For Quick Alerts
ALLOW NOTIFICATIONS  
For Daily Alerts

ಮಗುವಿಗೆ ಹಾಲುಣಿಸಿದ ನಂತರವೂ ಸ್ತನ ಗಾತ್ರವನ್ನು ಕಾಯ್ದುಕೊಳ್ಳುವುದು ಹೇಗೆ?

By Super
|

ಒಂದು ಮಗುವಿನ ತಾಯಿಯಾಗುವುದು ಪ್ರತಿ ಹೆಣ್ಣಿನ ಕನಸು. ಗರ್ಭಾವಸ್ಥೆಯಲ್ಲಿ ಹೆಣ್ಣಿನ ದೇಹ ಹತ್ತು ಹಲವು ಬದಲಾವಣೆಗಳಿಗೆ ಒಳಗಾಗುತ್ತದೆ. ಒಟ್ಟಾರೆ ಇಡಿಯ ದೇಹ ಮುಂಬರುವ ಮಗುವಿನ ಬೆಳವಣಿಗೆಗಾಗಿ ಸಜ್ಜುಗೊಳ್ಳುತ್ತದೆ. ಅತಿಹೆಚ್ಚು ಬದಲಾವಣೆಗೊಳಪಡುವ ಅಂಗಗಳೆಂದರೆ ಹೊಟ್ಟೆ ನಿತಂಬ ಮತ್ತು ಸ್ತನಗಳು. ಕೆಲವು ಬದಲಾವಣೆಗಳಲ್ಲಿ ಸ್ವಲ್ಪ ನೋವು ಅನ್ನಿಸಿದರೆ ಇನ್ನುಳಿದವು ಗಮನಕ್ಕೇ ಬರದಂತಿರುತ್ತವೆ. ಪ್ರತಿ ಬದಲಾವಣೆಗೂ ಪ್ರತ್ಯೇಕವಾದ ಕಾರಣಗಳಿರುತ್ತವೆ.

ತಿಂಗಳುಗಳು ಕಳೆಯುತ್ತಿದ್ದಂತೆ ದೇಹ ಪುಷ್ಟಿಗೊಂಡು ಬಣ್ಣ ರಂಗೇರುತ್ತದೆ. ಜೊತೆ ಜೊತೆಗೇ ಹೆರಿಗೆಯ ದಿನ ಹತ್ತಿರಾಗುತ್ತಿದ್ದಂತೆ ಮೈಕೈ ನೋವೂ ಆವರಿಸಿಕೊಳ್ಳುತ್ತದೆ. ಸ್ತನಗಳಲ್ಲಿ ಹಾಲು ತುಂಬಿಕೊಳ್ಳಲು ತೊಡಗಿ ಹೆರಿಗೆಯ ನಂತರ ಸ್ತನ್ಯಪಾನಕ್ಕೆ ಸಜ್ಜುಗೊಳಿಸುತ್ತದೆ. ಜನನದ ಬಳಿಕ ಮಗುವಿಗೆ ಅತ್ಯಂತ ಪೌಷ್ಟಿಕ ಆಹಾರವೆಂದರೆ ತಾಯಿಹಾಲಾಗಿದೆ. ಮುಂದಿನ ಒಂದು ವರ್ಷದವರೆಗೂ ತಾಯಿಹಾಲನ್ನು ನಿಯಮಿತವಾಗಿ ಕುಡಿಸಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಈ ಅವಧಿಯ ಬಳಿಕ ಸ್ತನಗಳು ತಮ್ಮ ಮೊದಲಿನ ಗಾತ್ರವನ್ನು ಕಳೆದುಕೊಂಡು ನಿಸ್ತೇಜವಾಗಿರುವುದನ್ನು ಹೆಚ್ಚಿನ ತಾಯಂದಿರು ಇಷ್ಟಪಡುವುದಿಲ್ಲ.

