For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ, ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ ಪ್ಲೀಸ್!

By Jaya subramanya
|

ತಾಯ್ತನೆಂಬುದು ಸ್ತ್ರೀಯ ಜೀವನದಲ್ಲಿ ಒಂದು ಪ್ರಮುಖವಾದ ಘಟ್ಟ. ಹೆಣ್ಣು ತಾಯಿಯಾಗುತ್ತಾಳೆ ಎಂಬುದು ಸಂಭ್ರಮದ ಸುದ್ದಿಯಾಗಿದ್ದರೂ ಇದರೊಂದಿಗೆ ಸೂಕ್ತ ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲೇಬೇಕಾಗಿರುವುದನ್ನು ಮಾತ್ರ ಆಕೆ ಮರೆಯಬಾರದು

ತನ್ನ ಆರೋಗ್ಯವೇ ಮಗುವಿನ ಆರೋಗ್ಯಕ್ಕೆ ಬೆಂಗಾವಲಾಗಿ ಇರುವುದರಿಂದ ಆದಷ್ಟು ಕಾಳಜಿಯನ್ನು ವಹಿಸಬೇಕಾಗುತ್ತದೆ. ತೆಗೆದುಕೊಳ್ಳುವ ಆಹಾರ, ನಿತ್ಯದ ಜೀವನ ಕ್ರಮದಲ್ಲಿ ಪಾಲಿಸಬೇಕಾದ ನಿಯಮಗಳು ಹೀಗೆ ಹೆಜ್ಜೆ ಹೆಜ್ಜೆಗೂ ಜಾಗ್ರತೆಯನ್ನು ಪಾಲಿಸಬೇಕು.

 Effects Of Excess Weight Before Pregnancy
ಹೆದರದಿರಿ! ಗರ್ಭಾವಸ್ಥೆಯಲ್ಲಿ ಈ ಲಕ್ಷಣಗಳು ಸರ್ವೇ ಸಾಮಾನ್ಯ
ಈ ಸಂದರ್ಭದಲ್ಲಿ ತಾಯಿಯ ತೂಕ ಕೂಡ ಹೆಚ್ಚು ಮುಖ್ಯವಾಗಿರುತ್ತದೆ. ನೀವು ಗರ್ಭಿಣಿಯಾಗುವುದಕ್ಕೆ ಮುನ್ನ ನಿಮ್ಮ ತೂಕವನ್ನು ಪರಿಶೀಲಿಸಿಕೊಳ್ಳಬೇಕು. ನೀವು ಅಧಿಕ ತೂಕವನ್ನು ಹೊಂದಿದ್ದರೆ ತೂಕ ಇಳಿಸುವ ಕ್ರಮಗಳನ್ನು ನಿಮ್ಮ ವೈದ್ಯರು ನಿಮಗೆ ತಿಳಿಸಿಕೊಡುತ್ತಾರೆ. ನಿಮ್ಮ ಹೆಚ್ಚುವರಿ ತೂಕವು ನಿಮಗೆ ಹಾಗೂ ಗರ್ಭದಲ್ಲಿರುವ ನಿಮ್ಮ ಶಿಶುವಿಗೆ ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೆಚ್ಚುವರಿ ತೂಕವನ್ನು ಗರ್ಭಾವಸ್ಥೆಗೂ ಮುನ್ನ ನೀವು ಕಳೆದುಕೊಳ್ಳಲೇಬೇಕು.

ಗರ್ಭಿಣಿ ಸ್ತ್ರೀಯು ಹೆಚ್ಚುವರಿ ತೂಕವನ್ನು ಹೊಂದಿದ್ದಲ್ಲಿ ಗರ್ಭಾವಸ್ಥೆಯಲ್ಲಿ ಮತ್ತು ಪ್ರಸವದ ನಂತರ ಕೂಡ ಕೆಲವೊಂದು ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. ಸ್ಪೀನಾ ಬೈಪೀಡಿಯಾದಂತಹ ಜನನ ದೋಷಗಳನ್ನು ಹೆಚ್ಚುವರಿ ತೂಕವು ಉಂಟುಮಾಡಬಹುದು ಅಂತೆಯೇ ಗರ್ಭಪಾತವುಂಟಾಗುವ ಸಾಧ್ಯತೆ ಕೂಡ ಇರುತ್ತದೆ. ಗರ್ಭಾವಸ್ಥೆಯಲ್ಲಿ ಸ್ಥೂಲಕಾಯಿಗೆ ಅಧಿಕ ರಕ್ತದೊತ್ತಡ, ಮಧುಮೇಹ, ಪ್ರಿಕ್ಲಾಂಪ್ಸಿಯ ಉಂಟಾಗುವ ಸಾಧ್ಯತೆ ಕೂಡ ಇದೆ. ಗರ್ಭಧಾರಣೆಯ ಸಮಯದಲ್ಲಿ ತೂಕ ಕಡಿಮೆ ಮಾಡುವ ಸರಳೋಪಾಯಗಳು

