For Quick Alerts
ALLOW NOTIFICATIONS  
For Daily Alerts

ನಾರ್ಮಲ್ ಡೆಲಿವರಿಯಾಗಲು ಪಾಲಿಸಬೇಕಾದ ಲೈಫ್ ಸ್ಟೈಲ್

By Super
|

ತಾಯಿಯಾಗುವುದು ಪ್ರತಿ ಹೆಣ್ಣಿನ ಒಂದು ಸುಂದರ ಕನಸು. ಗರ್ಭಧಾರಣೆಯ ದಿನದಿಂದ ಹಿಡಿದು ಪ್ರಸವದವರೆಗೂ ತಾಯಿಯ ಶರೀರ ಹಲವು ಮಾರ್ಪಾಡುಗಳಿಗೆ ಒಳಪಡುತ್ತದೆ. ಮಾನಸಿಕವಾಗಿಯೂ ಬದಲಾಗುವ ಆಕೆಗೆ ಹೆಚ್ಚಿನ ಆರೈಕೆಯ ಅಗತ್ಯವಿದೆ. ಆದರೆ ಈ ಅವಧಿಯಲ್ಲಿ ಯಾವುದೇ ಕೆಲಸ ಮಾಡದೇ ಸುಮ್ಮನಿರುವುದೂ ಅಪಾಯಕಾರಿಯೇ.

ಗರ್ಭವತಿಯಾಗಿದ್ದಾಗ ಹಾಗೂ ಪ್ರಸವಕಾಲದಲ್ಲಿ ಅಸುಸರಿಸಬೇಕಾದ ಹಲವು ಮಾಹಿತಿಗಳನ್ನು ದೆಹಲಿಯ ಪ್ರಸೂತಿತಜ್ಞರು ನೀಡಿದ್ದಾರೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ನೈಸರ್ಗಿಕ ವಿಧಾನದಲ್ಲಿ ಸುಖಪ್ರಸವ ಪಡೆಯುವುದರ ಜೊತೆಗೇ ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು.

1) ಗರ್ಭಧಾರಣೆಗೂ ಮುನ್ನ ಉತ್ತಮ ಆರೋಗ್ಯವಿರುವುದು ಅವಶ್ಯಕ

1) ಗರ್ಭಧಾರಣೆಗೂ ಮುನ್ನ ಉತ್ತಮ ಆರೋಗ್ಯವಿರುವುದು ಅವಶ್ಯಕ

ಸಹಜ ಪ್ರಸವವಾಗಲು ಮಹಿಳೆಗೆ ಗರ್ಭಧಾರಣೆಗೂ ಮೊದಲು ಉತ್ತಮ ಆರೋಗ್ಯವಿರುಗುದು ಅಗತ್ಯ. ಬೆಳೆಯುವ ಕಾಲದಲ್ಲಿ ಉತ್ತಮ ಶಾರೀರಿಕ ವ್ಯಾಯಾಮಗಳು ಹಾಗೂ ಪೌಷ್ಟಿಕ ಆಹಾರ, ಸಾಕಷ್ಟು ನಿದ್ಧೆಯ ಮೂಲಕ ದೇಹಸ್ಥಿತಿಯನ್ನು ಉತ್ತಮವಾಗಿರಿಸಿಕೊಳ್ಳಬೇಕು. ಮೂಳೆ ಹಾಗೂ ಸ್ನಾಯುಗಳಿಗೆ ಅಗತ್ಯವಾದ ವ್ಯಾಯಾಮಗಳನ್ನು ಪ್ರತಿದಿನ ಮಾಡುತ್ತಿರಬೇಕು.