ಕೆಲವು ಸೌಂದರ್ಯೋಪಾಸಕ ತಾಯಂದಿರಂತೂ ತಮ್ಮ ಶರೀರದ ಗಾತ್ರ ಬದಲಾವಣೆಯಾಗುವುದನ್ನು ಸಹಿಸದೇ ಮಗುವಿಗೆ ಸ್ತನ್ಯಪಾನವನ್ನೇ ಮಾಡಿಸದೆ ಮಾತೃತ್ವಕ್ಕೇ ಕಳಂಕ ತರುತ್ತಾರೆ. ಆದರೆ ಹೆಚ್ಚಿನವರು ತಮ್ಮ ಮಗು ಹಾಲೂ ಕುಡಿಯಬೇಕು, ತಮ್ಮ ಶರೀರವೂ ಮೊದಲಿನಂತಾಗಬೇಕು, ಇದಕ್ಕೇನಾದರೂ ಉಪಾಯವಿದೆಯೇ ಎಂದೇ ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರವಾಗಿ ನೈಸರ್ಗಿಕವಾದ ಉಪಾಯಗಳನ್ನು ನೀಡಲಾಗಿದೆ. ಹೊಸ ತಾಯಂದಿರು ಮಾಡುವ 6 ದೊಡ್ಡ ತಪ್ಪುಗಳು

ಅಗತ್ಯವಾದ ಕೊಬ್ಬಿನ ಆಹಾರಗಳನ್ನು ಸೇವಿಸಿ

ಅಗತ್ಯವಾದ ಕೊಬ್ಬಿನ ಆಹಾರಗಳನ್ನು ಸೇವಿಸಿ

ಹೆಚ್ಚಿನ ತಾಯಂದಿರು ಹೆರಿಗೆಯ ಬಳಿಕ ತಮ್ಮ ತೂಕ ಜಾಸ್ತಿಯಾಗಬಹುದೆಂಬ ಭಯದಿಂದ ಅಗತ್ಯಪ್ರಮಾಣದ ಕೊಬ್ಬಿನ ಆಹಾರಗಳನ್ನು ಸ್ವೀಕರಿಸುವುದೇ ಇಲ್ಲ! ಇದು ಸ್ತನಗಳು ಜೋತುಬೀಳಲು ಪ್ರಮುಖ ಕಾರಣವಾಗಿದೆ. ಏಕೆಂದರೆ ಕೊಬ್ಬಿನ ಅಂಶ ಕಡಿಮೆಯಾದರೆ ಸ್ತನಗಳ ಸುತ್ತಲ ಚರ್ಮದಡಿಯೂ ಕೊಬ್ಬು ಕಡಿಮೆಯಾಗಿ ಚರ್ಮ ಸಡಿಲಗೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆ ಸ್ತನ್ಯಪಾನದ ವೇಳೆ ಸೆಳೆತದಿಂದಲೂ ಚರ್ಮದ ಸ್ಥಿತಿಸ್ಥಾಪಕತ್ವ ಕಡಿಮೆಯಾಗಿ ಕೆಳಭಾಗದ ಚರ್ಮ ಅಗಲವಾಗುತ್ತದೆ. ಇದಕ್ಕೆ ಕಾರಣ ಸ್ತನಗಳ ಜೀವಕೋಶಗಳ ಪೊರೆಗಳಿಗೆ ಅಗತ್ಯವಾದ ಕೊಬ್ಬಿನಂಶ ಸಿಗದೇ ಇರುವುದು. ಪರಿಣಾಮವಾಗಿ ಚರ್ಮ ಚಪಾತಿಯ ಹಿಟ್ಟು ಲಟ್ಟಿಸಿದಾಗ ಅಗಲವಾಗುವ ಚಪಾತಿಯಂತೆ ತೆಳುವಾಗಿ ಅಗಲವಾಗುತ್ತಾ ಹೋಗುತ್ತದೆ.

