For Quick Alerts
ALLOW NOTIFICATIONS  
For Daily Alerts

ಅಮ್ಮನಾಗುವ ಅವಕಾಶ ತಪ್ಪಿಸಿದ ಬೊಜ್ಜಿಗೆ ದಿಕ್ಕಾರ!!

|
Avoiding Pregnancy Due To Obesity
ಒಬೆಸಿಟಿ ಅಥವಾ ಬೊಜ್ಜು ಇರುವವರು ಗರ್ಭ ಧರಿಸಲು ಭಯಪಡುತ್ತಾರೆ. ಒಬೆಸಿಟಿ ಇದ್ದಾಗ ಗರ್ಭಿಣಿಯಾದರೆ ಮಗು ಮತ್ತು ತಾಯಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದರಿಂದ ಹೆರಿಗೆಗೆ ತೊಂದರೆ ಉಂಟಾಗುವುದು.

ತಿಂಗಳು ತುಂಬುವ ಮುನ್ನವೇ ಹೆರಿಗೆಯಾಗುವುದು, ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆ, ಮಗುವಿಗೆ ಕೂಡ ಒಬೆಸಿಟಿ ಬರುವ ಸಾಧ್ಯತೆ ಇತ್ಯಾದಿ ಕಾರಣಗಳು ಬೊಜ್ಜಿರುವ ಮಹಿಳೆಯರನ್ನು ಗರ್ಭಿಣಿಯಾಗಲು ಭಯಪಡುವಂತೆ ಮಾಡುತ್ತದೆ.

ಪ್ರಪಂಚದಲ್ಲಿ 1/3ರಷ್ಟು ಮಹಿಳೆಯರು ಒಬೆಸಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂದಿನ ಜೀವನ ಶೈಲಿ, ವ್ಯಾಯಾಮ ಮಾಡದಿರುವುದು, ಆಹಾರಕ್ರಮ ಈ ಎಲ್ಲಾ ಕಾರಣಗಳು ಬೊಜ್ಜು ಬರುವಂತೆ ಮಾಡುತ್ತದೆ. ಬೊಜ್ಜಿನಿಂದ ಹೆರಿಗೆಯಲ್ಲಿ ಕಾಣಿಸಿಕೊಳ್ಳುವ ತೊಂದರೆ ಕುರಿತು ವೈದ್ಯರು ವಿವರಿಸಿದಾಗ ಒಬೆಸಿಟಿ ಇರುವ ಮಹಿಳೆಯರು ಗರ್ಭಧರಿಸಲು ಭಯಪಡುತ್ತಾರೆ.

ಒಬೆಸಿಟಿ ಮಹಿಳೆಯರಿಗೆ ಹುಟ್ಟುವ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ, ಕಾಲು ಊನವಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಗರ್ಭಧರಿಸುವ ಮುನ್ನ ಒಬೆಸಿಟಿ ಇರುವ ಮಹಿಳೆಯರು ಈ ಕೆಳಗಿನ ಪಾಲಿಸುವುದು ಮಗು ಮತ್ತು ತಾಯಿಯ ಆರೋಗ್ಯಕ್ಕೆ ಒಳ್ಳೆಯದು.

ಗರ್ಭಧಾರಣೆಯ ಮೊದಲೆ BMI (ಬಾಡಿ ಮಾಸ್ ಇಂಡೆಕ್ಸ್) ಮಾಡಿಸಿಕೊಳ್ಳಬೇಕು. ಗರ್ಭಧರಿಸುವ ಮೊದಲು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು.
BMI ಚೆಕಪ್ ನಲ್ಲಿ ದೇಹದ ತೂಕವನ್ನು ಅವರ ಎತ್ತರದಿಂದ ಭಾಗಿಸಿದಾಗ 25ಕ್ಕಿಂತ ಕಡಿಮೆ ಇದ್ದರೆ ಅಂತವರು ಗರ್ಭ ಧರಿಸಬಹುದು.

ಬೊಜ್ಜು ಕರಗಿಸುವುದು ಹೇಗೆ?
* ಕಡಿಮೆ ಆಹಾರ ಸೇವನೆ
*ಕುರುಕಲು ತಿಂಡಿಗಳಿಂದ ದೂರ
* ಹಣ್ಣು, ತರಕಾರಿಗಳನ್ನುಹೆಚ್ಚಾಗಿ ಸೇವನೆ
* ಪ್ರತಿನಿತ್ಯ ವ್ಯಾಯಾಮ

ಬೊಜ್ಜನ್ನು ಕರಗಿಸಿದ ನಂತರ ಗರ್ಭಣಿಯಾದರೆ ಒಬೆಸಿಟಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

English summary

Avoiding Pregnancy Due To Obesity | Obesity Problem | ಬೊಜ್ಜಿನಿಂದಾಗಿ ಗರ್ಭಧರಿಸದಿರುವುದು | ಒಬೆಸಿಟಿ ಸಮಸ್ಯೆ

Obesity in pregnancy can lead to higher risk as the birth of the baby gets complicated. So many women avoid pregnancy due to obesity, they get concerned that their overweight may affect health and the developing baby.
Story first published: Thursday, January 19, 2012, 14:47 [IST]
X
Desktop Bottom Promotion