For Quick Alerts
ALLOW NOTIFICATIONS  
For Daily Alerts

ಅಸ್ತಮಾ ಇರುವ ಮಹಿಳೆಯರಿಗೆ ಗರ್ಭಧಾರಣೆ ಕಷ್ಟವೇ?

By Hemanth
|

ಗರ್ಭಧಾರಣೆ ಮತ್ತು ಮಹಿಳೆ ಮಧ್ಯೆ ಅದೊಂದು ರೀತಿಯ ಭಾವನಾತ್ಮಕ ಸಂಬಂಧವಿದೆ. ಮಹಿಳೆಯಾದ ಮೇಲೆ ಗರ್ಭಧಾರಣೆ ಮಾಡಬೇಕಾಗುತ್ತದೆ. ಆದರೆ ಪ್ರತಿಯೊಬ್ಬ ಮಹಿಳೆಗೂ ಈ ಭಾಗ್ಯವಿರುವುದಿಲ್ಲ. ಕಾರಣ ಏನೇ ಇರಲಿ, ಆದರೆ ಗರ್ಭಧಾರಣೆ ವೇಳೆ ಮಹಿಳೆಯರು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇದರಿಂದ ಗರ್ಭದಲ್ಲಿ ಬೆಳೆಯುವ ಮಗು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಗರ್ಭಧರಿಸಲು ಮಹಿಳೆ ಕೂಡ ಆರೋಗ್ಯವಾಗಿರಬೇಕಾಗಿರುವುದು ತುಂಬಾ ಮುಖ್ಯ.

ಇಂದಿನ ದಿನಗಳಲ್ಲಿ ಕೆಲಸದ ಒತ್ತಡ, ಗರ್ಭನಿರೋಧಕ ಮಾತ್ರೆಗಳ ಅತಿಯಾದ ಸೇವನೆ ಇತ್ಯಾದಿಗಳಿಂದಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಬಂಜೆತನ ಕಾಣಿಸಿಕೊಳ್ಳುತ್ತದೆ. ಆದರೆ ಗರ್ಭಧಾರಣೆ ಮಾಡುವ ಮಹಿಳೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಅದರಿಂದ ಗರ್ಭಧಾರಣೆ ಸಂದರ್ಭದಲ್ಲಿ ತೊಂದರೆಯಾಗಬಹುದು. ಇತ್ತೀಚೆಗೆ ನಡೆಸಿದ ಅಧ್ಯಯನವೊಂದರ ಪ್ರಕಾರ ಅಸ್ತಮಾವಿರುವ ಮಹಿಳೆಯರಿಗೆ ಗರ್ಭಧಾರಣೆ ತುಂಬಾ ಕಠಿಣವಾಗಲಿದೆ ಎಂದು ಹೇಳಿದೆ.

Is It Difficult For Women With Asthma To Get Pregnant?

ಅಸ್ತಮಾ ಎಂದರೇನು?
ಅಸ್ತಮಾವು ಉಸಿರಾಟದ ಸಮಸ್ಯೆ. ಸಾಮಾನ್ಯವಾಗಿ ಇದೊಂದು ಉಸಿರಾಟದ ಸ್ಥಿತಿ ಎನ್ನಬಹುದಾಗಿದೆ. ವಾಯುನಾಳಗಳು ಕಿರಿದುಗೊಂಡು ಉಬ್ಬಸ ಹಾಗೂ ಉಸಿರಾಡಲು ಕಷ್ಟಪಡಬೇಕಾದ ಸ್ಥಿತಿಗೆ ಅಸ್ತಮಾ ಎನ್ನಲಾಗುತ್ತದೆ. ಕಫ, ಉಸಿರಾಟದ ತೊಂದರೆ, ಉಸಿರುಕಟ್ಟುವಿಕೆ, ಎದೆಯಲ್ಲಿ ಉಸಿರುಕಟ್ಟಿದಂತಾಗುವುದು ಇತ್ಯಾದಿ ಅಸ್ತಮಾದ ಲಕ್ಷಣಗಳಾಗಿವೆ.