ಜೊತೆಗೇ ಹೆಚ್ಚು ಅಗಲವಾದ ಸ್ಥಳದಲ್ಲಿ ಚರ್ಮದ ಬಣ್ಣ ಬಿಳಿಚಿಕೊಂಡು ಸೆಳೆತದ ಗುರುತನ್ನು ಬಿಡುತ್ತವೆ (stretch marks). ಇದನ್ನು ತಪ್ಪಿಸಲು ಕಳೆದಿದ್ದ ಕೊಬ್ಬನ್ನು ಆಹಾರದ ಮೂಲಕ ಸೇವಿಸುವುದು ಅಗತ್ಯವಾಗಿದೆ. ಸ್ತನ್ಯಪಾನದ ಅವಧಿಯಲ್ಲಿ ಸೂಕ್ತ ಪ್ರಮಾಣದಲ್ಲಿ ಉತ್ತಮ ಕೊಬ್ಬಿನ ಆಹಾರವನ್ನು ಸೇವಿಸುವುದು ಅಗತ್ಯ. ಇದರಿಂದ ಸ್ತನಗಳ ಜೀವಕೋಶಗಳು ಕೊಬ್ಬಿನಿಂದ ತುಂಬಿಕೊಂಡು ಮೊದಲಿನ ಸೌಂದರ್ಯ ಪಡೆಯಲು ಸಾಧ್ಯವಾಗುತ್ತದೆ. ಚರ್ಮದ ಸೆಳೆತವೂ ಕಡಿಮೆಯಾಗಿ ಜೋಲುಬೀಳುವುದು ತಪ್ಪುತ್ತದೆ. ಸಂಪೂರ್ಣವಾದ ಕೊಬ್ಬು (saturated fat) ಹೊಂದಿರುವ ಹಾಲು, ಮೊಟ್ಟೆ, ಮಾಂಸ, ಮೀನು ಮೊದಲಾದವುಗಳಲ್ಲಿ ಉತ್ತಮ ಕೊಬ್ಬಿನ ಅಂಶವಿದ್ದು ನಿಮ್ಮ ದೇಹದ ಗಾತ್ರವನ್ನು ಮೊದಲಿನಂತಿರಿಸಲು ಸಹಕರಿಸುತ್ತವೆ.

ಮಗುವಿಗೆ ತಿಂಗಳುಗಳಿಗನುಸಾರವಾಗಿ ಅಗತ್ಯವಿದ್ದಷ್ಟೇ ಹಾಲು ಕುಡಿಸಿ

ಮಗುವಿಗೆ ತಿಂಗಳುಗಳಿಗನುಸಾರವಾಗಿ ಅಗತ್ಯವಿದ್ದಷ್ಟೇ ಹಾಲು ಕುಡಿಸಿ

ಮಗುವಿಗೆ ಎರಡು ವರ್ಷಗಳಾಗುವವರೆಗೂ ತಾಯಿಹಾಲನ್ನು ಕುಡಿಸಲು ವೈದ್ಯರು ಹೇಳುತ್ತಾರೆ. ಇದರ ಅರ್ಥ ತಾಯಿಹಾಲನ್ನು ಮಾತ್ರ ಕುಡಿಸಿ ಎಂದರ್ಥವಲ್ಲ. ಮಗುವಿಗೆ ಕೆಲವು ತಿಂಗಳಾಗುತ್ತಾ ಬಂದಂತೆ ಮಗು ಜೀರ್ಣೀಸಿಕೊಳ್ಳಬಲ್ಲ ಇತರ ಆಹಾರಗಳನ್ನು ಸಹಾ ನೀಡಿ ಅಷ್ಟುಪ್ರಮಾಣದ ತಾಯಿಹಾಲನ್ನು ಕುಡಿಸದಿರುವುದು ಜಾಣತನ. ಸುಮಾರು ಏಳರಿಂದ ಎಂಟು ತಿಂಗಳ ವಯಸ್ಸಿನಲ್ಲಿ ಮಕ್ಕಳು ಮೆದುವಾದ, ಹಿಟ್ಟು ಮತ್ತು ಹಸುವಿನ ಹಾಲಿನ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಪಡೆಯುತ್ತವೆ. ಆ ಪ್ರಕಾರ ಅವರ ಆಹಾರದಲ್ಲಿ ಮೆದುಆಹಾರಗಳನ್ನು ಹೆಚ್ಚಿಸುತ್ತಾ ಸ್ತನ್ಯಪಾನವನ್ನು ನಿಧಾನವಾಗಿ ಕಡಿಮೆಗೊಳಿಸಿ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಎರಡು ವರ್ಷಗಳವರೆಗೂ ಸ್ತನ್ಯಪಾನ ಮಗುವಿಗೆ ಆರೋಗ್ಯಕರವಾಗಿದೆ. ಆ ಪ್ರಕಾರ ಎಂಟನೆಯ ತಿಂಗಳಿಂದ ಸ್ತನ್ಯಪಾನ ಮಾಡಿಸುವ ವೇಳೆಯನ್ನು ಕಡಿಮೆಗೊಳಿಸುತ್ತಾ, ಬಳಿಕ ದಿನಕ್ಕೆರಡು ಬಾರಿಯಿಂದ ದಿನಕ್ಕೊಂದು ಬಾರಿಯಂತೆ, ಬಳಿಕ ನಿಧಾನವಾಗಿ ಎರಡು ದಿನಗಳಿಗೊಮ್ಮೆ, ಬಳಿಕ ಮೂರು ದಿನಗಳಿಗೊಮ್ಮೆಯಂತೆ ಎರಡು ವರ್ಷಗಳವರೆಗೆ ನಿಧಾನವಾಗಿ ಕಡಿಮೆಯಾಗಿಸುತ್ತಾ ಬನ್ನಿ.