2) ಪ್ರಾರಂಭಿಕ ದಿನಗಳಲ್ಲಿ ಮಾಡಬೇಕಾದ ವ್ಯಾಯಾಮಗಳು

2) ಪ್ರಾರಂಭಿಕ ದಿನಗಳಲ್ಲಿ ಮಾಡಬೇಕಾದ ವ್ಯಾಯಾಮಗಳು

ಗರ್ಭಧಾರಣೆಯ ಪ್ರಾರಂಭಿಕ ದಿನಗಳಲ್ಲಿ ಕೇವಲ ಸುಲಭವಾದ ವ್ಯಾಯಾಮಗಳನ್ನು ಮಾತ್ರ ಮಾಡಬೇಕು. ಕೇವಲ ಮೈ ಬೆಚ್ಚಗಾಗಿಸುವ ಹಾಗೂ ನಿಧಾನಗತಿಯ ವ್ಯಾಯಾಮಗಳು ಸಾಕು. ಈ ದಿನಗಳಲ್ಲಿ ನಿಮ್ಮ ಕುಟುಂಬ ವೈದ್ಯರ ಸಲಹೆಯ ಮೇರೆಗೆ ವ್ಯಾಯಾಮದ ಅವಧಿಯನ್ನು ನಿಗದಿಪಡಿಸಿಕೊಳ್ಳಬಹುದು. ಒಂದು ವೇಳೆ ಯಾವುದೇ ಹಂತದಲ್ಲಿ ಕೊಂಚ ನೋವಾದರೂ ಕೂಡಲೇ ನಿಲ್ಲಿಸಬಾರದು, ನಿಧಾನವಾಗಿ ಪೂರ್ವಹಂತಕ್ಕೆ ಬರಬೇಕು. ಮೆಟ್ಟಿಲು ಇಳಿಯುವ, ಕುಣಿಯುವ, ಕಾಲು ಬಡಿಯುವ ಮೊದಲಾದ ಕಾರ್ಯಗಳಿಗೆ ಪೂರ್ಣ ವಿರಾಮ ಬೇಕು. ಮೆಟ್ಟಿಲು ಇಳಿಯಲೇ ಬೇಕಾದ ಅನಿವಾರ್ಯತೆಯಿದ್ದಲ್ಲಿ ಅತಿ ನಿಧಾನವಾಗಿ ಇಳಿಯಬೇಕು. ಕುಲುಕುವ ವಾಹನಗಳಲ್ಲಿ ಪ್ರಯಾಣಿಸದೇ ಇರುವುದು ಒಳಿತು.

3) ಮೂರು ತಿಂಗಳ ಬಳಿಕ ಅನುಸರಿಸಬೇಕಾದ ವ್ಯಾಯಾಮಗಳು

3) ಮೂರು ತಿಂಗಳ ಬಳಿಕ ಅನುಸರಿಸಬೇಕಾದ ವ್ಯಾಯಾಮಗಳು

ಸುಮಾರು ಮೂರು ತಿಂಗಳು ಕಳೆದ ಬಳಿಕ ಹೊಟ್ಟೆಯ ಗಾತ್ರ ನಿಧಾನಕ್ಕೆ ದೊಡ್ಡದಾಗುತ್ತಾ ಬರುತ್ತಿದ್ದಂತೆ ಕೊಂಚ ವ್ಯಾಯಾಮಗಳಲ್ಲಿಯೂ ಬದಲಾವಣೆ ಅಗತ್ಯ. ಈ ಹಂತದಲ್ಲಿ ಪ್ರಾರಂಭಿಕ ದಿನಗಳಿಗಿಂತ ಸ್ವಲ್ಪ ಹೆಚ್ಚಿನ ವ್ಯಾಯಾಮ ಅಗತ್ಯವಾಗಿದೆ. ಈ ದಿನಗಳಲ್ಲಿ ದೇಹ ಅತಿಹೆಚ್ಚು ಪ್ರಮಾಣದಲ್ಲಿ ಕೊಬ್ಬನ್ನು ಶೇಖರಿಸುವುದರಿಂದ ವ್ಯಾಯಾಮವಿಲ್ಲದೇ ಇದ್ದರೆ ದೇಹದಲ್ಲಿ ಹೆಚ್ಚಿನ ಕೊಬ್ಬು ಸಂಗ್ರಹವಾಗಿ ಪ್ರಸವಕ್ಕೆ ತೊಂದರೆಯಾಗಬಹುದು. ಈ ಕೊಬ್ಬನ್ನು ಕರಗಿಸಲು ಸೂಕ್ತವಾದ ವ್ಯಾಯಾಮಗಳೆಂದರೆ ಈಜು, ಸೈಕಲ್ ತುಳಿಯುವುದು, ನಡೆಯುವುದು ಹಾಗೂ ಏರೋಬಿಕ್ಸ್. ಆದರೆ ಯಾವುದೂ ತುಂಬಾ ವೇಗವಾಗಿ ಅಲ್ಲ, ನಿಧಾನಗತಿಯಲ್ಲಿ ನಡೆಸಬೇಕು. ಈ ವ್ಯಾಯಾಮಗಳನ್ನು ವಾರಕ್ಕೆ ಕನಿಷ್ಟ ಒಂದು ಘಂಟೆಯಂತೆ ನಾಲ್ಕರಿಂದ ಐದು ದಿನಗಳಾದರೂ ಮಾಡಲೇಬೇಕು. ಅದರಲ್ಲೂ ಬೆನ್ನಿನ ಮೇಲೆ ಮಲಗಿ ಕಾಲುಗಳನ್ನು ಎತ್ತುವ ಹಾಗೂ ಪಕ್ಕಕ್ಕೆ ವಾಲಿಸುವ ವ್ಯಾಯಾಮಗಳು ಸೊಂಟದ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಬಹಳ ಉಪಯುಕ್ತವಾಗಿವೆ. ಈ ಹಂತದಲ್ಲಿ ಸೇವಿಸುವ ಆಹಾರವೂ ಆದಷ್ಟು ಪೌಷ್ಟಿಕಾಂಶಗಳಿಂದ ಕೂಡಿರಬೇಕು. ಹಸಿರು ಸೊಪ್ಪು, ಬಸಲೆ (ಹೆಚ್ಚಿನ ಕಬ್ಬಿಣಾಂಶ ಇದರಿಂದ ದೊರಕುತ್ತದೆ), ಹಾಲು, ಹಣ್ಣುಗಳು, ಒಣಹಣ್ಣುಗಳನ್ನು ಸೇವಿಸುವುದು ಅಗತ್ಯವಾಗಿದೆ.

