For Quick Alerts
ALLOW NOTIFICATIONS  
For Daily Alerts

ನಾನು ಎಷ್ಟು ವರ್ಷಕ್ಕೆ ಅಮ್ಮ ಆಗಲಮ್ಮ?

|
Right Age To Get Pregnant
ಈಗ ಹೆಣ್ಣು ಮಕ್ಕಳು ಹೊರಗಡೆ ದುಡಿಯುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದು ಒಂದು ಕೆಲಸಕ್ಕೆ ಸೇರಿದಾಗ ವಯಸ್ಸು 20 ದಾಟಿರುತ್ತದೆ. ಆದರೆ ಮನೆಯಲ್ಲಿ ಮದುವೆಗೆ ಒತ್ತಾಯ ಮಾಡುತ್ತಾರೆ.

ಮದುವೆಯಾದರೂ ಇಂದಿನ ಯುವ ದಂಪತಿಗಳು ಆರ್ಥಿಕ ಸ್ಥಿತಿ ಸುಧಾರಿಸಿ ಬದುಕು ಸುಸ್ಥತಿಗೆ ಬಂದ ಮೇಲೆ ಮಕ್ಕಳ ಬಗ್ಗೆ ಚಿಂತೆ ಮಾಡುವುದು. ಆದರೆ ಅಷ್ಟರಲ್ಲಿ ವಯಸ್ಸು 30 ಆಸುಪಾಸಿನಲ್ಲಿರುತ್ತದೆ. ವೈದ್ಯರು ಮತ್ತು ಹಿರಿಯರು 30 ನಂತರ ಮಕ್ಕಳಾಗಲು ಅನೇಕ ಸಮಸ್ಯೆಗಳು ಉಂಟಾಗುತ್ತದೆ ಎಂದು ಹೇಳುತ್ತಾರೆ. ಮಕ್ಕಳಾಗಲು ಸೂಕ್ತವಾದ ವಯಸ್ಸು ಯಾವುದು ಎಂದು ತಿಳಿಯಲು ಮುಂದೆ ಓದಿ.

ಗರ್ಭ ಧರಿಸಲು 20-30ವಯಸ್ಸು ಸೂಕ್ತ. 30ರ ಮೇಲೆ ಗರ್ಭ ಧರಿಸಿದರೆ ಹೆರಿಗೆಯಲ್ಲಿ ತೊಂದರೆ ಉಂಟಾಗಬಹುದು. ಆದರೆ 35ರ ನಂತರ ಗರ್ಭಧರಿಸುವ ಸಾಧ್ಯತೆ ಕಡಿಮೆಯಾಗ ತೋಡಗುತ್ತದೆ. ಇಲ್ಲಿ ಜೀವನದಲ್ಲಿ ಸೆಟಲ್ ಗಿಂತ ವಯಸ್ಸು ಗಮನದಲ್ಲಿಡಬೇಕು.

1. ಒಂದು ವೇಳೆ 21 ವರ್ಷದಲ್ಲಿ ಮದುವೆಯಾಗಿದ್ದರೆ 27ರ ನಂತರ ಗರ್ಭಿಣಿಯಾಗಬಹುದು.

2. ದಂಪತಿಗಳ ನಡುವೆ ಭಾಂದವ್ಯ ಮಗುವಿನಿಂದಾಗಿ ಮತ್ತಷ್ಟು ಹೆಚ್ಚಾಗುತ್ತದೆ.

3. ಕೆಲ ಮಹಿಳೆಯರು ಸೌಂದರ್ಯ ಹಾಳಾಗುವುದು ಎಂದು ಬೇಗನೆ ಗರ್ಭಿಣಿಯಾಗಲು ಒಪ್ಪುವುದಿಲ್ಲ. ಅಂತಹವರಿಗೆ 30 ಒಳಗೆ ಗರ್ಭಿಣಿಯಾಗುವಂತೆ ಆಪ್ತರು ಸಲಹೆ ನೀಡಬೇಕು.

4. 35ರ ನಂತರ ಗರ್ಭೀಣಿಯಾದರೆ ಮಗು ಮತ್ತು ತಾಯಿ ಆರೋಗ್ಯವಾಗಿರುವುದು ತುಂಬಾ ಕಮ್ಮಿ. ಹೆರಿಗೆಗೆ ಕೂಡ ಕಷ್ಟವಾಗುತ್ತದೆ.

5.
35 ದಾಟಿ ಗರ್ಭಿಣಿಯಾದರೆ ರಕ್ತದೊತ್ತಡ ಜಾಸ್ತಿಯಾಗುವುದು, ಸಕ್ಕರೆ ಕಾಯಿಲೆ ಮೊದಲಾದ ಸಮಸ್ಯೆ ಉಂಟಾಗುತ್ತದೆ. ಇದು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

English summary

Right Age To Get Pregnant | Late Pregnancy Problem | ಗರ್ಭಿಣಿಯಾಗಲು ಸೂಕ್ತವಾದ ವಯಸ್ಸು | 30 ನಂತರ ಗರ್ಭಿಣಿಯಾದರೆ ಆರೋಗ್ಯ ಸಮಸ್ಯೆ

Many women of the older generation state and advice the newly wed to have a baby before 30 as the body is flexible enough and the chances of vaginal pregnancy is more.
Story first published: Friday, January 20, 2012, 17:23 [IST]
X
Desktop Bottom Promotion