ಸ್ತನ್ಯಪಾನ ಮಾಡಿಸುವಾಗ ಕೈಗಳ ಆಧಾರ ನೀಡಿ

ಸ್ತನ್ಯಪಾನ ಮಾಡಿಸುವಾಗ ಕೈಗಳ ಆಧಾರ ನೀಡಿ

ಸ್ತನ್ಯಪಾನದ ಹೊತ್ತಿನಲ್ಲಿ ಕಂಚುಕಗಳ ಆಧಾರವಿಲ್ಲದಿರುವುದರಿಂದ ಮತ್ತು ಮಗುವಿನ ಹಾಲು ಕುಡಿಯುವ ರಭಸದಲ್ಲಿ ಹೆಚ್ಚು ನೆಲದೆಡೆಗೆ ಸೆಳೆಯಲ್ಪಡುವುದರಿಂದ ನಿಧಾನವಾಗಿ ಜೋಲುಬೀಳುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಇದನ್ನು ತಡೆಯಲು ಕೈಯನ್ನು ಉಪಯೋಗಿಸಿ ಆಧಾರ ನೀಡುವುದರಿಂದ ಈ ಸಾಧ್ಯತೆಯನ್ನು ಕನಿಷ್ಟಗೊಳಿಸಬಹುದು. ಇದಕ್ಕಾಗಿ ಮೊದಲು ಬೆನ್ನಿಗೆ ಆಧಾರ ನೀಡುವ ಸ್ಥಳದಲ್ಲಿ ಆಯಾಸವಾಗದಿರುವ ಭಂಗಿಯಲ್ಲಿ ಕುಳಿತುಕೊಳ್ಳಿ. ಒಂದು ವೇಳೆ ಎಡಸ್ತನದಿಂದ ಮಗುವಿಗೆ ಹಾಲು ಕುಡಿಸುವುದಾದರೆ ನಿಮ್ಮ ಎಡಗೈಯ ಮೊಣಕೈ ಮಡಿಕೆಯ ಮೇಲೆ ಮಗುವಿನ ತಲೆಯ ಭಾರ ಬೀಳುವಂತೆ ಮಲಗಿಸಿ ಎಡಗೈ ಮಗುವಿನ ಬೆನ್ನಿನ ಕೆಳಗಿನಿಂದ ಪೂರ್ಣವಾಗಿ ಆಧಾರ ನೀಡುವಂತಿರಲಿ. ಈಗ ಬಲಗೈಯಿಂದ ಎಡಸ್ತನವನ್ನು ಕೆಳಗಿನಿಂದ ಎತ್ತಿ ಹಿಡಿದು ಇದೇ ಭಂಗಿಯಲ್ಲಿ ಮಗುವಿಗೆ ಹಾಲೂಣಿಸಿರಿ. ಇದರಿಂದ ನಿಮ್ಮ ಸ್ತನಗಳಿಗೆ ಯಾವುದೇ ಒತ್ತಡ ಬೀಳದೇ ಸೆಳೆತ ಕಡಿಮೆಯಾಗುತ್ತದೆ. ಇದೇ ರೀತಿ ಬಲಸ್ತನಕ್ಕೂ ಪುನರಾವರ್ತಿಸಿ. ನೆನಪಿಡಿ, ಎರಡೂ ಸ್ತನಗಳಿಂದ ಸಮಾನವಾಗಿ ಮಗು ಹಾಲು ಕುಡಿಯಬೇಕು, ಇಲ್ಲದಿದ್ದರೆ ನಿಧಾನವಾಗಿ ಎರಡೂ ಸ್ತನಗಳು ಏಕರೂಪದಲ್ಲಿರುವುದೇ ಕೊಂಚ ವ್ಯತ್ಯಾಸಗೊಳ್ಳುತ್ತದೆ.