4) ಆರನೆಯ ತಿಂಗಳ ಅವಧಿಯಲ್ಲಿ ಅನುಸರಿಸಬೇಕಾದ ವ್ಯಾಯಾಮಗಳು

4) ಆರನೆಯ ತಿಂಗಳ ಅವಧಿಯಲ್ಲಿ ಅನುಸರಿಸಬೇಕಾದ ವ್ಯಾಯಾಮಗಳು

ಮೂರು ತಿಂಗಳಿಂದ ಪ್ರಾರಂಭವಾದ ವ್ಯಾಯಾಮಗಳನ್ನು ದಿನಕಳೆದಂತೆ ಕೊಂಚವಾಗಿ ಹೆಚ್ಚಿಸಬೇಕು. ಏರೋಬಿಕ್ಸ್, ಯೋಗ, ದೇಹವನ್ನು ಸಡಲಿಸುವ ವ್ಯಾಯಾಮಗಳು ಹೆಚ್ಚು ಸೂಕ್ತವಾಗಿವೆ. ಮುಂದಿನ ಪ್ರಸವಕ್ಕಾಗಿ ಕೆಳಹೊಟ್ಟೆಯ ಭಾಗದ ಸ್ನಾಯುಗಳನ್ನು ಬಲಗೊಳಿಸಲು ಕೆಗೆಲ್ ವ್ಯಾಯಾಮಗಳು ಅತ್ಯಂತ ಸಹಕಾರಿಯಾಗಿವೆ. ಸೈಕಲ್ ತುಳಿಯುವುದು, ಸ್ಕೀಯಿಂಗ್ ಮೊದಲಾದವುಗಳನ್ನು ನಡೆಸಬಹುದಾದರೂ ನಿಧಾನಗತಿಯಲ್ಲಿ ಮಾತ್ರ. ಹೆಚ್ಚಿನ ಶ್ರಮ ಬೇಡುವ ವ್ಯಾಯಾಮಗಳಿಗೆ (ಉದಾಹರಣೆಗೆ ಬೆಟ್ಟ ಏರುವುದು, ಪುಟ್ಬಾಲ್, ಬಾಸ್ಕೆಟ್ ಬಾಲ್) ಬಾಣಂತಿತನ ಮುಗಿಯುವವರೆಗೂ ತಿಲಾಂಜಲಿ ನೀಡುವುದೇ ಉತ್ತಮ ನಿರ್ಧಾರ. ಈ ಅವಧಿಯಲ್ಲಿ ಬಗ್ಗಿ ಮಾಡಬಹುದಾದ ಮನೆ ಕೆಲಸಗಳು (ಉದಾಹರಣೆಗೆ ಕಸ ಗುಡಿಸುವುದು) ಅತ್ಯಂತ ಸೂಕ್ತವಾದ ವ್ಯಾಯಾಮಗಳಾಗಿವೆ.

