For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಗೆ ಸುರಕ್ಷಿತ ವಯಸ್ಸು

By Hemanth P
|

ಗರ್ಭಿಣಿಯಾಗುವುದು ಮಹಿಳೆಯ ಜೀವನದ ಸಂಭ್ರಮಗಳಲ್ಲಿ ಒಂದು. ಗರ್ಭಧಾರಣೆ ವೇಳೆ ಆರೋಗ್ಯಕರವಾಗಿರಬೇಕೆಂದರೆ ಗರ್ಭಿಣಿಯಾಗುವ ಮೊದಲೇ ಕೆಲವೊಂದು ಯೋಜನೆ ಹಾಕೊಳ್ಳಬೇಕು. ಕೆಲವೊಂದು ಅಂಶಗಳು ಗರ್ಭಧಾರಣೆಯನ್ನು ಆರೋಗ್ಯಕರ ಮತ್ತು ಸಂತಸವಾಗಿಡುವಂತೆ ಮಾಡುತ್ತದೆ. ಶಾಂತಿಯುತ ಗರ್ಭಧಾರಣೆ ಮತ್ತು ಆರೋಗ್ಯಕರ ಮಗು ಪಡೆಯಲು ಗರ್ಭಧಾರಣೆಗೆ ಸುರಕ್ಷಿತ ವಯಸ್ಸು ಕೂಡ ತುಂಬಾ ಮಹತ್ವದ್ದಾಗಿದೆ.

ಗರ್ಭಧಾರಣೆಗೆ ಒಳ್ಳೆಯ ವಯಸ್ಸು ಯಾವುದೆಂದು ತಿಳಿದರೆ ಇದು ದೈಹಿಕ ಹಾಗೂ ಮಾನಸಿಕವಾಗಿಯೂ ನಿಮಗೆ ನೆರವಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿಡುವುದಲ್ಲದೆ, ನಿಮ್ಮ ಮಗು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರುವಂತೆ ನೆರವಾಗುತ್ತದೆ. ವಿವಿಧ ಅಂಶಗಳನ್ನು ಪರಿಗಣಿಸಿ ಮಹಿಳೆಯಿಂದ ಮಹಿಳೆಗೆ ಗರ್ಭಧಾರಣೆಯ ಸುರಕ್ಷಿತ ವಯಸ್ಸು ಬದಲಾಗುತ್ತದೆ. 30ರ ಹರೆಯಕ್ಕಿಂತ ಮೊದಲು ಗರ್ಭಿಣಿಯಾಗುವುದು ಅತ್ಯಂತ ಸುರಕ್ಷಿತವೆಂದು ಪರಿಗಣಿಸಲಾಗಿದೆ.

30ರ ಬಳಿಕ ಕೂಡ ಗರ್ಭಿಣಿಯಾಗಬಹುದು. ಆದರೆ ತಾಯಿ ಮತ್ತು ಮಗುವಿಗೆ ಅಪಾಯ ಹಾಗೂ ಸಮಸ್ಯೆಗಳು ಹೆಚ್ಚು. 30ರ ಹರೆಯಕ್ಕಿಂತ ಮೊದಲ ಗರ್ಭಿಣಿಯಾದರೆ ಆಗ ನಿಮ್ಮಲ್ಲಿ ಮಗುವನ್ನು ಹೊರಲು ಹೆಚ್ಚಿನ ತ್ರಾಣ ಮತ್ತು ಸ್ಥಿತಿಸ್ಥಾಪಕತ್ವವಿರುತ್ತದೆ. 35ರ ಬಳಿಕ ಫಲವತ್ತತೆ ಕಡಿಮೆಯಾಗುವುದರಿಂದ ಗರ್ಭಿಣಿಯಾಗುವ ಸಾಧ್ಯತೆ ಕುಂದುತ್ತದೆ. ಯಾವುದೇ ವಯಸ್ಸಿನಲ್ಲಿ ಗರ್ಭಧಾರಣೆಯು ತನ್ನದೇ ಆದ ಅನುಕೂಲ ಮತ್ತು ಅನಾನುಕೂಲಗಳನ್ನು ಹೊಂದಿರುತ್ತದೆ. ಗರ್ಭಧಾರಣೆಗೆ ಸುರಕ್ಷಿತ ವಯಸ್ಸನ್ನು ನೀವು ಹುಡುಕುತ್ತಿದ್ದರೆ ನೀವು ನೆನಪಿನಲ್ಲಿಡಬೇಕಾದ ಕೆಲವೊಂದು ಅಂಶಗಳನ್ನು ಇಲ್ಲಿ ಕೊಡಲಾಗಿದೆ.

