ಎಂಟನೆಯ ತಿಂಗಳಲ್ಲಿ ದೈಹಿಕ ಸಂಪರ್ಕ ಎಷ್ಟು ಸರಿ ?

By: Poornima Hegde
Subscribe to Boldsky

ಹೆಣ್ಣಿನ ಜೀವನದ ಅತ್ಯಂತ ಪ್ರಮುಖ ಮತ್ತು ನಾಜೂಕು ಘಟ್ಟಕ್ಕೆ ಆಕೆ ಗರ್ಭಿಣಿ. ಈ ಅವಧಿಯಲ್ಲಿ ಸಾಕಷ್ಟು ಸಂದೇಹಗಳು ಮತ್ತು ಸಂಶಯಗಳು ಎಲ್ಲಾ ಹೆಂಗಸರ ಮನದಲ್ಲಿ ಇರುವುದು ಸಹಜ. ಬೇರೆ ಅವಧಿಯಲ್ಲಿ ನೀವು ಮಾಡಿರುವ ಎಲ್ಲಾ ಸಂಗತಿಗಳು ಆ ಅವಧಿಯಲ್ಲಿ ಮಾಡುವುದೋ ಬೇಡವೋ ಎಂಬ ಸಂಸಯಕ್ಕೆ ನೀವು ಈಡಾಗುತ್ತೀರಿ. ಇದೇ ರೀತಿಯ ಒಂದು ಸಾಮಾನ್ಯ ಪ್ರಶ್ನೆ ಎಂದರೆ ಎಂಟನೆಯ ತಿಂಗಳಲ್ಲಿ ಲೈಂಗಿಕ ಸಂಪರ್ಕ ಸುರಕ್ಷಿತವೋ ಅಲ್ಲವೋ ಎಂಬುದು.

ಈ ಬಗ್ಗೆ ನಿಮ್ಮಲ್ಲಿ ಎಲ್ಲಿಯ ತನಕ ಖಚಿತತೆ ಇಲ್ಲವೋ ಅಲ್ಲಿಯ ತನಕ ಇದು ನಿಮ್ಮಲ್ಲಿ ಒತ್ತಡ ಮತ್ತು ಅನಾವಶ್ಯಕ ಚಿಂತೆಯನ್ನು ತಂದೊಡ್ಡುತ್ತದೆ. ಇದಕ್ಕೆ ಇಂಬು ಕೊಡುವಂತೆ ಗರ್ಭಿಣಿಯ ಮೊದಲ ಮೂರು ಹಾಗೂ ಕೊನೆಯ ಮೂರು ತಿಂಗಳಲ್ಲಿ ದೈಹಿಕ ಸಂಪರ್ಕ ಮಗುವಿಗೆ ತೊಂದರೆ ನೀಡುತ್ತದೆ ಎಂಬ ಮಾತು ನಿಮ್ಮನ್ನು ಮತ್ತಷ್ಟು ಚಿಂತೆಗೀಡು ಮಾಡುತ್ತದೆ. ಆದರೆ ಈ ಎಲ್ಲಾ ಸಂಶಯಗಳಿಗೆ ಉತ್ತರದಂತೆ ಈ ಸಿಹಿಸುದ್ದಿ ನಿಮ್ಮ ಮುಂದೆ ಇದೆ. ಹಲವಾರು ಸಂಶೋಧನೆಗಳಿಂದ ಧೃಡಪಟ್ಟ ಮಾಹಿತಿ ಎಂದರೆ ಎಂಟನೆಯ ತಿಂಗಳಿನಲ್ಲಿ ದೈಹಿಕ ಸಂಪರ್ಕ ಸಂಪೂರ್ಣ ಸುರಕ್ಷಿತವಾಗಿದೆ.  ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸಬಹುದಾ?

ಆದರೆ ನಿಮ್ಮಲ್ಲಿ ರಕ್ತಸ್ರಾವ, ಪ್ಲಾಸೆಂಟಾ ಪ್ರಾವಿಯಾ, ಗರ್ಭಕಂಠ ದೌರ್ಬಲ್ಯ ಹಾಗೂ ಯೋನಿಯ ಸೋಂಕು ಇದ್ದರೆ ಸಂಪರ್ಕ ಹೊಂದದಿರುವುದೆ ವಾಸಿ. ಇದನ್ನು ಬಿಟ್ಟು ಉಳಿದಂತೆ ಎಂಟನೆಯ ತಿಂಗಳಿನಲ್ಲಿ ದೈಹಿಕ ಸಂಪರ್ಕ ಬಹಳ ಸುರಕ್ಷಿತವಾಗಿದೆ. ಈ ಲೇಖನವನ್ನು ಓದಿ ಮುಗಿಸುವ ಹೊತ್ತಿಗೆ ನಿಮ್ಮಲ್ಲಿ ಈ ಬಗ್ಗೆ ಯಾವುದೇ ಸಂಶಯಗಳು ಉಳಿದಿರಲಿಕ್ಕಿಲ್ಲ ಎನ್ನುವುದು ನಮ್ಮ ಆಶ್ವಾಸನೆ.