5)6-9 ತಿಂಗಳವರೆಗೆ ಅನುಸರಿಸಬೇಕಾದ ವ್ಯಾಯಾಮಗಳು

5)6-9 ತಿಂಗಳವರೆಗೆ ಅನುಸರಿಸಬೇಕಾದ ವ್ಯಾಯಾಮಗಳು

ಆರು ತಿಂಗಳ ಬಳಿಕ ಹೊಟ್ಟೆಯ ಗಾತ್ರ ಇನ್ನಷ್ಟು ಹೆಚ್ಚುವುದರಿಂದ ಈಗ ಬಗ್ಗಲು ಮೊದಲಿನಷ್ಟು ಸುಲಭವಾಗುವುದಿಲ್ಲ. ಅಲ್ಲದೇ ದೇಹದ ತೂಕವೂ ಕೊಂಚ ಹೆಚ್ಚಾಗುವುದರಿಂದ ಮೊದಲಿನ ವ್ಯಾಯಾಮಗಳೂ ಈಗ ಸೂಕ್ತವಲ್ಲ. ಈ ಅವಧಿಯಲ್ಲಿ ನಡೆಯುವುದೇ ಅತ್ಯಂತ ಸಮರ್ಪಕ ವ್ಯಾಯಾಮವಾಗಿದೆ. ಬೆಳಗಿನ ಹೊತ್ತು ಮತ್ತು ಸಂಜೆಯ ಹೊತ್ತು ಎಷ್ಟು ಸಾಧ್ಯವೋ ಅಷ್ಟು ನಡೆಯಿರಿ. ಆದರೆ ಓಡುವುದು ಮಾತ್ರ ಸಲ್ಲದು. ಕೊಂಚ ಮೈಸಡಲಿಸುವ ಇತರ ವ್ಯಾಯಾಮಗಳೂ ಅಗತ್ಯ. ಈ ಹಂತದಲ್ಲಿ ವೈದ್ಯರು ರಕ್ತ ಸಂಚಾರ ಹೆಚ್ಚಲು ಅಗತ್ಯವಾದ ಔಷಧಿಗಳನ್ನು ನೀಡುವುದರಿಂದ ಉತ್ತಮ ಅಹಾರವನ್ನು ಸೇವಿಸುವುದೂ ಅಗತ್ಯವಾಗಿದೆ.

6) ಗರ್ಭಕಾಲದಲ್ಲಿ ಉತ್ತಮ ಶಾರೀರ ಹೊಂದಲು ಕೆಲವು ಸಲಹೆಗಳು

6) ಗರ್ಭಕಾಲದಲ್ಲಿ ಉತ್ತಮ ಶಾರೀರ ಹೊಂದಲು ಕೆಲವು ಸಲಹೆಗಳು

ಬೆನ್ನು ನೋವು ಬರಲು ಸಾಧ್ಯವಿರುವ ಯಾವುದೇ ಕಾರ್ಯವನ್ನು ಕೈಗೆತ್ತಿಕೊಳ್ಳಬೇಡಿ. ಉದಾಹರಣೆಗೆ ಭಾರವಾದ ಬಕೆಟ್ ಎತ್ತುವುದು, ಭಾರವಾದ ವಸ್ತುವನ್ನು ಎತ್ತರದ ಸ್ಥಳದಲ್ಲಿಡಲು ಯತ್ನಿಸುವುದು, ಕಾಂಪೌಂಡಿನ ಹೊರಭಾಗಕ್ಕೆ ಕೈಚಾಚಿ ದೂರದ ವಸ್ತುವನ್ನು ಎಟುಕಲು ಯತ್ನಿಸುವುದು ಇತ್ಯಾದಿ.

ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬರೆಯ ನೀರು ಕುಡಿಯುವುದು ಹಾಗೂ ಇಡಿಯ ದಿನ ನಿಗದಿತವಾಗಿ ಸಾಕಷ್ಟು ನೀರು ಕುಡಿಯುವುದು.

ಒಂದು ವೇಳೆ ಸೆಖೆಗಾಲವಾಗಿದ್ದರೆ ಶರೀರ ಹೆಚ್ಚು ಬಿಸಿಲಿಗೆ ಅಥವಾ ಸೆಖೆಗೆ ಒಡ್ಡದಂತೆ ನೋಡಿಕೊಳ್ಳುವುದು.

ಸಾಧ್ಯವಾದಷ್ಟು ಸಡಿಲವಾದ ಹಾಗೂ ಆರಾಮವಾಗಿರುವ ಬಟ್ಟೆಗಳನ್ನೇ ತೊಡುವುದು. ಆದರೆ ಉಡುಪು ಶರೀರಕ್ಕಿಂತಲೂ ಉದ್ದವಾಗಿದ್ದರೆ ಕೂಡಲೇ ಎತ್ತರಕ್ಕೆ ಅನುಗುಣವಾಗಿ ಕೆಳಬೆ ಮಡಿಕೆ ಹಾಕಿ ಹೊಲಿದುಕೊಳ್ಳಬೇಕು. ಇದರಿಂದ ಕಾಲು ತೊಡರಿ ಬೀಳುವ ಸಂದರ್ಭ ತಪ್ಪುತ್ತದೆ. ಸ್ತನಗಾತ್ರದಲ್ಲೂ ವ್ಯತ್ಯಾಸವಾಗುವುದರಿಂದ ಸೂಕ್ತವಾದ ಕಂಚುಕಗಳನ್ನು ಧರಿಸಬೇಕು. ಇಲ್ಲದಿದ್ದಲ್ಲಿ ಭಾರದಿಂದ ಜೋಲುಬೀಳುವ ಸಂಭವವಿರುತ್ತದೆ.

