For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಕೆಳ ಹೊಟ್ಟೆ ನೋವು ಬಂದರೆ ಅಪಾಯವೇ?

|

ಚೊಚ್ಚಲ ಗರ್ಭದಾರಣೆವಾದರೆ ಹೊಟ್ಟೆಯಲ್ಲಿ ಸಣ್ಣ ಪುಟ್ಟ ನೋವು ಕಾಣಿಸಿದರೂ ಗರ್ಭಿಣಿಯರು ಭಯಪಡುತ್ತಾರೆ. ಹೊಟ್ಟೆಯಲ್ಲಿರುವ ಮಗುವಿಗೆ ಏನಾದರೂ ತೊಂದರೆ ಆಗಿದೆಯೇ ಅನ್ನುವುದು ಅವರ ಗೊಂದಲವಾಗಿರುತ್ತದೆ. ಆದರೆ ಈ ರೀತಿ ಭಯಪಡಬೇಕಾದ ಅವಶ್ಯಕತೆಯಿಲ್ಲ. ಕೆಳ ಹೊಟ್ಟೆ ನಾವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ತುಂಬಾ ನೋವು ಕಾಣಿಸಿದರೆ ಅದು ಕೆಟ್ಟ ಸೂಚನೆಯಾಗಿರಬಹುದು.

ಗರ್ಭಾವಸ್ಥೆಯಲ್ಲಿ ಕೆಳ ಹೊಟ್ಟೆ ನೋವು ಈ ಕೆಳಗಿನ ಕಾರಣಗಳಿಂದ ಉಂಟಾಗುತ್ತದೆ:

Causes Of Abdominal Pain During Pregnancy

* ಗರ್ಭಾವಸ್ಥೆಯಾಗಿ 6 ವಾರಗಳ ಬಳಿಕ ಮುಟ್ಟಿನ ಸಮಯದಲ್ಲಿ ಕಂಡು ಬರುವ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ನೋವಿಗೆ ಭಯ ಪಡಬೇಕಾಗಿಲ್ಲ. ಈ ಸಮಯದಲ್ಲಿ ಭ್ರೂಣ ಮೆಲ್ಲನೆ ಕದಲುತ್ತದೆ. ಆಗ ಈ ರೀತಿಯ ನೋವು ಕಂಡು ಬರುವುದು.

* ಹಾರ್ಮೋನ್ ಗಳಲ್ಲಿ ಬದಲಾವಣೆಯಾದಾಗ ಕೆಳ ಹೊಟ್ಟೆ ಎಳದಂತಾಗುವುದು. ಈ ರೀತಿ ಗರ್ಭಾವಸ್ಥೆಯಾಗಿ 3 ತಿಂಗಳ ಒಳಗೆ ಕಂಡು ಬರುವುದು.

* ectopic ಗರ್ಭದಾರಣೆ ಇದರಲ್ಲಿ ಮಗು ಗರ್ಭಕೋಶದಿಂದ ಹೊರಗೆ ಬೆಳೆಯುತ್ತದೆ. ಈ ಸಮದರ್ಭದಲ್ಲಿ ತುಂಬಾ ನೋವು ಕಂಡು ಬರುತ್ತದೆ, ಹಾಗೂ ಈ ರೀತಿಯ ಗರ್ಭದಾರಣೆಯಲ್ಲಿ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು.

* 5 ತಿಂಗಳ ಬಳಿಕ ಹೊಟ್ಟೆಯಲ್ಲಿ ಮಗುವಿನ ಚಲನೆ ಚೆನ್ನಾಗಿ ಅನುಭವಕ್ಕೆ ಬರುತ್ತದೆ. ಈ ಸಮಯದಲ್ಲಿ ಸ್ನಾಯು ಸೆಳೆತ ಕಂಡು ಬರುವುದು.

* ಸಾಧಾರಣವಾಗಿ ಹೊಟ್ಟೆ ನೋವು ಸ್ವಲ್ಪ ಹೊತ್ತಿಗೆ ಹೋಗುತ್ತದೆ. ಆದರೆ ವಿಪರೀತ ಹೊಟ್ಟೆ ನೋವು ಉಂಟಾದರೆ ಅದು ಗರ್ಭಪಾತದ ಲಕ್ಷಣಗಳಾಗಿರಬಹುದು. ಈ ಸಂದರ್ಭದಲ್ಲಿ ಕೂಡಲೇ ವೈದ್ಯರನ್ನು ಕಾಣುವುದು ಒಳ್ಳೆಯದು.

* 7 ಮತ್ತು 8ನೇ ತಿಂಗಳಿನಲ್ಲಿ ಕೆಲವೊಮ್ಮೆ ಹೊಟ್ಟೆ ನೋವು ಕಂಡು ಬಂದು ನಂತರ ಕಡಿಮೆಯಾಗುವುದು, ಆದರೆ ತುಂಬಾ ಹೊಟ್ಟೆ ನೋವು ಕಂಡು ಬಂದರೆ ಅದು ಅವಧಿಗೆ ಮುನ್ನ ಹೆರಿಗೆಯಾಗಬಹುದು ಅನ್ನುವುದರ ಸೂಚನೆ. ಕೂಡಲೇ ಆಸ್ಪತ್ರೆಗೆ ಹೋಗುವುದು ಒಳ್ಳೆಯದು.

English summary

Causes Of Abdominal Pain During Pregnancy | ಗರ್ಭಿಣಿಯರಲ್ಲಿ ಕೆಳ ಹೊಟ್ಟೆ ನೋವು ಯಾವಾಗ ಕಂಡು ಬರುತ್ತದೆ?

Some amount of abdominal pain during pregnancy is common, it may also be a symptom of some critical problems. You have to understand and define what kind of pregnancy pains you are experiencing.
X
Desktop Bottom Promotion