ಪುನರಾವರ್ತಿತ ಗರ್ಭಪಾತಕ್ಕೆ ಕಾರಣ ಏನಿರಬಹುದು?

Posted By:
Subscribe to Boldsky

ಗರ್ಭಪಾತ ಉಂಟಾದಾಗ ನಮ್ಮ ತಲೆಯಲ್ಲಿ ಬರುವ ವಿಚಾರ 'ಅನುವಂಶಿಕತೆ ಇತಿಹಾಸವಾಗಿದೆ'. ಗರ್ಭಾಪಾತ ಉಂಟಾಗಲು ಅನುವಂಶಿಕತೆಯೇ ಕಾರಣ ಎಂಬುದು ಹಲವರ ನಂಬಿಕೆ. ಆದರೆ ಈ ನಂಬಿಕೆ ಸುಳ್ಳು ಎಂಬುದು ನಮ್ಮ ಅಭಿಪ್ರಾಯವಾಗಿದೆ. ಗರ್ಭಪಾತ ಎಂದಿಗೂ ಅನುವಂಶಿಕತೆಯನ್ನು ಅವಲಂಬಿಸಿರುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಗರ್ಭಾವಸ್ಥೆಯ ಬಗೆಯ ಸುಳ್ಳು ಕಲ್ಪನೆಗಳ ಗುಟ್ಟು ಬಯಲು

ಗರ್ಭಿಣಿ ಸ್ತ್ರೀ ಗರ್ಭಾವಸ್ಥೆಯ ಮೊದಲ ತ್ರೈ ಮಾಸಿಕದಲ್ಲಿ ತನ್ನ ಬಗ್ಗೆ ಜಾಗರೂಕಳಾಗಿರಬೇಕು. ಮೊದಲ ತ್ರೈ ಮಾಸಿಕ ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಈ ಸಮಯದಲ್ಲಿ ಭ್ರೂಣವು ತನ್ನ ಪ್ರಮುಖ ಅಂಗಗಳನ್ನು ಅಭಿವೃದ್ಧಿಪಡಿಸುತ್ತಿರುತ್ತದೆ.

ಮೊದಲ ತ್ರೈ ಮಾಸಿಕದಲ್ಲಿ ನೀವಿದ್ದಲ್ಲಿ, ನಿಮ್ಮ ವೈದ್ಯರು ನಿಮಗೆ ಬೆಡ್ ರೆಸ್ಟ್ ಅನ್ನು ಸೂಚಿಸಿದ್ದರೆ ಅದನ್ನು ನೀವು ಪಾಲಿಸಬೇಕು. ತಮ್ಮ ವೈದ್ಯರು ಸೂಚಿಸಿದ ಸಲಹೆಗಳನ್ನು ಗರ್ಭಿಣಿ ಸ್ತ್ರೀಯರು ಪಾಲಿಸದೇ ಇರುವುದರಿಂದ ಕೆಲವು ಮಹಿಳೆಯರು ಗರ್ಭಪಾತಕ್ಕೆ ಒಳಗಾಗುತ್ತಾರೆ.

ಅದೇ ಪ್ರಕಾರ ಗರ್ಭಾವಸ್ಥೆಯಲ್ಲಿ ನೀವು ಸೇವಿಸುವ ಆಹಾರ ನಿಮ್ಮ ಭ್ರೂಣದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು ಸೇವಿಸುವ ಆಹಾರ ನಿಮ್ಮ ಮಗುವಿಗೂ ಆರೋಗ್ಯದಾಯಿಯಾಗಿರಬೇಕು ಎಂಬುದು ನಿಮ್ಮ ಗಮನದಲ್ಲಿರಲಿ.

ಕೆಲವೊಂದು ರೀತಿಯ ಆಹಾರಗಳು ಮತ್ತು ಅಸಮರ್ಪಕವಾದ ಕಾಳಜಿಗಳು ಗರ್ಭಪಾತಕ್ಕೆ ಕಾರಣವಾಗುತ್ತದೆ. ನಿಮ್ಮ ಗರ್ಭಪಾತಕ್ಕೆ ನೀವೇ ದೋಷಿಗಳಾಗಿದ್ದರೆ ಅದು ಹೇಗೆ ಸಂಭವಿಸಿತು ಎಂಬುದಕ್ಕೆ ಕಾರಣಗಳು ಇಲ್ಲಿವೆ.

ಇನ್ನೊಮ್ಮೆ ನೀವು ಗರ್ಭ ಧರಿಸಿದಾಗ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಈ ಲೇಖನ ನಿಮ್ಮ ಮುಂದಿರಿಸುತ್ತಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನೀವರಿಯಬೇಕಾದ ಗರ್ಭಾವಸ್ಥೆಯ ಚಿಕನ್‌ಫಾಕ್ಸ್ ಅಪಾಯಗಳು!

ಕ್ರೋಮೋಜೋಮಲ್ ಸಮಸ್ಯೆಗಳು:

ಕ್ರೋಮೋಜೋಮಲ್ ಸಮಸ್ಯೆಗಳು:

ಗರ್ಭಾವಸ್ಥೆಯಲ್ಲಿ ಕ್ರೋಮೋಜೋಮಲ್‌ನ ಅಸಮರ್ಪಕ ಬೆಳವಣಿಗೆಗಳು ಗರ್ಭಪಾತಕ್ಕೆ ಕಾರಣವಾಗುತ್ತದೆ. ಕ್ರೋಮೋಜೋಮಲ್ ವೈಪರೀತ್ಯಗಳಿಂದ 50 ಶೇಕಡದಷ್ಟು ಹೆಂಗಳೆಯರು ಗರ್ಭಾವಸ್ಥೆಗೆ ಒಳಗಾಗುತ್ತಾರೆ.

