For Quick Alerts
ALLOW NOTIFICATIONS  
For Daily Alerts

ಋತುಸ್ರಾವ ಅವಧಿಯಲ್ಲಿ ಮಿಲನ ಎಷ್ಟು ಸುರಕ್ಷಿತ?

ವೈದ್ಯರು ಸೂಚಿಸಿದ ಈ ’ಸುರಕ್ಷಾ ಅವಧಿ’ಯನ್ನು ಹೆಚ್ಚಿನವರು ಸುರಕ್ಷಿತವೇ ಎಂದು ನಂಬಿಕೊಂಡು ಬಂದಿದ್ದರು. ಆದರೆ ಈ ವಿಧಾನ ನಿಜಕ್ಕೂ ಎಷ್ಟು ಸುರಕ್ಷಿತ? ಈ ಅವಧಿಯಲ್ಲಿನ ಸಮಾಮಗದ ಮೂಲಕ ಗರ್ಭ ಧರಿಸಲು ಸಾಧ್ಯವೇ? ಮುಂದೆ ಓದಿ...

By Arshad
|

ಇಂದಿನ ದಿನಗಳಲ್ಲಿ ಅನೈಚ್ಛಿಕ ಗರ್ಭವನ್ನು ತಡೆಯುವ ಹಲವಾರು ಸಾಧನಗಳು ಹಾಗೂ ವಿಧಾನಗಳಿವೆ. ವೈದ್ಯರು ಸೂಚಿಸುವ ಒಂದು ವಿಧಾನವೆಂದರೆ 'ಸುರಕ್ಷಾ ಅವಧಿ' ಅಂದರೆ ಮುಟ್ಟಿನ ದಿನದ ಇಪ್ಪತ್ತಾರನೆಯ ದಿನದಿಂದ ಮೂವತ್ತೆರಡನೆಯ ದಿನ ಒಟ್ಟು ಏಳು ದಿನಗಳು ಸುರಕ್ಷಿತ ಎಂದು ವೈದ್ಯವಿಜ್ಞಾನದಲ್ಲಿ ಪರಿಗಣಿಸಲಾಗುತ್ತದೆ.

ಇಂದು ಈ ಅವಧಿಯನ್ನು ನಿರ್ಧರಿಸಲು ಆನ್ಲೈನ್ ಕ್ಯಾಲ್ಕುಲೇಟರುಗಳೂ, ಆಪ್ ಗಳೂ ಲಭ್ಯವಿವೆ. ಮಾಸಿಕ ದಿನಗಳು ಪ್ರತಿತಿಂಗಳೂ ನಿಯಮಿತವಾಗಿ ಆಗಮಿಸುವುದು ಆರೋಗ್ಯವಂತ ಮತ್ತು ಗರ್ಭವತಿಯಲ್ಲದ ಮಹಿಳೆಯರ ಲಕ್ಷಣವಾಗಿದ್ದು ಇದು ಜರುಗದೇ ಇದ್ದರೆ ಗರ್ಭ ಧರಿಸಿರುವ ಸಾಧ್ಯತೆ ದಟ್ಟವಾಗುತ್ತಾ ಹೋಗುತ್ತದೆ. ಗರ್ಭಧಾರಣೆ ಪರೀಕ್ಷೆಗಳನ್ನು, ಮನೆಯಲ್ಲಿಯೇ ಮಾಡಬಹುದು!

ಮಾಸಿಕ ಮುಟ್ಟು ಅಥವಾ ಋತುಸ್ರಾವ ಪ್ರತಿ ಹೆಣ್ಣಿನ ದೇಹದಲ್ಲಿ ಆಗುವ ನೈಸರ್ಗಿಕ ಕ್ರಿಯೆಯಾಗಿದ್ದು ಋತುಮತಿಯಾದ ಬಳಿಕ ರಜೋನಿವೃತ್ತಿ ಹೊಂದುವವರೆಗೂ ಗರ್ಭಾವಸ್ಥೆಯನ್ನು ಹೊರತುಪಡಿಸಿ ಇತರ ಎಲ್ಲಾ ತಿಂಗಳು ನಡೆಯುತ್ತದೆ. ಗರ್ಭಾಶಯದಲ್ಲಿ ಬಿಡುಗಡೆಯಾಗುವ ಅಂಡಾಣು ಒಂದು ತಿಂಗಳ ಕಾಲ ವೀರ್ಯಾಣುವಿಗಾಗಿ ಕಾಯುತ್ತದೆ. ನೀವು ಗರ್ಭಿಣಿ ಎಂದು ತೋರಿಸುವ ಕೆಲವೊಂದು ಲಕ್ಷಣಗಳು

