For Quick Alerts
ALLOW NOTIFICATIONS  
For Daily Alerts

ಇಂತಹ ದುರಭ್ಯಾಸಗಳೇ ಬಂಜೆತನಕ್ಕೆ ಮೂಲ ಕಾರಣ!

By Manu
|

ಮದುವೆಯಾದ ತಕ್ಷಣ ಮಗು ಬೇಕು ಎಂದು ಸಂಗಾತಿಗಳು ಅಂದುಕೊಳ್ಳುತ್ತಾರೆ. ಆದರೆ ನಾಲ್ಕೈದು ವರ್ಷ ಕಳೆದರೂ ಮಕ್ಕಳು ಆಗುವುದಿಲ್ಲ. ಇದಕ್ಕೆ ಕಾರಣ ಬಂಜೆತನ. ಇದು ಗಂಡು ಅಥವಾ ಹೆಣ್ಣು ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಇತ್ತೀಚೆಗೆ ಬಂಜೆತನವೆನ್ನುವುದು ವಿಶ್ವಮಟ್ಟದಲ್ಲಿ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ. ಇದಕ್ಕೆ ಹಲವಾರು ಕಾರಣಗಳು ಇದೆ. ಮಹಿಳೆಯರಲ್ಲಿ ಬಂಜೆತನ ತರುವ ಕೆಲ ಅಚ್ಚರಿಯ ಕಾರಣಗಳು

ಆಧುನಿಕ ಜೀವನಶೈಲಿ, ಒತ್ತಡ ಇತ್ಯಾದಿಗಳು. ಆದರೆ ನಮ್ಮ ದೈನಂದಿನ ಕೆಲವೊಂದು ಚಟುವಟಿಕೆಯಿಂದಲೂ ಬಂಜೆತನ ಬರುತ್ತದೆ ಎಂದು ಕೆಲವೊಂದು ಅಧ್ಯಯನಗಳು ಕಂಡುಕೊಂಡಿವೆ. ಯಾವುದೇ ಗರ್ಭನಿರೋಧಕ ಕ್ರಮಗಳನ್ನು ಅನುಸರಿಸಿದೆ ಮಕ್ಕಳಾಗದೆ ಇದ್ದಾಗ ಇದನ್ನು ಬಂಜೆತನವೆಂದು ಕರೆಯಲಾಗುತ್ತದೆ. ಮಹಿಳೆಯರ ಬಂಜೆತನ ಸಮಸ್ಯೆಗೆ ಕೆಲವೊಂದು ಮನೆ ಔಷಧಿ!

ಹಾರ್ಮೋನುಗಳ ಬದಲಾವಣೆ, ವೀರ್ಯದ ಗಣತಿ ಕಡಿಮೆಯಾಗಿರುವುದು, ನಿಮಿರುವಿಕೆಯ ಸಮಸ್ಯೆ, ಸಂತಾನೋತ್ಪತ್ತಿಯ ಅಂಗಾಂಗಗಳಲ್ಲಿ ನ್ಯೂನತೆ ಇತ್ಯಾದಿಗಳು ಬಂಜೆತನಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಇಂದಿನ ದಿನಗಳಲ್ಲಿ ಪ್ರಮುಖವಾಗಿ ನಾವು ಅನುಸರಿಸುವಂತಹ ಜೀವನಶೈಲಿಯು ಬಂಜೆತನಕ್ಕೆ ಪ್ರಮುಖ ಕಾರಣವಾಗುತ್ತಿದೆ. ಬೇಗನೆ ಮಗುವನ್ನು ಪಡೆಯಬೇಕಾದರೆ ಸಂಗಾತಿಗಳಿಬ್ಬರು ಆರೋಗ್ಯವಾಗಿರಬೇಕು. ಆರೋಗ್ಯಕರವಾದ ಜೀವನಶೈಲಿಯನ್ನು ಅನುಸರಿಸಬೇಕು. ಮಕ್ಕಳಾಗದಿರಲು ಪ್ರಮುಖ ಕಾರಣಗಳು

ಒಳ್ಳೆಯ ಆಹಾರ ಮತ್ತು ವ್ಯಾಯಮವನ್ನು ಜೀವನಕ್ರಮದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರೂ ಮಕ್ಕಳು ಆಗದೆ ಇದ್ದರೆ ಅಥವಾ ಮುಂದೆ ಮಗುವನ್ನು ಪಡೆಯಬೇಕೆಂದು ಬಯಸುತ್ತಾ ಇರುವವರು ದೈನಂದಿನ ಜೀವನದಲ್ಲಿ ಮಾಡುವಂತಹ ಕೆಲವೊಂದು ತಪ್ಪುಗಳನ್ನು ಸಂಪೂರ್ಣವಾಗಿ ಕಡೆಗಣಿಸಬೇಕು ಎಂದು ಆರೋಗ್ಯಕರ ಜೀವನಕ್ರಮವನ್ನುಪಾಲಿಸಬೇಕು....

ಅಪರೂಪದ ಧೂಮಪಾನ

ಅಪರೂಪದ ಧೂಮಪಾನ

ಯಾವಾಗಲೊಮ್ಮೆ ಒಂದೆರಡು ಸಿಗರೇಟ್ ಸೇದಿದರೆ ಯಾವುದೇ ತೊಂದರೆಯಿಲ್ಲವೆಂದು ಹೆಚ್ಚಿನವರು ಭಾವಿಸುತ್ತಾರೆ. ಅಧ್ಯಯನಗಳ ಪ್ರಕಾರ ಅಪರೂಪಕ್ಕೆ ಒಮ್ಮೆ ಮಾಡುವ ಧೂಮಪಾನದಿಂದ ಪುರುಷರು ಹಾಗೂ ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳುತ್ತದೆ.