ಅತಿಹೆಚ್ಚು ಜೋಲುಬಿದ್ದರೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ

ಅತಿಹೆಚ್ಚು ಜೋಲುಬಿದ್ದರೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ

ಕೆಲವೊಮ್ಮೆ ಕಾಳಜಿಯ ಮತ್ತು ಮಾಹಿತಿಯ ಕೊರತೆಯಿಂದ ಸ್ತನಗಳು ಜೋತು ಬಿದ್ದರೆ ಹತಾಶರಾಗಬೇಕಾಗಿಲ್ಲ, ಇದಕ್ಕೆ ಸೌಂದರ್ಯ ಶಸ್ತ್ರಚಿಕಿತ್ಸೆ ಲಭ್ಯವಿದೆ. Mastopexy ಅಥವಾ breast lift ಎಂಬ ಸರಳ ಶಸ್ತ್ರಚಿಕಿತ್ಸೆಯಿಂದ ಸ್ತನಗಳ ಅಗಲಗೊಂಡ ಚರ್ಮ ಮತ್ತು ಅಗತ್ಯಕ್ಕಿಂತ ಹೆಚ್ಚಿರುವ ಕೊಬ್ಬಿನ ಜೀವಕೋಶಗಳನ್ನು ತೆಗೆದು ಹೆಚ್ಚಿನ ದೃಢತೆಯನ್ನು ಪಡೆಯುವಂತೆ ಮಾಡಲಾಗುತ್ತದೆ. ಜೊತೆಗೇ ಮಗುವಿನ ಚೀಪುವಿಕೆಯಿಂದ ಉದ್ದವಾಗಿದ್ದ ಮೊಲೆತೊಟ್ಟಿನ ಗಾತ್ರವನ್ನೂ ಕಿರಿದುಗೊಳಿಸಿ ಸುಂದರವಾಗುವಂತೆ ಮಾಡಲಾಗುತ್ತದೆ.

ಸ್ತನದಡಿ ಕೃತಕವಾದ ಅಂಗಾಂಶವನ್ನು ಸೇರಿಸುವುದು (breast implant)

ಸ್ತನದಡಿ ಕೃತಕವಾದ ಅಂಗಾಂಶವನ್ನು ಸೇರಿಸುವುದು (breast implant)