7) ಯೋಗಾಭ್ಯಾಸ ಮಾಡುವವರಿಗಾಗಿ ಕೆಲವು ಸಲಹೆಗಳು

7) ಯೋಗಾಭ್ಯಾಸ ಮಾಡುವವರಿಗಾಗಿ ಕೆಲವು ಸಲಹೆಗಳು

ಬೆನ್ನನ್ನು ಬಗ್ಗಿಸುವ ಆಸನಗಳನ್ನು ಅನುಸರಿಸದೇ ಇರುವುದು ಒಳಿತು (ಉದಾಹರಣೆಗೆ ಉತ್ತನಾಸನ)

ಹೊಟ್ಟೆಯ ಮೇಲೆ (ಬೋರಲು) ಮಲಗಬೇಕಾಗಿ ಬರುವ ಆಸನಗಳನ್ನು ಮಾಡಬೇಡಿ (ಉದಾಹರಣೆಗೆ ಮಕರಾಸನ, ನಾಗಾಸನ)

ಯಾವುದೇ ಇತರ ಆಸನದಲ್ಲಿ ಕೊಂಚ ನೋವು ಕಂಡುಬಂದರೂ ಕೂಡಲೇ ನಿಲ್ಲಿಸಿ ನಿಮ್ಮ ಯೋಗ ಶಿಕ್ಷಕರನ್ನು ಸಂಪರ್ಕಿಸಿ.

ಎರಡು ಆಸನಗಳ ನಡುವೆ ಸಾಕಷ್ಟು ವಿರಾಮ ಪಡೆದುಕೊಳ್ಳಿ.

ಯೋಗಾಭ್ಯಾಸ ನಡೆಸುವ ಕೋಣೆಯಲ್ಲಿ ಸಾಕಷ್ಟು ಬೆಳಕು ಹಾಗೂ ತಣ್ಣನೆಯ ವಾತಾವರಣವಿರಬೇಕು. ಒಂದು ವೇಳೆ ತಾಳಬಹುದಾದುದಕ್ಕಿಂತ ಹೆಚ್ಚಿನ ಸೆಖೆ ಇದ್ದರೆ ಯೋಗಾಭ್ಯಾಸ ಮಾಡಬೇಡಿ. ಈ ಅವಧಿಯಲ್ಲಿ ಶರೀರದ ತಾಪಮಾನ ಏರುವುದರಿಂದ ಆಯಾಸ ಉಂಟಾಗಬಹುದು.

ಯೋಗಾಭ್ಯಾಸದ ಹೊತ್ತಿನಲ್ಲಿ ಒಂಟಿಯಾಗಿರಬೇಡಿ, ಯೋಗದ ಬಗ್ಗೆ ತಿಳಿದಿರುವವರು ಹತ್ತಿರ ಇದ್ದರೆ ಒಳಿತು.

