ಬೆಳಗ್ಗಿನ ಅನಾರೋಗ್ಯ ವಿರುದ್ಧ ಹೋರಾಡಲು ಮದ್ದು

By: Hemanth P
Subscribe to Boldsky

ಇನ್ನು ಭೂಮಿಗೆ ಬರದ ಮಗುವಿನೊಂದಿಗೆ ಮಾತನಾಡುವುದು, ನಿಮ್ಮ ಸಂತೋಷವನ್ನು ಅದರೊಂದಿಗೆ ಹಂಚಿಕೊಳ್ಳುವುದು ಇದು ಗರ್ಭಧಾರಣೆ ವೇಳೆ ಮಹಿಳೆಯರು ಸಂಭ್ರಮಿಸುವ ಕ್ಷಣಗಳು. ಗರ್ಭಧಾರಣೆ ವೇಳೆ ಸಂಭ್ರಮವಿದ್ದಂತೆ ಬೆಳಗ್ಗಿನ ಕೆಲವೊಂದು ಅನಾರೋಗ್ಯಗಳು ಗರ್ಭಿಣಿ ಮಹಿಳೆಯರಿಗೆ ತುಂಬಾ ಸಂಕಷ್ಟವನ್ನುಂಟು ಮಾಡಲಿದೆ. ಬೆಳಗ್ಗಿನ ಸಮಯದಲ್ಲಿ ವಾಂತಿಯಾಗುವುದು ಗರ್ಭಧಾರಣೆಗೆ ಒಳಗೊಂಡಿರುವ ಒಂದು ವಿಷಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಧಾರಣೆಯ ಹಂತದಲ್ಲಿ ಕಡೆಗಣಿಸಬೇಕಾದ ಆಹಾರಗಳು

ವಾಂತಿ ಒಳ್ಳೆಯ ಸೂಚನೆ: ಇದರರ್ಥ ನಿಮ್ಮ ಗರ್ಭಧಾರಣೆಯ ಹಾರ್ಮೋನುಗಳು ಉನ್ನತ ಮಟ್ಟದಲ್ಲಿದ್ದು, ಇದು ನಿಮ್ಮ ಮಗುವಿನ ಬೆಳವಣಿಗೆಗೆ ನೆರವಾಗುತ್ತದೆ. ಗರ್ಭಿಣಿಯಾಗಿರುವಾಗ ನಿಮ್ಮ ದೇಹವು ಎಚ್ ಸಿಜಿ(ಹ್ಯೂಮನ್ ಕೋರಿಯಾನಿಕ್ ಗೊನೆಡೋಟ್ರೋಪಿನ್) ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ.

ಹೊಕ್ಕುಳಬಳ್ಳಿ ನಿಮ್ಮ ದೇಹದ ನಿರ್ವಹಣೆ ನಿಯಂತ್ರಿಸುವಾಗ ಎಚ್ ಸಿಜಿ ಮಟ್ಟವು ಕುಸಿದು ನಿಮ್ಮ ವಾಂತಿ ಸರಾಗವಾಗುತ್ತದೆ. ಬೆಳಗ್ಗಿನ ಅನಾರೋಗ್ಯವು ಗರ್ಭಧಾರಣೆಯ ಮೊದಲ 12ರಿಂದ 14 ವಾರ ತನಕವಿರುತ್ತದೆ. ಈ ಸಮಯದಲ್ಲಿ ನೀವು ಮತ್ತೆ ಮತ್ತೆ ವಾಂತಿ ಮಾಡಿಕೊಳ್ಳುತ್ತೀರಿ. ನೀವು ದಿನದಲ್ಲಿ ಹಲವಾರು ಬಾರಿ ವಾಂತಿ ಮಾಡಿಕೊಳ್ಳಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಾವಸ್ಥೆಯಲ್ಲಿ ಆಕ್ವಾ ಏರೋಬಿಕ್ಸ್ ಎಷ್ಟು ಸುರಕ್ಷಿತ?

