For Quick Alerts
ALLOW NOTIFICATIONS  
For Daily Alerts

ತಾಯಿಯ ಸ್ಥೂಲಕಾಯ ಮಕ್ಕಳು-ಮೊಮ್ಮಕ್ಕಳಿಗೂ ಕಾಡಬಹುದು!

By Manu
|

ಇತ್ತೀಚಿನ ಒಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಅತಿ ಹೆಚ್ಚು ಸಕ್ಕರೆ ಮತ್ತು ಕೊಬ್ಬಿನ ಆಹಾರಗಳನ್ನು ಸೇವಿಸುವ ಮಹಿಳೆಯರಿಗೆ ಎದುರಾಗುವ ಸ್ಥೂಲಕಾಯ ಮುಂದಿನ ಮೂರು ತಲೆಮಾರುಗಳವರೆಗೆ ಮುಂದುವರೆಯುತ್ತದೆ. ಅಂದರೆ ಇವರಿಗೆ ಹುಟ್ಟುವ ಮಕ್ಕಳು ಹಾಗೂ ಮೊಮ್ಮಕ್ಕಳು ಸಹಾ ಸ್ಥೂಲಕಾಯದವರೇ ಆಗಿದ್ದು ಹಲವು ಕಾಯಿಲೆಗಳಿಗೆ ಸುಲಭವಾಗಿ ಒಡ್ಡಬಲ್ಲವರಾಗಿರುತ್ತಾರೆ.

Do Obese Mothers Affect 3 Generations?

ಅಷ್ಟೇ ಅಲ್ಲ, ಇದಕ್ಕೂ ಮುಂದಿನ ತಲೆಮಾರಿನ ಮಕ್ಕಳು ಸಹಾ ಸ್ಥೂಲಕಾಯ ಇಲ್ಲದಿರುವ ಸಾಧ್ಯತೆಯೂ ಕಡಿಮೆಯೇ. ಅಲ್ಲದೇ ಎಷ್ಟೇ ಸೂಕ್ತ ಆಹಾರ ಮತ್ತು ವ್ಯಾಯಾಮಗಳನ್ನು ಅನುಸರಿಸಿದರೂ ವಂಶವಾಹಿನಿಯಲ್ಲಿ ಬಂದ ಸ್ಥೂಲಕಾಯದ ತೊಂದರೆಯನ್ನು ಸರಿಪಡಿಸುವುದು ದುಃಸಾಧ್ಯ.

Do Obese Mothers Affect 3 Generations?

ಸ್ಥೂಲಕಾಯವೆಂದರೆ ಅನಾರೋಗ್ಯ ಎಂದು ಅರ್ಥವಲ್ಲ, ಬದಲಿಗೆ ಕೆಲವು ಕಾಯಿಲೆಗಳು ಎದುರಾಗುವ ಸಾಧ್ಯತೆ ಉಳಿದವರಿಗಿಂತ ಹೆಚ್ಚು ಅಷ್ಟೇ. ಸ್ಥೂಲಕಾಯವಿದ್ದರೂ ಉತ್ತಮ ವ್ಯಾಯಾಮ, ಸಮರ್ಪಕ ಆಹಾರ, ಸಾಕಷ್ಟು ನಿದ್ದೆ ಮತ್ತು ಮಾನಸಿಕರಾಗಿ ನಿರಾಳತೆ ಅನುಭವಿಸುವ ಜನರು ಕೇವಲ ಶರೀರ ಕೃಶವಾಗಿದ್ದೂ ಹಲವು ಕಾಯಿಲೆಗಳ ಗೂಡಾಗಿರುವವರಿಗಿಂತ ಉತ್ತಮ ಆರೋಗ್ಯ ಹೊಂದಿರುತ್ತಾರೆ. ತಾಯಿಯ ಸ್ಥೂಲಕಾಯ ಮಗಳ ಬೆಳವಣಿಗೆಯ ಮೇಲೆ ಪ್ರಭಾವ!

ಆದರೆ ಇವು ಯಾವುವೂ ಇಲ್ಲದ ಸೋಮಾರಿಗಳಿಗೆ ಮಾತ್ರ ಹೃದಯದ ತೊಂದರೆ, ಟೈಪ್ 2 ಮಧುಮೇಹ ಮತ್ತು ಇತರ ಸ್ಥೂಲದೇಹಾಧಾರಿತ ತೊಂದರೆಗಳು ಎದುರಾಗುವ ಸಾಧ್ಯತೆ ಇತರರಿಗಿಂತ ಹೆಚ್ಚು. ಒಂದು ವೇಳೆ ಸ್ಥೂಲದೇಹ ವಂಶವಾಹಿನಿಯಾಗಿ ಹರಿದು ಬಂದಿದ್ದರೂ ಸೂಕ್ತ ವ್ಯಾಯಾಮವಿಲ್ಲದ ದೇಹಕ್ಕೆ ಈ ಎಲ್ಲಾ ತೊಂದರೆಗಳು ಎದುರಾಗುವ ಸಾಧ್ಯತೆ ಹೆಚ್ಚು.

Do Obese Mothers Affect 3 Generations?