ಇದು ಸಾಧ್ಯವಾಗದೇ ಇದ್ದಾಗ ಹೊಸ ಅಂಡಾಣುವಿಗೆ ಜಾಗ ನೀಡಲು ರಕ್ತದ ಮೂಲಕ ಹೊರಹೋಗಬೇಕು. ಈ ಹೊರಹೋಗುವಿಕೆಯ ಕಾಲವೇ ಮುಟ್ಟಿನ ದಿನಗಳು. ಈ ಅವಧಿಯಲ್ಲಿ ರಕ್ತಸ್ರಾವ, ಕೆಳಹೊಟ್ಟೆಯಲ್ಲಿ ನೋವು, ಸೆಡೆತ ಮೊದಲಾದ ದೈಹಿಕ ತೊಂದರೆಗಳ ಜೊತೆಜೊತೆಗೇ ಸಿಡಿಮಿಡಿ, ಸಿಟ್ಟು, ಅಸಹನೆ, ಉರಿದೇಳುವುದು, ಶೀಘ್ರವಾಗಿ ಕೋಪಗೊಳ್ಳುವುದು ಮೊದಲಾದ ಮಾನಸಿಕ ಕಿರಿಕಿರಿಗಳನ್ನೂ ಅನುಭವಿಸಬೇಕಾಗಿ ಬರುತ್ತದೆ. ಈ ಸ್ಟೆಪ್ಸ್ ಬಳಿಕವಷ್ಟೇ ಗರ್ಭಿಣಿ ಎಂದು ಖಚಿತಪಡಿಸಬಹುದು

ಇದುವರೆಗೂ ವೈದ್ಯರು ಸೂಚಿಸಿದ ಈ 'ಸುರಕ್ಷಾ ಅವಧಿ'ಯನ್ನು ಹೆಚ್ಚಿನವರು ಸುರಕ್ಷಿತವೇ ಎಂದು ನಂಬಿಕೊಂಡು ಬಂದಿದ್ದರು. ಆದರೆ ಈ ವಿಧಾನ ನಿಜಕ್ಕೂ ಎಷ್ಟು ಸುರಕ್ಷಿತ? ಈ ಅವಧಿಯಲ್ಲಿನ ಸಮಾಮಗದ ಮೂಲಕ ಗರ್ಭ ಧರಿಸಲು ಸಾಧ್ಯವೇ? ಬನ್ನಿ, ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ನೋಡೋಣ:

ಸುರಕ್ಷಾ ಅವಧಿ ಎಂದರೇನು?

ಸುರಕ್ಷಾ ಅವಧಿ ಎಂದರೇನು?

ಅಂಡಾಣು ಫಲಿತಗೊಳ್ಳದೇ ಇದ್ದಾಗ ದೇಹದಿಂದ ಹೊರಬೀಳುತ್ತದೆ. ಪ್ರತಿ ಮಹಿಳೆಯ ಮಾಸಿಕ ಋತುಚಕ್ರ ಇಪ್ಪತ್ತಾರು ದಿನಗಳಿಂದ ಮೂವತ್ತೆರಡು ದಿನಗಳ ಅವಧಿಯಲ್ಲಿ ನಡೆಯುತ್ತದೆ. ಈ ಪ್ರಕಾರ ಮುಂದಿನ ಚಕ್ರ ಯಾವ ದಿನ ಬರುತ್ತದೆ ಎಂದು ಸುಲಭವಾಗಿ ಲೆಕ್ಕ ಹಾಕಬಹುದು.

ಸುರಕ್ಷಾ ಅವಧಿ ಎಂದರೇನು?

ಸುರಕ್ಷಾ ಅವಧಿ ಎಂದರೇನು?

ಈ ದಿನ ಯಾವುದು ಎಂದು ಕಂಡುಕೊಂಡರೆ ಈ ದಿನವನ್ನು ಹಿಡಿದು ಮುಂದಿನ ಏಳು ದಿನಗಳ ಅವಧಿಯನ್ನು ಸುರಕ್ಷಿತಾ ಸಮಯವೆಂದು ಪರಿಗಣಿಸಬಹುದು. ಈ ಸಮಯದಲ್ಲಿ ಹಳೆಯ ಅಂಡಾಣು ದೇಹದಿಂದ ಹೊರಹೋಗಿರುತ್ತದೆ ಹಾಗೂ ಹೊಸ ಅಂಡಾಣು ಬಿಡುಗಡೆಗೊಂಡಿದ್ದರೂ ಇನ್ನೂ ಗರ್ಭನಾಳದಲ್ಲಿ ಸರಿಯಾಗಿ ಸ್ಥಿತಗೊಂಡಿರುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಅಸುರಕ್ಷಿತ ಸಮಾಗಮದಿಂದ ಗರ್ಭ ಧರಿಸುವ ಸಾಧ್ಯತೆ ಕಡಿಮೆ.

ಸಂಪೂರ್ಣ ಸುರಕ್ಷಿತವಲ್ಲ

ಸಂಪೂರ್ಣ ಸುರಕ್ಷಿತವಲ್ಲ

ಆದರೆ ಕೆಲವು ಸಂದರ್ಭಗಳಲ್ಲಿ ವೈದ್ಯರು ಕಂಡುಕೊಂಡಂತೆ ಈ ಅವಧಿಯಲ್ಲಿ ಸಮಾಗಮ ನಡೆಸಿದ ದಂಪತಿಗಳಲ್ಲಿಯೂ ಗರ್ಭಾಂಕುರವಾಗಿರುವುದು ಕಂಡುಬಂದಿದೆ. ಇದಕ್ಕೆ ಕಾರಣವೇನು ಗೊತ್ತೇ?