8) ಪ್ರಸವಕಾಲದವರೆಗೆ ತೆಗೆದುಕೊಳ್ಳಬೇಕಾದ ಆಹಾರಗಳು

8) ಪ್ರಸವಕಾಲದವರೆಗೆ ತೆಗೆದುಕೊಳ್ಳಬೇಕಾದ ಆಹಾರಗಳು

ಪ್ರಸವಕಾಲದವೆರೆಗೂ ಉತ್ತಮ ಆಹಾರ ಸೇವಿಸಬೇಕು, ಆದರೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸದಿರುವುದು ಆರೋಗ್ಯದ ಗುಟ್ಟು. ಹಸಿರು ಸೊಪ್ಪು, ಗೋಧಿ, ರಾಗಿ, ಅಕ್ಕಿ, ಹಾಲು (ಕೇವಲ ಕುದಿಸಿದ), ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಮಾಂಸಾಹಾರ ಸೇವಿಸುವವರು ಮೀನು, ಮೊಟ್ಟೆ (ಮೊಟ್ಟೆಯ ಹಳದಿ ಭಾಗ ಬೇಡ), ಕೋಳಿ (ಚರ್ಮ ರಹಿತ) ಹಾಗೂ ಸಮುದ್ರ ಆಹಾರಗಳನ್ನು (ಅಂದರೆ ಬಿಳಿಯ ಮಾಂಸದ) ಸೇವಿಸುವುದು ಒಳಿತು. ಕೆಂಪು ಮಾಂಸದ ಪದಾರ್ಥಗಳನ್ನು ಪ್ರಸವವಾಗುವವರೆಗೂ ಸೇವಿಸದಿರುವುದು ಲೇಸು. ಸಕ್ಕರೆ ಹೆಚ್ಚಿರುವ ಹಣ್ಣುಗಳ ರಸಗಳನ್ನು ಸಾಕಷ್ಟು ಕುಡಿಯಬೇಕು. ಉದಾಹರಣೆಗೆ ಮೂಸಂಬಿ, ಕಿತ್ತಳೆ, ಕಲ್ಲಂಗಡಿ, ದ್ರಾಕ್ಷಿ, ಮೊದಲಾದವು.

9) ಪ್ರತಿದಿನ ಸೇವಿಸಲು ವೈದ್ಯರು ಸಲಹೆ ನೀಡುವ ಆಹಾರ ಈ ಕೆಳಗಿನಂತಿದೆ

9) ಪ್ರತಿದಿನ ಸೇವಿಸಲು ವೈದ್ಯರು ಸಲಹೆ ನೀಡುವ ಆಹಾರ ಈ ಕೆಳಗಿನಂತಿದೆ

ಪ್ರಧಾನ ಆಹಾರವಾಗಿ ಗೋಧಿಹಿಟ್ಟಿನ ಚಪಾತಿ, ಬ್ರೆಡಿ, ಪಾಸ್ಟಾ ಅಥವಾ ಶ್ಯಾವಿಗೆಯ ಪದಾರ್ಥಗಳನ್ನು ಸೇವಿಸಬೇಕು.

ಪ್ರತಿದಿನ ಐದು ಬಾರಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಪ್ರಸವದ ಬಳಿಕವೂ ಈ ಕ್ರಮವನ್ನು ಮುಂದುವರೆಸಿದರೆ ಇನ್ನೂ ಒಳ್ಳೆಯದು.

ಹೆಚ್ಚು ಕೊಬ್ಬು ಇರುವ ಆಹಾರಗಳನ್ನು ಆದಷ್ಟು ಕಡಿಮೆಗೊಳಿಸುವುದು ಅಥವಾ ತ್ಯಜಿಸುವುದು. (ಉದಾಹರಣೆಗೆ ಬೆಣ್ಣೆ, ಕ್ರೀಂ, ಐಸ್ ಕ್ರೀಂ, ಮಟನ್ ಇತ್ಯಾದಿ). ಇವುಗಳ ಬದಲಿಗೆ ಲೋ ಕ್ಯಾಲೊರಿ ಇರುವ ಆಹಾರಗಳನ್ನು ಸೇವಿಸಬಹುದು.

ಸಕ್ಕರೆ ಹೆಚ್ಚಿರುವ ಸಿಹಿತಿಂಡಿಗಳನ್ನು ಸಾಧ್ಯವಾದಷ್ಟು ಕಡಿತಗೊಳಿಸುವುದು. (ಉದಾಹರಣೆಗೆ ಗುಲಾಬ್ ಜಾಮೂನ್, ಕೇಕ್, ಪೇಸ್ಟ್ರಿ, ಮೊದಲಾದವು). ಈ ಸಿಹಿತಿಂಡಿಗಳನ್ನು ತಿನ್ನುವುದರಿಂದ ಆಗಾಧ ಪ್ರಮಾಣದಲ್ಲಿ ಒಮ್ಮೆಲೇ ಒಳಬರುವ ಸಕ್ಕರೆಯಿಂದಾಗಿ ರಕ್ತದಲ್ಲಿ ಸಕ್ಕರೆ ಶೀಘ್ರವಾಗಿ ಏರಿ ಗೆಸ್ಟೇಶನಲ್ ಡಯಾಬಿಟೀಸ್ (gestational diabetes) ಬರುವ ಸಂಭವ ತುಂಬಾ ಹೆಚ್ಚಾಗುತ್ತದೆ.