ಈ ನಿಟ್ಟಿನಲ್ಲಿ ಸಂಶೋಧನೆ ನಡೆಸಿದ ತಜ್ಞರು 60% ಕೊಬ್ಬು ಮತ್ತು 20% ಸಕ್ಕರೆ ಇರುವ ಆಹಾರವನ್ನು ಪ್ರಯೋಗಾರ್ಥವಾಗಿ ಇಲಿಗಳಿಗೆ ತಿನ್ನಿಸಿ ಇದರ ಪರಿಣಾಮಗಳನ್ನು ಅಭ್ಯಸಿಸತೊಡಗಿದರು. ಈ ಇಲಿಗಳು ಸ್ಥೂಲಕಾಯಕ್ಕೆ ಜಾರಿದ ಬಳಿಕ ಇವುಗಳಿಗೆ ಹುಟ್ಟಿದ ಮರಿಗಳಿಗೆ ಪ್ರೋಟೀನುಯುಕ್ತ ಮತ್ತು ಅತಿ ಕಡಿಮೆ ಸಕ್ಕರೆಯ ಆರೋಗ್ಯಕರ ಆಹಾರವನ್ನು ತಿನ್ನಿಸಲಾಯಿತು. ಮಕ್ಕಳಿಗೆ ಕಾಡುವ ಸ್ಥೂಲಕಾಯ, ಎಂದಿಗೂ ನಿರ್ಲಕ್ಷಿಸದಿರಿ

ಆದರೆ ಅಚ್ಚರಿಯ ವಿಷಯವೆಂದರೆ ಈ ಮರಿಗಳೂ ಸ್ಥೂಲಕಾಯ ಹೊಂದಿದ್ದವು ಮತ್ತು ಆರೋಗ್ಯಕರ ಆಹಾರ ಸೇವಿಸಿದ ಬಳಿಕವೂ ಸ್ಥೂಲಕಾಯದಿಂದ ಸುಲಭವಾಗಿ ಪಾರಾಗಲಾರದಂತಿದ್ದವು. ಇವುಗಳಿಗೆ ಹುಟ್ಟಿದ ಮರಿಗಳಿಗೂ ಕೇವಲ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವನ್ನು ಮಾತ್ರ ನೀಡಲಾಯಿತು. ಇನ್ನೂ ಅಚ್ಚರಿ ಎಂದರೆ ಈ ಮರಿಗಳೂ ಸ್ಥೂಲದೇಹವನ್ನೇ ಹೊಂದಿದ್ದವು. ಅಲ್ಲದೇ ಈ ಸ್ಥೂಲದೇಹಿ ಮರಿಗಳಲ್ಲಿ ಇನ್ಸುಲಿನ್ ತಾಳಿಕೊಳ್ಳುವ ಸಾಮರ್ಥ್ಯ ಮತ್ತು ಇತರ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಲೆಹಾಕಿ ವಿಶ್ಲೇಷಿಸಲಾಯಿತು.

Do Obese Mothers Affect 3 Generations?

ಎಲ್ಲಾ ಅಂಕಿಅಂಶಗಳ ಸಮಗ್ರ ವಿಶ್ಲೇಷಣೆಯ ಬಳಿಕ ಈ ಮಾಹಿತಿಯನ್ನು ಲಭ್ಯವಿರುವ ರೋಗಿಗಳ ಆರೋಗ್ಯದ ಮಾಹಿತಿಯೊಂದಿಗೆ ಸಮೀಕರಿಸಿ ನೋಡಲಾಗಿ ತಾಯಿಯ ಸ್ಥೂಲದೇಹಕ್ಕೆ ಕಾರಣವಾಗುವ ವಂಶವಾಹಿನಿಯ ಸಂದೇಶ ಕನಿಷ್ಟ ಮೂರು ತಲೆಮಾರುಗಳಿಗೆ ರವಾನೆಯಾಗುತ್ತದೆ ಎಂದು ದೃಢೀಕರಿಸಲಾಯಿತು.

Do Obese Mothers Affect 3 Generations?

ಆದ್ದರಿಂದ ಸ್ಥೂಲದೇಹ ಹೊಂದಿರುವ ಮಹಿಳೆಯರು ತಮ್ಮ ಸ್ಥೂಲದೇಹದಿಂದ ಹೊರಬರಲು ಪ್ರಾರಂಭದಿಂದಲೇ ಅಗತ್ಯಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ತಮ್ಮ ಇಷ್ಟದ ಆಹಾರಗಳ ಮೇಲಿನ ವ್ಯಾಮೋಹವನ್ನು ಮೊದಲಾಗಿ ಮತ್ತು ಅನಿವಾರ್ಯವಾಗಿ ತ್ಯಜಿಸಬೇಕಾಗಿ ಬರುತ್ತದೆ. ಇದು ನಿಮಗಾಗಿ ಅಲ್ಲದಿದ್ದರೂ ನಿಮಗೆ ಹುಟ್ಟಲಿರುವ ಮಕ್ಕಳು ಮತ್ತು ಮೊಮ್ಮಕ್ಕಳಿಗಾದರೂ ಅಗತ್ಯ ಎಂದು ಕಂಡುಕೊಂಡರೆ ಸಾಕು.

English summary

Do Obese Mothers Affect 3 Generations?

A new study claims that pregnant women who consume sugary foods and fatty foods may have higher chances of becoming obese and this could affect the next three generations. The children and grandchildren of an obese mother could be predisposed to several metabolic problems according to this study. In some cases, even if the children of the next three generations try to consume healthy foods and lead a healthy lifestyle, it would be tough for them to overcome the genetic predisposition.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more