ನೀವು ಗರ್ಭಿಣಿಯಾಗಿರುವಾಗ ಈಸ್ಟ್ರೊಜೆನ್ ಮತ್ತು ಥೈರಾಕ್ಸಿನ್ ಎಂಬ ಹಾರ್ಮೋನುಗಳು ಪರಿಣಾಮ ಬೀರುತ್ತದೆ ಮತ್ತು ಅದರಿಂದ ವಾಕರಿಕೆ ಉಂಟಾಗಬಹುದು. ಬೆಳಗ್ಗಿನ ಅನಾರೋಗ್ಯದ ಬಗ್ಗೆ ಹೋರಾಡಲು ಕೆಲವೊಂದು ವಿಧಾನಗಳಿವೆ. ಇದು ನಿಮ್ಮನ್ನು ನಿಯಂತ್ರಿಸುತ್ತದೆ. ಆದರೆ ಸರಿಯಾದ ವಿಶ್ರಾಂತಿ ಮತ್ತು ನಿಮ್ಮ ಆಹಾರ ಕ್ರಮದಿಂದ ಕೆಲವೊಂದು ಆಹಾರವನ್ನು ತೆಗೆದುಹಾಕುವುದರಿಂದ ನಿಮಗೆ ಒಳ್ಳೆಯದಾಗಲಿದೆ.

ಗರ್ಭಧಾರಣೆ ವೇಳೆ ಬೆಳಗ್ಗಿನ ಅನಾರೋಗ್ಯ ವಿರುದ್ಧ ಹೇಗೆ ಹೋರಾಡಬಹುದು ಎನ್ನುವುದನ್ನು ಇಲ್ಲಿ ನೋಡುವ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರಸವದ ನಂತರ ತಾಯಂದಿರು ತಿನ್ನಬಾರದ ಆಹಾರಗಳು

ಚೆನ್ನಾಗಿ ವಿಶ್ರಾಂತಿ ಮಾಡಿ

ಚೆನ್ನಾಗಿ ವಿಶ್ರಾಂತಿ ಮಾಡಿ

ನೀವು ಗರ್ಭಿಣಿಯಾಗಿರುವಾಗ ಹೆಚ್ಚು ವಿಶ್ರಾಂತಿ ಮಾಡಬೇಕು. ಇದು ನಿಮಗೆ ಮತ್ತು ಮಗುವಿಗೆ ಒಳ್ಳೆಯದು. ನೀವು ದಿನದಲ್ಲಿ ಕೂಡ ನಿದ್ರೆ ಮಾಡಬೇಕು. ನಿಮ್ಮ ಕಣ್ಣಿಗೆ ಸೂರ್ಯನ ಕಿರಣಗಳು ಬೀಳದಂತೆ ನೋಡಿಕೊಳ್ಳಬೇಕು. ಹೆರಿಗೆ ದಿಂಬು ನಿಮ್ಮ ಬೆನ್ನು ಮತ್ತು ಕುತ್ತಿಗೆಗೆ ಒಳ್ಳೆಯ ವಿಶ್ರಾಂತಿ ನೀಡಲಿದೆ. ಇದನ್ನು ನೀವು ಬಳಸಿಕೊಳ್ಳಬಹುದು. ನೀವು ಮಧ್ಯಾಹ್ನ ಊಟವಾದ ಬಳಿಕ ಮತ್ತು ರಾತ್ರಿ ಸರಿಯಾಗಿ ನಿದ್ರೆ ಮಾಡಬೇಕು. ಒತ್ತಡ ತೆಗೆದುಕೊಂಡರೆ ಅದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

