ಗರ್ಭಿಣಿಯರಿಗೆ ಕಾಡುವ ವಾಕರಿಕೆಗೆ ಸಮರ್ಥ ಮನೆಮದ್ದುಗಳು

By: manu
Subscribe to Boldsky

ತಾಯಿಯಾಗುವುದು ಪ್ರತಿ ಹೆಣ್ಣಿನ ಒಂದು ಕನಸು. ಆದರೆ ಗರ್ಭ ಧರಿಸಿದ ಬಳಿಕ ಎದುರಾಗುವ ಬದಲಾವಣೆಗಳಿಗೆ ದೇಹ ಮತ್ತು ಮನಸ್ಸು ತಕ್ಷಣವೇ ಸ್ಪಂದಿಸದ ಕಾರಣ ಕೆಲವರು ಹೆಚ್ಚೇ ಬಳಲುತ್ತಾರೆ. ಇದರಲ್ಲಿ ಪ್ರಮುಖವಾದುದು ವಾಕರಿಕೆ ಮತ್ತು ವಾಂತಿ. ಪ್ರತಿ ಹತ್ತು ಗರ್ಭಿಣಿಯರಲ್ಲಿ ಕನಿಷ್ಠ ಎಂಟು ಗರ್ಭಿಣಿಯರಾದರೂ ಈ ತೊಂದರೆಗಳಿಂದ ಬಳಲಿಯೇ ಇರುತ್ತಾರೆ. ಇದು ಆರು ವಾರಗಳಿಂದ ಪ್ರಾರಂಭವಾಗಿ ಎಂಟನೆಯ ಮತ್ತು ಒಂಬತ್ತನೆಯ ವಾರದಲ್ಲಿ ಗರಿಷ್ಠ ಮಟ್ಟ ತಲುಪುತ್ತದೆ. ಬಳಿಕ ಕ್ರಮೇಣ ಕಡಿಮೆಯಾಗುತ್ತಾ ಸಾಗುತ್ತದೆ. ಗರ್ಭಾವಸ್ಥೆಯಲ್ಲಿ ಬೆಳಗ್ಗೆ ಕಾಡುವ ಸುಸ್ತು

ಇದನ್ನು ಇಲ್ಲವಾಗಿಸಲು ಯಾವುದೇ ಮದ್ದು ಇಲ್ಲ ಮತ್ತು ಇಲ್ಲವಾಗಿಸಲೂಬಾರದು. ಆದರೆ ಇದರ ಪ್ರಭಾವ ಅತಿ ಹೆಚ್ಚಾಗದಂತೆ ನೋಡಿಕೊಳ್ಳುವುದೇ ಜಾಣತನದ ಕ್ರಮವಾಗಿದೆ. ಇದಕ್ಕಾಗಿ ಹಲವು ಪ್ರಬಲ ಮದ್ದುಗಳಿದ್ದರೂ ಇದಕ್ಕಿಂತಲೂ ಮನೆಮದ್ದುಗಳೇ ಹೆಚ್ಚು ಉತ್ತಮ ಮತ್ತು ನಿರಾಪಾಯಕಾರಿಯಾಗಿವೆ. ಗರ್ಭಾವಸ್ಥೆಯಲ್ಲಿ ವಾಂತಿಯ ಕಿರಿಕಿರಿಗೆ, ಶುಂಠಿ ರಾಮಬಾಣ 

ಬ್ರಿಟನ್ನಿನ ರಾಜಮನೆತನದ ಸೊಸೆ ಕೇಟ್ ಮಿಡ್ಲ್ ಟನ್ ರವರು ಗರ್ಭಿಣಿಯಾಗಿದ್ದಾಗ ಅವರಿಗೂ ಈ ತೊಂದರೆ ಅತೀವವಾಗಿ ಕಾಡಿತ್ತು. ಇವರ ಸೇವೆಗೆ ವೈದ್ಯರ ತಂಡವೇ ಟೊಂಕ ಕಟ್ಟಿ ನಿಂತಿದ್ದರೂ ಇವರು ಒಲವು ತೋರಿದ್ದು ಮಾತ್ರ ಮನೆಮದ್ದಿಗೆ. ಇಂತಹ ಹಲವು ಫಲಪ್ರದ ಮನೆಮದ್ದುಗಳ ಬಗ್ಗೆ ಮಾಹಿತಿಯನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಇವೆಲ್ಲವೂ ಶತಮಾನಗಳಿಂದ ಭಾರತೀಯ ಮಹಿಳೆಯರ ತೊಂದರೆಯನ್ನು ನಿವಾರಿಸುತ್ತಾ ಬಂದಿವೆ. ಇವುಗಳಲ್ಲಿ ಸೂಕ್ತ ಎನ್ನಿಸಿದ್ದನ್ನು ಆರಿಸಿಕೊಳ್ಳಿ. ಒಂದು ವೇಳೆ ಈ ಮದ್ದುಗಳು ಸಮರ್ಪಕ ಶಮನ ನೀಡದೇ ಇದ್ದಲ್ಲಿ ವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಅಗತ್ಯ.