10) ಕೆಳಗಿನ ಆಹಾರಗಳನ್ನು ಸೇವಿಸದೇ ಇರುವುದು ಒಳಿತು

10) ಕೆಳಗಿನ ಆಹಾರಗಳನ್ನು ಸೇವಿಸದೇ ಇರುವುದು ಒಳಿತು

ಪಾದರಸ (mercury) ಹೆಚ್ಚಿರುವಶಾರ್ಕ್ ಮೀನು, ಬಂಗಡೆ ಮೀನು, ಟೈಲ್ ಫಿಶ್, ಚಿಪ್ಪು ಮೊದಲಾದವು. ಧೂಮಪಾನ, ಮದ್ಯಪಾನವನ್ನು ಮಗುವಿನ ಆರೋಗ್ಯದ ದೃಷ್ಟಿಯಿಂದ ಸಂಪೂರ್ಣವಾಗಿ ತ್ಯಜಿಸುವುದು ಒಳಿತು. ಮದ್ಯಪಾನ ಮಾಡುವ ಮಹಿಳೆಯ ಮಗುವಿನ ಬುದ್ದಿಮತ್ತೆ ಕಡಿಮೆಯಾಗಿರುವುದು ಸಂಶೋಧನೆಗಳಿಂದ ಧೃಢಪಟ್ಟಿದೆ. ಒಂದು ವೇಳೆ ಸಾಧ್ಯವಾಗದೇ ಇದ್ದಲ್ಲಿ ಕಡಿಮೆ ನಿಕೋಟಿನ್ ಇರುವ ಅಥವಾ ಆಲ್ಕೋಹಾಲ್ ಅಂಶ ಕಡಿಮೆ ಇರುವ ಪಾನೀಯಗಳನ್ನು ವೈದ್ಯರ ಸಲಹೆಯ ಮೇರೆಗೆ ಎಷ್ಟು ಕಡಿಮೆ ಸಾಧ್ಯವೋ ಅಷ್ಟು ಕಡಿಮೆ ಮಾತ್ರ ಸೇವಿಸಬೇಕು. ಹಣ್ಣಿನ ರಸವನ್ನು ತಾಜಾ ಹಣ್ಣುಗಳಿಂದ ಪಡೆದರೆ ಒಳಿತು. ಪ್ಯಾಕ್ ಮಾಡಿದ ರಸಗಳಲ್ಲಿ ಹೆಚ್ಚಿನ ಸಕ್ಕರೆ ಮತ್ತು ಪ್ರಿಸರ್ವೇಟಿವ್ಸ್ ಗಳನ್ನು ಸೇರಿಸಿರುವುದರಿಂದ ಗರ್ಭಿಣಿಯರಿಗೆ ಸೂಕ್ತವಲ್ಲ.

11) ಪ್ರಸವಕಾಲಕ್ಕೆ ಕೊಂಚ ಮುನ್ನ ಅನುಸರಿಸಬೇಕಾದ ವ್ಯಾಯಾಮಗಳು ಹಾಗೂ ಆಹಾರ

11) ಪ್ರಸವಕಾಲಕ್ಕೆ ಕೊಂಚ ಮುನ್ನ ಅನುಸರಿಸಬೇಕಾದ ವ್ಯಾಯಾಮಗಳು ಹಾಗೂ ಆಹಾರ

ಹಿಂದಿನ ತಿಂಗಳುಗಳಲ್ಲಿ ಮಾಡುತ್ತಿದ್ದ ನಡಿಗೆಯನ್ನು ಮುಂದುವರೆಸಬೇಕು. ಆದರೆ ಹೆಚ್ಚು ದೂರ ಹೋಗದೇ ಮನೆಯ ಅಕ್ಕಪಕ್ಕದಲ್ಲಿಯೇ ಓಡಾಡಿಕೊಂಡಿರಬೇಕು. ಈ ಹಂತದಲ್ಲಿ ವೈದ್ಯರು ನೀಡುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಹೆಚ್ಚಿರುವ ಔಷಧಿಗಳನ್ನು ಹಾಗೂ ಆಹಾರಗಳನ್ನು ಸೇವಿಸಬೇಕು. ಪ್ರಸವಪೂರ್ವ ಹಂತದಲ್ಲಿ ಹೊಟ್ಟೆಯ ಕೆಳಭಾಗದ ಸ್ನಾಯುಗಳನ್ನು ಬಲಪಡಿಸುವ ಕೆಲವು ವ್ಯಾಯಾಮಗಳನ್ನು ವೈದ್ಯರ ಅಥವಾ ತರಬೇತಿ ಪಡೆದ ದಾದಿ ಅಥವಾ ನರ್ಸ್ ರ ಸಮ್ಮುಖದಲ್ಲಿ ನಡೆಸಬೇಕು. ಬೆನ್ನಿನ ಮೇಲೆ ಮಲಗಿ ಕಾಲನ್ನು ಹೊಟ್ಟೆಯ ಪಕ್ಕಕ್ಕೆ ಬರುವಂತೆ ಮಡಚುವುದು (ಬಲ ಮತ್ತು ಎಡಗಾಲುಗಳು ಪ್ರತ್ಯೇಕವಾಗಿ) ಉತ್ತಮ ವ್ಯಾಯಾಮವಾಗಿದೆ. ಈ ವ್ಯಾಯಾಮದ ಮೂಲಕ ಬಲಗೊಳ್ಳುವ ಸ್ನಾಯುಗಳ ಮೂಲಕ ಶಿಶುವಿನ ಜನನ ಸುಲಭವಾಗಿ ಸಾಧ್ಯವಾಗುತ್ತದೆ.