ಹಾರ್ಮೋನ್ ಅಸಮತೆ:

ಹಾರ್ಮೋನ್ ಅಸಮತೆ:

ಹೌದು ಹಾರ್ಮೋನ್ ಅಸಮತೆ ಕೂಡ ಗರ್ಭಪಾತಕ್ಕೆ ಬಹುಮುಖ್ಯ ಕಾರಣವಾಗಿದೆ. ಗರ್ಭಾವಸ್ಥೆಯಲ್ಲಿ ಕಡಿಮೆ ಪ್ರೊಜೆಸ್ಟಿರೋನ್ ಭ್ರೂಣಕ್ಕೆ ಪೋಷಣೆಯನ್ನು ಮಾಡುವುದರಿಂದ ಗರ್ಭಕೋಶವನ್ನು ತಡೆಯುತ್ತದೆ. ಇದು ಗರ್ಭಪಾತಕ್ಕೆ ಕಾರಣವಾಗುತ್ತದೆ.

ಅಸ್ವಸ್ಥತೆ:

ಅಸ್ವಸ್ಥತೆ:

ದೀರ್ಘಕಾಲದ ಜನನಾಂಗ ಸೋಂಕುಗಳು ಅಥವಾ ಲೈಂಗಿಕವಾಗಿ ಹರಡುವ ರೋಗಗಳು ಮರುಕಳಿಸುವ ಗರ್ಭಪಾತಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ಬಹು ಗರ್ಭಪಾತಗಳು ಉಂಟಾಗುವುದರಿಂದ ಹೆಂಗಳೆಯರು ಇದರ ಬಗ್ಗೆ ಹೆಚ್ಚು ಗಮನವನ್ನು ನೀಡಬೇಕು.

ರೋಗ ನಿರೋಧಕ ಶಕ್ತಿಯ ಅಸಮರ್ಪಕತೆ:

ರೋಗ ನಿರೋಧಕ ಶಕ್ತಿಯ ಅಸಮರ್ಪಕತೆ:

ರೋಗ ನಿರೋಧಕ ಶಕ್ತಿಯ ಪ್ರಾಬಲ್ಯವನ್ನು ಕುಂಠಿತಗೊಳಿಸುವ ಕೆಲವು ಅಂಶಗಳು ದೇಹದಲ್ಲಿ ಉತ್ಪನ್ನಗೊಂಡು ರೋಗನಿರೋಧಕ ಶಕ್ತಿಯ ಮೇಲೆ ದಾಳಿ ಮಾಡುತ್ತದೆ ಹಾಗೂ ಆರೋಗ್ಯಕರ ಅಂಗಾಂಶವನ್ನು ಹಾನಿ ಮಾಡುತ್ತವೆ. ಸಂಧಿವಾತ, ಮಧುಮೇಹ ಪ್ರಕಾರ ಒಂದು ಮೊದಲಾದ ರೋಗ ನಿರೋಧಕ ಶಕ್ತಿಯ ಅಸಮರ್ಪಕತೆಗಳು ಗರ್ಭಾವಸ್ಥೆಯಲ್ಲಿ ಮರುಕಳಿಸುವ ಗರ್ಭಪಾತಕ್ಕೆ ಕಾರಣವಾಗಿದೆ.

ಗರ್ಭಕೋಶ ವೈಪರೀತ್ಯ:

ಗರ್ಭಕೋಶ ವೈಪರೀತ್ಯ:

ಪೇರಲೆ ಹಣ್ಣಿನ ಆಕಾರವನ್ನು ಹೋಲದೆ ಭಿನ್ನವಾಗಿರುವ ಗರ್ಭಕೋಶವನ್ನು ಕೆಲವು ಹೆಂಗಳೆಯರು ಹೊಂದಿರುತ್ತಾರೆ. ಗರ್ಭಕೋಶದ ಈ ಪ್ರಕಾರದ ವೈಪರೀತ್ಯ ಮರುಕಳಿಸುವ ಗರ್ಭಪಾತಕ್ಕೆ ಕಾರಣವಾಗಿದೆ.

ಪರಿಸರ ಮತ್ತು ಜೀವನಶೈಲಿ:

ಪರಿಸರ ಮತ್ತು ಜೀವನಶೈಲಿ:

ತಾಯಿಯ ಜೀವನಶೈಲಿಯಾದ ಧೂಮಪಾನ, ಮಧ್ಯಪಾನ ಅಥವಾ ನಶಾ ಪದಾರ್ಥಗಳ ಬಳಕೆ ಗರ್ಭಪಾತ ಉಂಟಾಗಲು ಮುಖ್ಯ ಕಾರಣವಾಗಿದೆ.

ವಿಕಿರಣ ಅನಾವರಣ:

ವಿಕಿರಣ ಅನಾವರಣ:

ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ಹೆಚ್ಚಿನ ಪ್ರಮಾಣದ ವಿಕಿರಣಗಳ ಅನಾವರಣ ಕೂಡ ಗರ್ಭಪಾತ ಉಂಟಾಗಲು ಕಾರಣವಾಗಿದೆ. ಹೆಚ್ಚಿನ ಮಟ್ಟದ ಗರ್ಭಾವಸ್ಥೆ ಸ್ಕ್ಯಾನ್‌ಗಳು ಸಹ ಬೆಳೆಯುವ ಭ್ರೂಣಕ್ಕೆ ಅಪಾಯ ತಂದೊಡ್ಡುತ್ತವೆ.

English summary

Reasons For Recurrent Miscarriages

The first thing that comes to mind when you talk about miscarriage is 'genetic history'. No, this is not true, since recurrent miscarriage does not always pertain to genetic history. A pregnant 
 
Subscribe Newsletter