ಸಂಪೂರ್ಣ ಸುರಕ್ಷಿತವಲ್ಲ

ಸಂಪೂರ್ಣ ಸುರಕ್ಷಿತವಲ್ಲ

ಪುರುಷರ ವೀರ್ಯಾಣು ಸೂಕ್ತವಾದ ಸ್ಥಳದಲ್ಲಿ ಸುಮಾರು ಐದು ದಿನಗಳವರೆಗೂ ಜೀವಂತವಾಗಿರಬಲ್ಲುದು. ಅಂದರೆ ಅಸುರಕ್ಷಿತ ಸಮಾಗಮದ ಮೂಲಕ ಅಂಡನಾಳಗಳ ಒಳಗೆ ಆರಾಮಮಾಗಿ ಪವಡಿಸಿದ್ದ ವೀರ್ಯಾಣು ಐದನೆಯ ದಿನ ಆಗಮಿಸಿದ ಅಂಡಾಣುವಿನೊಡಗೆ ಕೂಡಿಬಿಡುತ್ತದೆ!

ಹಾಗಾದರೆ ಈ ವಿಧಾನ ಸುರಕ್ಷಿತವಲ್ಲವೇ?

ಹಾಗಾದರೆ ಈ ವಿಧಾನ ಸುರಕ್ಷಿತವಲ್ಲವೇ?

ವೈದ್ಯರೇ ಸೂಚಿಸಿದ ಈ ವಿಧಾನವೂ ಈಗ ಸಂಪೂರ್ಣವಾಗಿ ಸುರಕ್ಷಿತವಲ್ಲ ಎಂದು ಪರಿಗಣಿಸಬಹುದು. ಏಕೆಂದರೆ ವೀರ್ಯಾಣು ಮುಂದಿನ ಐದು ದಿನಗಳವರೆಗೂ ಸಕ್ಷಮವಾಗಿದ್ದು ಫಲನೀಡಲು ಸಾಧ್ಯವಿರುವ ಕಾರಣ ಎಷ್ಟೋ ದಂಪತಿಗಳಿಗೆ ಇನ್ನೊಂದು ಸಂತಾನ ಲಭ್ಯವಾಗಿದೆ.

ಆದರೆ ಎಲ್ಲರಿಗೂ ಅಲ್ಲ!

ಆದರೆ ಎಲ್ಲರಿಗೂ ಅಲ್ಲ!

ಆದರೆ ಈ ಬಗ್ಗೆ ನಡೆಸಿದ ಸಂಶೋಧನೆಗಳು ಮಿಶ್ರ ಫಲ ನೀಡಿವೆ. ಈ ಅವಧಿಯಲ್ಲಿ ಗರ್ಭ ಧರಿಸಿರುವ ಮಹಿಳೆಯರ ಸಂಖ್ಯೆ ತೀರಾ ಕಡಿಮೆ ಇದೆ. ಏಕೆಂದರೆ ಗರ್ಭ ಧರಿಸಲು ಕೇವಲ ಇದೊಂದೇ ಕಾರಣವಲ್ಲ, ಬದಲಿಗೆ ಮಹಿಳೆಯ ಆರೋಗ್ಯದ ಹಲವಾರು ಇತರ ಕಾರಣಗಳೂ ಇವೆ.

ಆದರೆ ಎಲ್ಲರಿಗೂ ಅಲ್ಲ!

ಆದರೆ ಎಲ್ಲರಿಗೂ ಅಲ್ಲ!

ನಡುವಯಸ್ಸು ದಾಟಿದ ಬಳಿಕ ಮಾಸಿಕ ದಿನಗಳ ಅವಧಿಯಲ್ಲಿ ಏರುಪೇರಾಗುವುದೂ ಇದೆ. ಆಗ ತಪ್ಪು ಲೆಕ್ಕ ಹಾಕಿದ ಪರಿಣಾಮವಾಗಿ ಅಸುರಕ್ಷಿತ ದಿನವನ್ನು ಸುರಕ್ಷಿತ ದಿನವೆಂದು ತಪ್ಪಾಗಿ ತಿಳಿದು ಮುಂದುವರೆಯುವ ಮೂಲಕವೂ ಗರ್ಭ ಧರಿಸುವ ಸಾಧ್ಯತೆ ಇದೆ. ಆದ್ದರಿಂದ ಗರ್ಭ ಬೇಡದೇ ಇದ್ದಾಗ ಈ ಅವಧಿಯಲ್ಲಿಯೂ ಸುರಕ್ಷಾ ವಿಧಾನಗಳಲ್ಲೊಂದನ್ನು ಅನುಸರಿಸುವಂತೆ ತಜ್ಞರು ಸೂಚಿಸುತ್ತಾರೆ.

English summary

Can A Woman Actually Get Pregnant During Her Periods?

Surely, a lot women, whether they are trying to have a baby or not, would be wondering if it is possible to get pregnant when they are on their periods, right?Well, as we know, for sexually active women, their periods can be a sure-fire sign that they are not pregnant.
X
Desktop Bottom Promotion