ಲಿಂಬೆಯ ವಾಸನೆ

ಲಿಂಬೆಯ ವಾಸನೆ

ಮಹಿಳೆಯರಲ್ಲಿರುವ ಈಸ್ಟ್ರೋಜೆನ್ ಎಂಬ ರಸದೂತವೇ ವಾಸನಾಗ್ರಹಣದ ಸಾಮರ್ಥ್ಯಕ್ಕೂ ಕಾರಣವಾಗಿದೆ. ಆದ್ದರಿಂದ ಒಂದು ವೇಳೆ ಗರ್ಭಿಣಿಯರ ದೇಹದಲ್ಲಿ ಈಸ್ಟ್ರೋಜೆನ್ ಮಟ್ಟ ಹೆಚ್ಚಾಗಿದ್ದು ವಾಕರಿಕೆ ಆವರಿಸಿದ್ದರೆ ಲಿಂಬೆಯ ಹಣ್ಣಿನ ವಾಸನೆಯನ್ನು ಆಘ್ರಾಣಿಸುವ ಮೂಲಕ ವಾಕರಿಕೆ ಕಡಿಮೆಯಾಗುತ್ತದೆ.

ನಿರ್ಜಲೀಕರಣದಿಂದ ದೂರವಿರಿ

ನಿರ್ಜಲೀಕರಣದಿಂದ ದೂರವಿರಿ

ಸಾಮಾನ್ಯವಾಗಿ ವಾಂತಿಯಾಗುತ್ತದೆ ಎಂಬ ಕಾರಣಕ್ಕೇ ವಾಕರಿಕೆಯಿಂದ ಬಳಲುತ್ತಿರುವ ಗರ್ಭಿಣಿಯರು ಏನನ್ನೂ ಸೇವಿಸುವುದಿಲ್ಲ. ಕೆಲವರಂತೂ ನೀರನ್ನೂ ಕುಡಿಯುವುದಿಲ್ಲ. ಆದರೆ ಇದೇ ಇವರು ಮಾಡುವ ದೊಡ್ಡ ತಪ್ಪು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿರ್ಜಲೀಕರಣದಿಂದ ದೂರವಿರಿ

ನಿರ್ಜಲೀಕರಣದಿಂದ ದೂರವಿರಿ

ನೀರು ಕುಡಿಯದೇ ಇರುವ ಕಾರಣ ಎದುರಾಗುವ ನಿರ್ಜಲೀಕರಣದ ಪರಿಣಾಮವಾಗಿ ವಾಕರಿಕೆ ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ಸಾಧ್ಯವಾದಷ್ಟು ತಣ್ಣನೆಯ ನೀರು, ಹಣ್ಣಿನ ರಸಗಳನ್ನು ಕುಡಿಯುತ್ತಾ ಇರಬೇಕು. ಅದರಲ್ಲೂ ವಿಟಮಿನ್ ಸಿ ಹೆಚ್ಚಿರುವ ಪಾನೀಯಗಳು ಉತ್ತಮ ಆಯ್ಕೆಯಾಗಿವೆ.