ಅವಧಿಪೂರ್ವ ಜನನ

ಅವಧಿಪೂರ್ವ ಜನನ

ಬಹಳಷ್ಟು ಮಹಿಳೆಯರು ತಮ್ಮ ದೈಹಿಕ ಬಯಕೆಗಳನ್ನು ಹಿಡಿದಿರಲು ಮುಖ್ಯ ಕಾರಣ ಅವಧಿಗೆ ಮುನ್ನ ಮಗುವಿನ ಜನನವಾಗುತ್ತದೆ ಎಂಬ ಭೀತಿ. ಆದರೆ ನಿಮ್ಮಲ್ಲಿ ವೈದ್ಯಕೀಯ ತೊಂದರೆಗಳು ಇಲ್ಲದಿದ್ದ ಪಕ್ಷದಲ್ಲಿ ಹೀಗಾಗುವ ಯಾವುದೇ ಸಾಧ್ಯತೆಗಳಿಲ್ಲ.

ಮಗುವಿಗೆ ಯಾವುದೇ ಹಾನಿಯಿಲ್ಲ

ಮಗುವಿಗೆ ಯಾವುದೇ ಹಾನಿಯಿಲ್ಲ

ಎಂಟನೆಯ ತಿಂಗಳಿನಲ್ಲಿ ದೈಹಿಕ ಸಂಪರ್ಕ ಹೊಂದಿದರೆ ಮಗುವಿಗೆ ಹಾನಿಕರ ಎಂಬ ಸತ್ಯವಲ್ಲದ ಮಾಹಿತಿ ಬಹಳಷ್ಟು ಮಹಿಳೆಯರಲ್ಲಿದೆ. ಆದರೆ ಸತ್ಯವೇನೆಂದರೆ ನಿಮ್ಮ ಮಗು ಗರ್ಭದ ಒಳಗಡೆ ಸುರಕ್ಷಿತವಾಗಿರುತ್ತದೆ. ಮಗುವಿನ ರಕ್ಷಣೆಗೆ ಸಾಕಷ್ಟು ಸ್ವಾಭಾವಿಕ ರಕ್ಷಾ ಕವಚಗಳಿವೆ.

ಭಾವನಾತ್ಮಕ ಆರೋಗ್ಯ

ಭಾವನಾತ್ಮಕ ಆರೋಗ್ಯ

ನಿಮ್ಮ ಮಾನಸಿಕ ಆರೋಗ್ಯ ನಿಮ್ಮ ಮಗುವಿನ ಮಾನಸಿಕ ಸ್ವಾಸ್ಥ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಎಂಟನೆಯ ತಿಂಗಳಲ್ಲೂ ದೈಹಿಕ ಸಂಪರ್ಕ ಹೊಂದಿರುವುದು ನಿಮ್ಮ ಮಾನಸಿಕ ಸ್ವಾಸ್ಥ್ಯದ ಮೇಲೆ ಬಹಳ ಧನಾತ್ಮಕ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿಮ್ಮ ಬಾಣಂತನ ಸಾಂಗವಾಗಿ ಆಗುತ್ತದೆ.