ಅಧಿಕ ತೂಕ ಇರುವ ತಾಯಂದಿರು ತಮ್ಮ ಮಗುವನ್ನು ಅಪಾಯಕ್ಕೆ ಸಿಲುಕಿಸಿದಂತೆಯೇ. ಇವರ ಮಕ್ಕಳು ನಂತರ ಭವಿಷ್ಯದಲ್ಲಿ ಬೊಜ್ಜಿನ ಸಮಸ್ಯೆ ಮತ್ತು ಬಾಲ್ಯಕಾಲದ ಮಧುಮೇಹದಿಂದ ಬಳಲುವ ಸಾಧ್ಯತೆ ಇರುತ್ತದೆ. ಗರ್ಭಕೋಶದಲ್ಲಿಯೇ ಹೆಚ್ಚುವರಿ ತೂಕದ ದೇಹ ವ್ಯವಸ್ಥೆಯನ್ನು ಈ ಮಕ್ಕಳು ಪಡೆದುಕೊಂಡು ಬಾಲ್ಯಕಾಲದಲ್ಲಿಯೇ ಬೊಜ್ಜಿನ ಸಮಸ್ಯೆಗಳಿಂದ ನರಳುತ್ತಾರೆ.

ಹೆಚ್ಚುವರಿ ತೂಕದ ಮಹಿಳೆಯರಿಗೆ ತಮ್ಮ ಪ್ರಸವ ಸಮಯದಲ್ಲಿ ತೊಂದರೆಗಳು ಉಂಟಾಗುತ್ತದೆ ಎಂಬುದಾಗಿ ಸಂಶೋಧನೆಗಳು ತಿಳಿಸಿವೆ. ಆಗಾಗ್ಗೆ ಈ ರೀತಿಯಾಗುವುದರಿಂದ ಅವರು ಗರ್ಭಧಾರಣೆಗೊಳ್ಳುವಲ್ಲಿ ವಿಫಲರಾಗುತ್ತಾರೆ. ಆದ್ದರಿಂದ ಗರ್ಭಧರಿಸಲು ಸಜ್ಜಾಗಿರುವ ಸ್ತ್ರೀಯು ತಮ್ಮ ತೂಕವನ್ನು ಪರಿಶೀಲಿಸಿಕೊಂಡು ಗರ್ಭಧರಿಸಿದಲ್ಲಿ ಆರೋಗ್ಯಪೂರ್ಣ ಮಗುವನ್ನು ಪಡೆದುಕೊಳ್ಳಬಹುದಾಗಿದೆ. ಗರ್ಭಿಣಿಯಾಗಿದ್ದಾಗ ತೂಕ ಇಳಿಸಿಕೊಳ್ಳುವುದು ಆರೋಗ್ಯಕರ ಲಕ್ಷಣವೇ?

ಇದಕ್ಕಾಗಿ ಆರೋಗ್ಯಯುತ ಆಹಾರ ಪದ್ಧತಿ ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳುವುದು ಮಾತ್ರವಲ್ಲದೆ, ಗರ್ಭಾವಸ್ಥೆಯಲ್ಲೂ ತಾಯಿಯು ಆರೋಗ್ಯಕರವಾಗಿರಬಹುದಾಗಿದೆ. ಗರ್ಭಾವಸ್ಥೆಯಲ್ಲಿ ಅತಿಯಾದ ತೂಕ, ಆರೋಗ್ಯಕ್ಕೆ ಒಳ್ಳೆಯದಲ್ಲ...

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಿಸಿಕೊಳ್ಳುವುದು ಒಳ್ಳೆಯ ವಿಷಯವಾಗಿದ್ದರೂ ಅಧಿಕ ತೂಕ ಅಪಾಯಕ್ಕೆ ಸಿಲುಕಿಸಬಹುದಾಗಿದೆ. ಗರ್ಭಿಣಿಯಾಗಿದ್ದಾಗ ಆಗಾಗ್ಗೆ ವೈದ್ಯರೊಂದಿಗೆ ಸಮಾಲೋಚನೆಯನ್ನು ನಡೆಸುತ್ತಿರಬೇಕು ಮತ್ತು ಅವರು ತಿಳಿಸಿದ ಸಲಹೆಗಳನ್ನು ಪಾಲಿಸಬೇಕು. ಇದರಿಂದ ಸುಸೂತ್ರ ಹೆರಿಗೆ ನಡೆಯುವುದರ ಜೊತೆಗೆ ಆರೋಗ್ಯಕರ ಮಗುವನ್ನು ಪಡೆದುಕೊಳ್ಳಬಹುದಾಗಿದೆ.

English summary

Effects Of Excess Weight Before Pregnancy

Excess weight before pregnancy is a subject that every woman who wants to conceive should be aware of. Excess weight during pregnancy is not good at all. It can not only cause complications in the whole span of pregnancy, but also give rise to health issues that can affect the mother and the child through the rest of their lives.
X
Desktop Bottom Promotion