ಕಿತ್ತಳೆಹಣ್ಣನ್ನು ತಿನ್ನಿ ಮತ್ತು ಕುಡಿಯಿರಿ, ಸಿಪ್ಪೆಯನ್ನು ಆಘ್ರಾಣಿಸಿ

ಕಿತ್ತಳೆಹಣ್ಣನ್ನು ತಿನ್ನಿ ಮತ್ತು ಕುಡಿಯಿರಿ, ಸಿಪ್ಪೆಯನ್ನು ಆಘ್ರಾಣಿಸಿ

ವಾಕರಿಕೆಯಿಂದ ಬಳಲುತ್ತಿರುವವರಿಗೆ ಕಿತ್ತಳೆ ಹಣ್ಣು ಒಂದು ವರದಾನವಾಗಿದೆ. ಸಾಧ್ಯವಾದಷ್ಟು ಹೆಚ್ಚು ಕಿತ್ತಳೆ ರಸವನ್ನು ಕುಡಿಯಿರಿ, ಹಣ್ಣಿನ ತಿರುಳನ್ನು ತಿನ್ನಿ ಹಾಗೂ ಸಿಪ್ಪೆಯ ವಾಸನೆಯನ್ನು ಆಘ್ರಾಣಿಸಿ. ಎಲ್ಲವೂ ಸೇರಿ ವಾಕರಿಕೆಯನ್ನು ತುಂಬಾ ದೂರ ಇರಿಸುತ್ತವೆ.

ಹಸಿಶುಂಠಿಯನ್ನು ಸೇವಿಸಿ

ಹಸಿಶುಂಠಿಯನ್ನು ಸೇವಿಸಿ

ಗರ್ಭಾವಸ್ಥೆಯಲ್ಲಿ ಸೇವಿಸಲು ಹಸಿಶುಂಠಿ ಅತ್ಯುತ್ತಮವಾದ ಆಯ್ಕೆಯಾಗಿದೆ. ಇದು ವಾಕರಿಕೆಯನ್ನು ನಿವಾರಿಸುವುದು ಮಾತ್ರವಲ್ಲ ಹೊಟ್ಟೆಯ ತೊಂದರೆಗಳನ್ನೂ ನಿವಾರಿಸುತ್ತದೆ. ಆದ್ದರಿಂದ ದಿನದಲ್ಲಿ ಕೆಲವು ಬಾರಿಯಾದರೂ ಶುಂಠಿ ಸೇರಿಸಿದ ಬಿಸಿನೀರು ಅಥವಾ ಟೀ ಕುಡಿಯುತ್ತಾ ಇರಿ.

ಅರಿಶಿನ ಸೇರಿಸಿದ ಹಾಲು ಸೇವಿಸಿ

ಅರಿಶಿನ ಸೇರಿಸಿದ ಹಾಲು ಸೇವಿಸಿ

ಅರಿಶಿನ ಸೇರಿಸಿದ ಹಾಲು ಮಹಿಳೆಯರ ಹಲವು ತೊಂದರೆಗಳಿಗೆ ಉತ್ತರವಾಗಿದೆ. ಅಲ್ಲದೇ ಗರ್ಭಾವಸ್ಥೆಯಲ್ಲಿ ಅರಿಶಿನದ ಹಾಲು ಕುಡಿಯುತ್ತಾ ಇರುವ ಮೂಲಕ ಹುಟ್ಟುವ ಮಗುವಿನ ಬಣ್ಣ ಪ್ರಖರವಾಗುತ್ತದೆ ಎಂದು ನಂಬಲಾಗಿದೆ. ವಾಕರಿಕೆಗೂ ಈ ಪೇಯ ಉತ್ತಮವಾದ ಪರಿಹಾರ ನೀಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅರಿಶಿನ ಸೇರಿಸಿದ ಹಾಲು ಸೇವಿಸಿ

ಅರಿಶಿನ ಸೇರಿಸಿದ ಹಾಲು ಸೇವಿಸಿ

ಆದ್ದರಿಂದ ರಾತ್ರಿ ಮಲಗುವ ಮುನ್ನ ಒಂದು ಲೋಟ ಅಥವಾ ಬೆಳಿಗ್ಗೆ ಎದ್ದ ತಕ್ಷಣ ಖಾಲಿ

ಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಒಂದು ಲೋಟ ಉಗುರುಬೆಚ್ಚನೆಯ ಹಾಲನ್ನು ಸೇವಿಸಿ.

 
English summary

Ways To Deal With Extreme Morning Sickness

Pregnancy is a blessing, but when it comes to morning sickness, it isn't much of a treat. Out of 10 pregnant women, 8 of them suffer from this pregnancy-related problem. Morning sickness can start as early as six weeks in pregnancy and tends to peak around the eighth and ninth weeks. To deal with morning sickness, you should only turn to home remedies.
Please Wait while comments are loading...
Subscribe Newsletter