ಜನನ ನಿಯಂತ್ರಕಗಳ ಅಡ್ಡಪರಿಣಾಮಗಳು

By: Poornima heggade
Subscribe to Boldsky

ಹಾರ್ಮೋನು ಆಧಾರಿತ ಜನನ ನಿಯಂತ್ರಣ ಮಾತ್ರೆಗಳು ಅಡ್ಡ ಪರಿಣಾಮಗಳನ್ನು ಬೀರುವ ಸಾಧ್ಯತೆಗಳು ಇವೆ. ಸಾಮಾನ್ಯವಾಗಿ ಇಂತಹ ಎಲ್ಲಾ ಜನನ ನಿಯಂತ್ರಣ ಮಾತ್ರೆಗಳಲ್ಲಿ ಅಡ್ಡ ಪರಿಣಾಮಗಳಿದ್ದು ಹೆಚ್ಚಿನವು ಆಷ್ಟೇನು ಗಂಭೀರವಾದ ಸಮಸ್ಯೆಯನ್ನು ತಂದೊಡ್ಡುವುದಿಲ್ಲ. ಇವುಗಳಲ್ಲಿ ಕೆಲವು ಬಹಳವೇ ಗಂಭೀರ ಸಮಸ್ಯೆಯನ್ನು ತಂದೊಡ್ಡಬಲ್ಲವು.

ಜನನ ನಿಯಂತ್ರಕಗಳು ಬಹಳ ಮಹಿಳೆ ಗರ್ಭವತಿ ಆಗದಿರುವಂತೆ ಮಾಡುವುದರಿಂದ ಬಹಳ ಸಹಕಾರಿ. ಆದರೆ ಇದನ್ನು ತೆಗೆದುಕೊಳ್ಳುವುದಕ್ಕಿಂತ ಮುನ್ನ ಇದರ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ. ಕೆಲವು ಪ್ರಮುಖ ಅಡ್ಡ ಪರಿಣಾಮಗಳೆಂದರೆ ವಾಕರಿಕೆ, ಲೈಗಿಂಕ ಆಸಕ್ತಿಯಲ್ಲಿ ಏರುಪೇರು, ತೂಕದಲ್ಲಿ ಹೆಚ್ಚಳ, ತಲೆನೋವು, ತಲೆಸುತ್ತು, ಸ್ತನಗಳಲ್ಲಿ ನೋವು,

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಧಾರಣೆ ವೇಳೆ ಹಸಿವು ಹೆಚ್ಚಿಸಲು ಟಿಪ್ಸ್

ಋತು ಚಕ್ರದ ಅವಧಿಯಲ್ಲಿ ರಕ್ತ ಸ್ರಾವ, ಅನಿಯಮಿತ ಋತುಸ್ರಾವ, ಹೆಚ್ಚಿನ ರಕ್ತದೊತ್ತಡ ಮತ್ತು ಕೊಲೆಸ್ಟ್ರರಾಲ್, ದ್ರವದ ಶೇಖರಣೆ, ಕಡಿಮೆಯಾದ ಕಾಮಾಸಕ್ತಿ, ಮಲಬದ್ಧತೆ ಅಥವಾ ಆಗದೇ ಇರುವುದು, ವಿಸ್ತರಿಸಿದ ಅಂಡಾಶಯದ ಚೀಲಗಳು, ಕೂದಲು ಉದುರುವಿಕೆ, ಮೂಳೆಗಳಲ್ಲಿ ಸಾಂದ್ರತೆ ಕಡಿಮೆಯಾಗಿರುವುದು ಹಾಗೂ ಮನಸ್ಥಿತಿಯಲ್ಲಿನ ಬದಲಾವಣೆಗಳು. ಈ ಎಲ್ಲಾ ಅಡ್ಡ ಪರಿಣಾಮಗಳು ಕೆಲವು ತಿಂಗಳುಗಲಲ್ಲಿ ಹೋದರೂ ಒಮ್ಮೆ ತೊಂದರೆ ನೀಡುತ್ತವೆ.

ಜನನ ನಿಯಂತ್ರಣ ಸಾಧನಗಳ ಮೊದಲ ಅಡ್ಡ ಪರಿಣಾಮವೆಂದರೆ ಇದು ಮಹಿಳೆಯ ಋತುಚಕ್ರವನ್ನು ಅನಿಯಮಿತ ಮಾಡುತ್ತದೆ, ಕಡಿಮೆ ಮಾಡಬಹುದು ಅಥವಾ ಸ್ವಲ್ಪ ತಿಂಗಳುಗಳ ಕಾಲ ನಿಲ್ಲಿಸಿಬಿಡಬಹುದು. ಇನ್ನೂ ಒಂದು ಪ್ರಮುಖ ಅಡ್ಡ ಪರಿಣಾಮವೆಂದರೆ ರಕ್ತಸ್ರಾವ. ಮಾತ್ರೆಗಳು ಸಾಮಾನ್ಯವಾದ ಜನನ ನಿಯಂತ್ರಕಗಳಾದರೂ ಇದರ ಪ್ರಭಾವ ಬಹಳ ಸಮಯದ ವರೆಗೆ ಇರುತ್ತದೆ. ಇಲ್ಲಿ ಇಂತಹ ಕೆಲವು ಪ್ರಮುಖ ಅಡ್ಡ ಪರಿಣಾಮಗಳನ್ನು ಪಟ್ಟಿ ಮಾಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಾವಸ್ಥೆಯಲ್ಲಿ ನಿಪ್ಪಲ್ ಆರೈಕೆ ಮಾಡಲು ಟಿಪ್ಸ್