12) ಸಿಸೇರಿಯನ್ ಹೆರಿಗೆಗೆ ಪೂರಕ ಅಂಶಗಳು

12) ಸಿಸೇರಿಯನ್ ಹೆರಿಗೆಗೆ ಪೂರಕ ಅಂಶಗಳು

ಗರ್ಭಿಣಿಯ ದೇಹದ ಗಾತ್ರ ಹೆರಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚು ದಪ್ಪ ಇರುವ ಅಥವಾ ಅತಿ ಕಡಿಮೆ ತೂಕ ಇರುವ ಮಹಿಳೆಯರಿಗೆ ನೈಸರ್ಗಿಕ ಪ್ರಸವ ಕಷ್ಟಕರವಾಗುತ್ತದೆ. ಪೋಲಿಯೋ, ಅಪಘಾತ ಮೊದಲಾದ ಕಾರಣಗಳಿಂದ ಮೂಳೆಗಳು ಧೃಢವಾಗಿಲ್ಲದಿದ್ದ ಪಕ್ಷದಲ್ಲಿಯೂ ಸಹ ಸಹಜಹೆರಿಗೆ ಸಾಧ್ಯವಾಗುವುದಿಲ್ಲ.

ಆದುದರಿಂದ ಉತ್ತಮ ಆರೋಗ್ಯ ಹಾಗೂ ಮೈಕಟ್ಟು ಹೊಂದಿರುವುದು ಸಹಜ ಹೆರಿಗೆಯ ಮೂಲಮಂತ್ರವಾಗಿದೆ.

13) ಉತ್ತಮ ಆಹಾರ ಹಾಗೂ ವ್ಯಾಯಾಮದ ಕೊರತೆ

13) ಉತ್ತಮ ಆಹಾರ ಹಾಗೂ ವ್ಯಾಯಾಮದ ಕೊರತೆ

ಗರ್ಭಿಣಿ ಯಾವುದೇ ವ್ಯಾಯಾಮವನ್ನು ಮಾಡದೇ ಇದ್ದಲ್ಲಿ, ವೈದ್ಯರ ಸಲಹೆಗಳನ್ನು ಪಾಲಿಸದಿದ್ದಲ್ಲಿ, ಅನಿಯಮಿತವಾಗಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ ಆಹಾರದ ಕಾರಣ ಹೆಚ್ಚು ಕೊಬ್ಬು ಶೇಖರವಾಗಿದ್ದಲ್ಲಿ ಸಹಜ ಹೆರಿಗೆ ಸಾಧ್ಯವಾಗುವ ಸಂಭವ ಕಡಿಮೆ. ಪ್ರಾರಂಭಿಕ ದಿನಗಳಿಂದ ಹಿಡಿದು ಪ್ರಸವದ ಬಳಿಕವೂ ನಿಯಮಿತವಾಗಿ ವೈದ್ಯರ ಬಳಿ ತಪಾಸಣೆಗೆ ಒಳಗಾಗಿ ವೈದ್ಯರು ನೀಡುವ ಸಲಹೆಗಳನ್ನು ಸರಿಯಾಗಿ ಪಾಲಿಸಿ, ಸೂಕ್ತ ವ್ಯಾಯಾಮ, ಸಾಕಷ್ಟು ನಿದ್ದೆಗಳಿಂದ ಶಿಶುವಿನ ಜನನ ಸುಲಲಿತವಾಗುತ್ತದೆ.

English summary

Natural Childbirth Tips and Pregnancy Advice

Pregnancy is a phase in a woman’s life that builds a surge of emotions from the time on conception. To help you avoid a C-section pregnancy and to ease the process of natural childbirth, Gynaecology from Delhi shares important tips for natural childbirth.
Story first published: Thursday, October 17, 2013, 17:11 [IST]
X
Desktop Bottom Promotion