ಭಾವನಾತ್ಮಕ ಆರೋಗ್ಯ

ಭಾವನಾತ್ಮಕ ಆರೋಗ್ಯ

ಗರ್ಭಧಾರಣೆ ನಿಮ್ಮ ಮಾನಸಿಕ ಆರೋಗ್ಯದೊಂದಿಗೆ ಒಳ್ಳೆಯ ಸಂಬಂಧ ಹೊಂದಿದೆ. ನೀವು ಭಾವನಾತ್ಮಕವಾಗಿ ಪ್ರೌಢರಾದಾಗ ಗರ್ಭಧಾರಣೆಗೆ ಒಳ್ಳೆಯ ಸಮಯ. ನೀವು ತುಂಬಾ ಸಣ್ಣವರಾಗಿದ್ದರೆ ನಿಮ್ಮ ಜೀವನದಲ್ಲಿ ಮತ್ತೊಂದು ಸದಸ್ಯನ ಆಗಮನದ ಜವಾಬ್ದಾರಿಗಳ ಪ್ರಾಮುಖ್ಯತೆ ನಿಮಗೆ ತಿಳಿದಿರುವುದಿಲ್ಲ.

ಆರ್ಥಿಕ ಸ್ಥಿರತೆ

ಆರ್ಥಿಕ ಸ್ಥಿರತೆ

ವೈದ್ಯಕೀಯವಾಗಿ ನೀವು ಗರ್ಭಧರಿಸಲು ಆರೋಗ್ಯಕರವಾಗಿದ್ದೀರಿ ಎಂದು ತಿಳಿದ ಬಳಿಕ ಗರ್ಭಧಾರಣೆಗೆ ಸುರಕ್ಷಿತ ವಯಸ್ಸನ್ನು ಆಯ್ಕೆ ಮಾಡುವ ಮತ್ತೊಂದು ಹಜ್ಜೆಯೆಂದರೆ ಅದು ಆರ್ಥಿಕ ಸ್ಥಿರತೆ. ಇದರಿಂದ ನೀವು ಮಗುವಿನ ಆಗಮನಕ್ಕೆ ತಯಾರಾಗಲು, ಮಾಸಿಕವಾಗಿ ಆರಾಮ ಹಾಗೂ ಶಾಂತವಾಗಿರಲು ನೆರವಾಗುತ್ತದೆ.

ವೈದ್ಯಕೀಯ ಫಿಟ್ ನೆಸ್

ವೈದ್ಯಕೀಯ ಫಿಟ್ ನೆಸ್

ಗರ್ಭಧಾರಣೆಗೆ ಸುರಕ್ಷಿತ ವಯಸ್ಸು ಪ್ರತಿಯೊಬ್ಬ ಮಹಿಳೆಯ ವೈದ್ಯಕೀಯ ಪರಿಸ್ಥಿತಿ ಮತ್ತು ಫಿಟ್ ನೆಸ್ ನ್ನು ಆಧರಿಸಿ ಭಿನ್ನವಾಗಿರುತ್ತದೆ. ಗರ್ಭಿಣಿಯಾಗಲು ಸುರಕ್ಷಿತ ವಯಸ್ಸನ್ನು ಆಯ್ಕೆ ಮಾಡುವ ಮೊದಲು ನೀವು ಗರ್ಭಿಣಿಯಾದರೆ ಯಾವುದೇ ಸಮಸ್ಯೆಯಾಗದಂತೆ ತಿಳಿಯಲು ವೈದ್ಯಕೀಯ ಪರೀಕ್ಷೆ ಮಾಡಿಕೊಳ್ಳಬೇಕು.

ನಿಮ್ಮ ಸಂಗಾತಿಯ ಆರೋಗ್ಯ

ನಿಮ್ಮ ಸಂಗಾತಿಯ ಆರೋಗ್ಯ

ಗರ್ಭಧಾರಣೆಗೆ ಸರಿಯಾದ ವಯಸ್ಸನ್ನು ಆಯ್ಕೆ ಮಾಡುವ ಮೊದಲು ನಿಮ್ಮ ಸಂಗಾತಿಯ ಆರೋಗ್ಯವನ್ನು ಮೊದಲು ಗಮನದಲ್ಲಿರಿಸಬೇಕು. ನೀವು ಮತ್ತು ನಿಮ್ಮ ಸಂಗಾತಿ ಸಂಪೂರ್ಣವಾಗಿ ಫಿಟ್ ಇರುವ ವೇಳೆ ಆರೋಗ್ಯಕರ ಮಗುವನ್ನು ಪಡೆಯಲು ಸರಿಯಾದ ವಯಸ್ಸು.