ಸಂಗಾತಿಯ ಜೊತೆಗೆ ಬಾಂಧವ್ಯದ ಬೆಳವಣಿಗೆ

ಸಂಗಾತಿಯ ಜೊತೆಗೆ ಬಾಂಧವ್ಯದ ಬೆಳವಣಿಗೆ

ನಿಮ್ಮ ಸಂಗಾತಿಗೆ ನಿಮ್ಮ ಜೊತೆ ಆನಂದಿಸದ ರಾತ್ರಿಗಳು ಬಹಳ ಕೆಟ್ಟ ರಾತ್ರಿಗಳಾಗಬಹುದು ನಿಮ್ಮ ಬಗೆಗಿನ ಕಾಳಜಿ ಮತ್ತು ಪ್ರೀತಿಯಿಂದಾಗಿ ತನ್ನ ಬಯಕೆಯನ್ನು ತೋರದೇ ಇರಬಹುದು ವಿನಃ ಬಯಕೆಗಳು ಇಲ್ಲದೇ ಇರಲು ಸಾಧ್ಯವಿಲ್ಲ. ಎಂಟನೆಯ ತಿಂಗಳಲ್ಲಿ ದೈಹಿಕ ಸಂಪರ್ಕ ಹೊಂದಲು ಯಾವುದೇ ಅಡ್ಡಿ ಇಲ್ಲದ ಕಾರಣ ಸಂಗಾತಿಯನ್ನು ಬೇಸರದಲ್ಲಿಡುವುದರಲ್ಲಿ ಯಾವುದೇ ಅರ್ಥವಿಲ್ಲ.

ಆನಂದಪೂರ್ವಕ ಸುರಕ್ಷಿತ

ಆನಂದಪೂರ್ವಕ ಸುರಕ್ಷಿತ

ದೈಹಿಕ ಸಂಪರ್ಕದ ಕೊನೆಯಲ್ಲಿ ನೀವು ಅನುಭವಿಸುವ ಖುಷಿ ಬಹಳ ತೀವ್ರವಾದುದಲ್ಲ ಹಾಗೂ ಇದರಿಂದ ನಿಮ್ಮ ಮಗುವಿಗೆ ಯಾವುದೇ ತೊಂದರೆಯಿಲ್ಲ. ಮಗುವಿನ ರಕ್ಷಣೆ ಸ್ವಾಭಾವಿಕ ಕವಚಗಳಿಂದ ಆಗುತ್ತಿರುತ್ತದೆ. ನಿಮ್ಮ ಗಟ್ಟಿಯಾದ ಮೂಳೆಗಳು ಮತ್ತು ಸ್ನಾಯುಗಳಿಂದ ಮಗುವಿನ ರಕ್ಷಣೆ ಆಗುತ್ತಿರುತ್ತದೆ.

ಸುರಕ್ಷಿತವಾಗಿರಲಿ

ಸುರಕ್ಷಿತವಾಗಿರಲಿ

ನಿಮ್ಮ ಕಾಳಜಿಗಳೇನಾದರೂ ಇದ್ದಲ್ಲಿ ನಿಮ್ಮ ಸಂಗಾತಿಯ ಬಳಿ ಮಾತನಾಡಿ. ನಿಮಗೆ ಹಿತವೆನಿಸುವ ಭಂಗಿಗಳನ್ನೇ ಆರಿಸಿಕೊಳ್ಳಿ. ನಿಮ್ಮ ದೇಹದ ಮೇಲೆ ಒತ್ತಡ ಬಾರದಂತೆ ಎಚ್ಚರ ವಹಿಸಿ. ದೈಹಿಕ ಸಂಪರ್ಕವಿಲ್ಲದೇ ಬರಿಯ ಮುತ್ತು, ತಬ್ಬಿಕೊಳ್ಳುವುದು ಹಾಗೂ ಕಾಲಿನ ಮಸಾಜ್ ನಿಂದ ಸುಖ ಸಿಗುವುದಾದರೇ ಅದೇ ಮಾಡಿ.

ಸಲಹೆ

ಸಲಹೆ

ಯಾವೆಲ್ಲಾ ಸಂದರ್ಭಗಳಲ್ಲಿ ದೈಹಿಕ ಸಂಪರ್ಕ ಸುರಕ್ಷಿತವಲ್ಲ ಎನ್ನುವುದನ್ನು ತಿಳಿಯಿರಿ. ಇದಕ್ಕಾಗಿ ನಿಮ್ಮ ವೈದ್ಯರ ಸಲಹೆಯನ್ನೂ ಪಡೆದುಕೊಳ್ಳಿ. ನಿಮಗೆ ಏನೋ ಸರಿಯಿಲ್ಲ ಎಂದನ್ನಿಸಿದರೆ ಅಪಾಯವನ್ನು ತಂದುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಎಲ್ಲವೂ ಸುರಕ್ಷಿತ ಹಾಗೂ ಸರಿಯಾಗಿದ್ದರೆ ನಿಮ್ಮ ಸಂಗಾತಿಯ ಜೊತೆಗಿನ ಕ್ಷಣಗಳನ್ನು ಆನಂದಿಸಿ.

 

 

English summary

Is Lovemaking Healthy In 8th Month Of Pregnancy

If you are confused about is it safe to have intercourse during 8th month of pregnancy, you will go through unnecessary stress and strain. You may be in a circle of myths that making love during the first and last trimester of pregnancy will harm your baby.
Subscribe Newsletter