ಅಪರೂಪಕ್ಕೆ ಕೆಲವು ಮಹಿಳೆಯರಲ್ಲಿ ಸತತವಾದ ಸ್ತನ್ಯಪಾನದಿಂದ ಸ್ತನದ ಗಾತ್ರ ಇಲ್ಲವೇ ಇಲ್ಲ ಎನ್ನುವಷ್ಟು ಕಿರಿದಾಗಿ, ಸತತ ಚೀಪುವಿಕೆಯಿಂದ ಮೊಲೆತೊಟ್ಟುಗಳು ಬೆರಳುಗಳಂತೆ ಉದ್ದವಾಗಿ ಸಹಜ ಸೌಂದರ್ಯವನ್ನೇ ಕಳೆದುಕೊಂಡಿರುತ್ತಾರೆ. ಈ ಬೆರಳುಗಳಂತಿರುವ ತೊಟ್ಟುಗಳು ನೆಲನೋಡುವಂತೆ ಜೋಲುಬಿದ್ದಿರುವುದು ಕನಿಕರ ಮೂಡಿಸುತ್ತದೆ. ಈ ಪರಿಸ್ಥಿತಿಗೆ ಬಂದಿರುವ ಮಹಿಳೆಯರಿಗೆ Mastopexy ಚಿಕಿತ್ಸೆ ಉಪಯೋಗಕ್ಕೆ ಬರುವುದಿಲ್ಲ. ಏಕೆಂದರೆ ಇಲ್ಲಿ ಮೇಲೆಳೆದುಕೊಳ್ಳಲು ಅಂಗಾಂಶವೇ ಇರುವುದಿಲ್ಲ. ಇದಕ್ಕಾಗಿ ಕೃತಕವಾದ ಅಂಗಾಂಶವನ್ನು ಶಸ್ತ್ರಚಿಕಿತ್ಸೆಯ ಮೂಲಕ ಸ್ತನದ ಅಡಿ ಸ್ಥಾಪಿಸುವುದು ಸೂಕ್ತ ಚಿಕಿತ್ಸೆಯಾಗಿದೆ. ದೇಹಕ್ಕೆ ಯಾವುದೇ ರೀತಿಯ ಹಾನಿಯನ್ನುಂಟುಮಾಡದ ಸಿಲಿಕೋನ್ ಅಂಬ ವಸ್ತುವನ್ನು ಸ್ತನದಡಿಯ ಅಂಗಾಶದ ಗಾತ್ರದಲ್ಲಿರುವಂತೆ ತಯಾರಿಸಿ ಸ್ತನದ ಪ್ರಸ್ತುತ ಇರುವ ಅಂಗಾಂಶದಡಿ ಸ್ಥಾಪಿಸಲಾಗುತ್ತದೆ. ಇದರಿಂದ ಸ್ತನದ ಮೇಲ್ಮೈಯ ಅಂಗಾಂಶಕ್ಕೆ ಯಾವುದೇ ಘಾಸಿಯಾಗದೇ ಮೊದಲ ಸೌಂದರ್ಯ ಪಡೆಯಲು ಸಾಧ್ಯವಾಗುತ್ತದೆ. ಅಂತೆಯೇ ಎರಡನೆಯ ಹೆರಿಗೆಯ ಬಳಿಕವೂ ಕೃತಕ ಅಂಗಾಂಶವನ್ನು ನಿವಾರಿಸದೇ ಮಗುವಿನ ಸ್ತನ್ಯಪಾನ ಮಾಡಿಸಲು ಸಾಧ್ಯವಾಗುತ್ತದೆ.

ಒಂದು ವೇಳೆ ಸ್ತನಗಳು ಅತಿಹೆಚ್ಚು ಘಾಸಿಗೊಂಡು ತಮ್ಮ ಮೂಲ ಸ್ವರೂಪದ ಯಾವುದೇ ಗಾತ್ರವನ್ನು ಉಳಿಸಿಕೊಳ್ಳದೇ ನೆಟ್ಟ ನೇರ ಪಾತಾಳಕ್ಕಿಳಿಯುತ್ತಿರುವಂತೆ ಕಂಡುಬಂದರೆ, ಮೇಲಿನ ಎರಡೂ ಚಿಕಿತ್ಸೆಗಳ ಸಂಯೋಜನೆಯಂತಿರುವ ಲೈಪೋ ಫಿಲ್ಲಿಂಗ್ (Lypo-filling) ಎಂಬ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ.

