಾ ಹಾನಿಕಾರಕ. ಯಾಕೆಂದರೆ ಇದರಿಂದ ಹಾರ್ಮೋನು ಅಸಮತೋಲನ ಮತ್ತು ನೀರು ಉಳಿದುಕೊಳ್ಳುವ ಕಾರಣ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ.

English summary

Is It Safe For Women To Take Fertility Drugs?

If you are a woman who has been trying to get pregnant for a while now, and you are considering fertility treatments, you may be wondering if taking fertility drugs is safe, right? Well, the advent of modern medicine has made many things possible for humans, especially when it comes to health.
X
Desktop Bottom Promotion