ನಿಧಾನವಾಗಿ ಏದ್ದೇಳಿ

ನಿಧಾನವಾಗಿ ಏದ್ದೇಳಿ

ನೀವು ತಕ್ಷಣ ಎದ್ದೇಳುವ ಪ್ರವೃತ್ತಿಯವರಾಗಿದ್ದರೆ ಗರ್ಭಧಾರಣೆ ವೇಳೆ ಇದನ್ನು ಕಡೆಗಣಿಸಿ. ನಿಮ್ಮ ದೇಹಕ್ಕೆ ಏಳಲು ಮತ್ತು ಚಲಿಸಲು ಹೆಚ್ಚಿನ ಸಮಯ ನೀಡಿ. ಯಾವುದರಾದರೂ ನೆರವು ಪಡೆದು ಎದ್ದೇಳಿ. ನಿಮ್ಮೊಳಗೆ ಮಗು ಇದೆ. ಮಗುವಿಗೆ ಯಾವುದೇ ತಳಮಳವಾಗದಂತೆ ನೋಡಿಕೊಳ್ಳಿ.

ನಿಮಗೆ ಹೊಂದಿಕೊಳ್ಳುವ ಆಹಾರ

ನಿಮಗೆ ಹೊಂದಿಕೊಳ್ಳುವ ಆಹಾರ

ಈ ಸಮಯದಲ್ಲಿ ಬೆಳಗ್ಗಿನ ಅನಾರೋಗ್ಯ ತಪ್ಪಿಸಲು ಕೆಫಿನ್ ಸೇವನೆ ಕಡೆಗಣಿಸಿ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಕೆಟ್ಟದು. ನಿಮ್ಮ ಆರೋಗ್ಯಕ್ಕೆ ಹಾನಿಕಾರವಾಗಬಲ್ಲ ಕೊಬ್ಬಿನ ಅಥವಾ ಮಸಾಲೆಯುಕ್ತ ಆಹಾರ ತ್ಯಜಿಸಬೇಕು. ನಿಮಗೆ ಹೊಂದಿಕೊಳ್ಳುವಂತಹ ಆರೋಗ್ಯಕರ ಆಹಾರದ ಸಣ್ಣ ಪ್ರಮಾಣ ತಿನ್ನಿ. ಈ ಸಮಯದಲ್ಲಿ ನಿಮಗೆ ಕೆಲವೊಂದು ಆಹಾರದ ವಾಸನೆ ಹಿಡಿಸದೆ ಇರಬಹುದು. ಇದನ್ನು ಕಡೆಗಣಿಸಿ! ಪೌಷ್ಠಿಕಾಂಶದಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರ ಸೇವಿಸಿ. ನಿಮ್ಮ ಹೊಟ್ಟೆ ತುಂಬಾ ದೀರ್ಘ ಕಾಲದವರೆಗೆ ಖಾಲಿ ಇಡಬೇಡಿ. ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡರೆ ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ದೈಹಿಕವಾಗಿ ಚಟುವಟಿಕೆಯಿಂದ ಇರಿ

ದೈಹಿಕವಾಗಿ ಚಟುವಟಿಕೆಯಿಂದ ಇರಿ

ಬೆಳಗ್ಗಿನ ಅನಾರೋಗ್ಯ ನಿಮ್ಮನ್ನು ತುಂಬಾ ದಣಿಯುವಂತೆ ಮಾಡಬಹುದು ಮತ್ತು ನಿಮಗೆ ಚಲಿಸಲು ಸಾಧ್ಯವಾಗದು. ನೀವು ಎಲ್ಲಾ ಸಮಯದಲ್ಲಿ ವಿಶ್ರಾಂತಿ ಪಡೆಯಲು ಬಯಸಬಹುದು. ಆದರೆ ಸ್ವಲ್ಪ ಚಟುವಟಿಕೆ ತುಂಬಾ ಮುಖ್ಯ. ಸ್ವಲ್ಪ ಮಟ್ಟಿನ ದೈಹಿಕ ಚಟುವಟಿಕೆ ನಿಮ್ಮನ್ನು ಉಲ್ಲಾಸಿತ ಮತ್ತು ಬೆಳಗ್ಗಿನ ಅನಾರೋಗ್ಯದ ಲಕ್ಷಣಗಳನ್ನು ಸುಧಾರಿಸಲು ನೆರವಾಗಬಹುದು.