ಲೈಪೋ ಫಿಲ್ಲಿಂಗ್ ನಿಂದ ಮೂಡುವ ಸುಂದರ ಸ್ತನಗಳು

ಲೈಪೋ ಫಿಲ್ಲಿಂಗ್ ನಿಂದ ಮೂಡುವ ಸುಂದರ ಸ್ತನಗಳು

ಈ ವಿಧಾನದಲ್ಲಿ ಸ್ತನದ ಚರ್ಮವನ್ನು ಕತ್ತರಿಸದೇ ಇಂಜೆಕ್ಷನ್ ಮೂಲಕ ಕೊಬ್ಬಿನ ಜೀವಕೋಶಗಳನ್ನು ಕೃತಕವಾಗಿ ನೆಡಲಾಗುತ್ತದೆ. ಎಲ್ಲೆಲ್ಲಿ ಕಳೆದುಕೊಂಡಿದ್ದು ಕಂಡುಬಂದಿದೆಯೋ ಅಲ್ಲೆಲ್ಲಾ ಕೃತಕವಾಗಿ ಕೊಬ್ಬಿನ ಜೀವಕೋಶಗಳನ್ನು ಸೇರಿಸುವ ಮೂಲಕ ಸ್ತನ ನಿಧಾನವಾಗಿ ಮೊದಲಿನ ಗಾತ್ರವನ್ನು ಪಡೆಯುತ್ತದೆ. ಆದರೆ ಈ ವಿಧಾನ ಅತ್ಯಂತ ನುರಿತ ವೈದ್ಯರಿಂದಲೇ ಮಾಡಿಸುವುದು ಅಗತ್ಯವಾಗಿದೆ. ಕೊಂಚ ದುಬಾರಿಯೂ ಆದ ಈ ಚಿಕಿತ್ಸೆ ಹೆಚ್ಚಿನ ಸಮಯವನ್ನೂ ತೆಗೆದುಕೊಳ್ಳುತ್ತದೆ.

ಸ್ತನದ ಗಾತ್ರ ಸರಿಪಡಿಸುವ ಶಸ್ತ್ರಚಿಕಿತ್ಸೆಯ ಮಿತಿಗಳು

ಸ್ತನದ ಗಾತ್ರ ಸರಿಪಡಿಸುವ ಶಸ್ತ್ರಚಿಕಿತ್ಸೆಯ ಮಿತಿಗಳು

ಎಲ್ಲಾ ವಿಷಯಗಳಿಗೂ ಒಂದು ಮಿತಿಯಿರುವಂತೆ ಈ ಶಸ್ತ್ರಚಿಕಿತ್ಸೆಗೂ ಒಂದು ಮಿತಿಯಿದೆ. ಈ ಕೆಳವಿನ ಮಾಹಿತಿಗಳನ್ನು ಸರಿಯಾಗಿ ಅವಲೋಕಿಸಿ ಸೂಕ್ತವಾದ ನಿರ್ಧಾರ ಕೈಗೊಳ್ಳಿ.

* ಎಷ್ಟೇ ನುರಿತ ವೈದ್ಯರಿಂದ ಚಿಕಿತ್ಸೆಪಡೆದರೂ ನಿಮ್ಮ ಸ್ತನಗಳು ಗರ್ಭಾವಸ್ಥೆಯ ಮೊದಲಿನ ಸ್ಥಿತಿಗೆ ಬರಲು ಸಾಧ್ಯವಿಲ್ಲ. ಆದರೂ ಸಾಕಷ್ಟು ಹಿಂದಿನ ಸ್ಥಿತಿಗೆ ಬರಲು ವೈದ್ಯರು ಶ್ರಮಿಸುತ್ತಾರೆ.

* ಶಸ್ತ್ರಚಿಕಿತ್ಸೆಯಾದ ಕೂಡಲೇ ಮಗುವಿಗೆ ಸ್ತನ್ಯಪಾನ ಮಾಡಿಸಬೇಡಿ.

* ನಿಮ್ಮ ಮಗು ತಾಯಿಹಾಲನ್ನು ಕುಡಿಯುವುದನ್ನು ನಿಲ್ಲಿಸಿದ ಬಳಿಕವೇ ಶಸ್ತ್ರಚಿಕಿತ್ಸೆಗೆ ಒಲವು ತೋರಿ.

English summary

ways to get your breasts in shape after breastfeeding

During pregnancy, there are a lot of changes that happen within your body. In fact, every part of your body is affected in one way or the other. Your breasts also undergo a lot of changes in the process; some are painful, and some are minor changes that cause no harm. So here are five Natural ways to restore breast shape after breastfeeding:
X
Desktop Bottom Promotion