ಅಸ್ತಮಾದಿಂದ ಗರ್ಭಧಾರಣೆ ಅವಕಾಶ ಕಡಿಮೆಯಿದೆಯಾ?
ಅಸ್ತಮಾ ಇರುವ ಮಹಿಳೆಯರನ್ನು ಇತರ ಮಹಿಳೆಯರಿಗೆ ಹೋಲಿಸಿದರೆ ಅಸ್ತಮಾ ಇರುವವರು ಗರ್ಭಧರಿಸುವ ಸಾಧ್ಯತೆ ತುಂಬಾ ಕಡಿಮೆ ಇದೆ. ಅಸ್ತಮಾ ಇರುವ ಮಹಿಳೆಯರು ಗರ್ಭಧರಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಇದರಿಂದ ಅವರಿಗೆ ಬಂಜೆತನ ಬರುವ ಸಾಧ್ಯತೆ ಹೆಚ್ಚಿದೆ. ಅಸ್ತಮಾ ಇರುವ ಮಹಿಳೆಯರು ಸಣ್ಣ ವಯಸ್ಸಿನಲ್ಲೇ ಗರ್ಭ ಧರಿಸಬೇಕು. ಇಲ್ಲವಾದಲ್ಲಿ ಅಸ್ತಮಾ ಮತ್ತು ವಯಸ್ಸು ಎರಡೂ ಗರ್ಭಧಾರಣೆಗೆ ಸಮಸ್ಯೆಯಾಗಬಹುದು. ಅಸ್ತಮಾ ಕಾಯಿಲೆಗೆ ಮನೆಮದ್ದು-ಸ್ಪೆಷಲ್ ಲೇಖನ

ಅಸ್ತಮಾ ಇರುವ ಮಹಿಳೆಯರಲ್ಲಿ ಪ್ರೌಢಾವಸ್ಥೆಯಲ್ಲಿ ದೀರ್ಘಕಾಲದ ದಾಳಿಯಿಂದ ಹಾರ್ಮೋನು ಬದಲಾವಣೆಗಳಾಗಿ ಮುಂದೆ ಬಂಜೆತನಕ್ಕೆ ಕಾರಣವಾಗಬಹುದು. ಅಸ್ತಮಾಗೆ ನೀಡುವ ಕೆಲವೊಂದು ಔಷಧಿಗಳಿಂದ ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳುವುದು. ಗರ್ಭಧರಿಸುವ ಮಹಿಳೆಯರು ಮೊದಲು ಅಸ್ತಮಾವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸರಿಯಾದ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಅಧ್ಯಯನಗಳು ಹೇಳಿವೆ.


ಅಸ್ತಮಾ ಹೊಂದಿರುವ ಮಹಿಳೆಯರು ಹೆಚ್ಚಿನ ಎಚ್ಚರಿಕೆ ವಹಿಸಿಕೊಳ್ಳಬೇಕಾಗುತ್ತದೆ. ಧೂಳು, ಹೊಗೆ, ಧೂಮಪಾನ ಮಾಡುವ ವ್ಯಕ್ತಿಗಳಿಂದ ದೂರವಿರಬೇಕಾಗುತ್ತದೆ. ಇದರಿಂದ ಸಾಧ್ಯವಿದ್ದಷ್ಟು ದೂರವಿದ್ದರೆ ಖಂಡಿತವಾಗಿಯೂ ಗರ್ಭಧರಿಸಬಹುದಾಗಿದೆ. ಮಗುವನ್ನು ಪಡೆಯಲು ಇಚ್ಛಿಸುವ ಮಹಿಳೆಯರು ಎಚ್ಚರಿಕೆ ವಹಿಸಿಕೊಂಡು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗಿದೆ.
English summary

Is It Difficult For Women With Asthma To Get Pregnant?

Are you worried that you wont get pregnant if you have asthma? Well, read about what research studies have to say about that...
X
Desktop Bottom Promotion