ಅತಿಯಾಗಿ ತಿನ್ನುವುದು

ಅತಿಯಾಗಿ ತಿನ್ನುವುದು

ಅತಿಯಾಗಿ ತಿನ್ನುವುದರಿಂದ ಕೂಡ ಬಂಜೆತನ ಕಾಣಿಸಬಹುದು. ಅತಿಯಾಗಿ ತಿನ್ನುವುದರಿಂದ ಬೊಜ್ಜು ಬರುತ್ತದೆ. ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳಲು ಪ್ರಮುಖ ಕಾರಣವೇ ಬೊಜ್ಜು.

ಉಷ್ಣತೆಯ ಯೋಗ ತರಬೇತಿ

ಉಷ್ಣತೆಯ ಯೋಗ ತರಬೇತಿ

ತೂಕ ಕಳೆದುಕೊಳ್ಳಲು ಇಂದಿನ ದಿನಗಳಲ್ಲಿ ಕಂಡುಕೊಂಡಿರುವ ಹೊಸ ಯೋಗ ವಿಧಾನವಿದು. ಗರಿಷ್ಠ ತಾಪಮಾನವಿರುವ ಕೋಣೆಯಲ್ಲಿ ಯೋಗ ಮಾಡುವುದು. ಇಂತಹ ಯೋಗವು ಬಂಜೆತನಕ್ಕೆ ಕಾರಣವಾಗಬಹುದು. ಅತಿಯಾದ ಉಷ್ಣತೆಯು ಅಂಡಾಣು ಮತ್ತು ವೀರ್ಯದ ಮೇಲೆ ಪರಿಣಾಮ ಬೀರಬಹುದು.

ಖಿನ್ನತೆಗೆ ಮಾತ್ರೆ

ಖಿನ್ನತೆಗೆ ಮಾತ್ರೆ

ಖಿನ್ನತೆಯನ್ನು ನಿವಾರಿಸಲು ತೆಗೆದುಕೊಳ್ಳುವಂತಹ ಮಾತ್ರೆಗಳಿಂದ ಬಂಜೆತನ ಕಾಣಿಸಿಕೊಳ್ಳುತ್ತದೆ. ಇದು ಎರಡು ಲಿಂಗದವರ ಲೈಂಗಿಕ ಆಸಕ್ತಿ ಮೇಲೆ ಪರಿಣಾಮ ಬೀರಬಹುದು. ವೀರ್ಯದ ಗುಣಮಟ್ಟಕ್ಕೆ ಇದರಿಂದ ಹಾನಿಯಾಗಬಹುದು.

ಸುರಕ್ಷಿತವಲ್ಲದ ಲೈಂಗಿಕ ಕ್ರಿಯೆ

ಸುರಕ್ಷಿತವಲ್ಲದ ಲೈಂಗಿಕ ಕ್ರಿಯೆ

ಸುರಕ್ಷತವಲ್ಲದೆ ಇರುವಂತಹ ಲೈಂಗಿಕ ಕ್ರಿಯೆಯಿಂದಾಗಿ ಪುರುಷರು ಹಾಗೂ ಮಹಿಳೆಯರಲ್ಲಿ ಲೈಂಗಿಕ ರೋಗಗಳು ಕಾಣಿಸಿ ಕೊಳ್ಳಬಹುದು. ಕೆಲವೊಂದು ಲೈಂಗಿಕ ರೋಗಗಳು ಪುರುಷರು ಹಾಗೂ ಮಹಿಳೆಯರಲ್ಲಿ ಬಂಜೆತನ ಉಂಟುಮಾಡುವುದು.

ಅತಿಯಾದ ಮದ್ಯಪಾನ

ಅತಿಯಾದ ಮದ್ಯಪಾನ

ದಿನಾಲೂ ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡುವುದರಿಂದ ಬಂಜೆತನ ಕಾಣಿಸಬಹುದು. ಈ ಅಭ್ಯಾಸದಿಂದ ದೀರ್ಘ ಕಾಲಕ್ಕೆ ವೀರ್ಯ ಹಾಗೂ ಅಂಡಾಣುಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು.

ಪ್ಲಾಸ್ಟಿಕ್ ಬಾಟಲಿಯಿಂದ ನೀರು ಕುಡಿಯುವುದು

ಪ್ಲಾಸ್ಟಿಕ್ ಬಾಟಲಿಯಿಂದ ನೀರು ಕುಡಿಯುವುದು

ಹೌದು, ನಿಯಮಿತವಾಗಿ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ತುಂಬಿ ಕುಡಿಯುವುದರಿಂದ ಬಂಜೆತನ ಕಾಣಿಸಿಕೊಳ್ಳಬಹುದು. ಯಾಕೆಂದರೆ ಪ್ಲಾಸ್ಟಿಕ್ ಬಾಟಲಿಯಲ್ಲಿರುವ ಪ್ಲಾಸ್ಟಿಕ್ ನ ವಿಷಗಳು ಹಾರ್ಮೋನುಗಳ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು.

English summary

These Daily Habits Can Make You Infertile!

Are you planning to have a baby soon? If yes, then you should make yourself aware of some of the common everyday habits that you could be following, which can cause infertility. Of late, several research studies have been claiming that infertility is on the raise globally and many couples who are trying for a baby are facing difficulties!
X
Desktop Bottom Promotion