ಕಂಪ್ಯೂಟರ್ ನಿಂದ ಕೆಡುವುದು

ಕಂಪ್ಯೂಟರ್ ನಿಂದ ಕೆಡುವುದು

ಕೆಲವು ಗರ್ಭಿಣಿ ಮಹಿಳೆಯರಿಗೆ ಕಂಪ್ಯೂಟರ್ ಸ್ಕ್ರೀನ್ ನೋಡಿದ ತಕ್ಷಣ ವಾಕರಿಕೆ ಬರಬಹುದು. ಹೀಗಾಗಿದ್ದಲ್ಲಿ ನೀವು ಕಂಪ್ಯೂಟರ್ ಬಳಕೆ ಸಂಪೂರ್ಣವಾಗಿ ಕಡೆಗಣಿಸಿ. ಆದರೆ ನಿಮಗೆ ಇದನ್ನು ಉಪಯೋಗಿಸಲೇಬೇಕೆಂದಿದ್ದರೆ ಆಗ ಝೂಮ್ ಮಾಡಿ, ಅಕ್ಷರಗಳನ್ನು ದೊಡ್ಡದಾಗಿಸಿ ಮತ್ತು ಅದು ನಿಮ್ಮ ಕಣ್ಣಿನಿಂದ ತುಂಬಾ ದೂರದಲ್ಲಿರಲಿ. ಇದು ಬೆಳಗ್ಗಿನ ಅನಾರೋಗ್ಯದ ಲಕ್ಷಣಗಳನ್ನು ಸರಾಗವಾಗಿಸಲು ನೆರವಾಗುತ್ತದೆ.

ಶುಂಠಿ ಮತ್ತು ದ್ರವ

ಶುಂಠಿ ಮತ್ತು ದ್ರವ

ಸಮಸ್ಯೆ ಏನೇ ಆಗಿದ್ದರೂ ಶುಂಠಿ ಒಳ್ಳೆಯ ಮದ್ದು. ಶುಂಠಿ ನಿಮ್ಮ ಹೊಟ್ಟೆಯನ್ನು ಶಮನಗೊಳಿಸಿದಾಗ ವಾಕರಿಕೆಯಿಂದ ಉಪಶಮನಕ್ಕೆ ನೆರವಾಗುತ್ತದೆ. ಹಸಿ ಶುಂಠಿ ಜಗಿಯಬಹುದು, ಅದರ ಸುವಾಸನೆ ತೆಗೆದುಕೊಳ್ಳಬಹುದು ಅಥವಾ ಇತರ ಯಾವುದೇ ವಿಧಾನದಿಂದ ಶುಂಠಿ ಸೇವಿಸಬಹುದು. ಗರ್ಭಧಾರಣೆ ವೇಳೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಬೆಳಗ್ಗಿನ ಅನಾರೋಗ್ಯದ ವೇಳೆ ವಾಕರಿಕೆ ಬರುವ ಕಾರಣ ನಿಮಗೆ ನೀರು ಕುಡಿಯಲು ಕಷ್ಟವಾಗಬಹುದು. ಆದರೆ ನಿರ್ಜಲೀಕರಣ ಪರಿಸ್ಥಿತಿಯನ್ನು ಮತ್ತಷ್ಟು ಕೆಟ್ಟದಾಗಿಸಬಹುದು. ಇದರಿಂದ ನೀವು ಸಾಕಷ್ಟು ನೀರು ಕುಡಿಯಿರಿ.

English summary

Remedies to fight extreme morning sickness

Pregnancy is the most beautiful period in one's life! If you are pregnant, there's this obvious joy in your heart of having that baby. You talk endlessly with your baby. But, while there's joy, there is also that morning sickness that takes a toll on pregnant mothers.
Subscribe Newsletter