ತಲೆನೋವು

ತಲೆನೋವು

ವೈದ್ಯಕೀಯ ಕಾರಣಗಳಿಂದ ನೀವು ಜನನ ನಿಯಂತ್ರಕಗಳನ್ನು ಬಳಸಲು ಆರಂಭಿಸಿದ್ದೇ ಆದರೆ ಅದನ್ನು ಅಪರಿಮಿತವಾಗಿ ಬಳಸವಾರದು. ಒಂದು ಸಾಮಾನ್ಯ ಅಡ್ಡ ಪರಿಣಾಮವೆಂದರೆ ವಾಕರಿಕೆ ಮತ್ತು ತಲೆನೋವು. ಇದಕ್ಕೆ ಪ್ರಮುಖ ಕಾರಣ ಮಾತ್ರೆಯಲ್ಲಿರುವ ಈಸ್ಟ್ರೋಜನ್. ಹೀಗಾದರೆ ಈ ಅಂಶ ಇರದ ಇತರ ಮಾತ್ರೆಗಳನ್ನು ಆರಿಸಬೇಕು.

ವಾಕರಿಕೆ

ವಾಕರಿಕೆ

ಜನನ ನಿಯಂತ್ರಕಗಳು ಎಂದರೆ ಮಾತ್ರೆಯಲ್ಲಿರುವ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಗಳು ಇವು ಅಂಡೊತ್ಪತ್ತಿಯನ್ನು ಮುಂದೂಡುವ ಮೂಲಕ ಜನನ ನಿಯಂತ್ರಣ ಮಾಡುತ್ತವೆ. ಇದರಿಂದಾಗಿ ದೀರ್ಘಕಾಲದ ಪರಿಣಾಮಗಳು ಮಹಿಳೆಯರನ್ನು ಕಾಡುತ್ತವೆ. ಹೆಚ್ಚಿನ ಹಾರ್ಮೋನುಗಳ ಸಂಗ್ರಹವೇ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಅಸಾಮಾನ್ಯ ರಕ್ತಸ್ರಾವ

ಅಸಾಮಾನ್ಯ ರಕ್ತಸ್ರಾವ

ಮೊದ ಮೊದಲು ಜನನ ನಿಯಂತ್ರಕ ಮಾತ್ರೆಗಳನ್ನು ಸೇವಿಸಿದಾಗ ಮಹಿಳೆಯರ ಋತುಸ್ರಾವದ ವೇಳೆ ಹೆಚ್ಚಿನ ರಕ್ತ ಸ್ರಾವ ಸಾಮಾನ್ಯವಾಗಿದೆ. ಇದರ ಜೊತೆಗೆ ಋತುಚಕ್ರದ ನಡುವೆಯೂ ರಕ್ತ ಸ್ರಾವ ಕಂಡುಬರುತ್ತದೆ.

ಸ್ತನಗಳು ಮೃದುವಾಗುವಿಕೆ

ಸ್ತನಗಳು ಮೃದುವಾಗುವಿಕೆ

ಸ್ತನಗಳು ಮೃದುವಾಗುವುದು ಇದರಿಂದಾಗಿ ಗಾತ್ರದಲ್ಲಿ ದೊಡ್ಡದಾಗುವುದು ಇನ್ನೊಂದು ಅಡ್ಡ ಪರಿಣಾಮ. ಇದನ್ನು ಕೆಫೇನ್ ಮತ್ತು ಉಪ್ಪಿನ ಸೇವನೆ ಕಡಿಮೆ ಮಾಡುವುದರಿಂದ ಹಾಗೂ ಸ್ವಲ್ಪ ಬಿಗಿಯಾದ ಬ್ರಾ ತೊಡುವ ಮೂಲಕ ತಡೆಯಬಹುದು. ಒಂದು ವೇಳೆ ಎದೆ ನೋವು, ಹೆಚ್ಚಿನ ರಕ್ತದೊತ್ತಡ, ಸ್ತನ ಕ್ಯಾನ್ಸರ್, ಉಸಿರಾಡುವಾಗ ನೋವು, ತೀವ್ರವಾದ ಹೊಟ್ಟೆನೋವು, ಅನಿಯಮಿತ ದೃಷ್ಟಿ ಮಂದವಾಗುವಿಕೆ ಕಂಡು ಬಂದಲ್ಲಿ ಕೂಡಲೇ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಕುಸಿದ ಲೈಂಗಿಕಾಸಕ್ತಿ

ಕುಸಿದ ಲೈಂಗಿಕಾಸಕ್ತಿ

ಲೈಂಗಿಕಾಸಕ್ತಿ ಹಲವು ಕಾರಣಗಳಿಂದಾಗಿ ಕಡಿಮೆಯಾಗುತ್ತದೆ ಹಾಗೂ ಜನನ ನಿಯಂತ್ರಕ ಮಾತ್ರೆಗಳಲ್ಲಿ ಇರುವ ಹಾರ್ಮೋನುಗಳಿಂದ ಇದು ಮತ್ತೂ ಕುಸಿಯುತ್ತದೆ. ಈ ಎಲ್ಲಾ ಅಡ್ಡ ಪರಿಣಾಮಗಳು ಮಹಿಳೆಯನ್ನು ಕಾಡಬಹುದಾದ್ದರಿಂದ ಜನನ ನಿಯಂತ್ರಣಕ್ಕೆ ಮಾತ್ರೆಯ ನೆರವನ್ನು ಪಡೆಯುವುದಾದರೆ ಇವನ್ನು ತಿಳಿದಿರುವುದು ಉತ್ತಮ.

English summary

Common birth control side effects

A hormone based birth control pill can be a cause for concern if they come with side effects. There certainly are side effects if you pop a birth control pill, yet the majority of it is not serious. Some are good, while some are less ideal or dangerous
Story first published: Thursday, January 16, 2014, 19:03 [IST]
Please Wait while comments are loading...
Subscribe Newsletter