For Quick Alerts
ALLOW NOTIFICATIONS  
For Daily Alerts

ಸುರಕ್ಷಿತ, ಪರಿಣಾಮಕಾರಿ ಗರ್ಭನಿರೋಧಕ ಸಂಶೋಧನೆ

By Prasad
|
Safer and effective contraceptive
ವಾಷಿಂಗ್ಟನ್, ಸೆ. 13 : ಅಕಾಲದಲ್ಲಿ ಅಥವಾ ಅನಿರೀಕ್ಷಿತವಾಗಿ ಗರ್ಭ ಧರಿಸುವುದನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಸುರಕ್ಷಿತವಾಗಿ ತಡೆಗಟ್ಟಲು ಹೊಸದೊಂದು ಗರ್ಭ ನಿರೋಧಕ ಮಾತ್ರೆಯನ್ನು ಸಂಶೋಧಿಸುತ್ತಿರುವುದಾಗಿ ಅಮೆರಿಕದ ವಿಜ್ಞಾನಿಗಳು ಹೇಳಿದ್ದಾರೆ.

ಇಂದು ದೊರೆಯುತ್ತಿರುವ ಗರ್ಭ ನಿರೋಧಕ ಮಾತ್ರೆ ತೆಗೆದುಕೊಂಡರು ಕೂಡ ನೂರಕ್ಕೆ ನೂರರಷ್ಟು ಗರ್ಭಕಟ್ಟುವುದು ನಿಲ್ಲುತ್ತದೆಂದು ವೈದ್ಯರೂ ಗ್ಯಾರಂಟಿ ನೀಡುವುದಿಲ್ಲ. ಅವು ಶೇ.80ರಷ್ಟು ಮಾತ್ರ ಪರಿಣಾಮಕಾರಿಯಾಗಿರುತ್ತವೆ.

ಈ ಹೊಸಬಗೆಯ ಗರ್ಭ ನಿರೋಧಕ ಮಾತ್ರೆಗಳು ನೇರವಾಗಿ ಅಂಡಾಣುಗಳನ್ನು ಬಿಡುಗಡೆಗೆ ಸಹಕರಿಸುವ ಎಂಜೈಮ್ ಗಳೊಂದಿಗೆ ವ್ಯವಹರಿಸುತ್ತವೆ ಮತ್ತು ಅಂಡಾಣುಗಳು ಬಿಡುಗಡೆಯಾಗದಂತೆ ಅತ್ಯಂತ ಪರಿಣಾಮಕಾರಿಯಾಗಿ ತಡೆ ಒಡ್ಡುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಅಮೆರಿಕದಂಥ ಮುಕ್ತ ಸಮಾಜದಲ್ಲಿ ಇಂಥ ಗರ್ಭನಿರೋಧಕಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.

ಓರೆಗಾವ್ ವಿಶ್ವವಿದ್ಯಾಲಯದ ವಿಜ್ಞಾನಿ ಜಾನ್ ಹೆನ್ ಬೋಲ್ಡ್ ಅವರ ಪ್ರಕಾರ, ಇಂದಿನ ಮಾತ್ರೆಗಳು ಪರಿಣಾಮಕಾರಿಯಾಗಿದ್ದರೂ ದೇಹದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇವುಗಳಿಂದಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಂಡಿವೆ.

ಹೊಸದಾಗಿ ಕಂಡುಹಿಡಿಯಲಾಗುತ್ತಿರುವ ಗರ್ಭ ನಿರೋಧಕಗಳು ಅಂಡಾಣುಗಳನ್ನು ಬಿಡುಗಡೆಗೆ ಇಂಬು ನೀಡುವ ಎಂಜೈಮ್ ಗಳ ಮೇಲೆ ನೇರ ಆಕ್ರಮಣ ಮಾಡಿ ಗರ್ಭ ಆಗದಂತೆ ತಡೆಯುತ್ತವೆ. ಅಲ್ಲದೆ, ಇದನ್ನು ಉಪಯೋಗಿಸುವುದರಿಂದ ಯಾವುದೇ ಸೈಡ್ ಎಫೆಕ್ಟ್ ಕೂಡ ಇರುವುದಿಲ್ಲ ಎಂಬುದು ಅವರ ಅಂಬೋಣ.

English summary

Safer and effective contraceptive | Prevent pregnancy | Scientists developing new pill | ಪರಿಣಾಮಕಾರಿ ಗರ್ಭನಿರೋಧಕ ಮಾತ್ರೆ | ಅಮೆರಿಕ ವಿಜ್ಞಾನಿಗಳ ಸಂಶೋಧನೆ

Scientists of Oregon Health and Science University's Primate Research Center have been developing new contraceptive which is more safer and more effective than the present one. The scientists say the contraceptive targets the key enzyme which is responsible for for the release of eggs.
Story first published: Tuesday, September 13, 2011, 14:17 [IST]
X
Desktop Bottom Promotion