ವೃತ್ತಿ

ವೃತ್ತಿ

ನಿಮ್ಮ ವೃತ್ತಿಪರ ಗುರಿ ಮತ್ತು ಧ್ಯೇಯಗಳನ್ನು ಪೂರೈಸಿದ ಬಳಿಕ ಗರ್ಭಿಣಿಯಾಗಬಹುದೆಂದು ನಿರೀಕ್ಷಿಸಬೇಡಿ. ನಿಮ್ಮ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಿ ಮತ್ತು ಗರ್ಭಧಾರಣೆಗೆ ನಿಮ್ಮ ಒಳ್ಳೆಯ ವಯಸ್ಸು ಆಯ್ಕೆ ಮಾಡಿ. ನಿಮ್ಮ ವೃತ್ತಿ ಮತ್ತು ಕುಟುಂಬವನ್ನು ಭಿನ್ನವಾಗಿಡಿ.

ಅಭ್ಯಾಸ

ಅಭ್ಯಾಸ

ಇದು ತುಂಬಾ ವಿಚಿತ್ರವೆನಿಸಬಹುದು. ಆದರೆ ನಿಮ್ಮ ಅಭ್ಯಾಸ ಗರ್ಭಧಾರಣೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮಲ್ಲಿ ಧೂಮಪಾನ, ಆಲ್ಕೋಹಾಲ್ ಸೇವನೆ ಅಥವಾ ಇನ್ಯಾವುದೇ ಮಾದಕ ದ್ರವ್ಯ ತೆಗೆದುಕೊಳ್ಳುವ ದುರಾಭ್ಯಾಸವಿದ್ದರೆ ಗರ್ಭಿಣಿಯಾಗುವ ಮೊದಲು ಇದನ್ನು ತ್ಯಜಿಸಿ. ಅಥವಾ ಬೇಗನೆ ನೀವು ಗರ್ಭಿಣಿಯಾಗುವ ಬಗ್ಗೆ ಯೋಚಿಸಬೇಕು.

ಕೆಲಸದ ವಾತಾವರಣ

ಕೆಲಸದ ವಾತಾವರಣ

ನೀವು ಕೆಲಸ ಮಾಡುವಂತಹ ಜಾಗದಲ್ಲಿ ಕೆಲವೊಂದು ರಾಸಾಯನಿಕ ಅಂಶಗಳು ಹೊರಹಾಕುತ್ತಿದ್ದಲ್ಲಿ, ಇದು ನಿಮ್ಮ ಗರ್ಭಧಾರಣೆ ಮೇಲೆ ಪರಿಣಾಮ ಬೀರಬಹುದು. ಇದನ್ನು ಪರಿಗಣಿಸಿ ನೀವು ಗರ್ಭಿಣಿಯಾಗುವ ವಯಸ್ಸನ್ನು ನಿರ್ಧರಿಸಿ. ಆದಷ್ಟು ಬೇಗ ನೀವು ಗರ್ಭಧಾರಣೆಗೆ ಯೋಜನೆ ಹಾಕಿ.

ಜೀವನ ಶೈಲಿ

ಜೀವನ ಶೈಲಿ

ಗರ್ಭಧಾರಣೆಗೆ ನಿಮ್ಮ ವಯಸ್ಸನ್ನು ಆಯ್ಕೆ ಮಾಡುವ ಮೊದಲು ಜೀವನಶೈಲಿಯನ್ನು ಮುಖ್ಯವಾಗಿ ಪರಿಗಣಿಸಬೇಕು. ನಿಮ್ಮ ಜೀವನಶೈಲಿಯು ನಿಮಗೆ ಮಾತ್ರವಲ್ಲದೆ ನಿಮ್ಮ ಮಗುವಿನ ಮೇಲೂ ಪರಿಣಾಮ ಬೀರಬಹುದು. ನಿಮ್ಮ ಕುಟುಂಬ, ವೃತ್ತಿ, ಆರ್ಥಿಕತೆ ಮತ್ತು ಭವಿಷ್ಯವನ್ನು ಪರಿಗಣಿಸಿ ಗರ್ಭಧಾರಣೆಗೆ ಸರಿಯಾದ ವಯಸ್ಸನ್ನು ಆಯ್ಕೆ ಮಾಡಿಕೊಳ್ಳಿ.

English summary

Safe Age To Get Pregnant

Becoming pregnant is one of the best experiences in the life of a woman. To have a healthy pregnancy, it is important to have a proper planning even before getting pregnant.
Story first published: Friday, December 6, 2013, 11:06 [IST]
X
Desktop Bottom Promotion